Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
ಜಪಾನ್ ಮೂಲದ ಹೋಂಡಾ (Honda) ಜನಪ್ರಿಯ ವಾಹನ ತಯಾರಕ ಸಂಸ್ಥೆಯಾಗಿ ಖ್ಯಾತಿ ಗಳಿಸಿದೆ. ಕಂಪನಿಯು ಮಾರಾಟಗೊಳಿಸುವ ಎಲಿವೇಟ್ ಎಸ್‌ಯುವಿ ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯವನ್ನು ಹೊಂದಿರುವುದರಿಂದ ಹೆಚ್ಚಿನ ಮಂದಿ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಇಲ್ಲಿ ಈ ಕಾರಿನ ಆನ್-ರೋಡ್ ಬೆಲೆ ಹಾಗೂ ಇಎಂಐ ಆಯ್ಕೆಯ ಬಗ್ಗೆ ವಿವರಿಸಿದ್ದೇವೆ.
ಬೆಂಗಳೂರಿನಲ್ಲಿ ಹೋಂಡಾ ಎಲಿವೇಟ್ (Honda Elevate) ಎಸ್‌ಯುವಿಯ ಬೇಸ್ ಮಾಡೆಲ್ 'ಎಸ್‌ವಿ' ರೂ.14.53 ಲಕ್ಷ, ಗರಿಷ್ಠ ಸಂಖ್ಯೆಯಲ್ಲಿ ಮಾರಾಟಗೊಳ್ಳುವ 'ಝಡ್ಎಕ್ಸ್' (ಸಿವಿಟಿ) ರೂ.20.19 ಲಕ್ಷ, 'ವಿ' ವೇರಿಯೆಂಟ್ ರೂ.15.43 ಲಕ್ಷ, 'ವಿ' (ಸಿವಿಟಿ) ರೂ.16.77 ಲಕ್ಷ, 'ವಿಎಕ್ಸ್' ರೂ.17.13 ಲಕ್ಷ, ವಿಎಕ್ಸ್ (ಸಿವಿಟಿ) ರೂ.18.47 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ.

'ಝಡ್ಎಕ್ಸ್' ರೂ.18.84 ಲಕ್ಷ, ಟಾಪ್ ಎಂಡ್ ಮಾಡೆಲ್ 'ಝಡ್ಎಕ್ಸ್' (ಸಿವಿಟಿ) ಡುಯಲ್ ಟೋನ್ ರೂ.20.53 ಲಕ್ಷ ಆನ್-ರೋಡ್ ದರವನ್ನು ಪಡೆದಿದೆ. ನೀವು ಈ ಎಲಿವೇಟ್ ಎಸ್‌ಯುವಿಯನ್ನು ರೂ.1.45 ಲಕ್ಷ ಡೌನ್ ಪೇಮೆಂಟ್ ಪಾವತಿಸಿ ಖರೀದಿಸಿದರೆ ಶೇಕಡ 9.8% ಬಡ್ಡಿ ದರದಲ್ಲಿ 5 ವರ್ಷದ ಅವಧಿಗೆ ಮಾಸಿಕ ರೂ.27,666 ಕಟ್ಟಬೇಕು.
ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಹೊಚ್ಚ ಹೊಸ ಹೋಂಡಾ ಎಲಿವೇಟ್ ಕಾರು, ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದ್ದು, ಫೀನಿಕ್ಸ್ ಆರೆಂಜ್ ಪರ್ಲ್, ಅಬ್ಸಿಡಿಯನ್ ಬ್ಲೂ ಪರ್ಲ್, ರೇಡಿಯಂಟ್ ರೆಡ್ ಮೆಟಾಲಿಕ್, ಪ್ಲಾಟಿನಂ ವೈಟ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೆ ಸಿಗುತ್ತದೆ. ಈ ಎಸ್‌ಯುವಿಯಲ್ಲಿ 5 ಮಂದಿ ಸುಲಭವಾಗಿ ಓಡಾಟ ನಡೆಸಬಹುದು.
ನೂತನ ಎಲಿವೇಟ್ ಎಸ್‌ಯುವಿಯು 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಸಿಗಲಿದ್ದು, 121 ಪಿಎಸ್ ಗರಿಷ್ಠ ಪವರ್ (ಶಕ್ತಿ), 145 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಆಟೋಮೆಟಿಕ್ ಗೇರ್ ಬಾಕ್ಸ್ ಅನ್ನು ಹೊಂದಿದೆ. FWD (ಫ್ರಂಟ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದ್ದು, 15.31 ರಿಂದ 16.92 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.
ಈ ಕಾರು ಬೆಲೆಗೆ ತಕ್ಕಂತೆ ಸಾಕಷ್ಟು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ಇದು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಸನ್‌ರೂಫ್ ಮತ್ತು 458 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಹೊಂದಿದೆ.
ಹೋಂಡಾ ಎಲಿವೇಟ್ ಎಸ್‌ಯುವಿ ಸುರಕ್ಷತೆಗೂ ಹೆಸರುವಾಸಿಯಾಗಿದೆ. 6 ಏರ್‌ಬ್ಯಾಗ್, ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್, ರೇರ್ ಪಾರ್ಕಿಂಗ್ ಕ್ಯಾಮೆರಾ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ನಂತಹ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಗಮನಿಸಿ.. ಈ ಕಾರಿನ ಆನ್-ರೋಡ್ ಬೆಲೆ ಹಾಗೂ ಸಾಲದ ಆಯ್ಕೆಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








