ಬಿಸಿ ಬಿಸಿ ಬೇಸಿಗೆಗೆ, ಗರಿ ಗರಿ ಡಿಸ್ಕೌಂಟ್‌: ಕಾರು ಕೊಳ್ಳುವ ಪ್ಲಾನ್‌ ಇದ್ದರೆ ಕೂಡಲೇ ಇತ್ತ ಧಾವಿಸಿ!

ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಖ್ಯಾತ ಕಾರ್ಯ ನಿರ್ಮಾಣ ಕಂಪನಿಯಾದ ಹೋಂಡಾ ಭಾರತದಲ್ಲಿ ಮಾರಾಟವಾಗುತ್ತಿರುವ ಕಾರುಗಳಿಗೆ ಭರ್ಜರಿ ಸಡಿಸ್ಕೌಂಟ್‌ಗಳನ್ನು ನೀಡುತ್ತಿದೆ. ಭಾರತದಲ್ಲಿ ಹೋಂಡಾ ಕೇವಲ ಮೂರು ಕಾರು ಮಾದರಿಯನ್ನು ಮಾರಾಟ ಮಾಡುತ್ತಿದೆಯಾದರೂ, ಈ ಎಲ್ಲಾ ಮಾದರಿಗೂ ಸಹ ಭಾರೀ ಕೊಡುಗೆಯನ್ನು ನೀಡುತ್ತಿದೆ ಎಂಬುದೇ ವಾಸ್ತವ.

ಭಾರತದಲ್ಲಿ ಮಾರಾಟವಾಗುತ್ತಿರುವ ಹೋಂಡಾ (Honda Offers) ಸಿಟಿ ಕಾರಿಗೆ ಸುಮಾರು 1.15 ಲಕ್ಷ ರೂಗಳವರೆಗೆ ಆಫರ್‌ ಸಿಗುತ್ತಿದೆ. ಹೋಂಡಾ ಸಿಟಿ ಕಾರಿನ ಎಲಿಗೆಂಟ್‌ ಎಡಿಷನ್‌ಗೆ ಇದೀಗ ಈ ಆಫರ್ ಲಭ್ಯವಿದ್ದು, ಈ ಕಾರನ್ನು ಕೊಳ್ಳಬೇಕು ಎಂದುಕೊಂಡಿರುವವರು ಶೋ ರೂಮ್‌ಗೆ ಧಾವಿಸಿ ಈ ಆಫರ್‌ ಅನ್ನು ಪಡೆಯಬಹುದಾಗಿದೆ.

Honda Offers Significant Discounts On City Amaze and Elevate Models

ಹೋಂಡಾ ಸಿಟಿ ರೂ.11.82 ಲಕ್ಷದಿಂದ ರೂ.16.30 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. ಇದು ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 17.8 - 18.4 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಂಬಿಯೆಂಟ್ ಲೈಟಿಂಗ್, ಕ್ರೂಸ್ ಕಂಟ್ರೋಲ್, ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಇನ್ನು ಹೋಂಡಾ ಕಂಪೊನಿಯ ಮತ್ತೊಂದು ಕಾರು ಮಾದರಿಯಾದ ಅಮೇಜ್‌ ಕಾರಿಗೂ ಸಹ ಭಾರೀ ಡಿಸ್ಕೌಂಟ್‌ ಸಿಗುತ್ತಿದೆ. ಮಾಹಿತಿಗಳ ಪ್ರಕಾರ ಈ ಕಾರಿಗೆ ಸುಮಾರು 96,000 ರೂಗಳವರೆಗೆ ಡಿಸ್ಕೌಂಟ್‌ ದೊರಕುತ್ತಿದ್ದು, ಇದು ಅಮೇಜ್‌ ಪ್ರೀಯರ ಮುಖದಲ್ಲಿ ಮಂದಹಾಸ ಮೂಡಲು ಕಾರಣವಾಗಿದೆ. ಹೋಂಡಾ ಅಮೇಜ್‌ನ ಎಲೈಟ್‌ ಎಡಿಷನ್‌ಗೆ ಈ ಆಫರ್‌ ಲಭ್ಯವಿದೆ.

Honda Offers Significant Discounts On City Amaze and Elevate Models

ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಹೋಂಡಾ ಅಮೇಜ್‌ನ ಡಿಸೈನ್‌ಗಳನ್ನು ನೋಡುವುದಾದರೆ, ಈ ಕಾರಿನಲ್ಲಿ ಎಲ್ಇಡಿ ಟರ್ನ್ ಸಿಗ್ನಲ್ ಇಂಡಿಕೇಟರ್ ಹೊಂದಿರುವ ಒಆರ್‌ವಿಎಂಗಳನ್ನು ನೀಡಲಾಗಿದೆ. ಈ ಮಿರರ್'ಗಳು ಎಲೆಕ್ಟ್ರಿಕ್ ಅಡ್ಜಸ್ಟಬಲ್ ಆಗಿದ್ದು ಫೋಲ್ಡ್ ಮಾಡಬಹುದು. ಕ್ರೋಮ್ ಬಣ್ಣದಲ್ಲಿರುವ ಡೋರ್ ಹ್ಯಾಂಡಲ್‌ಗಳು ಈ ಕಾರಿಗೆ ಪ್ರೀಮಿಯಂ ಅನುಭವವನ್ನು ನೀಡುತ್ತವೆ.

ಈ ಕಾರಿನ ಎಂಜಿನ್ ನೋಡುವುದಾದೆ, ಟ್ರೋಲ್ ಮಾದರಿಯು 88 ಬಿ‌ಹೆಚ್‌ಪಿ ಪವರ್ ಹಾಗೂ 110 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿರುವ ಡೀಸೆಲ್ ಮಾದರಿಯು 98.6 ಬಿ‌ಹೆಚ್‌ಪಿ ಪವರ್ ಹಾಗೂ 200 ಎನ್ಎಂ ಟಾರ್ಕ್ ಉತ್ಪಾದಿಸಿದರೆ, ಸಿವಿಟಿ ಹೊಂದಿರುವ ಮಾದರಿಯು 78.9 ಬಿ‌ಹೆಚ್‌ಪಿ ಪವರ್ ಹಾಗೂ 160 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೋಂಡಾ ಎಲಿವೇಟ್‌ ಸಹ ಈ ಡಿಸ್ಕೌಂಟ್‌ಗಳಿಂದ ಹೊರತಾಗಿಲ್ಲ. ಈ ಕಾರು ಮಾದರಿಗೂ ಸಹ ಹೋಂಡಾ ಸುಮಾರು 55,000 ರೂಗಳ ಡಿಸ್ಕೌಂಟ್‌ ಅನ್ನು ನೀಡುತ್ತಿದೆ. ಬಿಡುಗಡೆಯಾಗಿ ಕೆಲವೇ ಸಮಯವಾದರೂ ಸಹ, ಹೋಂಡಾ ಎಲಿವೇಟ್‌ ಕಾರಿಗೆ ಭಾರತದಲ್ಲಿ ಭರ್ಜರಿ ಬೇಡಿಕೆ ಬರುತ್ತಿದೆ. ಈ ಕಾರು ಕೇವಲ ಭಾರತದಲ್ಲಿ ಮಾತ್ರವಲ್ಲದೇ, ವಿದೇಶದಲ್ಲೂ ಸದ್ದು ಮಾಡುತ್ತಿದೆ.

ನೂತನ ಹೋಂಡಾ ಎಲಿವೇಟ್ (Honda Elevate) ಎಸ್‌ಯುವಿ, 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ದೊರೆಯಲಿದ್ದು, ರೂಪಾಂತರಗಳಿಗೆ ಅನುಗುಣವಾಗಿ 6-ಸ್ವೀಡ್ ಮ್ಯಾನುವಲ್/ ಸಿವಿಟಿ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. 15.31 ರಿಂದ 16.92 ಕೆಎಂಪಿಎಲ್ ಮೈಲೇಜ್ ನೀಡುತ್ತದೆ. ಜೊತೆಗೆ FWD (ಫ್ರಂಟ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದೆ.

ಈ ಕಾರು ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಸೆಮಿ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ಸನ್‌ರೂಫ್ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, May 4, 2024, 10:35 [IST]
English summary
Honda offers significant discounts on city amaze and elevate models
Read more on ಹೋಂಡಾ honda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+