ಟಾಟಾಗೆ ಶಾಕ್: ಸ್ಯಾಂಟ್ರೊ ಬದಲಿಗೆ ಕಡಿಮೆ ಬೆಲೆಯಲ್ಲಿ ಬರತ್ತಿದೆ ಹೊಸ ಪುಟ್ಟ ಹ್ಯುಂಡೈ ಕಾರು

ಆಕರ್ಷಕ ಲುಕ್, ಮೈಲೇಜ್ ಮತ್ತು ಸುರಕ್ಷತೆ ಹೊಂದಿರುವ ಮೈಕ್ರೋ ಎಸ್‌ಯುವಿಗಳು ಹ್ಯಾಚ್‌ಬ್ಯಾಕ್‌ಗಳ ಬೆಲೆಯಲ್ಲಿ ಸಿಗಲು ಪ್ರಾರಂಭವಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸೆಟರ್ ಮಾದರಿಗಳಾಗಿವೆ. ಈ ಮೈಕ್ರೋ ಎಸ್‌ಯುವಿ ವಿಭಾಗದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು, ದಕ್ಷಿಣ ಕೊರಿಯಾದ ಕಾರು ತಯಾರಕರಾದ ಹ್ಯುಂಡೈ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕಾರನ್ನು ಬಿಡುಗಡೆ ಮಾಡಲಿದೆ.

ಹ್ಯುಂಡೈ ಭಾರತೀಯ ಮಾರುಕಟ್ಟೆಗೆ ತಂದ ಮೊದಲ ಕಾರು ಮಾದರಿ ಸ್ಯಾಂಟ್ರೊ. ಸ್ಯಾಂಟ್ರೊ ಕಂಪನಿಗೆ ಉತ್ತಮ ಪೌಡೆಷನ್ ಅನ್ನು ಹಾಕಿಕೊಟ್ಟಿತು. ಎಸ್‍ಯುವಿಗಳೇ ಮುಂದಿನ ದಾರಿ ಎಂಬುದನ್ನು ಮನಗಂಡ ಹ್ಯುಂಡೈ ಹ್ಯಾಚ್ ಬ್ಯಾಕ್ ಬದಲಿಗೆ ಕ್ರಾಸ್ ಓವರ್ ಅಥವಾ ಎಸ್‍ಯುವಿಗಳ ಕಡೆ ಹೆಚ್ಚಿನ ಗಮನ ಹರಿಸಿದ್ದರು. ಇದರ ಮುಂದುವರಿದ ಭಾಗವಾಗಿ, ಮೈಕ್ರೋ ಎಸ್‌ಯುವಿ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಬೇಕಿದ್ದ ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಯಾಗಿ ಹುಂಡೈ ಎಕ್ಸ್‌ಟರ್ ಅನ್ನು ಕಳೆದ ವರ್ಷ ಬಿಡುಗಡೆ ಮಾಡಲಾಯಿತು.

Hyundai Casper

ಮೊದಲು, ಹ್ಯುಂಡೈ ಕೊರಿಯನ್ ಮಾರುಕಟ್ಟೆಯಲ್ಲಿ ಕ್ಯಾಸ್ಪರ್ ಮೈಕ್ರೋ ಎಸ್‌ಯುವಿಯನ್ನು ಬಿಡುಗಡೆ ಮಾಡಿತ್ತು. ಆದ್ದರಿಂದ, ಹ್ಯುಂಡೈ ಭಾರತಕ್ಕೆ ತರಲಿರುವ ಮೈಕ್ರೋ ಎಸ್ಯುವಿ ಕ್ಯಾಸ್ಪರ್ ಆಗಿರುತ್ತದೆ ಎಂದು ಹಲವರು ಲೆಕ್ಕ ಹಾಕಿದ್ದರು. ಆದರೆ ಹ್ಯುಂಡೈ ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಎಕ್ಸ್‌ಟರ್ ಹೆಸರಿನ ಮಾದರಿಯನ್ನು ಬಿಡುಗಡೆ ಮಾಡಿದರು. ಈಗ ಹುಂಡೈ ಭಾರತದಲ್ಲಿ ಕ್ಯಾಸ್ಪರ್ ಹೆಸರನ್ನು ಟ್ರೇಡ್‌ಮಾರ್ಕ್ ಮಾಡಿದೆ. ಹಾಗಾಗಿ ಶೀಘ್ರದಲ್ಲೇ ಈ ಕಾರು ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ.

ಟ್ರೇಡ್‌ಮಾರ್ಕ್ ಅನ್ನು ಸಲ್ಲಿಸಲಾಗಿದ್ದರೂ, ಭಾರತದಲ್ಲಿ ಕ್ಯಾಸ್ಪರ್‌ನ ಬಿಡುಗಡೆಯ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಭವಿಷ್ಯದ ಟ್ರೇಡ್‌ಮಾರ್ಕ್ ಸಮಸ್ಯೆಗಳನ್ನು ತಪ್ಪಿಸಲು ಬ್ರ್ಯಾಂಡ್‌ಗಳು ಹೆಸರುಗಳನ್ನು ನೋಂದಾಯಿಸುತ್ತವೆ. ಆದರೆ ಬದಲಾದ ಪರಿಸ್ಥಿತಿಯಲ್ಲಿ, ಸ್ಯಾಂಟ್ರೊಗೆ ಬದಲಿಯಾಗಿ ಕ್ಯಾಸ್ಪರ್ ಉತ್ತಮ ಪ್ರದರ್ಶನ ನೀಡಬಹುದು ಎಂದು ಭಾವಿಸಲಾಗಿದೆ. ಟಾಟಾ ಪಂಚ್‌ನಂತಹ ಬೇಬಿ ಎಸ್‌ಯುವಿಗಳು ಭರ್ಜರಿಯಾಗಿ ಮಾರಾಟ ವಾಗುತ್ತಿದೆ.

Hyundai Casper

ಹೊಸ ಹ್ಯುಂಡೈ ಕ್ಯಾಸ್ಪರ್‌ನ ಕಾಂಪ್ಯಾಕ್ಟ್ ಗಾತ್ರವು ಭಾರೀ ಟ್ರಾಫಿಕ್ ಮತ್ತು ಬಿಗಿಯಾದ ಸ್ಥಳಗಳಲ್ಲಿ ನಿಲುಗಡೆ ಮಾಡಲು ಸೂಕ್ತವಾಗಿ ಬರುತ್ತದೆ, ಇದು ಸ್ಯಾಂಟ್ರೊಗೆ ಸಂಭಾವ್ಯ ಬದಲಿಯಾಗಿದೆ. ಕೊರಿಯನ್-ಸ್ಪೆಕ್ ಕ್ಯಾಸ್ಪರ್ 3,595 ಎಂಎಂ ಉದ್ದ, 1,595 ಎಂಎಂ ಅಗಲ, 1,575 ಎಂಎಂ ಎತ್ತರ ಮತ್ತು 2,400 ಎಂಎಂ ವೀಲ್‌ಬೇಸ್ ಅನ್ನು ಹೊಂದಿದೆ.

ಹ್ಯುಂಡೈ ಕ್ಯಾಸ್ಪರ್‌ ಕಾರು ವಿನ್ಯಾಸದಲ್ಲಿ ಯುವಕರನ್ನು ಆಕರ್ಷಿಸುವ ಸ್ಪೋರ್ಟಿಯರ್ ಪ್ರೊಫೈಲ್ ಅನ್ನು ಹೊಂದಿದೆ. ಗ್ರಿಲ್‌ನ ಮೆಶ್ಡ್ ಪ್ಯಾಟರ್ನ್ ಜೊತೆಗೆ ಸಿಲ್ಚರ್ ಪ್ಯಾನೆಲ್‌ನಲ್ಲಿ ಇರಿಸಲಾಗಿರುವ ಸುತ್ತಿನ ಹೆಡ್‌ಲ್ಯಾಂಪ್‌ಗಳಂತಹ ಚಮತ್ಕಾರಿ ಸ್ಟೈಲಿಂಗ್ ಅಂಶಗಳು ಅದನ್ನು ಗುಂಪಿನಲ್ಲಿ ಎದ್ದು ಕಾಣುವಂತೆ ಮಾಡುತ್ತದೆ. ಈ ಕಾರಿನ ಮುಂಭಾಗದ ಬಂಪರ್, ವ್ಹೀಲ್ ಅರ್ಚಾರ್ ಮತ್ತು ರೂಫ್ ರೈಲ್ ಗಳನ್ನು ಹೊಂದಿವೆ.

Hyundai Casper

ಈ ಹೊಸ ಹ್ಯುಂಡೈ ಕ್ಯಾಸ್ಪರ್‌ (Hyundai Casper) ಕಾರು ಏರ್ ಇನ್‌ಟೇಕ್ ವೆಂಟ್‌ಗಳು ಯುಎಸ್‌ಬಿ-ಸಿ ಪ್ರಕಾರದ ಚಾರ್ಜಿಂಗ್ ಪೋರ್ಟ್‌ಗಳನ್ನು ಹೋಲುತ್ತವೆ ಎಂದು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ಹಿಂಭಾಗದಲ್ಲಿ, ಸಾಂಪ್ರದಾಯಿಕ ಟೈಲ್‌ಲೈಟ್ ಕ್ಲಸ್ಟರ್‌ಗಳ ಬದಲಿಗೆ, ಕ್ಯಾಸ್ಪರ್ ಪಿಕ್ಸಲೇಟೆಡ್ ಟ್ರೀಟ್‌ಮೆಂಟ್‌ನೊಂದಿಗೆ ಉದ್ದವಾದ ಬ್ರೇಕ್ ಲ್ಯಾಂಪ್ ಸೆಟಪ್‌ನೊಂದಿಗೆ ಬ್ಲ್ಯಾಕ್ ಪ್ಯಾನೆಲ್ ಅನ್ನು ಪಡೆಯುತ್ತದೆ. ಹಿಂಭಾಗದ ಬಂಪರ್‌ನಲ್ಲಿರುವ ಫಾಕ್ಸ್ ಡಿಫ್ಯೂಸರ್ ಸಹ ಕಾರಿನ ಆಕರ್ಷಣೆಯನ್ನು ಹೆಚ್ಚಿಸುತ್ತದೆ.

ಕ್ಯಾಸ್ಪರ್ ಕಾರು ಎರಡು-ಸ್ಪೋಕ್ ಸ್ಟೀರಿಂಗ್ ವೀಲ್, ಡ್ಯಾಶ್‌ಬೋರ್ಡ್-ಮೌಂಟೆಡ್ ಸೆಂಟರ್ ಕನ್ಸೋಲ್ ಮತ್ತು ಗೇರ್ ಲಿವರ್ ಅನ್ನು ಒಳಗೊಂಡಿರುತ್ತದೆ. ಇದು ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಸ್ಕ್ರೀನ್ ಮತ್ತು ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುತ್ತದೆ. ಕೊರಿಯನ್-ಸ್ಪೆಕ್ ಕ್ಯಾಸ್ಪರ್ ADAS ವೈಶಿಷ್ಟ್ಯಗಳನ್ನು ಹೊಂದಿದೆ. ಅಗ್ಗದ ಬೆಲೆಯ ಭಾಗವಾಗಿ ಭಾರತಕ್ಕೆ ಬಂದಾಗ ಕ್ಯಾಸ್ಪರ್ ADAS ವೈಶಿಷ್ಟ್ಯವನ್ನು ಕಳೆದುಕೊಳ್ಳುತ್ತದೆ.

Hyundai Casper

ಕ್ಯಾಸ್ಪರ್ ದಕ್ಷಿಣ ಕೊರಿಯಾದಲ್ಲಿ 1.0-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಭಾರತದಲ್ಲಿ ಕ್ಯಾಸ್ಪರ್ NA ಪೆಟ್ರೋಲ್ ಎಂಜಿನ್ ಅನ್ನು ಪಡೆಯಬಹುದು. ಬಹುಶಃ ಕ್ಯಾಸ್ಪರ್ ಮಾರುಕಟ್ಟೆಗೆ ಬಂದ ನಂತರ ಪಂಚ್ ಮತ್ತು ಎಕ್ಸೆಟರ್‌ಗಿಂತ ಕೆಳಗೆ ಮತ್ತೊಂದು ಎಸ್‍ಯುವಿ ವಿಭಾಗವನ್ನು ರಚಿಸಬಹುದು.

Article Published On: Wednesday, May 15, 2024, 16:44 [IST]
English summary
Hyundai casper name trademarked in india new small suv details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+