Honda: ಹೋಂಡಾ ಎಲಿವೇಟ್ ಕಾರಿಗೆ ದೊಡ್ಡ ರಿಯಾಯಿತಿ... ರೂ.11 ಲಕ್ಷ ಬೆಲೆ, 16 ಕಿ.ಮೀ ಮೈಲೇಜ್
ದೇಶಾದ್ಯಂತ ಆಯ್ದ ಹೋಂಡಾ (Honda) ಡೀಲರ್‌ಶಿಪ್‌ಗಳು, ಈ ಮಾರ್ಚ್ ತಿಂಗಳು ವಿವಿಧ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ಪ್ರಯೋಜನವನ್ನು ಘೋಷಣೆ ಮಾಡಿವೆ. ಮಿಡ್-ಸೈಜ್ ಎಸ್‌ಯುವಿ ಎಲಿವೇಟ್ (Elevate) ಕೂಡ ಉತ್ತಮ ಡಿಸ್ಕೌಂಟ್ ಆಫರ್ ಪಡೆದಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ .
ಇದೇ ಮೊದಲ ಬಾರಿಗೆ ನೂತನ ಹೋಂಡಾ ಎಲಿವೇಟ್ ಎಸ್‌ಯುವಿ ದೊಡ್ಡಮಟ್ಟದಲ್ಲಿ ರಿಯಾಯಿತಿ ಸೌಲಭ್ಯವನ್ನು ಹೊಂದಿದೆ. ಈ ಕಾರನ್ನು ಖರೀದಿಸುವ ಗ್ರಾಹಕರಿಗೆ ರೂ.50,000 ನಗದು ರಿಯಾಯಿತಿ (Cash Discount) ಲಭ್ಯವಾಗಲಿದೆ. ರಾಜ್ಯದಿಂದ ರಾಜ್ಯಕ್ಕೆ, ಡೀಲರ್‌ಶಿಪ್, ರೂಪಾಂತರ ಹಾಗೂ ಬಣ್ಣಗಳನ್ನು ಆಧರಿಸಿ ಡಿಸ್ಕೌಂಟ್ ಆಫರ್ ಬೇರೆಯಿರಲಿದ್ದು, ಮತ್ತಷ್ಟು ವಿವರಗಳಿಗೆ ನಿಮ್ಮ ಹತ್ತಿರದ ಶೋರೂಂಗೆ ಭೇಟಿ ನೀಡಿರಿ.

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಹೋಂಡಾ ಎಲಿವೇಟ್ (Honda Elevate) ಎಸ್‌ಯುವಿ, ರೂ.11.58 ಲಕ್ಷದಿಂದ ರೂ.16.20 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಎಸ್‌ವಿ, ವಿ ಸೇರಿದಂತೆ ವಿವಿಧ ರೂಪಾಂತರ ಹಾಗೂ ಫೀನಿಕ್ಸ್ ಆರೆಂಜ್ ಪರ್ಲ್, ಅಬ್ಸಿಡಿಯನ್ ಬ್ಲೂ ಪರ್ಲ್, ರೇಡಿಯಂಟ್ ರೆಡ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್ ಒಳಗೊಂಡಂತೆ ಆಕರ್ಷಕ ಬಣ್ಣಗಳೊಂದಿಗೆ ಸಿಗುತ್ತದೆ.
ಹೊಸ ಹೋಂಡಾ ಎಲಿವೇಟ್ ಕಾರು, ಕೇವಲ 1.5 - ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ್ದು, 121 ಪಿಎಸ್ ಗರಿಷ್ಠ ಪವರ್ (ಶಕ್ತಿ), 145 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 6 - ಸ್ವೀಡ್ ಮ್ಯಾನುವಲ್ ಅಥವಾ ಸಿವಿಟಿ ಆಟೋಮೆಟಿಕ್ ಗೇರ್ ಬಾಕ್ಸ್ ಅನ್ನು ಪಡೆದಿದೆ.

ಮೈಲೇಜ್ ವಿಚಾರಕ್ಕೆ ಬರುವುದಾದರೆ, ಈ ಕಾರು 15.31 ರಿಂದ 16.92 ಕೆಎಂಪಿಎಲ್ ಇಂಧನ ದಕ್ಷತೆಯನ್ನು ಹೊಂದಿದೆ. FWD (ಫ್ರಂಟ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಸಹ ಒಳಗೊಂಡಿದೆ. ವಿನ್ಯಾಸದ ದೃಷ್ಟಿಯಿಂದಲೂ ಹೋಂಡಾ ಎಲಿವೇಟ್ ಎಸ್‌ಯುವಿ ಅತ್ಯುತ್ತಮವಾಗಿದ್ದು, 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ಜೊತೆಗೆ 458 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಪಡೆದಿದೆ.
ನೂತನ ಹೋಂಡಾ ಎಲಿವೇಟ್ ಕಾರು, 10.25 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7 - ಇಂಚಿನ ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಸನ್‌ರೂಫ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಸುರಕ್ಷತೆಯ ದೃಷ್ಟಿಯಿಂದಲೂ ಹೋಂಡಾ ಎಲಿವೇಟ್ ಅತ್ಯಾಧುನಿಕವಾಗಿದೆ. 6 ಏರ್‌ಬ್ಯಾಗ್, ಹಿಲ್ ಸ್ಟಾರ್ಟ್ ಅಸಿಸ್ಟ್, ಲೇನ್ ವಾಚ್ ಅಸಿಸ್ಟ್, ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್, ರೇರ್ ಪಾರ್ಕಿಂಗ್ ಕ್ಯಾಮೆರಾ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ನಂತಹ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ವೈಶಿಷ್ಟ್ಯಗಳನ್ನು ಹೊಂದಿದೆ. ಈ ಕಾರಿಗೆ ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಫಾರ್ಚುನರ್, ಸಿಟ್ರಸ್ ಸಿ3 ಏರ್‌ಕ್ರಾಸ್, ಸ್ಕೋಡಾ ಕುಶಾಕ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








