ಹೈಡ್ರೋಜನ್ ಚಾಲಿತ ಇ-ಸ್ಕೂಟರ್ ಅನಾವರಣ: ಭವಿಷ್ಯದ ಟೆಕ್ನಾಲಜಿ, ಅಸಾಧಾರಣ ಸಾಮರ್ಥ್ಯ!
ಎಲೆಕ್ಟ್ರಿಕ್ ಸ್ಕೂಟರ್‌ಗಳು ಸದ್ಯದ ಇಂಧನ ಚಾಲಿತ ವಾಹನಗಳಿಗೆ ಪರ್ಯಾಯವಾಗಿ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಗಳಿಸಿವೆ. ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಆಟೋ ಉದ್ಯಮದಲ್ಲಿ ಮತ್ತಷ್ಟು ಬದಲಾವಣೆಗಳು ಆಗಲಿವೆ. ಇದಕ್ಕೆ ಉತ್ತಮ ಉದಾಹರಣೆ ಈ ಹೈಡ್ರೋಜನ್ ಚಾಲಿತ ಸ್ಕೂಟರ್ ಎಂದರೆ ಖಂಡಿತ ನಂಬಲೇಬೇಕು. ಈ ಸ್ಕೂಟರ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಜಾಯ್ ಇ-ಬೈಕ್ ಎಂಬುದು ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯಾಗಿದ್ದು, ಇದರ ಮಾತೃ ಸಂಸ್ಥೆಯಾದ ವಾರ್ಡ್ ವಿಜಾರ್ಡ್ ಇನ್ನೋವೇಷನ್ಸ್ ಅಂಡ್ ಮೊಬಿಲಿಟಿ ಹೊಸ ಹೈಡ್ರೋಜನ್ ಸ್ಕೂಟರ್ ಅನ್ನು ಇತ್ತೀಚೆಗೆ ಅನಾವರಣಗೊಳಿಸಿದೆ. ಆಟೋ ವಲಯಕ್ಕೆ ಪ್ರಮುಖ ಎಕ್ಸ್‌ಪೋ ಆದ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2024 ರಲ್ಲಿ ಈ ಸ್ಕೂಟರ್ ಅನ್ನು ಬಹಿರಂಗಪಡಿಸಲಾಗಿದೆ.

ಈ ಎಕ್ಸ್‌ಪೋದಲ್ಲಿ ಹಲವು ಬ್ರಾಂಡ್‌ಗಳು ತಮ್ಮ ಹೊಸ ತಂತ್ರಜ್ಞಾನಗಳ ಆವಿಷ್ಕಾರಗಳನ್ನು ಇಲ್ಲಿ ಪ್ರದರ್ಶಿಸಿದ್ದರು. ಹಾಗೆಯೇ ವಾರ್ಡ್ ವಿಜಾರ್ಡ್ ಕೂಡ ತಮ್ಮ ಹೊಸ ಹೈಡ್ರೋಜನ್ ಫ್ಯೂಯಲ್ ಸೆಲ್ ಚಾಲಿತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಹಾಗೂ ಹೊಸ ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಎಕ್ಸ್‌ಪೋದಲ್ಲಿ ಪ್ರದರ್ಶಿಸಿ ಎಲ್ಲರ ಗಮನ ಸೆಳೆದಿದೆ.
ವಿಶೇಷತೆಗಳೇನು?: ಈ ಹೊಸ ಹೈಡ್ರೋಜನ್ ಫ್ಯೂಯಲ್ ಸೆಲ್ ಚಾಲಿತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಹೈಡ್ರೋಜನ್ ಇಂಧನ ಕೋಶ ಮತ್ತು ಎಲೆಕ್ಟ್ರೋಲೈಜರ್ ತಂತ್ರಜ್ಞಾನವನ್ನು ಒಳಗೊಂಡಿದೆ. ಇದು ಪರ್ಯಾಯ ಕೋಶ ರಸಾಯನಶಾಸ್ತ್ರಕ್ಕೆ ಪ್ರಮುಖ ಆಧಾರವಾಗಿದೆ. ಈ ಪರಿಕಲ್ಪನೆಯುಹೊಸ ನಾವೀನ್ಯತೆಗೆ ಅಚಲ ಬದ್ದತೆಯನ್ನು ತೋರಿಸುವ ಮಾರ್ಗವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಹೈಡ್ರೋಜನ್ ತಂತ್ರಜ್ಞಾನವನ್ನು ಸಕ್ರಿಯವಾಗಿ ಮುನ್ನಡೆಸುವುದು ಭಾರತ ಮತ್ತು ಅದರಾಚೆಗಿನ ದೇಶಗಳ ಶುದ್ಧ ಮತ್ತು ಪರಿಣಾಮಕಾರಿ ಚಲನಶೀಲತೆಯ ಕ್ಷೇತ್ರವನ್ನು ಮರುರೂಪಿಸುತ್ತದೆ. ಸದ್ಯದ ಎಲೆಕ್ಟ್ರಿಕ್ ಸ್ಕೂಟರ್‌ಗಳಂತಲ್ಲದೇ ಇದು ಹೈಡ್ರೋಜನ್ ತಂತ್ರಜ್ಞಾನದ ಜೊತೆಗೆ ಭವಿಷ್ಯದ ಟೆಕ್ನಾಲಜಿಯನ್ನು ಒಳಗೊಂಡಿರಲಿದ್ದು, ಶೀಘ್ರದಲ್ಲೆ ಮಾರುಕಟ್ಟೆಗೆ ಪರಿಚಯಿಸುವುದಾಗಿ ವಾರ್ಡ್ ವಿಜಾರ್ಡ್ ಹೇಳಿದೆ.
ಕಂಪನಿಯ ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಯತಿನ್ ಗುಪ್ತ, ಜಾಯ್ - ಇ - ಬೈಕ್‌ನಲ್ಲಿ ಸುರಕ್ಷತ ಮತ್ತು ಅನುಕೂಲಕರ ಎಲೆಕ್ಟ್ರಿಕ್ ಮೊಬಿಲಿಟಿ ಪರಿಹಾರಗಳನ್ನು ಒದಗಿಸುವುದು ನಮ್ಮ ಅಚಲ ಬದ್ಧತೆಯಾಗಿದೆ. ಎಲ್ಲರಿಗೂ ಎಲೆಕ್ಟ್ರಿಕ್ ವಾಹನಗಳ ಅನುಭವ ಪಡೆಯಲು ವಿಶ್ವಾಸಾರ್ಹ ಇವಿ ಸ್ಕೂಟರ್‌ಗಳಿಗಾಗಿ ಕಂಪನಿ ಶ್ರಮಿಸುತ್ತಿದೆ ಎಂದರು.

ಹೊಸ ತಂತ್ರಜ್ಞಾನಗಳನ್ನು ನಮ್ಮ ಮೂಲಾಧಾರವಾಗಿ ಸ್ವೀಕರಿಸಿ, ಈ ಅದ್ಭುತ ಪರಿಕಲ್ಪನೆಯ ಎಲೆಕ್ಟ್ರಿಕ್ ವಾಹನಗಳೊಂದಿಗೆ ವಿಶೇಷವಾಗಿ ಹೈಡ್ರೋಜನ್ ಆಧಾರಿತ ಇಂಧನ ಕೋಶ ತಂತ್ರಜ್ಞಾನದೊಂದಿಗೆ ನಾವು ಭವಿಷ್ಯವನ್ನು ಸಿದ್ಧಪಡಿಸಿಕೊಂಡಿದ್ದೇವೆ. ಈ ಅತ್ಯಾಧುನಿಕ ತಂತ್ರಜ್ಞಾನವನ್ನು ಪರಿಚಯಿಸುವುದು ನಮಗೆ ಹೆಮ್ಮೆಯನ್ನು ತಂದಿದೆ. ಇದು ಸುಸ್ಥಿರ ಭವಿಷ್ಯಕ್ಕಾಗಿ ನಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ ಎಂದು ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಯತಿನ್ ಗುಪ್ತ ಹೇಳಿದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








