ಬೆಸ್ಟ್ ಹೋಂಡಾ ಎಸ್‌ಯುವಿಗೆ ಮುಗಿಬಿದ್ದ ಜನ: ಮಾರಾಟದಲ್ಲಿ ಹೊಸ ಮೈಲಿಗಲ್ಲು
ಹೋಂಡಾ ಎಲಿವೇಟ್ (Honda Elevate) ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಹೋಂಡಾ ಕಂಪನಿಯು ಈ ಎಲಿವೇಟ್ ಕಾಂಪ್ಯಾಕ್ಟ್ ಎಸ್‌ಯುವಿಯ ಸುಮಾರು 90,000 ಯುನಿಟ್‌ಗಳನ್ನು ಮಾರಾಟ ಮಾಡಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಈ ಹೋಂಡಾ ಎಲಿವೇಟ್ 2023ರ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿತು. ಕೇವಲ ಒಂದು ವರ್ಷದ ಅವಧಿಯಲ್ಲಿ 90 ಸಾವಿರ ಯುನಿಟ್‌ಗಳನ್ನು ಮಾರಾತವಾಗಿವೆ. ಹೊಂಡಾ ಎಲಿವೇಟ್ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮತ್ತು ಇತರ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತಿದೆ.
ಹೋಂಡಾ ಎಲಿವೇಟ್ ಎಸ್‍ಯುವಿ ಮಾದರಿಯ ವಿನ್ಯಾಸವು ನ್ಯೂ ಜನರೇಷನ್ CR-V ಮತ್ತು WR-V ಎಸ್‍ಯುವಿಗಳಿಂದ ಸ್ಫೂರ್ತಿ ಪಡೆದಿದೆ.ಈ ಹೋಂಡಾ ಎಲಿವೇಟ್ ಎಸ್‍ಯುವಿಯು ಬಾಕ್ಸಿ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯಲ್ಲಿ ಮುಂಭಾಗವು ದೊಡ್ಡ ಗ್ರಿಲ್ ಅನ್ನು ಹೊಂದಿದೆ. ಈ ಎಸ್‍ಯುವಿಯು ಎಲ್ಇಡಿ ಹೆಡ್‌ಲೈಟ್‌ಗಳು ಗ್ರಿಲ್‌ನ ಎರಡೂ ಬದಿಯಲ್ಲಿವೆ ಮತ್ತು ದಪ್ಪ ಕ್ರೋಮ್ ಸ್ಟ್ರಿಪ್‌ನಿಂದ ಸಂಪರ್ಕ ಹೊಂದಿವೆ.

ಹೊಂಡಾ ಎಲಿವೇಟ್ ಎಸ್‍ಯುವಿಯು ಅದರ LED DRL ನೊಂದಿಗೆ ಹೊಸ ಬೋಲ್ಡ್ LED ಹೆಡ್‌ಲೈಟ್‌ಗಳು ಹೈಲೈಟ್ ಆಗಿದೆ. ಈ ಎಸ್‍ಯುವಿಯ ಒಳಭಾಗದಲ್ಲಿ ಡ್ಯುಯಲ್-ಡಿಸ್ ಪ್ಲೇ ಡ್ಯಾಶ್ ಅನ್ನು ಹೊಂದಿದೆ. ಇದರ 10.25 ಇಂಚಿನ HD ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ಹೊಂದಿದೆ. ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಕನೆಕ್ಟಿವಿಟಿಯನ್ನು ಹೊಂದಿದೆ ಮತ್ತು 8-ಸ್ಪೀಕರ್ ಸರೌಂಡ್ ಸೌಂಡ್ ಸಿಸ್ಟಮ್‌ಗೆ ಕನೆಕ್ಟ್ ಹೊಂದಿದೆ.
ಇದರೊಂದಿಗೆ ಅನಲಾಗ್ ಸ್ಪೀಡೋದ ಪಕ್ಕದಲ್ಲಿ 7-ಇಂಚಿನ ಡಿಜಿಟಲ್ ಡಿಸ್ಪ್ಲೇ, ಸಿಂಗಲ್ ಪೇನ್ ಸನ್‌ರೂಫ್, ಪ್ಲಶ್ ಸೀಟಿಂಗ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಹೊಂದಿದೆ. ಈ ಹೋಂಡಾ ಎಲಿವೇಟ್ ಎಸ್‍ಯುವಿಯನ್ನು ಹೋಂಡಾ ಆರ್&ಡಿ ಏಷ್ಯಾ ಪೆಸಿಫಿಕ್, ಥೈಲ್ಯಾಂಡ್ ಅಭಿವೃದ್ಧಿಪಡಿಸಿದೆ. ಈ ಎಸ್‍ಯುವಿಯು ಅತ್ಯಾಧುನಿಕ ಸೌಕರ್ಯ ಮತ್ತು ತಂತ್ರಜ್ಞಾನದ ಜೊತೆಗೆ ಸ್ಥಿತಿ ಮತ್ತು ಹೆಚ್ಚು ವಿಶೇಷವಾದ ಖರೀದಿದಾರರನ್ನು ಆಕರ್ಷಿಸಿಸುವಂತೆ ವಿನ್ಯಾಸಗೊಳಿಸಿದೆ.

ಹೊಂಡಾ ಎಲಿವೇಟ್ ಎಸ್‍ಯುವಿಯನ್ನು ಆರು ಏರ್‌ಬ್ಯಾಗ್‌ಗಳು, ಮೂರು-ಪಾಯಿಂಟ್ ELR ಸೀಟ್ ಬೆಲ್ಟ್‌ಗಳು ಮತ್ತು ಸೀಟ್ ಬೆಲ್ಟ್ ರಿಮೈಂಡರ್‌ಗಳು ಸೇರಿದಂತೆ ಎಲ್ಲಾ ಸ್ಟ್ಯಾಂಡರ್ಡ್ ಆಗಿ ಹೆಚ್ಚುವರಿ ಸುರಕ್ಷತಾ ತಂತ್ರಜ್ಞಾನದೊಂದಿಗೆ ಎಸ್‍ಯುವಿಯನ್ನು ಏಪ್ರಿಲ್‌ನಲ್ಲಿ ನವೀಕರಿಸಲಾಗಿತ್ತು. ಹೋಂಡಾ ಎಲಿವೇಟ್ ಎಸ್‍ಯುವಿಯನ್ನು ಹೋಂಡಾ ಆರ್&ಡಿ ಏಷ್ಯಾ ಪೆಸಿಫಿಕ್, ಥೈಲ್ಯಾಂಡ್ ಅಭಿವೃದ್ಧಿಪಡಿಸಿದೆ. ಈ ಎಸ್‍ಯುವಿಯು ಅತ್ಯಾಧುನಿಕ ಸೌಕರ್ಯ ಮತ್ತು ತಂತ್ರಜ್ಞಾನದ ಜೊತೆಗೆ ಸ್ಥಿತಿ ಮತ್ತು ಹೆಚ್ಚು ವಿಶೇಷವಾದ ಖರೀದಿದಾರರನ್ನು ಆಕರ್ಷಿಸಿಸುವಂತೆ ವಿನ್ಯಾಸಗೊಳಿಸಿದೆ.
ಇನ್ನು ಈ ಹೋಂಡಾ ಎಲಿವೇಟ್ ಎಸ್‌ಯುವಿಯಲ್ಲಿ 1.5-ಲೀಟರ್, ಡಿಒಹೆಚ್‌ಸಿ, 4-ಸಿಲಿಂಡರ್, ನ್ಯಾಚುರಲ್ ಆಸ್ಪೈರ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 5ನೇ ತಲೆಮಾರಿನ ಹೋಂಡಾ ಸಿಟಿಯಲ್ಲಿ ಲಭ್ಯವಿದೆ. ಹೋಂಡಾ ಎಲಿವೇಟ್ ಎಸ್‍ಯುವಿ ಈ ಎಂಜಿನ್ 6,600rpm ನಲ್ಲಿ 119.4 bhp ಪವರ್ ಮತ್ತು 4,300rpm ನಲ್ಲಿ 145 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಹೋಂಡಾ ಎಲಿವೇಟ್ ಎಸ್‌ಯುವಿಯಲ್ಲಿ ಈ 1.5-ಲೀಟರ್ ಎಂಜಿನ್ ಹೊಂದಿರುವ ಟ್ರಾನ್ಸ್‌ಮಿಷನ್ ಆಯ್ಕೆಗಳು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು ಸಿವಿಟಿ ಗೇರ್‌ಬಾಕ್ಸ್ ಅನ್ನು ಒಳಗೊಂಡಿವೆ. ಹೋಂಡಾ ಪ್ರಕಾರ, ಹೋಂಡಾ ಎಲಿವೇಟ್ ಎಸ್‍ಯುವಿ ಮ್ಯಾನುವಲ್ ರೂಪಾಂತರವು 15.31 ಕಿ.ಮೀ ಮೈಲೇಜ್ ನೀಡಿದರೆ, CVT ರೂಪಾಂತರವು 16.92 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








