ಕ್ರೇಟಾವನ್ನೇ ಮೀರಿಸಲಿದೆ ಹ್ಯುಂಡೈನ ಹೊಸ ಫೇಸ್‌ಲಿಫ್ಟ್‌: ಇಷ್ಟೊಂದು ಸ್ಟೈಲಿಶ್ ಕಾರು ಬಿಡುಗಡೆ ಯಾವಾಗ?

ಭಾರತೀಯ ಕಾರು ಮಾರುಕಟ್ಟೆಯಲ್ಲಿ ದಕ್ಷಿಣ ಕೊರಿಯಾ ಕಾರು ನಿರ್ಮಾಣ ಕಂಪನಿಯಾದ ಹ್ಯುಂಡೈನ ಹಿಡಿತ ಎಷ್ಟಿದೆ ಎಂದು ಎಲ್ಲರಿಗೂ ತಿಳಿದಿದೆ. ಈಗಾಗಲೇ ಭಾರತದಲ್ಲಿ ಹಲವು ದಶಕಗಳಿಂದ ಅಸ್ತಿತ್ವದಲ್ಲಿ ಮಾತ್ರವಲ್ಲದೇ ಮಾರಾಟದಲ್ಲೂ ಮುಂಚೂಣಿಯಲ್ಲಿರುವ ಹ್ಯುಂಡೈ ಹಲವು ಕಾರು ಮಾದರಿಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿ ಯಶಸ್ವಿಯೂ ಆಗಿದೆ. ಇದರಲ್ಲಿ i20, ಕ್ರೆಟಾ, ವೆನ್ಯೂ, ಅಲ್‌ಕಜಾರ್‌ ಹೀಗೆ ಹಲವು ಕಾರು ಮಾದರಿಗಳು ಸೇರಿಕೊಂಡಿದೆ. ಇದೀಗ ನಾವಿಂದು ಈ ಕಂಪನಿಯ ಪ್ರಸಿದ್ದ ಮತ್ತು ಸೆವೆನ್‌ ಸೀಟರ್‌ ಮಾದರಿಯಾದ ಹ್ಯುಂಡೈ ಅಲ್‌ಕಜಾರ್‌ ಕುರಿತಾಗಿನ ಪ್ರಮುಖ ಅಪ್‌ಡೇಟ್‌ ಒಂದನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಈಗಾಗಲೇ ಹ್ಯುಂಡೈ ಕಂಪನಿ ಭಾರತದಲ್ಲಿ ಅಲ್‌ಕಜಾರ್ ಕಾರು ಮಾದರಿಯ ಫೇಸ್‌ಲಿಫ್ಟ್‌ ಅನ್ನು ಅಭಿವೃದ್ದಿ ಪಡಿಸುತ್ತಿರುವ ಕುರಿತು ಎಲ್ಲರಿಗೂ ತಿಳಿದೇ ಇದೆ. ಸಾಕಷ್ಟು ಬಾರಿ ಟೆಸ್ಟಿಂಗ್‌ ವೇಳೆ, ಕ್ಯಾಮೆರಾ ಕಣ್ಣುಗಳಿಗೆ ಈ ಕಾರು ಸೆರೆಯಾಗಿದ್ದೂ ಸಹ ಇದೆ. ಇದಕ್ಕೆ ಸಂಭಂಧ ಪಟ್ಟ ಫೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಹೌದು. ಆದರೆ ಈ ಫೇಸ್‌ಲಿಫ್ಟ್‌ ಅನ್ನು ಮಾರುಕಟ್ಟೆಗೆ ಯಾವಾಗ ತರುತ್ತಾರೆ ಎಂಬ ಮಾಹಿತಿ ಮಾತ್ರ ಯಾರಿಗೂ ಇರಲಿಲ್ಲ.

Hyundai Alcazar facelift will be launching in September 2024

ಇದೀಗ ಹ್ಯುಂಡೈ ಕಂಪನಿ ಅಲ್‌ಕಜಾರ್‌ ಕಾರಿನ ಫೇಸ್‌ಲಿಫ್ಟ್ (Hyundai Alcazar facelift) ಮಾದರಿಯನ್ನು ಈ ವರ್ಷದ ಸೆಪ್ಟೆಂಬರ್ ವೇಳೆಗೆ ಭಾರತದಲ್ಲಿ ಪರಿಚಯಿಸಲಿದೆ ಎಂದು ತಿಳಿದು ಬಂದಿದೆ. ಮುಂದಿನ ವರ್ಷದ ಆರಂಭದಲ್ಲಿ ಕ್ರೆಟಾ ಇವಿ ಆಗಮಿಸುವ ಮೊದಲು ಅಲ್ಕಾಜರ್ ಫೇಸ್‌ಲಿಫ್ಟ್ ಭಾರತಕ್ಕೆ ಹ್ಯುಂಡೈನ ಮುಂದಿನ ದೊಡ್ಡ ಬಿಡುಗಡೆ ಇದಾಗಿರಲಿದೆ.

ಕ್ರೆಟಾ ಫೇಸ್‌ಫ್ಲಿಟ್‌ನಲ್ಲಿ ಕಂಡುಬರುವ ಪ್ರಮುಖ ಬದಲಾವಣೆಗಳೆಂದರೆ, ಈ ಕಾರಿನಲ್ಲಿ ಡ್ಯುಯಲ್‌ ಸ್ಕ್ರೀನ್‌ ಸೆಟಪ್‌ನೊಂದಿಗೆ ಹೊಸ ಲುಕ್ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಕಂಪನಿ ಈ ಕಾರಿಗೂ ಪರಿಚಯಿಸಲಿದೆ. ಒಳಗಿನ ಬದಲಾವಣೆಗಳು ಹೊಸ ಕ್ರೆಟಾದಲ್ಲಿ ಕಂಡುಬರುವಂತೆಯೇ ಇರುತ್ತದೆ. ಅಲ್ಕಾಜರ್ ಫೇಸ್‌ಲಿಫ್ಟ್ ಡ್ಯುಯಲ್ 10.25-ಇಂಚಿನ ಮನಬಂದಂತೆ ಇಂಟಿಗ್ರೇಟೆಡ್ ಇನ್ಫೋಟೈನ್‌ಮೆಂಟ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಸ್ಕ್ರೀನ್‌ಗಳನ್ನು ಪಡೆಯುವ ನಿರೀಕ್ಷೆಯಿದೆ.

Hyundai Alcazar facelift will be launching in September 2024

ಇನ್ಸ್ ಟ್ರೂಮೆಂಟ್ ಡ್ಯುಯಲ್-ಝೋನ್ ಕ್ಲೈಮೆಂಟ್ ಕಂಟ್ರೋಲ್ ಮತ್ತು ಮೆಂಟಿಕೆಟಡ್ ಸೀಟುಗಳನ್ನು ಒಳಗೊಂಡಿರುತ್ತದೆ. ಅಲ್ಕಾಜರ್ ಫೇಸ್‌ಲಿಫ್ಟ್‌ನೊಂದಿಗೆ ADAS ಫೀಚರ್ಸ್ ಹೊಂದಿರಲಿದೆ. ಮೊದಲಿನಂತೆಯೇ, ಅಲ್ಕಾಜರ್ ಆರು ಮತ್ತು ಏಳು ಆಸನಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಹುಡ್ ಅಡಿಯಲ್ಲಿ, ಪ್ರಸ್ತುತ 1.5-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳು ಮುಂದುವರೆಯಲಿದೆ.

ಮಾಹಿತಿಗಳ ಪ್ರಕಾರ ಹೊಸ ಫೇಸ್‌ಲಿಫ್ಟ್‌ ಅಲ್ಕಜಾರ್‌ನ (Hyundai Alcazar Facelift) ಎಂಜಿನ್‌ನಲ್ಲಿ ಯಾವುದೇ ರೀತಿಯ ಬದಲಾವಣೆಗಳಿರುವುದಿಲ್ಲ. ಬಹುತೇಕ ಹಳೆಯ ಕಾರಿನಲ್ಲಿದ್ದ ಎಂಜಿನ್‌ ಅನ್ನೇ ಉಳಿಸಿಕೊಂಡು ಹೋಗಲಿದೆ. ಆದರೆ ಡಿಸೈನ್‌ ಮತ್ತು ಫೀಚರ್‌ನಲ್ಲಿ ಬದಲಾವಣೆಗಳು ಇರಲಿದ್ದು, ಈ ಕಾರು ಹೊಸ ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್ ಮಾದರಿಯನ್ನೇ ಅವಲಂಬಿಸಲಿದೆ ಎಂದು ತಿಳಿದು ಬಂದಿದೆ.

Hyundai Alcazar facelift will be launching in September 2024

ಈ ಕಾರಿನ ಪವರ್‌ ಬಗ್ಗೆ ಹೇಳುವುದಾದರೆ, ಪೆಟ್ರೋಲ್ ಪವರ್‌ಟ್ರೇನ್ 160hp ಮತ್ತು 253Nm ಟಾರ್ಕ್ ಅನ್ನು ಹೊರಹಾಕುತ್ತದೆ ಮತ್ತು 6-ಸ್ಪೀಡ್ MT ಅಥವಾ ಆಟೋಮ್ಯಾಟಿಕ್‌ 7-ಸ್ಪೀಡ್ ಡ್ಯುಯಲ್-ಕ್ಲಚ್ ಸ್ವಯಂಚಾಲಿತ ಆಯ್ಕೆಯೊಂದಿಗೆ ಬರಬಹುದು ಎನ್ನಲಾಗುತ್ತಿದೆ. ಡೀಸೆಲ್ ಮೋಟಾರ್‌ನ ಉತ್ಪಾದನೆಯು 116hp ಮತ್ತು 250Nm ಆಗಿದೆ ಮತ್ತು ಇದು 6MT ಮತ್ತು 6AT ಆಯ್ಕೆಯೊಂದಿಗೆ ಲಭ್ಯವಿರಲಿದೆ.

ಈ 1.5 ಲೀಟರ್ ಪೆಟ್ರೋಲ್ ಎಂಜಿನ್ RDE (ರಿಯಲ್ ಡ್ರೈವಿಂಗ್ ಎಮಿಷನ್) ಕಂಪ್ಲೈಂಟ್ ಮತ್ತು E20 (ಎಥೆನಾಲ್) ಇಂಧನವನ್ನು ಸಹ ಬೆಂಬಲಿಸುತ್ತದೆ. ಈ ಎಂಜಿನ್ ಆಯ್ಕೆಗಳಲ್ಲಿ 6-ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಹೊಸ 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್ ಮತ್ತು DCT ಆಗಿದೆ. ಈ ಎಂಜಿನ್ ಇಂಟಿಗ್ರೇಟೆಡ್ ಸ್ಟಾರ್ಟ್-ಸ್ಟಾಪ್ ಟೆಕ್ ಅನ್ನು ಸಹ ಪಡೆಯುತ್ತದೆ. DCT ಆವೃತ್ತಿಯು 18 ಕಿ.ಮೀ ಮೈಲೇಜ್ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, July 12, 2024, 10:18 [IST]
English summary
Hyundai alcazar facelift will be launching in september 2024
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+