ಭಾರತದ ಮೊದಲ ರೂ.2.55 ಕೋಟಿಯ Lotus Eletre ಎಲೆಕ್ಟ್ರಿಕ್ ಕಾರಿನ ಮಾಲೀಕರಾದ ಹೈದರಾಬಾದ್ ಮಹಿಳೆ

ಪ್ರಖ್ಯಾತ ಐಷಾರಾಮಿ ಎಲೆಕ್ಟ್ರಿಕ್ ಕಾರು ತಯಾರಿಕ ಕಂಪನಿ ಲೋಟಸ್ (Lotus), ಕಳೆದ ವರ್ಷದ ನವೆಂಬರ್‌ನಲ್ಲಿ ಭಾರತದಲ್ಲಿ ತನ್ನ ಉದ್ಯಮ ಚಟುವಟಿಕೆಯನ್ನು ಆರಂಭಿಸಿತ್ತು. ದೇಶೀಯ ಮಾರುಕಟ್ಟೆಯಲ್ಲಿ ಹೊಚ್ಚ ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಎಲೆಟರ್ (Eletre) ಅನ್ನು ಬಿಡುಗಡೆಗೊಳಿಸಿತ್ತು. ಸದ್ಯ, ಹೈದರಾಬಾದ್ ಮಹಿಳೆಯೊಬ್ಬರು ಈ ಕಾರಿನ ವಿತರಣೆಯನ್ನು ಪಡೆದಿದ್ದಾರೆ.

ಆ ಫೋಟೋವನ್ನು ಕಾರ್ ಕ್ರೇಜಿ ಇಂಡಿಯಾ (Car Carzy India) ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಭಾರತದಲ್ಲಿ ಲೋಟಸ್ ಎಲೆಟರ್ (Lotus Eletre) ಎಲೆಕ್ಟ್ರಿಕ್ ಎಸ್‌ಯುವಿ, ರೂ.2.55 ಕೋಟಿಯಿಂದ ರೂ.2.99 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎಲೆಟರ್, ಎಲೆಟರ್ ಎಸ್ ಹಾಗೂ ಎಲೆಟರ್ ಆರ್ ಎಂಬ 3 ರೂಪಾಂತರದ ಆಯ್ಕೆಯಲ್ಲಿ ಸಿಗುತ್ತದೆ.

ಭಾರತದ ಮೊದಲ ರೂ.2.55 ಕೋಟಿಯ Lotus Eletre ಎಲೆಕ್ಟ್ರಿಕ್ ಕಾರಿನ ಮಾಲೀಕರಾದ ಹೈದರಾಬಾದ್ ಮಹಿಳೆ

ಈ ಕಾರಿನ ಹೊರಭಾಗದ ವಿನ್ಯಾಸವು ಅತ್ಯುತ್ತಮವಾಗಿದ್ದು, ಮುಂಭಾಗ ದೊಡ್ಡದಾದ ಬಾನೆಟ್‌, ಆಕರ್ಷಕ ಲೋಗೋ, ಬಾಣದ ಆಕಾರ (Arrow-Shaped) ಒಳಗೊಂಡ ಡೇ ರನ್ನಿಂಗ್ ಲೈಟ್‌ (Day Running Lights - DRLs), ನವೀನವಾದ ಎಲ್ಇಡಿ ಹೆಡ್‌ಲೈಟ್, ಅತ್ಯಾಧುನಿಕ ಗ್ರಿಲ್ ಅನ್ನು ಹೊಂದಿದೆ. ಹಿಂಭಾಗದ ವಿನ್ಯಾಸವು ಕೂಡ ಹೊಸತನದಿಂದ ಕೂಡಿದೆ.

ಲೋಟಸ್ ಎಲೆಟರ್ ಕಾರು, ನ್ಯಾಟ್ರಾನ್ ರೆಡ್, ಗ್ಯಾಲೋವೇ ಗ್ರೀನ್, ಸ್ಟೆಲ್ಲರ್ ಬ್ಲ್ಯಾಕ್, ಕೈಮು ಗ್ರೇ, ಬ್ಲಾಸಮ್ ಗ್ರೇ ಸೇರಿದಂತೆ 6 ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ. ಇದು 112 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಮತ್ತು 2 ಪವರ್ ಟ್ರೈನ್ ಆಯ್ಕೆಯನ್ನು ಒಳಗೊಂಡಿದೆ. ರೂಪಾಂತರಗಳಿಗೆ ಅನುಗುಣವಾಗಿ 611 PS ಪವರ್, 710 Nm ಪೀಕ್ ಟಾರ್ಕ್/ 918 PS ಪವರ್, 985 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಭಾರತದ ಮೊದಲ ರೂ.2.55 ಕೋಟಿಯ Lotus Eletre ಎಲೆಕ್ಟ್ರಿಕ್ ಕಾರಿನ ಮಾಲೀಕರಾದ ಹೈದರಾಬಾದ್ ಮಹಿಳೆ

ಈ ಲೋಟಸ್ ಎಲೆಟರ್ ಎಲೆಕ್ಟ್ರಿಕ್ ಎಸ್‌ಯುವಿ (Lotus Eletre Electric Suv), 490 ಕಿ.ಮೀ ರಿಂದ 600 ಕಿ.ಮೀ (WLTP) ರೇಂಜ್ ನೀಡುತ್ತದೆ. ಜೊತೆಗೆ ರೂಪಾಂತರಗಳ ಅನ್ವಯ ಕೇವಲ 2.95 ಅಥವಾ 4.9 ಸೆಕೆಂಡುಗಳಲ್ಲಿ 0 - 100 kmph ವೇಗವನ್ನು ಪಡೆಯಲಿದೆ. 258 kmph ಟಾಪ್ ಸ್ವೀಡ್ ಹೊಂದಿದೆ.

ಲೋಟಸ್ ಎಲೆಟರ್ ಕಾರು ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. 15.1 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಡಿಜಿಟಲ್ ಡ್ರೈವರ್, ಕೋ - ಡ್ರೈವರ್ ಡಿಸ್‌ಪ್ಲೇ, 15 - ಸ್ಪೀಕರ್ ಕೆಇಎಎಫ್ ಸೌಂಡ್ ಸಿಸ್ಟಮ್, 3ಡಿ ಸರೌಂಡ್ ಸೌಂಡ್ ಗಾಗಿ 2,160 ಡಬ್ಲ್ಯೂ, 23 - ಸ್ಪೀಕರ್ ಸೆಟಪ್ ಅನ್ನು ಪಡೆದಿದೆ.

ಈ ಕಾರು ಸುರಕ್ಷತೆಯ ದೃಷ್ಟಿಯಿಂದಲೂ ಅತ್ಯುತ್ತಮವಾಗಿದ್ದು, ಲಿಡಾರ್ ಸೇನಾರ್ಸ್ & ಆಟೋನೊಮಸ್ ಡ್ರೈವಿಂಗ್ ತಂತ್ರಜ್ಞಾನವನ್ನು ಒಳಗೊಂಡಿದೆ. ಜೊತೆಗೆ ಪಾರ್ಕಿಂಗ್ ಪ್ಯಾಕ್, ಹೈವೇ ಅಸಿಸ್ಟ್ ಪ್ಯಾಕ್ ಪಡೆದಿರುವ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಟೆಕ್ನಲಾಜಿಯನ್ನೂ ಹೊಂದಿದೆ. ಲೋಟಸ್ ಎಲೆಟರ್ ಎಲೆಕ್ಟ್ರಿಕ್ ಎಸ್‌ಯುವಿಗೆ ಜಾಗ್ವಾರ್ ಪೇಸ್, ಬಿಎಂಡಬ್ಲ್ಯೂ ಐಎಕ್ಸ್, ಲಂಬೋರ್ಘಿನಿ ಉರಸ್ ಎಸ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, January 22, 2024, 11:10 [IST]
English summary
Hyderabad woman becomes 1st owner lotus eletre electric suv india 600 km range
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+