7 ಲಕ್ಷದ ಕಾರು ಕೊಂಡರೆ 7 ವರ್ಷ ವಾರಂಟಿ: ನಿಮ್ಮ ಮೊದಲ ಕಾರುಕೊಳ್ಳಲು ಇದಕ್ಕಿಂತ ಒಳ್ಳೆ ಸಮಯವಿಲ್ಲ!
ಸದ್ಯಕ್ಕೆ ಮಾರುಕಟ್ಟೆಯಲ್ಲಿ ದೊರಕುತ್ತಿರುವ ಕಾರುಗಳಲ್ಲಿ ಅತ್ಯುತ್ತಮ ಎಂಜಿನ್ ಯಾವ ಕಾರುಗಳಲ್ಲಿದೆ ಎಂದು ನೋಡುವಾಗ, ಅಗ್ರಸ್ಥಾನದಲ್ಲಿ ನಿಲ್ಲುವ ಕಾರು ಕಂಪನಿಗಳಲ್ಲಿ ಹೋಂಡಾ ಸಹ ಒಂದು. ಹೋಂಡಾ ಕಾರುಗಳ ಎಂಜಿನ್ ಎಷ್ಟರ ಮಟ್ಟಿಗಿನ ಗುಣಮಟ್ಟವನ್ನು ಹೊಂದಿದೆ ಎಂದು ತಿಳಿಯಬೇಕಾದರೆ ನೀವು ಒಂದು ಹೋಂಡಾ ಕಾರಿರುವ ಮಾಲೀಕರ ಬಳಿ ಕೇಳಬೇಕು. ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಅಮೇಜ್, ಎಲಿವೇಟ್ ಮತ್ತು ಸಿಟಿ ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಈ ಕುರಿತು ನಿಮಗೆ ಈಗಾಗಲೇ ತಿಳಿದಿದೆ.
ಇದೀಗ ಹೋಂಡಾ ಕಂಪನಿಯು ತನ್ನ ಆಯ್ದ ಆವೃತ್ತಿಗಳಿಗೆ ಹೊಸ ವಿಸ್ತೃತ ವಾರಂಟಿ ಕಾರ್ಯಕ್ರಮವನ್ನು ಪರಿಚಯಿಸಿದೆ. ಕಾರ್ಯಕ್ರಮದ ಭಾಗವಾಗಿ, ಗ್ರಾಹಕರು ತಮ್ಮ ವಾರಂಟಿಯನ್ನು ಖರೀದಿಸಿದ ದಿನಾಂಕದಿಂದ ಏಳು ವರ್ಷಗಳವರೆಗೆ ವಿಸ್ತರಿಸಬಹುದು. ಇಲ್ಲವೇ, ಹೇಳಿದ ಅವಧಿಯಲ್ಲಿ ಕ್ರಮಿಸುವ ಕಿಲೋಮೀಟರ್‌ಗಳಿಗೆ ಯಾವುದೇ ಮಿತಿಯಿಲ್ಲ. ಎಂಬುದನ್ನು ನಾವಿಲ್ಲಿ ಗಮನಿಸಬೇಕು.

ಎಲಿವೇಟ್, ಸಿಟಿ, ಸಿಟಿ e:HEV ಮತ್ತು ಅಮೇಜ್ ಅನ್ನು ಒಳಗೊಂಡಿರುವ ಅದರ ಪ್ರಸ್ತುತ ಮಾದರಿ ಶ್ರೇಣಿಯ ಪೆಟ್ರೋಲ್ ಆವೃತ್ತಿಗಳಲ್ಲಿ ಈ ವಿಸ್ತೃತ ಖಾತರಿಯನ್ನು ನೀಡಲಾಗುತ್ತದೆ. ಇದು ಸಿವಿಕ್, ಜಾಝ್ ಮತ್ತು WR-V ನಂತಹ ಇತರ ಮಾದರಿಗಳ ಪೆಟ್ರೋಲ್ ಆವೃತ್ತಿಗಳನ್ನು ಸಹ ಒಳಗೊಂಡಿದೆ. ಗ್ರಾಹಕರು ಈ ಹಿಂದೆ ವಿಸ್ತೃತ ವಾರಂಟಿ ಪ್ರೋಗ್ರಾಂಗೆ ನೋಂದಾಯಿಸಿಕೊಂಡಿದ್ದರೆ ಪ್ಯಾಕೇಜ್ ಅನ್ವಯಿಸುತ್ತದೆ.
ಹೋಂಡಾ ಕಾರುಗಳಲ್ಲಿ ಇತ್ತೀಚೆಗೆ ಹೆಚ್ಚು ಹೆಸರು ಮಾಡುತ್ತಿರುವ ಮಾದರಿಯೆಂದರೆ ಅದು ಎಲಿವೇಟ್. ಭಾರತದಲ್ಲಿ ಹೋಂಡಾ ಕಂಪನಿಯ ಅಮೇಜ್ (Amaze) ಹಾಗೂ ಸಿಟಿ (City) ಸೆಡಾನ್ ರೀತಿಯಲ್ಲಿ ಎಲಿವೇಟ್ ಎಸ್‌ಯುವಿಯು ತನಗಾಗಿ ಪ್ರತ್ಯೇಕ ಸ್ಥಾನವನ್ನು ಸೃಷ್ಟಿಸಿಕೊಳ್ಳುತ್ತಿದ್ದು, ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ರೂ.11.58 ಲಕ್ಷದಿಂದ ರೂ.16.20 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಅತ್ಯಾಧುನಿಕ ವಿನ್ಯಾಸವನ್ನು ಕೂಡ ಒಳಗೊಂಡಿದೆ.

ಹೋಂಡಾ (Honda) ಎಲಿವೇಟ್ ಕಾರು ಎಸ್‌ವಿ, ವಿ, ವಿಎಕ್ಸ್ ಮತ್ತು ಝಡ್ಎಕ್ಸ್ ರೂಪಾಂತರ ಹಾಗೂ ಅಬ್ಸಿಡಿಯನ್ ಬ್ಲೂ ಪರ್ಲ್, ಫೀನಿಕ್ಸ್ ಆರೆಂಜ್ ಪರ್ಲ್, ರೇಡಿಯಂಟ್ ರೆಡ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್, ಲೂನಾರ್ ಸಿಲ್ವರ್ ಮೆಟಾಲಿಕ್, ಗೋಲ್ಡನ್ ಬ್ರೌನ್ ಮೆಟಾಲಿಕ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳೊಂದಿಗೆ ಸಿಗುತ್ತದೆ. ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು.
ನೂತನ ಹೋಂಡಾ ಎಲಿವೇಟ್ (Honda Elevate) ಎಸ್‌ಯುವಿ, 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ದೊರೆಯಲಿದ್ದು, ರೂಪಾಂತರಗಳಿಗೆ ಅನುಗುಣವಾಗಿ 6-ಸ್ವೀಡ್ ಮ್ಯಾನುವಲ್/ ಸಿವಿಟಿ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. 15.31 ರಿಂದ 16.92 ಕೆಎಂಪಿಎಲ್ ಮೈಲೇಜ್ ನೀಡುತ್ತದೆ. ಜೊತೆಗೆ FWD (ಫ್ರಂಟ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದೆ.
ಈ ಕಾರು ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಸೆಮಿ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ಸನ್‌ರೂಫ್ ಹೊಂದಿದೆ.
ಸುರಕ್ಷತೆಗೂ ಹೋಂಡಾ ಎಲಿವೇಟ್ ಕಾರು ಹೆಸರುವಾಗಿಯಾಗಿದೆ. 6 ಏರ್‌ಬ್ಯಾಗ್, ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ಲೇನ್ ವಾಚ್ ಅಸಿಸ್ಟ್, ರೇರ್ ಪಾರ್ಕಿಂಗ್ ಕ್ಯಾಮೆರಾದಂತಹ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ವೈಶಿಷ್ಟ್ಯಗಳನ್ನು ಪಡೆದಿದೆ. ಈ ಕಾರಿಗೆ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಫಾರ್ಚುನರ್, ಕಿಯಾ ಸೆಲ್ಟೋಸ್, ಸಿಟ್ರಸ್ ಸಿ3 ಏರ್‌ಕ್ರಾಸ್ ದೊಡ್ಡ ಎದುರಾಳಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








