Honda: ಭಾರತ ನಿರ್ಮಿಸಿದ ಹೋಂಡಾ ಕಾರಿಗೆ ಮುಗಿಬಿದ್ದ ಜಪಾನ್ ಜನ!

ಭಾರತದಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಹೋಂಡಾ ಎಲಿವೇಟ್ ಎಸ್‌ಯುವಿ, ಇದೀಗ ಹೋಂಡಾದ ತಾಯ್ನಾಡಿಗೆ ರಫ್ತಾಗಿ ಭರ್ಜರಿ ಬುಕಿಂಗ್‌ಗಳನ್ನು ಸಾಧಿಸುತ್ತಿದೆ. ಹೋಂಡಾ ಕಂಪನಿಯು ಎಲಿವೇಟ್ ಎಸ್‌ಯುವಿಯನ್ನು ಮಾರ್ಚ್ 2024ರಲ್ಲಿ ಡಬ್ಲ್ಯುಆರ್-ವಿ ಎಂಬ ಹೆಸರಿನಲ್ಲಿ ಜಪಾನ್‌ನಲ್ಲಿ ಬಿಡುಗಡೆಗೊಳಿಸಿದೆ. ಕೇವಲ ಒಂದು ತಿಂಗಳಲ್ಲಿ 13,000 ಬುಕಿಂಗ್‌ಗಳನ್ನು ಗಳಿಸಿ ದಾಖಲೆ ನಿರ್ಮಿಸಿದೆ.

ಭಾರತದಂತೆಯೇ, ಎಲಿವೇಟ್ ಜಪಾನ್‌ನಲ್ಲಿಯೂ ಬೆಸ್ಟ್ ಸೆಲ್ಲರ್ ಆಗಿ ಹೊರಹೊಮ್ಮಿದೆ. ಎಲಿವೇಟ್ ಹೋಂಡಾದ ಮೊದಲ ಮೇಡ್ ಇನ್ ಇಂಡಿಯಾ ಕಾರಾಗಿದ್ದು, ಇದನ್ನು ಹೋಂಡಾ ತನ್ನ ದೇಶೀಯ ಮಾರುಕಟ್ಟೆಗೆ ರಫ್ತು ಮಾಡುತ್ತಿದೆ. ಈ ಎಸ್‌ಯುವಿ ಸಂಪೂರ್ಣವಾಗಿ ಭಾರತದಲ್ಲಿ ನಿರ್ಮಾಣಗೊಂಡು ಜಪಾನ್‌ಗೆ ರಫ್ತಾಗುತ್ತಿದೆ. ಜಪಾನ್‌ನಲ್ಲಿ ಹೊಸ ತಲೆಮಾರಿನ ಡಬ್ಲ್ಯುಆರ್-ವಿ ಆಗಿ ಬಿಡುಗಡೆಯಾಗಿದ್ದು, ಇದನ್ನು JPY 2,098,800 ರಿಂದ JPY 2,489,300 (ರೂ. 11.29 ಲಕ್ಷದಿಂದ ರೂ. 13.39 ಲಕ್ಷ) ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಕಂಪನಿಯ ಪ್ರಕಾರ ಜಪಾನ್‌ನಲ್ಲಿ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಬರೋಬ್ಬರಿ 13,000 ಬುಕಿಂಗ್ ಗಳನ್ನು ಸ್ವೀಕರಿಸಿರುವುದಾಗಿ ಹೇಳಿದೆ.

honda-elevate-suv-bookings-crossed-13k-in-japan

ಈ ಬುಕಿಂಗ್‌ಗಳನ್ನು ಕಂಡು ಹೋಂಡಾ ಕಂಪನಿಯೇ ಬೆರಗಾಗಿದೆ, ಏಕೆಂದರೆ ಕಂಪನಿಯು ಸಾಧಾರಣ 3,000 ಬುಕಿಂಗ್‌ಗಳನ್ನು ನಿರೀಕ್ಷಿಸಿತ್ತು. ಆದರೆ ಅಚ್ಚರಿಯೆಂಬಂತೆ ನಾಲ್ಕು ಪಟ್ಟು ಹೆಚ್ಚಾಗಿ ಬುಕ್ಕಿಂಗ್‌ಗಳನ್ನು ಸ್ವೀಕರಿಸಿದೆ. ಈ ಬೇಡಿಕೆಯನ್ನು ಆಧರಿಸಿ ಹೋಂಡಾ ಎಲಿವೇಟ್ ಎಸ್‌ಯುವಿಯನ್ನು ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯೂ ಪರಿಚಯಿಸುವ ಸಾಧ್ಯತೆಯಿದೆ. ಇತ್ತ ಭಾರತದಲ್ಲಿಯೂ ಎಲಿವೇಟ್ ಕೇವಲ 100 ದಿನಗಳಲ್ಲಿ 20,000 ಬುಕಿಂಗ್‌ಗಳನ್ನು ದಾಖಲಿಸಿದೆ.

ಎಲಿವೇಟ್ ಏಕೆ ಜನಪ್ರಿಯವಾಗುತ್ತಿದೆ?: ಎಲಿವೇಟ್ ಎಸ್‌ಯುವಿ ಸಮಗ್ರ ಶ್ರೇಣಿಯ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ADAS ಸೇರಿದಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡುತ್ತಿದೆ. ಈ ಎಸ್‌ಯುವಿ ಡೈನಾಮಿಕ್ ಬಾಹ್ಯ ಪ್ರೊಫೈಲ್ ಅನ್ನು ಹೊಂದಿದೆ. ಎಲಿವೇಟ್ ಒಳಗಿನ ಡ್ರೈವರ್ ಸೀಟ್‌ನಿಂದ ಮುಂಭಾಗದಲ್ಲಿ ವಸ್ತುಗಳನ್ನು ನೋಡಲು ಉತ್ತಮ ನೋಟ ಸಿಗುವುದನ್ನು ಹಲವರು ಪ್ರಶಂಸಿಸುತ್ತಿದ್ದಾರೆ. ಉತ್ತಮ ಬೂಟ್ ಸ್ಪೇಸ್ ಜೊತೆಗೆ ವ್ಯಾಪಕ ಶ್ರೇಣಿಯ ಬಣ್ಣದ ಆಯ್ಕೆಗಳಲ್ಲಿ ಸಿಗುತ್ತಿದೆ.

honda-elevate-suv-bookings-crossed-13k-in-japan

ಜಪಾನ್ ನಲ್ಲಿ ಎಲಿವೇಟ್ (ಡಬ್ಲ್ಯುಆರ್-ವಿ) ವೇರಿಯೆಂಟ್‌ಗಳು: ಜಪಾನ್ ಮಾದರಿಯನ್ನು X, Z ಮತ್ತು Z+ ಎಂಬ ಮೂರು ಟ್ರಿಮ್‌ಗಳಲ್ಲಿ ನೀಡಲಾಗುತ್ತಿದೆ. ಈ ಮೂರು ಟ್ರಿಮ್‌ಗಳಲ್ಲಿ ಶೇ 55 ರಷ್ಟು ಬೇಡಿಕೆ ಮಧ್ಯಮ ರೂಪಾಂತರವಾದ Z ಮಾದರಿಗೆ ಹೆಚ್ಚಾಗಿ ಇದೆ. ಉಳಿದ ಶೇ30 ರಷ್ಟು ಬುಕಿಂಗ್‌ಗಳು ಟಾಪ್-ಸ್ಪೆಕ್ Z+ ಪಡೆದುಕೊಂಡರೆ, ಬೇಸ್ ವೇರಿಯಂಟ್ X ಶೇ15 ರಷ್ಟು ಬುಕಿಂಗ್‌ಗಳನ್ನು ಪಡೆದುಕೊಂಡಿದೆ. ಬಣ್ಣಗಳವಾರು ಬೇಡಿಕೆ ನೋಡುವುದಾದ್ರೆ ಜಪಾನ್‌ನಲ್ಲಿ ಪ್ಲಾಟಿನಂ ವೈಟ್ ಪರ್ಲ್ (35%), ಕ್ರಿಸ್ಟಲ್ ಬ್ಲ್ಯಾಕ್ ಪರ್ಲ್ (28%) ಮತ್ತು ಮೆಟಿಯೋರಾಯ್ಡ್ ಗ್ರೇ ಮೆಟಾಲಿಕ್ (18%) ಬೇಡಿಕೆ ಪಡೆದುಕೊಂಡಿದೆ.

ಎಲಿವೇಟ್ ಎಂಜಿನ್: 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 121 Bhp ಪವರ್ ಮತ್ತು 145 NM ಟಾರ್ಕ್ ಉತ್ಪಾದಿಸುತ್ತದೆ. ಜಪಾನ್ ಎಲಿವೇಟ್ (ಡಬ್ಲ್ಯುಆರ್-ವಿ) ಸಿವಿಟಿ ಘಟಕದೊಂದಿಗೆ ಮಾತ್ರ ಲಭ್ಯವಿದೆ. ಆದ್ರೆ ಭಾರತದಲ್ಲಿ ಎಲಿವೇಟ್ ಮ್ಯಾನುವಲ್ ಮತ್ತು ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಎರಡನ್ನೂ ಹೊಂದಿದೆ. ಮ್ಯಾನುವಲ್ ಮಾದರಿಯು 15.31 ಕಿ.ಮೀ ಮೈಲೇಜ್ ಮತ್ತು ಸಿವಿಟಿ 16.92 ಕಿ.ಮೀ ಮೈಲೇಜ್ ನೀಡುತ್ತವೆ.

honda-elevate-suv-bookings-crossed-13k-in-japan

2024ರ ಹಣಕಾಸು ವರ್ಷದಲ್ಲಿ ಹೋಂಡಾ ಕಂಪನಿಯು ಕಾರು ರಫ್ತಿನಲ್ಲಿ 6ನೇ ಸ್ಥಾನದಲ್ಲಿದ್ದು, ಇದೀಗ ಎಲಿವೇಟ್ ಜಪಾನ್‌ನಲ್ಲಿ ಭರ್ಜರಿ ಬೇಡಿಕೆ ಪಡೆಯುತ್ತಿರುವುದರಿಂದ ಇನ್ನೂ ಹಲವರು ದೇಶಗಳಲ್ಲಿ ಬಿಡಗಡೆ ಮಾಡಲು ಕಂಪನಿ ನೋಡುತ್ತಿದೆ. ಈ ಮೂಲಕ ಭಾರತದಿಂದ ಹೋಂಡಾದ ರಫ್ತು ಮುಂಬರುವ ತಿಂಗಳುಗಳಲ್ಲಿ ಗಮನಾರ್ಹ ಜಿಗಿತಕ್ಕೆ ಸಾಕ್ಷಿಯಾಗಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, April 25, 2024, 11:40 [IST]
English summary
Honda elevate suv bookings crossed 13k in japan
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+