Honda: ಶೋರೂಂಗೆ ತಕ್ಷಣ ಹೋಗಿ.. ಎಲಿವೇಟ್ ಸೇರಿ ಎಲ್ಲ ಕಾರುಗಳಿಗೂ ಬಿಗ್ ಆಫರ್, ಆ ಮೇಲೆ ಕ್ಯೂ ಜಾಸ್ತಿ ಆಗುತ್ತೆ!
ಪ್ರತಿಯೊಬ್ಬರಿಗೂ ಜೀವನದಲ್ಲಿ ಹೊಸ ಕಾರು ತೆಗೆದುಕೊಳ್ಳಬೇಕೆಂಬ ಬಹುದೊಡ್ಡ ಕನಸಿರುತ್ತದೆ. ಆದರೆ ದುಬಾರಿ ಬೆಲೆಯಿರುವುದರಿಂದ ಹಲವರು ಖರೀದಿಸಲು ಹಿಂದೇಟು ಹಾಕುತ್ತಾರೆ. ಅಂತಹ ಗ್ರಾಹಕರಿಗೆ ಹೋಂಡಾ ಕಂಪನಿಯು ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದ್ದು, ಹೊಸ ಅಮೇಜ್, ಸಿಟಿ ಮತ್ತು ಎಲಿವೇಟ್ ಕಾರುಗಳನ್ನು ತೆಗೆದುಕೊಳ್ಳಲು ಬಯಸುವವರಿಗೆ ಈ ಪ್ರಯೋಜನಗಳು ಲಭ್ಯವಾಗಲಿವೆ. ಇದರಿಂದ ಖರೀದಿದಾರರು ಸಾವಿರಾರು ರೂಪಾಯಿ ಹಣ ಉಳಿಸಲು ಸಾಧ್ಯವಾಗಲಿದೆ. ಇನ್ನೇಕೆ ತಡ.. ಕೂಡಲೇ ಹತ್ತಿರದ ಶೋರೂಂಗೆ ಭೇಟಿ, ನಿಮಿಷ್ಟದ ಕಾರನ್ನು ಆದಷ್ಟು ಬೇಗೆ ಮನೆಗೆ ತನ್ನಿ.
ಈ ಬಗ್ಗೆ ಹೋಂಡಾ ಕಾರ್ಸ್ ಇಂಡಿಯಾ ತನ್ನ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಹೋಂಡಾ ಸಮ್ಮರ್ ಬಜಾನ (Honda Summer Bonanza) ಅಭಿಯಾನವನ್ನು ಪ್ರಾರಂಭಿಸಲಾಗಿದೆ. ನೂತನ ಹೋಂಡಾ ಕಾರು ಕೊಳ್ಳುವ ಅದೃಷ್ಟಶಾಲಿಗೆ ದಂಪತಿ ಸಮೇತ ಪ್ಯಾರಿಸ್ ಪ್ರವಾಸ ಅಥವಾ ರೂ.75,000 ಮೌಲ್ಯದ ಅತ್ಯಾಕರ್ಷಕ ಉಡುಗೊರೆ ಗೆಲ್ಲುವ ಅವಕಾಶ ಸಿಗಲಿದೆ. ಜೊತೆಗೆ ಪ್ರತಿ ಟೆಸ್ಟ್ ಡ್ರೈವ್ ಮೇಲೆ ಸರ್ಪ್ರೈಸ್ ಗಿಫ್ಟ್ ಸಹ ಪಡೆಯಬಹುದು.

ಇದರೊಂದಿಗೆ ಹೋಂಡಾ ಜನಪ್ರಿಯ ಕಾರುಗಳಾದ ಅಮೇಜ್ ರೂ.76,000, ಸಿಟಿ ರೂ.65,000 ದಿಂದ ರೂ.88,000 ಹಾಗೂ ಎಲಿವೇಟ್ ರೂ.55,000ವರೆಗೆ ಹಣಕಾಸು ಪ್ರಯೋಜನವನ್ನು ಹೊಂದಿವೆ. ಈ ಕೊಡುಗೆಗಳು ಜೂನ್ 1 ರಿಂದ 30ರವರೆಗೆ ಅನ್ವಯಿಸಲಿವೆ ಎಂದು ಕಂಪನಿಯು ಹೇಳಿದೆ. ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ನೂತನ ಹೋಂಡಾ ಎಲಿವೇಟ್ (Honda Elevate) ಕಾರು ರೂ.11.69 ಲಕ್ಷದಿಂದ ರೂ. 16.51 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ.
ಈ ಎಲಿವೇಟ್ ಎಸ್‌ಯುವಿಯ ವಿಶೇಷತೆಗಳ ಬಗ್ಗೆ ಮಾತನಾಡುವುದಾದರೆ, 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ದೊರೆಯಲಿದ್ದು, 121 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 145 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್/ ಸಿವಿಟಿ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದ್ದು, 15.31 ರಿಂದ 16.92 ಕೆಎಂಪಿಎಲ್ ಮೈಲೇಜ್ ನೀಡುತ್ತದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು.

ಹೊಸ ಹೋಂಡಾ ಎಲಿವೇಟ್ ಕಾರು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಸೆಮಿ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಸ್ಯಾನ್ ರೂಫ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್ ಬ್ಯಾಗ್, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಅನ್ನು ಹೊಂದಿದೆ.
ಹೋಂಡಾ ಅಮೇಜ್ (Honda Amaze) ಸೆಡಾನ್ ಆಗಿದ್ದು, ರೂ.7.20 ಲಕ್ಷದಿಂದ ರೂ.9.96 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಸಿಗುತ್ತದೆ. ಈ ಕಾರು 1.2-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 5-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್‌ಬಾಕ್ಸ್‌ನ್ನು ಪಡೆದಿದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಹೋಂಡಾ ಸಿಟಿ (Honda City), ರೂ.12.08 ಲಕ್ಷದಿಂದ ರೂ.16.35 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಇದು ಕೂಡ ಸೆಡಾನ್ ಆಗಿದ್ದು, 1.5-ಲೀಟರ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. ಜೊತೆಗೆ 6-ಸ್ಪೀಡ್ ಮ್ಯಾನುವಲ್/ ಸಿವಿಟಿ ಗೇರ್ ಬಾಕ್ಸ್‌ನೊಂದಿಗೆ ಸಿಗಲಿದ್ದು, 17.8 ರಿಂದ 18.4 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








