ಬಹುಬೇಡಿಕೆಯ ಸಿಟಿ ಕಾರಿನ ಗ್ರಾಹಕರಿಗೆ ಶಾಕ್ ನೀಡಿದ ಹೋಂಡಾ

ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇಂಡಿಯಾ (Honda Cars India ) ತನ್ನ ಸರಣಿಯಲ್ಲಿರುವ ಕಾರುಗಳ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ನವೀಕರಿಸಿದೆ. ಹೋಂಡಾ ಅಮೇಜ್, ಸಿಟಿ, ಸಿಟಿ ಇ: HEV, ಮತ್ತು ಎಲಿವೇಟ್ ಸೇರಿದಂತೆ ಅದರ ಸರಣಿಯ ಬೆಲೆಗಳನ್ನು ಪರಿಷ್ಕರಿಸಿದ್ದಾರೆ.

ಹೋಂಡಾ ಸಿಟಿ (Honda City) ಕಾರಿನ ಬೆಲೆಯು ರೂ. 37,200 ವರೆಗೆ ಹೆಚ್ಚಿಸಲಾಗಿದೆ. ಇದೀಗ ಈ ಹೊಸ ಹೋಂಡಾ ಸಿಟಿ ಕಾರಿನ ಆರಂಬಿಕ ಬೆಲೆಯು ಬೆಲೆಯು ರೂ.12.08 ಲಕ್ಷವಾಗಿದೆ. ಈ ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರು SV, V, VX ಮತ್ತು ZX ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಹೋಂಡಾ ಸಿಟಿ ಫೇಸ್‌ಲಿಫ್ಟ್‌ ಕಾರಿನಲ್ಲಿ 1.5-ಲೀಟರ್, ನ್ಯಾಚುರಲ್-ಆಸ್ಪೈರಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

Honda City

ಈ ಎಂಜಿನ್ 120 bhp ಪವರ್ ಮತ್ತು 145 Nm ಟಾರ್ಕ್ ಅನ್ನು ಉತ್ಪಾದಿಸುವುದನ್ನು ಮುಂದುವರೆಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ CVT ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಮತ್ತೊಂದೆಡೆ, 1.5-ಲೀಟರ್ ಅಟ್ಕಿನ್ಸನ್ ಸೈಕಲ್ ಎಂಜಿನ್ 97 bhp ಪೀಕ್ ಪವರ್ ಮತ್ತು 127 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೈಬ್ರಿಡ್ ಸಿಸ್ಟಂ ಭಾಗವಾಗಿರುವ ಎಲೆಕ್ಟ್ರಿಕ್ ಮೋಟಾರ್ 108 bhp ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಒಟ್ಟಾರೆಯಾಗಿ, ಹೈಬ್ರಿಡ್ ಸಿಸ್ಟಂ ಒಟ್ಟಾಗಿ 125 bhp ಮತ್ತು 253 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಹೊಸ ನವೀಕರಣದೊಂದಿಗೆ ಸೆಡಾನ್ ವಿಭಾಗದಲ್ಲಿ ಜನಪ್ರಿಯ ಸಿಟಿ ಕಾರಿನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಹೋಂಡಾ ಪ್ರಯತ್ನಿಸುತ್ತಿದೆ.

Honda City

ವಿಶಿಷ್ಟವಾದ ಹೋಂಡಾ ಶೈಲಿಯಲ್ಲಿ, ಸಿಟಿ ಫೇಸ್‌ಲಿಫ್ಟ್‌ನಲ್ಲಿನ ಬದಲಾವಣೆಗಳು ಬಹಳ ಸೂಕ್ಷ್ಮವಾಗಿದೆ. ಹೋಂಡಾ ಕಂಪನಿಯು ಈ ಕಾರಿನಲ್ಲಿ ಕೆಲವು ಫೀಚರ್ಸ್ ಮತ್ತು ಹೊಸ ತಂತ್ರಜ್ಞಾನವನ್ನು ಪರಿಚಯಿಸುವಲ್ಲಿ ಹೆಚ್ಚು ಗಮನಹರಿಸಿದ್ದಾರೆ. ಹೋಂಡಾ ಸಿಟಿ ಫೇಸ್‌ಲಿಫ್ಟ್‌ನೊಂದಿಗೆ, ಹೋಂಡಾದ ಪ್ರಮುಖ ಬದಲಾವಣೆಯು ಅದರ ಮುಂಭಾಗದ ಬಂಪರ್‌ನಲ್ಲಿದೆ.

ಹೊಸ ಹೋಂಡಾ ಸಿಟಿ ಸಾಕಷ್ಟು ಫೀಚರ್ಸ್-ಲೋಡ್ ಸೆಡಾನ್ ಆಗಿದೆ. ಇದರಲ್ಲಿ ಲೆದರ್ ಸುತ್ತಿದ ಸ್ಟೀರಿಂಗ್ ವೀಲ್ ಮತ್ತು ಗೇರ್ ನಾಬ್, ಪ್ಯಾಡ್ಡ್ ಡೋರ್ ಪ್ಯಾಡ್‌ಗಳು, ಆಟೋ-ಡಿಮ್ಮಿಂಗ್ IRVM, ಎಲೆಕ್ಟ್ರಿಕಲ್ ಆಪರೇಟೆಡ್ ಮತ್ತು ಫೋಲ್ಡಬಲ್ ORVM ಗಳು ಮತ್ತು 8" ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ.

Honda City

ಇದರೊಂದಿಗೆ ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಸನ್‌ರೂಫ್, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಮತ್ತು ಇತರ ಫೀಚರ್ಸ್ ಗಳನ್ನು ಹೊಂದಿವೆ. ಹೋಂಡಾ ಸಿಟಿ ಫೇಸ್‌ಲಿಫ್ಟ್‌ ಕಾರಿನಲ್ಲಿ ತನ್ನ ಕ್ಯಾಮೆರಾ ಆಧಾರಿತ ADAS ತಂತ್ರಜ್ಞಾನದ ಸೆನ್ಸಿಂಗ್ ಸೂಟ್ ಅನ್ನು ಸೇರಿಸಿದೆ. ಇನ್ನು ಈ ಕಾರಿನಲ್ಲಿ ಅತ್ಯಾಧುನಿಕ ಫಿಚರ್ಸ್ ಗಳನ್ನು ಹೊಂದಿದೆ.

ನಾವು ಇದರಲ್ಲಿ ರಾಡಾರ್ ಆಧಾರಿತ ADAS ಸೂಟ್‌ನೊಂದಿಗೆ ಮುಂಬರುವ ಹ್ಯುಂಡೈ ವೆರ್ನಾ ಭಿನ್ನವಾಗಿ, ಹೋಂಡಾದ ಕ್ಯಾಮೆರಾ ಯುನಿಟ್ ಅನ್ನು ಅದರ IRVM ಅನ್ನು ನೋಡಬಹುದು. ನವೀಕರಿಸಿದ ಮಾದರಿಯು ಈಗ ಮುಂಬರುವ ಹೊರಸೂಸುವಿಕೆ ಮಾನದಂಡಗಳು ಮತ್ತು E20 ಇಂಧನಕ್ಕೆ ಅನುಗುಣವಾಗಿರುವ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಅದರ ಹೊರತಾಗಿ, ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳಲ್ಲಿ ಕೆಲವು ಕೃತಕ ಕಾರ್ಬನ್ ಫೈಬರ್ ಬಿಟ್‌ಗಳನ್ನು ಅಳವಡಿಸಿದೆ.

ಈ ಹೊಸ ಹೋಂಡಾ ಸಿಟಿ ಫೇಸ್‌ಲಿಫ್ಟ್‌ ಕಾರಿನಲ್ಲಿ ಮುಂಭಾಗದಲ್ಲಿ, ಬಂಪರ್ ಅನ್ನು ಈಗ ಸ್ವಲ್ಪ ಸ್ಪೋರ್ಟಿಯರ್ ಮಾಡಲಾಗಿದೆ. ಈ ಕಾರಿನ ಬಾನೆಟ್ ಶಟ್ ಲೈನ್‌ನ ಕೆಳಗಿರುವ ದಪ್ಪ ಕ್ರೋಮ್ ಸ್ವಲ್ಪ ಚಿಕ್ಕದಾಗಿದೆ. ಇದು ಸಿಟಿ ಕಾರಿನ ಮುಂಭಾಗವನ್ನು ಮತ್ತಷ್ಟು ಸ್ಪೋರ್ಟಿ ಆಗಿ ಕಾಣುವಂತೆ ಮಾಡಿದೆ. ಈ ಕಾರಿನಲ್ಲಿ ಸ್ವಲ್ಪ ದೊಡ್ಡದಾದ ಗ್ರಿಲ್ ಅನ್ನು ನೀಡಿದೆ. ಈ ಕಾರಿನ ಬಂಪರ್‌ನ ಕೆಳಗಿನ ಅರ್ಧವನ್ನು ಸ್ವಲ್ಪಮಟ್ಟಿಗೆ ಪರಿಷ್ಕರಿಸಲಾಗಿದೆ.

Article Published On: Wednesday, April 3, 2024, 11:38 [IST]
English summary
Honda city sedan prices hiked in india details
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+