ಭಾರೀ ಮೈಲೇಜ್‌ನ ಹ್ಯುಂಡೈ ಫ್ಯಾಮಿಲಿ ಕಾರಿಗೆ ಭಾರೀ ಬೇಡಿಕೆ: 2 ಕುಟುಂಬ ಪ್ರಯಾಣಿಸಬಹುದು!
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor India) ತನ್ನ ಬಹುನಿರೀಕ್ಷಿತ 2024ರ ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ (Hyundai Alcazar Facelift ) ಎಸ್‍ಯುವಿಯನ್ನು ಕಳೆದ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಇದು 6 ಮತ್ತು 7-ಸೀಟರ್ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿರುವ ಪ್ರೀಮಿಯಂ ಎಸ್‍ಯುವಿಯಾಗಿದೆ. ಈ ನಡುವೆ ಕಳೆದ ತಿಂಗಳ ಅಲ್ಕಾಜರ್ ಮಾದರಿಯ ಮಾರಾಟದ ವರದಿ ಬಹಿರಂಗವಾಗಿದೆ. ಕಳೆದ ತಿಂಗಳಿನಲ್ಲಿ ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯ 2,712 ಯುನಿಟ್ ಗಳು ಮಾರಾಟವಾಗಿವೆ. ಇನ್ನು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಅಲ್ಕಾಜರ್ ಎಸ್‌ಯುವಿಯ 1,977 ಯುನಿಟ್ ಗಳು ಮಾರಾಟವಾಗಿತ್ತು.
ಇನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.37 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಹಳೆ ಮಾದರಿಗೆ ಹೋಲಿಸಿದರೆ ಹೊಸ ಹ್ಯುಂಡೈ ಅಲ್ಕಾಜರ್ಎಸ್‍ಯುವಿಯು ರಿಫ್ರೆಶ್ ವಿನ್ಯಾಸ ಮತ್ತು ಹೊಸ ಫೀಚರ್ಸ್ ಗಳನ್ನು ಪಡೆದುಕೊಂಡಿವೆ. ಈ ಹೊಸ ಅಲ್ಕಾಜರ್ ಫೇಸ್‌ಲಿಫ್ಟ್‌ನ ಪೆಟ್ರೋಲ್ ರೂಪಾಂತರದ ಬೆಲೆಗಳು ರೂ 14.99 ಲಕ್ಷದಿಂದ ಪ್ರಾರಂಭವಾದರೆ, ಡೀಸೆಲ್ ರೂಪಾಂತರಗಳ ಪ್ರಾರಂಭಿಕ ಬೆಲೆಯು ರೂ.15.99 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಈ ಹೊಸ ಹ್ಯುಂಡೈ ಅಲ್ಕಾಜರ್ ಎಸ್‌ಯುವಿ 2 ಪವರ್‌ಟ್ರೇನ್ ಆಯ್ಕೆಯಲ್ಲಿ ಲಭ್ಯವಿದೆ. ಮೊದಲಿಗೆ 1.5-ಲೀಟರ್ ಜಿಡಿಟಿ ಟರ್ಬೊ ಪೆಟ್ರೋಲ್ ಎಂಜಿನ್ 158 ಬಿಹೆಚ್‍ಪಿ ಗರಿಷ್ಠ ಪವರ್ ಹಾಗೂ 253 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತಾದೆ. ಮತ್ತೊಂದು 1.5-ಲೀಟರ್ ಡೀಸೆಲ್ ಎಂಜಿನ್ 113 ಬಿಹೆಚ್‍ಪಿ ಗರಿಷ್ಠ ಪವರ್ ಮತ್ತು 250 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ.
ಈ ಕಾರು ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಹಾಗೂ 7-ಸ್ಪೀಡ್ ಡಿಸಿಟಿ (ಡುಯಲ್ ಕ್ಲಚ್ ಟ್ರಾಸ್ಮಿಷನ್) ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ನಾರ್ಮಲ್, ಇಕೋ ಮತ್ತು ಸ್ಪೋರ್ಟ್ ಎಂಬ 3 ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದೆ. ಸ್ನೋ, ಮಡ್, ಮತ್ತು ಸ್ಯಾಂಡ್ ಹೆಸರಿನ 3 ಟ್ರಾಕ್ಷನ್ ಮೋಡ್‌ಗಳನ್ನು ಪಡೆದಿದ್ದು, ಸ್ಟಾರ್ಟ್/ ಸ್ಟಾಪ್ ಸಿಸ್ಟಮ್‌ಗಳನ್ನು ಒಳಗೊಂಡಿದೆ.

ಪೆಟ್ರೋಲ್ ಎಂಜಿನ್ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಮಾದರಿಯು 17.5 ಕಿ.ಮೀ ಮೈಲೇಜ್ ಮತ್ತು 7-ಸ್ಪೀಡ್ ಡಿಸಿಟಿ ಟ್ರಾನ್ಸ್‌ಮಿಷನ್ ಮಾದರಿಯು 18 ಕಿ.ಮೀ ಮೈಲೇಜ್ ಅನ್ನು ಹೊಂದಿದೆ. ಡೀಸೆಲ್ ಎಂಜಿನ್ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಮಾದರಿಯು 20.4 ಕಿ.ಮೀ ಮೈಲೇಜ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮಾದರಿಯು 18.1ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.
2024ರ ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ ಎಸ್‍ಯುವಿಯು ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಲ್ಕಾಜರ್ ಫೇಸ್‌ಲಿಫ್ಟ್ ಎಸ್‍ಯುವಿಯ ಹೊರಭಾಗದಲ್ಲಿ ವಿನೂತನವಾಗಿರುವ ಗ್ರಿಲ್, ಹೆಡ್‌ಲ್ಯಾಂಪ್‌ಗಳು, ಎಚ್-ಆಕಾರಕ್ಕೆ ಹೋಲಿಕೆಯಾಗುವ ಎಲ್‌ಇಡಿ ಡಿಆರ್‌ಎಲ್‌ಗಳು, 18-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್‌ಗಳು ಮತ್ತು ಎಲ್ಇಡಿ ಟೈಲ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ. ಒಳಭಾಗದ ಕ್ಯಾಬಿನ್ ವಿನ್ಯಾಸವು ಹೆಚ್ಚು ಅತ್ಯಾಧುನಿಕವಾಗಿದೆ.

ಬಣ್ಣಗಳ ಆಯ್ಕೆ ಮತ್ತು ಆಯಾಮಗಳು: ಹೊಸ ಹ್ಯುಂಡೈ ಅಲ್ಕಾಜರ್ ಎಸ್‌ಯುವಿ ಅಟ್ಲಾಸ್ ವೈಟ್, ಅಬಿಸ್ ಬ್ಲ್ಯಾಕ್ ಪರ್ಲ್, ರೇಂಜರ್ ಖಾಕಿ, ಫಿಯರಿ ರೆಡ್, ಸ್ಟಾರಿ ನೈಟ್, ಟೈಟಾನ್ ಗ್ರೇ ಮ್ಯಾಟ್ ಸೇರಿದಂತೆ 9 ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ. ಈ ಹೊಸ ಪ್ರೀಮಿಯಂ ಎಸ್‍ಯುವಿಯು 4,560 ಎಂಎಂ ಉದ್ದ, 1,800 ಎಂಎಂ ಅಗಲ ಮತ್ತು 1,710 ಎಂಎಂ ಎತ್ತರವಿದ್ದು, 2,760 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ.
ನೂತನ ಹ್ಯುಂಡೈ ಅಲ್ಕಾಜರ್ ಎಸ್‌ಯುವಿ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ 10.25-ಇಂಚಿನ ಡಿಸ್ಪ್ಲೇಗಳು, ಪನೊರೊಮಿಕ್ ಸನ್‌ರೂಫ್, ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 6 ಏರ್‌ಬ್ಯಾಗ್‌ನ್ನು ಪಡೆದಿದೆ. 6/7 ಆಸನ ಆಯ್ಕೆ ವ್ಯವಸ್ಥೆಯಲ್ಲಿಯೂ ಖರೀದಿಗೆ ಸಿಗುತ್ತದೆ.


Click it and Unblock the Notifications








