ಹಬ್ಬಕ್ಕೆ ನೂತನ ಹ್ಯುಂಡೈ ಕಾರು ಖರೀದಿಸಬೇಕೇ.. ಈ ಕುರಿತಂತೆ ನೀವು ತಿಳಿದುಕೊಂಡಿರಲೇ ಬೇಕು!
ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor India) ಪ್ರಮುಖ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಎಕ್ಸ್‌ಟರ್, ವೆನ್ಯೂ, ಕ್ರೆಟಾ ಮತ್ತು ಅಲ್ಕಾಜರ್ ಸೇರಿದಂತೆ ವಿವಿಧ ಹ್ಯಾಚ್‌ಬ್ಯಾಕ್ ಹಾಗೂ ಎಸ್‌ಯುವಿಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದೆ. ನೀವು ಹೊಚ್ಚ ಹೊಸ ಹ್ಯುಂಡೈ ಕಾರನ್ನು ಖರೀದಿಸಲು ಆಲೋಚಿಸಿದ್ದೀರಾ.. ನಾವಿಲ್ಲಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಈ ಅಕ್ಟೋಬರ್‌ನಲ್ಲಿ ಕಂಪನಿಯ ಜನಪ್ರಿಯ ಕಾರುಗಳು ಹೊಂದಿರುವ ಕಾಯುವಿಕೆ ಅವಧಿ (Waiting Period) ಕುರಿತಂತೆ ಸಂಕ್ಷಿಪ್ತವಾಗಿ ವಿವರಿಸಿದ್ದೇವೆ.
ಮೊದಲಿಗೆ ಪ್ರಖ್ಯಾತ ಹ್ಯುಂಡೈ ಎಕ್ಸ್‌ಟರ್ (Hyundai Exter) ಬಗ್ಗೆ ಮಾತನಾಡೋಣ. ಇದೊಂದು ಮೈಕ್ರೋ ಎಸ್‌ಯುವಿಯಾಗಿದೆ. ಬೆಂಗಳೂರಿನಲ್ಲಿ ಈ ಕಾರು ಗ್ರಾಹಕರಿಗೆ ವಿತರಣೆಯಾಗಲು 15 ದಿನ ಬೇಕಾಗುತ್ತದೆ. ನವದೆಹಲಿಯಲ್ಲಿ 4 ತಿಂಗಳು, ಹೈದರಾಬಾದ್‌ನಲ್ಲಿ 3 ತಿಂಗಳು, ಪುಣೆಯಲ್ಲಿ 1.5 ತಿಂಗಳು ಹಾಗೂ ಜೈಪುರದಲ್ಲಿ 1 ತಿಂಗಳು ಕಾಯುವಿಕೆ ಅವಧಿ ಹೊಂದಿದೆ.

ನೂತನ ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿ ರೂ.6.13 ರಿಂದ ರೂ.10.43 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 19.4 ರಿಂದ 27.1 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ (8-ಇಂಚು), ವೈರ್‌ಲೆಸ್ ಫೋನ್ ಚಾರ್ಜರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಹ್ಯುಂಡೈ ವೆನ್ಯೂ (Hyundai Venue) ಕೂಡ ಪ್ರಖ್ಯಾತ ಎಸ್‌ಯುವಿಯಾಗಿದೆ. ಈ ಕಾರು ಬೆಂಗಳೂರಿನಲ್ಲಿ ಕೇವಲ 15 ದಿನಗಳು ಕಾಯುವಿಕೆ ಅವಧಿ ಹೊಂದಿದೆ. ಆದರೆ, ನವದೆಹಲಿಯಲ್ಲಿ 1 ತಿಂಗಳು, ಹೈದರಾಬಾದ್‌ನಲ್ಲಿ 1.5 ರಿಂದ 2 ತಿಂಗಳು ಮತ್ತು ಪುಣೆಯಲ್ಲಿ 1 ರಿಂದ 1.5 ತಿಂಗಳ ಬಳಿಕ ಗ್ರಾಹಕರಿಗೆ ವಿತರಣೆಯಾಗಲಿದೆ.

ಹೊಸ ಹ್ಯುಂಡೈ ವೆನ್ಯೂ ಕಾರು, ರೂ.7.94 ರಿಂದ ರೂ.13.53 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 1.2-ಲೀಟರ್ ಪೆಟ್ರೋಲ್, 1-ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 1.5-ಲೀಟರ್ ಡೀಸೆಲ್ ಎಂಜಿನ್‌ನ್ನು ಒಳಗೊಂಡಿದೆ. ಈ ಕಾರಿನಲ್ಲಿ 5 ಮಂದಿ ಪ್ರಯಾಣಿಸಬಹುದು. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಹ್ಯುಂಡೈ ಕ್ರೆಟಾ (Hyundai Creta) ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಬೆಂಗಳೂರಿನಲ್ಲಿ ಈ ಕಾರು, 15 ದಿನಗಳಲ್ಲಿಯೇ ಖರೀದಿದಾರರ ಮನೆ ಸೇರುತ್ತದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 1 ತಿಂಗಳು, ಮುಂಬೈನಲ್ಲಿ 15 ದಿನಗಳು, ಮುತ್ತಿನ ನಗರಿ ಹೈದರಾಬಾದ್‌ನಲ್ಲಿ 1.5 ರಿಂದ 2 ತಿಂಗಳು ಕಾಯುವಿಕೆ ಅವಧಿ ಒಳಗೂಂಡಿದೆ.

ಈ ಹ್ಯುಂಡೈ ಕ್ರೆಟಾ ಎಸ್‌ಯುವಿ ಕನಿಷ್ಠ ರೂ.11 ಲಕ್ಷ ಮತ್ತು ಗರಿಷ್ಠ ರೂ. 20.15 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಹೊಂದಿದೆ. 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಡುಯಲ್ ಡಿಸ್ಪ್ಲೇ (10.25-ಇಂಚು) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಹ್ಯುಂಡೈ ಅಲ್ಕಾಜರ್ (Hyundai Alcazar) ಫ್ಯಾಮಿಲಿ ಎಸ್‌ಯುವಿಯಾಗಿದೆ. ಬೆಂಗಳೂರಿನಲ್ಲಿ 15 ದಿನಗಳ ಕಾಯುವಿಕೆ ಅವಧಿ ಹೊಂದಿದೆ. ಇದೇ ಕಾರು ನವದೆಹಲಿ 4 ತಿಂಗಳು ಹಾಗೂ ಜೈಪುರದಲ್ಲಿ 1 ತಿಂಗಳೊಳಗೆ ವಿತರಣೆಯಾಗಲಿದೆ. ನೂತನ ಅಲ್ಕಾಜರ್ ಎಸ್‌ಯುವಿ 7 ಆಸನ ಆಯ್ಕೆ ವ್ಯವಸ್ಥೆಯಲ್ಲಿ ದೊರೆಯಲಿದ್ದು, ರೂ.14.99 ಲಕ್ಷದಿಂದ ರೂ.21.40 ಲಕ್ಷ ಎಕ್ಸ್ ಶೋರೂಂ ದರವನ್ನು ಒಳಗೊಂಡಿದೆ.
ನಿಮ್ಮ ಗಮನಕ್ಕೆ.. ಈ ಕಾಯುವಿಕೆ ಅವಧಿ ನಗರದಿಂದ ನಗರಕ್ಕೆ ಕಾರುಗಳ ರೂಪಾಂತರವನ್ನು (ವೇರಿಯೆಂಟ್) ಅವಲಂಭಿಸಿ, ಬೇರೆಯಾಗಿರಬಹುದು. ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.


Click it and Unblock the Notifications








