ವಿದೇಶಗಳಲ್ಲಿ ಧೂಳೆಬ್ಬಿಸುತ್ತಿದೆ ಮೇಡ್-ಇನ್-ಇಂಡಿಯಾ ಕಾರು: ದಾಖಲೆಯ ರಫ್ತು! ಕಂಪನಿಯೇ ಊಹಿಸಿರಲಿಲ್ಲ!

ಹೋಂಡಾ ಎಲಿವೇಟ್ ಎಸ್‌ಯುವಿ ಜಪಾನಿನ ಕಾರು ತಯಾರಕ ಹೋಂಡಾದಿಂದ ಭಾರತದಲ್ಲಿ ಪುನರುಜ್ಜೀವನಗೊಂಡ ಮಾದರಿಯಾಗಿದೆ. ಈ ಮಿಡ್ ಸೈಜ್ ಎಸ್‍ಯುವಿಯು 2023ರ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಂಡಿತು. ಬಿಡುಗಡೆಯಾದ ಆರಂಭಿಕ ತಿಂಗಳುಗಳಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿತು. ಬಿಡುಗಡೆಯಾದ ಮೊದಲ ಐದು ತಿಂಗಳಲ್ಲಿ ಸರಾಸರಿ 4,500 ಯುನಿಟ್‌ಗಳು ಮಾರಾಟವಾಗುವುದರೊಂದಿಗೆ ಮಾದರಿಯು ಬಲವಾದ ಮಾರಾಟವನ್ನು ಸಾಧಿಸಿತು. 2024ರ ಫೆಬ್ರವರಿಯಿಂದ ಜೂನ್ ತಿಂಗಳವಗಿನ ಮಾರಾಟವು ತಿಂಗಳಿಗೆ ಸರಾಸರಿ 2,380 ಯುನಿಟ್‌ಗಳಿಗೆ ಕುಸಿಯಿತು. ದೇಶೀಯ ಬೇಡಿಕೆಯಲ್ಲಿ ಈ ನಿಧಾನಗತಿಯ ಹೊರತಾಗಿಯೂ, ರಫ್ತು ಅಂಕಿಅಂಶಗಳು ಹೋಂಡಾಗೆ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ.

FY2025 ರ ಮೊದಲ ತ್ರೈಮಾಸಿಕದಲ್ಲಿ ಹೋಂಡಾ ಎಲಿವೇಟ್ (Honda Elevate) 5,435 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಅದೇ ಅವಧಿಯಲ್ಲಿ, ಹ್ಯುಂಡೈ ಕ್ರೆಟಾ 46,402 ಯುನಿಟ್‌ಗಳ ಮಾರಾಟದೊಂದಿಗೆ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ 27,066 ಯುನಿಟ್‌ಗಳ ಮಾರಾಟದೊಂದಿಗೆ ಎರಡನೇ ಸ್ಥಾನದಲ್ಲಿದೆ. ಕಿಯಾ ಸೆಲ್ಟೋಸ್ (19,776 ಯುನಿಟ್‌ಗಳು) ಮತ್ತು ಟೊಯೊಟಾ ಹೈರೈಡರ್ (11,433 ಯುನಿಟ್‌ಗಳು) ಪ್ರಸ್ತುತ ಮಾರಾಟದಲ್ಲಿ ಎಲಿವೇಟ್‌ಗಿಂತ ಮುಂದಿವೆ.

Honda Elevate

ದೇಶೀಯ ಮಾರಾಟದಲ್ಲಿ ಮುಂಚೂಣಿಯಲ್ಲಿಲ್ಲದಿದ್ದರೂ, ಎಲಿವೇಟ್‌ಗೆ ರಫ್ತುಗಳಲ್ಲಿ ಹೋಂಡಾ ಗಮನಾರ್ಹ ಯಶಸ್ಸನ್ನು ಸಾಧಿಸಿದೆ. 2024ರ ಜೂನ್ ತಿಂಗಳಿನಲ್ಲಿ ಹೋಂಡಾ 18,009 ಕಾರುಗಳನ್ನು ರಫ್ತು ಮಾಡಿದೆ. ಹಿಂದಿನ ವರ್ಷದ 5,508 ಯುನಿಟ್‌ಗಳಿಗೆ ಹೋಲಿಸಿದರೆ, ಬೆಳವಣಿಗೆಯು ಶೇಕಡಾ 256 ಆಗಿದೆ. 2023ರ ಆಗಸ್ಟ್ ತಿಂಗಳಿನಲ್ಲಿ ಪ್ರಾರಂಭವಾದಾಗಿನಿಂದ, ಹೋಂಡಾ ಒಟ್ಟು 61,863 ಎಲಿವೇಟ್‌ಗಳನ್ನು ರಫ್ತು ಮಾಡಿದೆ

FY 2025ರ ಮೊದಲ ತ್ರೈಮಾಸಿಕದಲ್ಲಿ ಹೋಂಡಾ 10,659 ಮೇಡ್ ಇನ್ ಇಂಡಿಯಾ ಎಲಿವೇಟಟ್ ಎಸ್‍ಯುವಿಗಳನ್ನು ಜಪಾನ್‌ಗೆ ರಫ್ತು ಮಾಡಲಾಗಿದೆ. ಈ ರಫ್ತು ಅಂಕಿ ಅಂಶವು ದೇಶೀಯ ಮಾರಾಟಕ್ಕಿಂತ ದ್ವಿಗುಣವಾಗಿದೆ ಎಂಬುದನ್ನು ನೆನಪಿನಲ್ಲಿಡಬೇಕು. ಹೋಂಡಾ ಭಾರತದಲ್ಲಿ ಯುಟಿಲಿಟಿ ವಾಹನಗಳ ಎರಡನೇ ಅತಿ ಹೆಚ್ಚು ರಫ್ತುದಾರನಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಒಟ್ಟಾರೆ ಮಾರಾಟದ ಅಂಕಿಅಂಶಗಳನ್ನು ಹೆಚ್ಚಿಸಲು ಅಂತರರಾಷ್ಟ್ರೀಯ ಮಾರುಕಟ್ಟೆಗಳ ಮೇಲೆ ಕೇಂದ್ರೀಕರಿಸುವ ಹೋಂಡಾದ ಕಾರ್ಯತಂತ್ರವನ್ನು ಇದು ಪ್ರತಿಬಿಂಬಿಸುತ್ತದೆ. ಹೋಂಡಾ ಈಗಾಗಲೇ ಮೂರು ತಿಂಗಳಲ್ಲಿ ಎಲಿವೇಟ್‌ನ 10,000 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ. 2024ರ ಅಂತ್ಯದ ವೇಳೆಗೆ 30,000 ರಿಂದ 50,000 ಎಲಿವೇಟ್ ಎಸ್‍ಯುವಿಗಳನ್ನು ರಫ್ತು ಮಾಡುವ ಗುರಿಯನ್ನು ಹೋಂಡಾ ಹೊಂದಿದೆ.

ಎಲಿವೇಟ್ ಪ್ರಸ್ತುತ ಭಾರತದಲ್ಲಿ ಕಡಿಮೆ ಬೇಡಿಕೆಯನ್ನು ಅನುಭವಿಸುತ್ತಿದೆ, ಆದರೆ ಹೆಚ್ಚಿದ ರಫ್ತುಗಳು ಹೋಂಡಾದ ಭವಿಷ್ಯದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಈ ಹೋಂಡಾ ಎಲಿವೇಟ್ ಎಸ್‌ಯುವಿಯಲ್ಲಿ 1.5-ಲೀಟರ್, ಡಿಒಹೆಚ್‌ಸಿ, 4-ಸಿಲಿಂಡರ್, ನ್ಯಾಚುರಲ್ ಆಸ್ಪೈರ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 5ನೇ ತಲೆಮಾರಿನ ಹೋಂಡಾ ಸಿಟಿಯಲ್ಲಿ ಲಭ್ಯವಿದೆ.

ಈ ಹೋಂಡಾ ಎಲಿವೇಟ್ ಎಸ್‍ಯುವಿ ಈ ಎಂಜಿನ್ 6,600rpm ನಲ್ಲಿ 119.4 bhp ಪವರ್ ಮತ್ತು 4,300rpm ನಲ್ಲಿ 145 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಎಸ್‌ಯುವಿಯಲ್ಲಿ ಈ 1.5-ಲೀಟರ್ ಎಂಜಿನ್ ಹೊಂದಿರುವ ಟ್ರಾನ್ಸ್‌ಮಿಷನ್ ಆಯ್ಕೆಗಳು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು ಸಿವಿಟಿ ಗೇರ್‌ಬಾಕ್ಸ್ ಅನ್ನು ಒಳಗೊಂಡಿವೆ.

ಹೋಂಡಾ ಪ್ರಕಾರ, ಹೋಂಡಾ ಎಲಿವೇಟ್ ಎಸ್‍ಯುವಿ ಮ್ಯಾನುವಲ್ ರೂಪಾಂತರವು 15.31 ಕಿ.ಮೀ ಮೈಲೇಜ್ ನೀಡಿದರೆ, CVT ರೂಪಾಂತರವು 16.92 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಎಸ್‍ಯುವಿಯು ಅದರ LED DRL ನೊಂದಿಗೆ ಹೊಸ ಬೋಲ್ಡ್ LED ಹೆಡ್‌ಲೈಟ್‌ಗಳು ಹೈಲೈಟ್ ಆಗಿದೆ. ಈ ಎಸ್‍ಯುವಿಯ ಒಳಭಾಗದಲ್ಲಿ ಡ್ಯುಯಲ್-ಡಿಸ್ ಪ್ಲೇ ಡ್ಯಾಶ್ ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, July 18, 2024, 19:28 [IST]
English summary
Honda elevate suv export numbers nearly double in q1 fy25 details
Read more on honda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+