ಹ್ಯುಂಡೈ ಗ್ರಾಹಕರಿಂದ ನಿರೀಕ್ಷಿಸದ ಟ್ವಿಸ್ಟ್: ಕಳೆದ ತಿಂಗಳು ಮಾರಾಟವಾದ ಕಾರುಗಳು ಎಷ್ಟು ಗೊತ್ತಾ?

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ 2024ರ ನವೆಂಬರ್ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಈ ವರದಿ ಪ್ರಕಾರ, ಕಳೆದ ತಿಂಗಳು ಹ್ಯುಂಡೈ (Hyundai) ಕಂಪನಿಯು ಒಟ್ಟು 61,252 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದರಲ್ಲಿ 48,246 ಯುನಿಟ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾದರೆ, 13,006 ಯುನಿಟ್‌ಗಳನ್ನು ರಫ್ತು ಮಾಡಿದೆ. ಇದನ್ನು ಕಳೆದ ವರ್ಷದ ವೆಂಬರ್ ತಿಂಗಳ ಹ್ಯುಂಡೈ ಕಾರುಗಳ ಮಾರಾಟಕ್ಕೆ ಹೋಲಿಸಿದರೆ ಸ್ವಲ್ಪ ಕುಸಿತವನ್ನು ಕಂಡಿದೆ. ಎದುರಾಳಿಗಳ ಪ್ರಬಲ ಪ್ರತಿಸ್ಪರ್ಧಿಯಿಂದಾಗಿ ಮಾರಾಟದಲ್ಲಿ ಕುಸಿತವನ್ನು ಕಂಡಿದೆ.

2024ರ ನವೆಂಬರ್ ತಿಂಗಳಿನಲ್ಲಿ ಎಸ್‍ಯುವಿಗಳು ದೇಶೀಯ ಮಾರಾಟದ 68.8 ಪ್ರತಿಶತವನ್ನು ಹೊಂದಿರುವ ಹುಂಡೈನ ಯಶಸ್ಸಿನ ಮೂಲಾಧಾರವಾಗಿ ಉಳಿದಿವೆ. ಎಸ್‍ಯುವಿಗಳ ವಿಭಾಗದಲ್ಲಿ ಜನಪ್ರಿಯ ಮಾದರಿಗಳಾದ ಕ್ರೆಟಾ ಮತ್ತು ವೆನ್ಯೂ ಸೇರಿದಂತೆ ಹ್ಯುಂಡೈನ ಸರಣಿಯಲ್ಲಿ ಈ ವಿಭಾಗದಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿದೆ. ಕಳೆದ ತಿಂಗಳಿನಲ್ಲಿ 22.1 ಶೇಕಡಾವನ್ನು ತಲುಪಿದ ಹುಂಡೈನ ಅತ್ಯಧಿಕ ಗ್ರಾಮೀಣ ಮಾರಾಟದ ಕೊಡುಗೆಯು ಗಮನಾರ್ಹವಾದ ಹೈಲೈಟ್ ಆಗಿದೆ.

Hyundai Car Sales

ನವೆಂಬರ್ ತಿಂಗಳಿನಲ್ಲಿ ಹ್ಯುಂಡೈ CNG ತಂತ್ರಜ್ಞಾನದಿಂದ ನಡೆಸಲ್ಪಡುವ ಹುಂಡೈನ ಕಾರುಗಳ ಮಾರಾಟದಲ್ಲಿ CNG ವಾಹನಗಳು ಸಹ ಮಹತ್ವದ ಪಾತ್ರವನ್ನು ವಹಿಸಿವೆ. ಸಿಎನ್‌ಜಿ ವಾಹನಗಳು ಮಾಸಿಕ ಮಾರಾಟಕ್ಕೆ ಶೇಕಡಾ 14.4 ರಷ್ಟು ಕೊಡುಗೆ ನೀಡಿವೆ. HMIL ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತರುಣ್ ಗಾರ್ಗ್ ಅವರು ಮಾತನಾಡಿ, ಎಸ್‍ಯುವಿಗಳು ಗ್ರಾಮೀಣ ಮಾರುಕಟ್ಟೆಗಳು ಮತ್ತು ಸುಸ್ಥಿರ ತಂತ್ರಜ್ಞಾನಗಳ ಮೇಲೆ ಕಂಪನಿಯ ಗಮನವನ್ನು ಎತ್ತಿ ತೋರಿಸಿದೆ ಎಂದು ಹೇಳಿದರು.

ಇನ್ನು ಭಾರತದಲ್ಲಿ ಬಹುತೇಕ ಎಲ್ಲಾ ಕಂಪನಿಗಳು ತಲಾ ಒಂದೊಂದು ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿವೆ. ಹ್ಯುಂಡೈ ಕೂಡ ಎಲೆಕ್ಟ್ರಿಕ್ ಆವೃತ್ತಿಗಳನ್ನು ಪರಿಚಯಿಸಿದೆಯಾದರೂ ಹೇಳಿಕೊಳ್ಳುವ ಮಟ್ಟಿಗೆ ಯಶಸ್ಸು ಕಂಡಿಲ್ಲ. ಟಾಟಾ, ಮಹೀಂದ್ರಾ, ಎಂಜಿ ಮೋಟಾರ್‌ನಂತೆ ಮಧ್ಯಮ ವರ್ಗದ ಎಲೆಕ್ಟ್ರಿಕ್ ಕಾರನ್ನು ಹ್ಯುಂಡೈ ಹೊಂದಿಲ್ಲ. ತನ್ನ ಇಂಧನ ಚಾಲಿತ ಕಾರುಗಳಲ್ಲಿ ಭಾರೀ ಜನಪ್ರಿಯತೆ ಪಡೆದಿರುವ ಕ್ರೆಟಾವನ್ನು ಈಗ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಪರಿಚಯಿಸಲು ಹ್ಯುಂಡೈ ರೆಡಿಯಾಗಿದೆ ಎಂದು ವರದಿಯಾಗಿದೆ.

Hyundai

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರನ್ನು ಭಾರತೀಯ ರಸ್ತೆಗಳಲ್ಲಿ ಹೆಚ್ಚಾಗಿ ಪರೀಕ್ಷಿಸಲಾಗುತ್ತಿದೆ, ಇದಕ್ಕೆ ಸಂಬಂಧಿಸಿದ ಹಲವು ವಿಡಿಯೋಗಳು ಹಾಗೂ ಚಿತ್ರಗಳು ವೈರಲ್ ಆಗಿವೆ. ಮೂಲಗಳ ಪ್ರಕಾರ 2025 ರಲ್ಲಿ ದೆಹಲಿಯಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋದಲ್ಲಿ ಹೊಸ ಎಲೆಕ್ಟ್ರಿಕ್ ಕ್ರೆಟಾವನ್ನು ಪರಿಚಯಿಸುವ ಸಾಧ್ಯತೆ ಇದೆ. ಮಧ್ಯಮ ವಿಭಾಗದಲ್ಲಿ ಸ್ಪರ್ಧಾತ್ಮಕ ಬೆಲೆಗೆ ಇದು ಬಿಡುಗಡೆಯಾಗಲಿದೆ ಎಂದು ಹೇಳಲಾಗುತಿದೆ.

ಈಗಾಗಲೇ ಟಾಟಾ ಕರ್ವ್ ಇವಿಯಿಂದ ಹಿಡಿದು ಎಂಜಿ ವಿಂಡ್ಸರ್‌ವರಗೆ ಭಾರತೀಯ ಎಲೆಕ್ಟ್ರಿಕ್ ಕಾರು ವಿಭಾಗವು ಸಖತ್ ಪೈಪೋಟಿಯಿಂದ ಕೂಡಿದೆ. ಅಲ್ಲದೇ ಮಾರುತಿ ಸುಜುಕಿ ಕೂಡ ತನ್ನ ಹೊಸ ಎಲೆಕ್ಟ್ರಿಕ್ ಕಾರನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಮೂಲಕ ಈ ವಿಭಾಗವು ಇನ್ನಷ್ಟು ಪೈಪೋಟಿಯಿಂದ ಕೂಡಿರಲಿದೆ. ಇನ್ನು ಹೊಸ ಕ್ರೆಟಾ ಇವಿ ಬಿಡುಗಡೆ ಬಗ್ಗೆ ಹ್ಯುಂಡೈ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ್ದಾರೆ.

Hyundai

ಹೂಡಿಕೆದಾರರ ಸಭೆಯಲ್ಲಿ, ಹ್ಯುಂಡೈ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ತರುಣ್ ಗರ್ಗ್ ಅವರು ಮಾತನಾಡಿ, ಮುಂದಿನ ವರ್ಷದ ಮೊದಲ ತಿಂಗಳಲ್ಲಿ ಎಲೆಕ್ಟ್ರಿಕ್ ಕ್ರೆಟಾವನ್ನು ದೇಶೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಗುವುದು ಎಂದು ದೃಢಪಡಿಸಿದ್ದಾರೆ. ಭಾರತದಲ್ಲಿ ಕ್ರೆಟಾ ಇವಿ ಗೇಮ್ ಚೇಂಜರ್ ಆಗಲಿದೆ ಎಂದು ಸಿಇಒ ಉನ್ಸೂ ಕಿಮ್ ಕೂಡ ಭವಿಷ್ಯ ಹೇಳಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, December 3, 2024, 8:30 [IST]
English summary
Hyundai car sales in november 2024 details
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+