Honda: ಹೊಸ ಹೋಂಡಾ ಸಿಟಿ ಕಾರನ್ನು ಮನೆಗೆ ತರಬೇಕೇ.. ಆನ್ ರೋಡ್ ಬೆಲೆ ಏನು, EMI ಎಷ್ಟು?
ಪ್ರತಿಯೊಬ್ಬರಿಗೂ ಜೀವನದಲ್ಲಿ ಹೊಸ ಕಾರು ತೆಗೆದುಕೊಳ್ಳಬೇಕೆಂಬ ಕನಸಿರುತ್ತದೆ. ಆದರೆ ಹ್ಯಾಚ್‌ಬ್ಯಾಕ್, ಸೆಡಾನ್ ಹಾಗೂ ಎಸ್‌ಯುವಿಗಳಲ್ಲಿ ಯಾವುದು ಉತ್ತಮ ಆಯ್ಕೆಯಾಗಬಲ್ಲದು ಎಂಬ ಗೊಂದಲವಿರುತ್ತದೆ. ಅಂತಹವರಿಗೆ ಹೋಂಡಾ (Honda) ಕಂಪನಿಯ ಸಿಟಿ ಸೆಡಾನ್ (City Sedan) ಸರಿ ಹೊಂದುತ್ತದೆ. ಈ ಕಾರು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯದೊಂದಿಗೆ ಖರೀದಿಗೆ ಲಭ್ಯವಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇಲ್ಲಿ ನೂತನ ಸಿಟಿ ಸೆಡಾನ್‌ನ ಆನ್ ರೋಡ್ ಬೆಲೆ (On Road) ಮತ್ತು ಇಎಂಐ (EMI) ಆಯ್ಕೆಯ ಬಗ್ಗೆ ವಿವರಿಸಿದ್ದೇವೆ.
ಹೊಚ್ಚ ಹೊಸ ಹೋಂಡಾ ಸಿಟಿ (Honda City) ಸೆಡಾನ್ ಪೆಟ್ರೋಲ್ ಪವರ್‌ಟ್ರೇನ್‌ನೊಂದಿಗೆ ಮಾತ್ರ ಲಭ್ಯವಿದೆ. ಬೆಂಗಳೂರಿನಲ್ಲಿ ಈ ಕಾರಿನ ಆರಂಭಿಕ ರೂಪಾಂತರ (ಎಂಟ್ರಿ ಲೆವೆಲ್ ವೇರಿಯೆಂಟ್)ವೆಂದು ಹೆಸರಾಗಿರುವ 'ಎಸ್‌ವಿ' ರೂ.15.05 ಲಕ್ಷ, 'ವಿ ಎಲಿಗೆಂಟ್' ರೂ.15.94 ಲಕ್ಷ, 'ವಿ' ರೂ.16 ಲಕ್ಷ, 'ವಿಎಕ್ಸ್' ರೂ.17.33 ಲಕ್ಷ, 'ವಿ ಎಲಿಗೆಂಟ್ ಸಿವಿಟಿ' ರೂ.17.49 ಲಕ್ಷ ಮತ್ತು 'ವಿ ಸಿವಿಟಿ' ಆವೃತ್ತಿಯು ರೂ.17.55 ಲಕ್ಷ ಆನ್ ರೋಡ್ ಬೆಲೆಯನ್ನು ಹೊಂದಿದೆ.

ಹಾಗೆಯೇ 'ಝಡ್ಎಕ್ಸ್' ರೂ.18.78 ಲಕ್ಷ, 'ವಿಎಕ್ಸ್ ಸಿವಿಟಿ' ರೂ.18.87 ಲಕ್ಷ ಹಾಗೂ ಗರಿಷ್ಠ ಶ್ರೇಣಿ (ಟಾಪ್ ಎಂಡ್ ಮಾಡೆಲ್) ಮಾದರಿಯಾಗಿರುವ 'ಝಡ್ಎಕ್ಸ್ ಸಿವಿಟಿ' ರೂ.20.33 ಲಕ್ಷ ಆನ್ ರೋಡ್ ದರವನ್ನು ಪಡೆದಿದೆ. ನೀವು ಈ ಹೋಂಡಾ ಸಿಟಿ ಸೆಡಾನ್‌ನ ಪ್ರಾರಂಭಿಕ ರೂಪಾಂತರವನ್ನು ರೂ.2 ಲಕ್ಷ ಡೌನ್ ಪೇಮೆಂಟ್ ಪಾವತಿಸಿ ಖರೀದಿಸಿದರೆ ಶೇಕಡ 9.8% ಬಡ್ಡಿದರದಲ್ಲಿ ಐದು ವರ್ಷದ ಅವಧಿಗೆ ಮಾಸಿಕ ರೂ.27,607 ಇಎಂಐ ಕಟ್ಟಬೇಕು.
ನೂತನ ಹೋಂಡಾ ಸಿಟಿ ಸೆಡಾನ್ ಅತ್ಯಾಕರ್ಷಕ ವಿನ್ಯಾಸವನ್ನು ಹೊಂದಿದ್ದು, ಅಬ್ಸಿಡಿಯನ್ ಬ್ಲೂ ಪರ್ಲ್, ರೇಡಿಯಂಟ್ ರೆಡ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್, ಗೋಲ್ಡನ್ ಬ್ರೌನ್ ಮೆಟಾಲಿಕ್ ಸೇರಿದಂತೆ ಹಲವು ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. ಜೊತೆಗೆ ದೂರದ ಊರುಗಳಿಗೆ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 506 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‍ನ್ನು ಒಳಗೊಂಡಿದೆ.
ಈ ಸೆಡಾನ್ 1.5-ಲೀಟರ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದ್ದು, 121 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 145 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. 6-ಸ್ಪೀಡ್ ಮ್ಯಾನುವಲ್/ ಸಿವಿಟಿ ಗೇರ್ ಬಾಕ್ಸ್‌ನೊಂದಿಗೆ ಲಭ್ಯವಿದ್ದು, ರೂಪಾಂತರಗಳಿಗೆ ಅನುಗುಣವಾಗಿ 17.8 ರಿಂದ 18.4 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.
ಹೊಸ ಹೋಂಡಾ ಸಿಟಿ ಕಾರು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಂಬಿಯೆಂಟ್ ಲೈಟಿಂಗ್, ಕ್ರೂಸ್ ಕಂಟ್ರೋಲ್, ಸಿಂಗಲ್ ಪೇನ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಅನ್ನು ಹೊಂದಿದೆ.
ಈ ಹೋಂಡಾ ಸಿಟಿ ಸೆಡಾನ್‌ಗೆ ಮಾರುತಿ ಸುಜುಕಿ ಸಿಯಾಜ್, ಸ್ಕೋಡಾ ಸ್ಲಾವಿಯಾ, ಪೋಕ್ಸ್‌ವ್ಯಾಗನ್ ವರ್ಟಸ್ ಮತ್ತು ಹ್ಯುಂಡೈ ವೆರ್ನಾ ಕಾರುಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ. ನಿಮ್ಮ ಗಮನಕ್ಕೆ.. ಇಲ್ಲಿ ತಿಳಿಸಲಾಗಿರುವ ಸಿಟಿ ಸೆಡಾನ್‌ನ ಆನ್ ರೋಡ್ ಬೆಲೆಗಳು ಹಾಗೂ ಸಾಲದ ಆಯ್ಕೆಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂನ್ನು ಸಂಪರ್ಕಿಸಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








