Hyundai: 6 ಏರ್‌ಬ್ಯಾಗ್‌ನ ಹ್ಯುಂಡೈ ಔರಾ ಸೆಡಾನ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾಗಿ ಹ್ಯುಂಡೈ (Hyundai) ಜನಮನ್ನಣೆಯನ್ನು ಗಳಿಸಿದೆ. ಕಂಪನಿಯು ಮಾರಾಟಗೊಳಿಸುವ ಔರಾ (Aura) ಸೆಡಾನ್‌ನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇಲ್ಲಿ ಈ ಕಾರಿನ ಆನ್-ರೋಡ್ ಬೆಲೆ ಹಾಗೂ ಇಎಂಐ ಆಯ್ಕೆಯ ಬಗ್ಗೆ ತಿಳಿಸಿಕೊಟ್ಟಿದ್ದೇವೆ.
ಬೆಂಗಳೂರಿನಲ್ಲಿ ಹ್ಯುಂಡೈ ಔರಾ (Hyundai Aura) ಕಾರಿನ ಪೆಟ್ರೋಲ್ ಚಾಲಿತ ಬೇಸ್ ಮಾಡೆಲ್ (ಆರಂಭಿಕ ಮಾದರಿ) ಆಗಿರುವ 'ಇ' ರೂ.7.90 ಲಕ್ಷ, ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ 'ಎಸ್' ರೂ.8.90 ಲಕ್ಷ, 'ಎಸ್ಎಕ್ಸ್' ರೂ.9.81 ಲಕ್ಷ ಹಾಗೂ ಟಾಪ್ ಎಂಡ್ ಮಾಡೆಲ್ (ಗರಿಷ್ಠ ಶ್ರೇಣಿ) ಎಂದು ಹೆಸರಾಗಿರುವ 'ಎಸ್ಎಕ್ಸ್ ಪ್ಲಸ್ ಎಎಂಟಿ' ರೂ.10.77 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ.

ಸಿಎನ್‌ಜಿ ಚಾಲಿತ ಬೇಸ್ ವೇರಿಯೆಂಟ್ (ಪ್ರಾರಂಭಿಕ ರೂಪಾಂತರ) 'ಎಸ್' ರೂ.10.09 ಲಕ್ಷ ಮತ್ತು ಟಾಪ್ ಎಂಡ್ ವೇರಿಯೆಂಟ್ (ಗರಿಷ್ಠ ಶ್ರೇಣಿ) 'ಎಸ್ಎಕ್ಸ್' ರೂ.10.97 ಲಕ್ಷ ಆನ್-ರೋಡ್ ದರವನ್ನು ಪಡೆದಿದೆ. ನೀವು ಈ ಕಾರನ್ನು ರೂ.2 ಲಕ್ಷ ಡೌನ್ ಪೇಮೆಂಟ್ ಪಾವತಿಸಿ ಖರೀದಿಸಿದರೆ ಐದು ವರ್ಷದ ಅವಧಿಗೆ ಶೇಕಡ 9.8% ಬಡ್ಡಿ ದರದಲ್ಲಿ ತಿಂಗಳಿಗೆ ರೂ.12,474 ಇಎಂಐ ಕಟ್ಟಬೇಕು.
ನೂತನ ಹ್ಯುಂಡೈ ಔರಾ (Hyundai Aura) ಸೆಡಾನ್ ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ಟೈಫೂನ್ ಸಿಲ್ವರ್, ಸ್ಟಾರಿ ನೈಟ್, ಅಟ್ಲಾಸ್ ವೈಟ್, ಟೈಟಾನ್ ಗ್ರೇ ಸೇರಿದಂತೆ ಹಲವು ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ. ಜೊತೆಗೆ ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ದೂರದ ಉರುಗಳಿಗೆ ಪ್ರಯಾಣಿಸಬಹುದು.

ಈ ಹ್ಯುಂಡೈ ಔರಾ ಕಾರು ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್‌ಟ್ರೇನ್ ನೊಂದಿಗೆ ಲಭ್ಯವಿದೆ. ಇದರ 1.2-ಲೀಟರ್ ಪೆಟ್ರೋಲ್ 83 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 114 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್/ 5-ಆಟೋಮೆಟಿಕ್ ಗೇರ್ ಬಾಕ್ಸ್‌ನ್ನು ಕೂಡ ಒಳಗೊಂಡಿದೆ.
ಸಿಎನ್‌ಜಿ ಕಿಟ್ ಪಡೆದಿರುವ ಮಾದರಿಯು ಇದೇ ಎಂಜಿನ್ ಆಯ್ಕೆಯನ್ನು ಪಡೆದಿದೆ. ಆದರೆ, 69 ಪಿಎಸ್ ಪವರ್ ಹಾಗೂ 95.2 ಎನ್ಎಂ ಪೀಕ್ ಟಾರ್ಕ್ ಹೊರಹಾಕಲಷ್ಟೇ ಶಕ್ತವಾಗಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನೊಂದಿಗೆ ಮಾತ್ರ ಸಿಗುತ್ತದೆ. ಈ ಕಾರು ರೂಪಾಂತರಗಳಿಗೆ ಅನುಗುಣವಾಗಿ 17 ರಿಂದ 22 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ.

ಹೊಸ ಹ್ಯುಂಡೈ ಔರಾ ಸೆಡಾನ್ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್ ಸ್ಟಾರ್ಟ್ ಅಸಿಸ್ಟ್, ರೇರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ರೇರ್ ಪಾರ್ಕಿಂಗ್ ಸೇನಾರ್ಸ್ ಅನ್ನು ಹೊಂದಿದೆ.
ಈ ಹ್ಯುಂಡೈ ಔರಾಗೆ ಮಾರುತಿ ಸುಜುಕಿ ಡಿಜೈರ್, ಹೋಂಡಾ ಅಮೇಜ್ ಹಾಗೂ ಟಾಟಾ ಟಿಗೂರ್ ಕಾರುಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ. ನಿಮ್ಮ ಗಮನಕ್ಕೆ.. ಇಲ್ಲಿ ವಿವರಿಸಲಾಗಿರುವ ಆನ್-ರೋಡ್ ಬೆಲೆಗಳು ಹಾಗೂ ಸಾಲದ ಆಯ್ಕೆಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications