BIG NEWS: ಅಮೆರಿಕ, ಚೀನಾ ಕಂಪನಿಗಳ ಭಾರೀ ಸ್ಪರ್ಧೆ.. ಈ ಪ್ರಸಿದ್ಧ ಕಾರು ತಯಾರಕರಿಂದ ವಿಲೀನಗೊಳ್ಳಲು ನಿರ್ಧಾರ!
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕ ಮತ್ತು ಚೀನಾ ಮೂಲದ ಕಾರು ತಯಾರಕ ಕಂಪನಿಗಳಿಗೆ ಪ್ರಬಲವಾದ ಸ್ಪರ್ಧೆಯೊಡ್ಡಲು ಜಪಾನ್ ಕಾರು ತಯಾಕರರು ಸಿದ್ಧರಾಗುತ್ತಿದ್ದಾರೆ. ಅದರ ಭಾಗವಾಗಿ ಹೋಂಡಾ (Honda), ನಿಸ್ಸಾನ್ (Nissan) ಹಾಗೂ ಮಿತ್ಸುಬಿಷಿ (Mitsubishi) ಕಂಪನಿಗಳು ಮಾತುಕತೆ ನಡೆಸುತ್ತಿವೆ. ವ್ಯಾಪಾರ ಚಟುವಟಿಕೆಯನ್ನು ವಿಸ್ತರಿಸಲು ಹೋಂಡಾ ಮತ್ತು ನಿಸ್ಸಾನ್ ವಿಲೀನಗೊಳ್ಳಲು ಒಪ್ಪಿಕೊಂಡಿವೆ. ಜನವರಿ ಅಂತ್ಯದ ವೇಳೆಗೆ ಮಿತ್ಸುಬಿಷಿ ಕೂಡ ಈ ಗುಂಪನ್ನು ಸೇರಲು ತೀರ್ಮಾನಿಸಿದೆ ಎಂದು ಸೋಮವಾರ ವರದಿಯಾಗಿದೆ.
ಈ ವಿಲೀನ ಪ್ರಕ್ರಿಯೆಯೂ ಜಪಾನ್‌ನ ಎರಡನೇ ಹಾಗೂ ಮೂರನೇ ಅತಿದೊಡ್ಡ ಕಾರು ತಯಾರಕರ ಕಂಪನಿಗಳನ್ನು ಒಂದು ಮಾಡುತ್ತಿದೆ. ಇದು ಆಟೋಮೊಬೈಲ್ ಉದ್ಯಮ ವಲಯದಲ್ಲಿ ಅತಿ ದೊಡ್ಡ ಕ್ರಾಂತಿಗೆ ಕಾರಣವಾಗಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಅದರಲ್ಲೂ ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಾಬಲ್ಯ ಸಾಧಿಸಲು ಜಂಟಿ ಬಂಡವಾಳ ಹೂಡಲು ಈ ಮೂರು ಕಂಪನಿಗಳು ಚಿಂತನೆ ನಡೆಸಿವೆ ಎಂದು ತಿಳಿದುಬಂದಿದೆ.

2024ರ ಮಾರ್ಚ್ ಅವಧಿವರೆಗೆ ನಿಸ್ಸಾನ್ ಕಂಪನಿಯು 568.7 ಬಿಲಿಯನ್ ಯೆನ್ ಹಾಗೂ ಹೋಂಡಾ 1.382 ಟ್ರಿಲಿಯನ್ ಯೆನ್ ಲಾಭ ಗಳಿಸಿತ್ತು. ಈ ವಿಲೀನ ಪ್ರಕ್ರಿಯೆಯ ಚರ್ಚೆಗಳು 2025ರ ಜೂನ್ ತಿಂಗಳವರೆಗೆ ಮುಂದುವರಿಯಲಿದ್ದು, ಆ ಬಳಿಕ ವ್ಯಾಪಾರ - ವಹಿವಾಟಿನ ಬಗ್ಗೆ ಸ್ಪಷ್ಟವಾದ ನಿರ್ಧಾರಕ್ಕೆ ಬರಲಿವೆ.
ಈ ಕಂಪನಿಗಳು ವಿಲೀನಗೊಳುತ್ತಿವೆ ಎಂಬ ವರದಿ ಬಂದ ತಕ್ಷಣ, ನಿಸ್ಸಾನ್ ಕಂಪನಿ ಷೇರುಗಳು ದಿಢೀರನೇ ಹೆಚ್ಚಳಗೊಂಡಿತ್ತು. ವ್ಯಾಪಾರೋದ್ಯಮದಲ್ಲಿ ತೀವ್ರ ನಷ್ಟ ಅನುಭವಿಸಿದ ಹಿನ್ನೆಲೆ, ಇತ್ತೀಚಿನ ತ್ರೈಮಾಸಿಕ ವರದಿಯಲ್ಲಿ ನಿಸ್ಸಾನ್ 9,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗುವುದು ಎಂದು ಘೋಷಣೆ ಮಾಡಿತ್ತು. ಜಾಗತಿಕವಾಗಿ ಉತ್ಪಾದನೆಯನ್ನು ಶೇಕಡ 5% ಕಡಿಮೆ ಮಾಡುವುದಾಗಿ ಹೇಳಿತ್ತು.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ನಿಸ್ಸಾನ್ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ. ಕಂಪನಿಯು ಮ್ಯಾಗ್ನೈಟ್ (Magnite) ಮತ್ತು ಎಕ್ಸ್-ಟ್ರಯಲ್ (X-Trail) ಕಾರುಗಳನ್ನು ಮಾರಾಟ ಮಾಡುತ್ತಿದೆ. ಮ್ಯಾಗ್ನೈಟ್ ಗೇಮ್ ಚೇಂಜರ್ ಎಸ್‌ಯುವಿಯಾಗಿದ್ದು, ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಕಳೆದ ತಿಂಗಳು (ನವೆಂಬರ್-2024) 2,342 ಯುನಿಟ್ ಮ್ಯಾಗ್ನೈಟ್ ಕಾರುಗಳನ್ನು ಮಾರಾಟ ಮಾಡಲಾಗಿತ್ತು.
ಹೋಂಡಾ ಕಂಪನಿಯ ಹಲವು ಕಾರುಗಳು ಸಹ ದೇಶೀಯ ಗ್ರಾಹಕರಿಗೆ ಖರೀದಿ ಲಭ್ಯವಿವೆ. ಪ್ರಮುಖವಾಗಿ ಅಮೇಜ್, ಎಲಿವೇಟ್ ಮತ್ತು ಸಿಟಿ ಕಾರುಗಳನ್ನು ಮಾರಾಟ ಮಾಡುತ್ತಿದೆ. ಹೋಂಡಾ ಈ ನವೆಂಬರ್‌ನಲ್ಲಿ 5,005 ಯುನಿಟ್ ಕಾರುಗಳನ್ನು ಮಾರಾಟಗೊಳಿಸಲು ಯಶಸ್ವಿಯಾಗಿತ್ತು. ಅಕ್ಟೋಬರ್‌ನಲ್ಲಿ 5,546 ಯುನಿಟ್ ಮತ್ತು ಸೆಪ್ಟೆಂಬರ್‌ನಲ್ಲಿ 5,675 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು.
ಇನ್ನು, ಹೋಂಡಾ ಮತ್ತು ನಿಸ್ಸಾನ್ ಕಂಪನಿಗಳು ಜಾಗತಿಕವಾಗಿ ಒಂದಾಗುವ ಮೂಲಕ ಅಮೆರಿಕದ ಟೆಸ್ಲಾ (Tesla) ಹಾಗೂ ಚೀನಾದ ಬಿವೈಡಿ (BYD) ಕಂಪನಿಗಳಿಗೆ ತೀವ್ರವಾದ ಪೈಪೋಟಿ ನೀಡಲಿವೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಬಹುಮುಖ್ಯವಾಗಿ ಎಲೆಕ್ಟ್ರಿಕ್ ಕಾರು ತಯಾರಿಕೆಗೆ ಹೆಚ್ಚಿನ ಬಂಡವಾಳ ಹಾಕಲಿವೆ ಎನ್ನಲಾಗಿದೆ. ದೇಶೀಯವಾಗಿಯೂ ಟಾಟಾ, ಮಹೀಂದ್ರಾ ಹಾಗೂ ಮಾರುತಿ ಸುಜುಕಿಗೆ ದೊಡ್ಡ ಸವಾಲು ಎದುರಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications