28 Km ಮೈಲೇಜ್.. 5 ಸೀಟರ್.. 7.49 ಲಕ್ಷದ ಹೊಸ ಹ್ಯುಂಡೈ ಔರಾ ಸಿಎನ್‌ಜಿ ಕಾರಿನ ಬಗ್ಗೆ ತಿಳಿಯಬೇಕಾದ ವಿಚಾರಗಳಿವು!
ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor India), ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿರುವ ಹಲವು ಕಾರುಗಳನ್ನು ಮಾರಾಟಗೊಳಿಸುತ್ತಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಕಂಪನಿಯು ಮಂಗಳವಾರ ಡುಯಲ್ - ಸಿಎನ್‌ಜಿ (Dual - CNG) ತಂತ್ರಜ್ಞಾನದೊಂದಿಗೆ ನೂತನ ಔರಾ (Aura) ಸೆಡಾನ್‌ನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿತ್ತು. ಇಲ್ಲಿ ಈ ಹೊಸ ಕಾರಿನ ಬೆಲೆ ಹಾಗೂ ಕಾರ್ಯಕ್ಷಮತೆ ಸೇರಿದಂತೆ ಪ್ರಮುಖಾಂಶಗಳ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.
ಬೆಲೆ & ರೂಪಾಂತರ (Price & Variant): ನೂತನ ಹ್ಯುಂಡೈ ಔರಾ (Hyundai Aura) ಕಾರಿನ 'ಇ' ರೂಪಾಂತರವು (ವೇರಿಯೆಂಟ್) ಡುಯಲ್ - ಸಿಎನ್‌ಜಿ ಎಂಜಿನ್ ತಂತ್ರಜ್ಞಾನವನ್ನು ಒಳಗೊಂಡಿದ್ದು, ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ರೂ.7.49 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ.

ಕಾರ್ಯಕ್ಷಮತೆ (Performance): ಈ ಹ್ಯುಂಡೈ ಔರಾ ಡುಯಲ್ - ಸಿಎನ್‌ಜಿ (ಹೈ - ಸಿಎನ್‌ಜಿ) ಇ ರೂಪಾಂತರವು 1.2-ಲೀಟರ್ ಪೆಟ್ರೋಲ್/ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 69 ಪಿಎಸ್ ಗರಿಷ್ಠ ಶಕ್ತಿ (ಪವರ್) ಮತ್ತು 95.2 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 28.4 ಕೆಎಂ/ಕೆಜಿ ಮೈಲೇಜ್ ನೀಡಲಿದೆ ಎಂದು ಹೇಳಲಾಗಿದೆ.
ವೈಶಿಷ್ಟ್ಯಗಳು (Features): ಹ್ಯುಂಡೈ ಔರಾ 5 ಆಸನಗಳನ್ನು ಹೊಂದಿದೆ. ಝಡ್ - ಆಕಾರಕ್ಕೆ ಹೋಲಿಕೆಯಾಗುವ ಎಲ್ಇಡಿ ಟೈಲ್‌ಲ್ಯಾಂಪ್‌ಗಳು, ಫ್ರಂಟ್ ಪವರ್ ವಿಂಡೋಸ್, ಹೈಡ್ ಅಡ್ಜಸ್ಟ್ಮೆಂಟ್ ಡ್ರೈವರ್ ಸೀಟ್, ಮಲ್ಟಿ ಇನ್ಫಾರ್ಮಶನ್ ಡಿಸ್ಪ್ಲೇ, 6 - ಏರ್‌ಬ್ಯಾಗ್‌ಗಳು, 3 - ಪಾಯಿಂಟ್ ಸೀಟ್‌ಬೆಲ್ಟ್‌ಗಳು ಮತ್ತು ಸೀಟ್‌ಬೆಲ್ಟ್ ರಿಮೈಂಡರ್ ಸೇರಿಂದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹ್ಯುಂಡೈ ಔರಾ ಪೆಟ್ರೋಲ್ ರೂಪಾಂತರದ ವಿಶೇಷತೆಗಳೇನು: ಇದು ರೂ.6.49 ಲಕ್ಷದಿಂದ ರೂ.9 ಲಕ್ಷಕ್ಕೂ ಹೆಚ್ಚಿನ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇ, ಎಸ್ ಹಾಗೂ ಎಸ್ಎಕ್ಸ್ ಒಳಗೊಂಡಂತೆ ವಿವಿಧ ರೂಪಾಂತರಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಟೈಫೂನ್ ಸಿಲ್ವರ್, ಸ್ಟಾರಿ ನೈಟ್, ಅಟ್ಲಾಸ್ ವೈಟ್ ಸೇರಿದಂತೆ ಹಲವು ಬಣ್ಣಗಳನ್ನು ಪಡೆದಿದೆ.
ಪೆಟ್ರೋಲ್ ಚಾಲಿತ ಹ್ಯುಂಡೈ ಔರಾ (Hyundai Aura) 1.2-ಲೀಟರ್ ಸಾಮರ್ಥ್ಯದ ಎಂಜಿನ್‌ನ್ನು ಹೊಂದಿದೆ. 83 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 114 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಸರಿ ಸುಮಾರು 17 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ಈ ಕಾರು 8 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರಿಗೂ ಗರಿಷ್ಠ ರಕ್ಷಣೆ ಒದಗಿಸಲಿದ್ದು, ಸುರಕ್ಷತೆಯ ದೃಷ್ಟಿಯಿಂದ 6 - ಏರ್‌ಬ್ಯಾಗ್‌ಗಳು, ರೇರ್ ಪಾರ್ಕಿಂಗ್ ಸೆನ್ಸರ್ಸ್, ಹಿಲ್ - ಸ್ಟಾರ್ಟ್ ಅಸಿಸ್ಟ್, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು ಹಿಲ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








