10 ಕೋಟಿ ಕಾರುಗಳನ್ನು ತಯಾರಿಸಿ ಹೊಸ ಮೈಲಿಗಲ್ಲು ಸಾಧಿಸಿ ಮುನ್ನುಗ್ಗುತ್ತಿದೆ ಹ್ಯುಂಡೈ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ 100 ಮಿಲಿಯನ್ ಪ್ರಯಾಣಿಕ ವಾಹನಗಳ ಜಾಗತಿಕ ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದೆ. ಇದು ಜೆನೆಸಿಸ್ ಬ್ರಾಂಡ್‌ನ ಅಡಿಯಲ್ಲಿ ಕಾರುಗಳ ಮಾರಾಟ ಮತ್ತು ಅದರ ಟಾಪ್-ಪರ್ಫಾಮೆನ್ಸ್ N ಬ್ರ್ಯಾಂಡ್ ಅನ್ನು ಹೊಂದಿದೆ. ಇವುಗಳು ಕೂಡ ಭರ್ಜರಿಯಾಗಿ ಮಾರಾಟವಾಗುವ ಕಾರುಗಳನ್ನು ಹೊಂದಿವೆ. ಹ್ಯುಂಡೈ ಕಂಪನಿಯು ದಕ್ಷಿಣ ಕೊರಿಯಾದ ಉಲ್ಸಾನ್ ಪ್ಲಾಂಟ್‌ನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ 57 ವರ್ಷಗಳಲ್ಲಿ ಈ ಮೈಲಿಗಲ್ಲನ್ನು ಸಾಧಿಸಿದೆ. ಹ್ಯುಂಡೈ ಕಂಪನಿಯು ತನ್ನ 100 ಮಿಲಿಯನ್ ವಾಹನವಾಗಿ ಐಯೋನಿಕ್ 5 ಎಲೆಕ್ಟ್ರಿಕ್ ಕಾರನ್ನು ಉತ್ಪಾದಿಸಿದೆ.
ಹ್ಯುಂಡೈ (Hyundai) ಮೋಟಾರ್ ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಜೇಹೂನ್ ಚಾಂಗ್ ಅವರು ಮಾತನಾಡಿ, 100 ಮಿಲಿಯನ್ ವಾಹನಗಳ ಜಾಗತಿಕ ಸಂಚಿತ ಉತ್ಪಾದನೆಯನ್ನು ತಲುಪುವುದು ಒಂದು ಅರ್ಥಪೂರ್ಣ ಮೈಲಿಗಲ್ಲು. ಇದು ಮೊದಲಿನಿಂದಲೂ ಹ್ಯುಂಡೈ ಮೋಟರ್ ಅನ್ನು ಆಯ್ಕೆ ಮಾಡಿ ಮತ್ತು ಬೆಂಬಲಿಸುತ್ತಿರುವ ವಿಶ್ವದಾದ್ಯಂತದ ನಮ್ಮ ಗ್ರಾಹಕರಿಗೆ ಧನ್ಯವಾದಗಳನ್ನು ತಿಳಿಸಿದರು.

ದಿಟ್ಟ ಸವಾಲುಗಳನ್ನು ಸ್ವೀಕರಿಸುವುದು ಮತ್ತು ನಾವೀನ್ಯತೆಯ ನಿರಂತರ ಅನ್ವೇಷಣೆಯಲ್ಲಿ ನಾವು ತ್ವರಿತ ಬೆಳವಣಿಗೆಯನ್ನು ಸಾಧಿಸಲು ಅನುವು ಮಾಡಿಕೊಟ್ಟಿದೆ. ಅದೇ ರೀತಿ ಚಲನಶೀಲತೆಯಿಂದ ಮತ್ತೊಂದು 100 ಮಿಲಿಯನ್ ಯುನಿಟ್‌ಗಳ ಕಡೆಗೆ 'ಒಂದು ಹೆಜ್ಜೆ ಮುಂದೆ' ಹೋಗಲು ನಮಗೆ ಮತ್ತಷ್ಟು ಉತ್ಸಾಹವನ್ನು ನೀಡುತ್ತದೆ ಎಂದು ಹೇಳಿದರು.
ಹ್ಯುಂಡೈ ಕಂಪನಿಯು ಉಲ್ಸಾನ್ ಸ್ಥಾವರವು 1968 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ಸ್ಥಾವರದಲ್ಲಿ 1975ರಲಿ ಕೊರಿಯಾದ ಮೊದಲ ಬೃಹತ್-ಉತ್ಪಾದಿತ ಮಾದರಿ ಅನ್ನು ಸಹ ಉತ್ಪಾದಿಸಿತು. 2023ರ ನವೆಂಬರ್ ತಿಂಗಳಿನಲ್ಲಿ ಉಲ್ಸಾನ್‌ನಲ್ಲಿರುವ ಅದರ ಸಂಕೀರ್ಣದಲ್ಲಿ ಹೊಸ ಎಲೆಕ್ಟ್ರಿಕ್ ವೆಹಿಕಲ್ (EV) ಸ್ಥಾವರಕ್ಕಾಗಿ ಒಂದು ನೆಲಹಾಸು ಸಮಾರಂಭವನ್ನು ನಡೆಸಿತು. ಉಲ್ಸಾನ್ ಸೌಲಭ್ಯವು ಶೀಘ್ರದಲ್ಲೇ ಬ್ರ್ಯಾಂಡ್‌ನ ಜಾಗತಿಕ ಇವಿ ಹಬ್ ಆಗಲಿದೆ. ಕಂಪನಿಯು ತನ್ನ ಹೇಳಿಕೆಯಲ್ಲಿ, ಇವಿ ಸೌಲಭ್ಯವು ಇನ್ನೂ ನಿರ್ಮಾಣ ಹಂತದಲ್ಲಿದೆ.

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಟೊಯೊಟಾ ಇನೋವಾ ಹೊಸ ಬಿರುಗಾಳಿಯನ್ನು ಎಬ್ಬಿಸಿದ ಮಾದರಿಯಾಗಿದೆ. ಈ ಬಹುಕಾಲದಿಂದ ಎದುರಾಳಿಗಳ ಪೈಪೋಟಿ ಇಲ್ಲದೇ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಇದೀಗ ಟೊಯೊಟಾ ಇನೋವಾಗೆ ಪೈಪೋಟಿ ನೀಡಲು ಹ್ಯುಂಡೈ (Hyundai) ಕಂಪನಿಯು ಹೊಸ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. Ni1i ಎಂಬ ಹೆಸರಿನಲ್ಲಿ ಪೆಟ್ರೋಲ್ ಹೈಬ್ರಿಡ್ ತಂತ್ರಜ್ಞಾನದಲ್ಲಿ ಚಲಿಸುವಂತೆ ಈ ಕಾರನ್ನು ತಯಾರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಈ ಹೊಸ ಮಾದರಿಯು ಟೊಯೊಟಾ ಇನೋವಾ ಮಾದರಿಗೆ ಪೈಪೋಟಿ ನೀಡುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಈ ಕಾರಿನ ಬಗ್ಗೆ ಎಲ್ಲಾ ಅಧಿಕೃತ ಮಾಹಿತಿಗಳು ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಪುಣೆಯ ಹೊರವಲಯದಲ್ಲಿರುವ ತಾಲೆಗಾಂವ್‌ನಲ್ಲಿರುವ ಜನರಲ್ ಮೋಟಾರ್ಸ್‌ನ ಭಾರತ ಮೂಲದ ಸ್ಥಾವರವನ್ನು ಹುಂಡೈ ವಹಿಸಿಕೊಂಡಿದೆ. ಕಂಪನಿಯು ಪ್ರಸ್ತುತ ತನ್ನ ಹೊಸ ವಾಹನಗಳನ್ನು ಈ ಘಟಕದಲ್ಲಿ ತಯಾರಿಸಲು ಯೋಜಿಸುತ್ತಿದೆ ಮತ್ತು ಅದಕ್ಕಾಗಿ ಎಲ್ಲಾ ತಯಾರಿಯನ್ನು ನಡೆಸುತ್ತಿದೆ.
ಹ್ಯುಂಡೈ ಕಂಪನಿಯು ಈ ಸ್ಥಾವರದಲ್ಲಿ ಹೊಸ ಎಸ್‍ಯುವಿ ಅನ್ನು ತಯಾರಿಸಿ ಮಾರಾಟ ಮಾಡಲು ನಿರ್ಧರಿಸಿದೆ. ವರದಿಗಳ ಪ್ರಕಾರ, ಹ್ಯುಂಡೈ ಕಂಪನಿಯು 24 ರಿಂದ 30 ತಿಂಗಳೊಳಗೆ ತಯಾರಿಸಿ ಮಾರಾಟಕ್ಕೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಕಾರ್ ಅನ್ನು ಅಲ್ಕಾಜಾರ್‌ಗಿಂತ ಸ್ವಲ್ಪ ಮೇಲಕ್ಕೆ ಮತ್ತು ಕಂಪನಿಯು ಮಾರಾಟ ಮಾಡುತ್ತಿರುವ ಟಕ್ಸನ್‌ನ ಕೆಳಗೆ ಇರಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಟೊಯೊಟಾ ಇನ್ನೋವಾ ಹೈಕ್ರಾಸ್ ಕಾರಿಗೆ ಈ ಕಾರು ಅತಿ ದೊಡ್ಡ ಸ್ಪರ್ಧೆಯಾಗಲಿದೆ.
ಮಾರುತಿ ಸುಜುಕಿ ಮತ್ತು ಟೊಯೊಟಾ ಈಗಾಗಲೇ ಪೆಟ್ರೋಲ್ ಹೈಬ್ರಿಡ್ ಮಾದರಿಯಲ್ಲಿ ಉತ್ತಮ ಯಶಸ್ಸನ್ನು ಕಂಡಿವೆ. ಈ ವಿಭಾಗಕ್ಕೆ ಪ್ರವೇಶಿಸಲು ಮುಖ್ಯವಾಗಿ ಸ್ಟ್ರಾಂಗ್ ಹೈಬ್ರಿಡ್ ವಾಹನಗಳು ಉತ್ತಮ ಪ್ರತಿಕ್ರಿಯೆಯನ್ನು ಪಡೆದಿವೆ. ಈ ಹ್ಯುಂಡೈ ಈ ವಾಹನವನ್ನು ಪೆಟ್ರೋಲ್ ಹೈಬ್ರಿಡ್ ತಂತ್ರಜ್ಞಾನದಲ್ಲಿ ಚಲಿಸುವ ವಾಹನವನ್ನಾಗಿ ಬಿಡುಅಗ್ಡೆ ಮಾಡಲು ಯೋಜಿಸುತ್ತಿದೆ.


Click it and Unblock the Notifications








