ಹ್ಯುಂಡೈ ಸಿಎನ್‌ಜಿ ಕಾರುಗಳಿಗೆ ಭಾರೀ ಬೇಡಿಕೆ: ಈ ಕಾರುಗಳ ಖರೀದಿಯಿಂದ ಹಣ ಎಷ್ಟು ಉಳಿಸಬಹುದು ಗೊತ್ತಾ?

ಭಾರತದಲ್ಲಿ ಸಿಎನ್‌ಜಿ ಮತ್ತು ಪೆಟ್ರೋಲ್ ಎರಡರಲ್ಲೂ ಚಲಿಸುವ ದ್ವಿ-ಇಂಧನ ಕಾರುಗಳಿಗೆ (ಬೈ-ಫ್ಯುಯೆಲ್ ಕಾರ್‌ಗಳು) ಬೇಡಿಕೆ ಹೆಚ್ಚುತ್ತಿದೆ. 2024ರ ಹಣಕಾಸು ವರ್ಷದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ 4.3 ಲಕ್ಷ ಸಿಎನ್‌ಜಿ (CNG) ಕಾರುಗಳು ಮಾರಾಟವಾಗಿವೆ. ಹೆಚ್ಚಿನ ಮೈಲೇಜ್, ಕಡಿಮೆ ಇಂಧನ ವೆಚ್ಚ ಮತ್ತು ಕಡಿಮೆ ಮಾಲಿನ್ಯ ಇವೆಲ್ಲವೂ ಹೆಚ್ಚು ಜನರನ್ನು ಸಿಎನ್‌ಜಿಗೆ ಆಕರ್ಷಿಸುತ್ತವೆ. ದೀರ್ಘಕಾಲದಿಂದ ಮಾರುತಿ ಸುಜುಕಿ ಸಿಎನ್‌ಜಿ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಆದರೆ ಈಗ ಹ್ಯುಂಡೈ ಮತ್ತು ಟಾಟಾ ಕಂಪನಿಗಳಂತಹ ದೈತ ವಾಹನ ತಯಾರಕ ಕಂಪನಿಯು ಸಿಎನ್‌ಜಿ ವಿಭಾಗದಲ್ಲಿ ಹೆಚ್ಚಿನ ಸ್ಪರ್ಧೆಯನ್ನು ನೀಡುತ್ತಿದೆ.

ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor India) ಕಂಪನಿಯು 2024ರ ಅಕ್ಟೋಬರ್ ತಿಂಗಳಿನಲ್ಲಿ ದಾಖಲೆ ಮಟ್ಟದಲ್ಲಿ ಸಿಎನ್‌ಜಿ ಕಾರುಗಳನ್ನು ಮಾರಾಟ ಮಾಡಿವೆ. ಅಕ್ಟೋಬರ್‌ನಲ್ಲಿ ಹ್ಯುಂಡೈನ ಒಟ್ಟು ಮಾರಾಟದಲ್ಲಿ ಸಿಎನ್‌ಜಿ ಚಾಲಿತ ಕಾರುಗಳು 14.9 ರಷ್ಟು ಕೊಡುಗೆ ನೀಡಿವೆ. ಸಿಎನ್‌ಜಿ ವಿಭಾಗದಲ್ಲಿನ ಬಲವಾದ ಬೇಡಿಕೆ ಮತ್ತು ಎಂಟ್ರಿ ಲೆವೆಲ್ ಸಿಎನ್‌ಜಿ ಮಾದರಿಗಳ ಮೂಲಕ ಪ್ರಬಲ ಪೋರ್ಟ್‌ಫೋಲಿಯೊವನ್ನು ಹೊಂದಿದೆ.

Hyundai CNG car

ಹ್ಯುಂಡೈ (Hyundai) ಇತ್ತೀಚೆಗೆ ತನ್ನ ಡ್ಯುಯಲ್ ಸಿಎನ್‌ಜಿ ಸಿಲಿಂಡರ್ ತಂತ್ರಜ್ಞಾನವನ್ನು ಗ್ರ್ಯಾಂಡ್ ಐ10 ನಿಯೋಸ್ ಮತ್ತು ಎಕ್ಸೆಟರ್‌ನಲ್ಲಿ ಪರಿಚಯಿಸಿತ್ತು. ಈ ಟ್ವಿನ್ ಸಿಲಿಂಡರ್ ತಂತ್ರಜ್ಞಾನವನ್ನು ಭಾರತದಲ್ಲಿ ಮೊದಲು ಟಾಟಾ ಮೋಟಾರ್ಸ್ ತಂದಿತು. ಎರಡೂ ಮಾದರಿಗಳು ಉತ್ತಮ ಬೂಟ್ ಸ್ಪೇಸ್ ಮತ್ತು ಹೆಚ್ಚಿನ ಮೈಲೇಜ್ ನಿಂದಾಗಿ ಉತ್ತಮ ಮಾರಾಟವನ್ನು ದಾಖಲಿಸಿತು. ಗ್ರಾಂಡ್ i10 ಮತ್ತು ಎಕ್ಸೆಟರ್ ಹೊರತಾಗಿ, ಹ್ಯುಂಡೈ ಔರಾ ಕಾಂಪ್ಯಾಕ್ಟ್ ಸೆಡಾನ್‌ನಲ್ಲಿ ಸಿಎನ್‌ಜಿ ಪವರ್‌ಟ್ರೇನ್ ಅನ್ನು ಸಹ ನೀಡುತ್ತಿದೆ.

2024ರ ಅಕ್ಟೋಬರ್ ತಿಂಗಳಿನಲ್ಲಿ ಗ್ರಾಂಡ್ ಐ10 ನಿಯೋಸ್ ಮಾರಾಟದಲ್ಲಿ ಸಿಎನ್‌ಜಿ ಶೇಕಡಾ 17.4 ರಷ್ಟಿದೆ. ಇನ್ನು ಎಕ್ಸೆಟರ್ 39.7 ಶೇಕಡಾವಾದರೆ ಔರಾ 90.6 ಶೇ. ರಷ್ಟು ಮಾರಾಟದದಲ್ಲಿ ಕೊಡುಗೆಯನ್ನು ನೀಡಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ 7 ತಿಂಗಳಲ್ಲಿ (ಏಪ್ರಿಲ್-ಅಕ್ಟೋಬರ್) ಹ್ಯುಂಡೈ ಮಾರಾಟದಲ್ಲಿ ಸಿಎನ್‌ಜಿ ಮಾದರಿಗಳ ಪಾಲು ಶೇಕಡಾ 12.8 ರಷ್ಟಿದೆ.

Hyundai CNG car

FY2024 ರ ಅಂತ್ಯದಲ್ಲಿ ಅಂದರೆ ಮಾರ್ಚ್‌ನಲ್ಲಿ ಹುಂಡೈನ ಒಟ್ಟು ಮಾರಾಟದಲ್ಲಿ ಸಿಎನ್‌ಜಿ ವಾಹನಗಳು 11.4 ಶೇಕಡಾವನ್ನು ಹೊಂದಿವೆ. ಗ್ರಾಮೀಣ ಮಾರುಕಟ್ಟೆಯಲ್ಲಿ ಹ್ಯುಂಡೈ ಸಿಎನ್‌ಜಿ ಮಾದರಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಗ್ರಾಮೀಣ ಪ್ರದೇಶಗಳಲ್ಲಿ, ಹುಂಡೈ ಸಿಎನ್‌ಜಿ ಕಾರುಗಳ ಮಾರುಕಟ್ಟೆ ಪಾಲು ಶೇಕಡಾ 12 ಕ್ಕೆ ಏರಿದೆ. ಆದರೆ ನಗರ ಮಾರುಕಟ್ಟೆಗಳಲ್ಲಿ ಇದು 10.7 ಶೇಕಡಾ ಆಗಿದೆ.

ಭಾರತದಲ್ಲಿ ಹುಂಡೈ ಸಿಎನ್‌ಜಿ ಕಾರುಗಳು ಮಾರಾಟವಾಗುವ ಪ್ರಮುಖ ಮೂರು ನಗರಗಳು ಪುಣೆ, ನವದೆಹಲಿ ಮತ್ತು ಅಹಮದಾಬಾದ್ ಆಗಿದೆ. ಇದರ ಹೊರತಾಗಿಯೂ, ಮಾರುತಿ ಸುಜುಕಿ ಭಾರತದಲ್ಲಿನ ಪ್ರಯಾಣಿಕ ಸಿಎನ್‌ಜಿ ವಾಹನ ಮಾರುಕಟ್ಟೆಯನ್ನು ಸುಮಾರು 72 ಪ್ರತಿಶತದಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಮೂಲಕ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಮುಂದುವರೆಸಿದೆ. ಇಂಡೋ-ಜಪಾನೀಸ್ ವಾಹನ ತಯಾರಕ ಸಂಸ್ಥೆಯು ತನ್ನ CNG ಶ್ರೇಣಿಯಲ್ಲಿ 1 ಡಜನ್‌ಗಿಂತಲೂ ಹೆಚ್ಚು ಮಾದರಿಗಳನ್ನು ಹೊಂದಿದೆ.

Hyundai CNG car

ಮಾರುತಿಯ ಒಟ್ಟು ಮಾರಾಟದಲ್ಲಿ ಸಿಎನ್‌ಜಿ ಕಾರುಗಳು ಶೇಕಡಾ 28 ರಷ್ಟು ಕೊಡುಗೆ ನೀಡುತ್ತವೆ. ಮಾರುತಿ ಡೀಸೆಲ್ ವಾಹನಗಳ ಮಾರಾಟವನ್ನು ನಿಲ್ಲಿಸಿದೆ ಮತ್ತು ಸಿಎನ್‌ಜಿ ಕಾರುಗಳ ಕೊರತೆಯನ್ನು ತುಂಬುತ್ತಿದೆ. FY2025 ರ ಮೊದಲಾರ್ಧದಲ್ಲಿ ಟಾಟಾ ಮೋಟಾರ್ಸ್‌ನ ಮಾರಾಟದಲ್ಲಿ ಸಿಎನ್‌ಜಿ ಮಾದರಿಗಳು 21 ಪ್ರತಿಶತವನ್ನು ಹೊಂದಿವೆ. ಕಳೆದ ವರ್ಷ ಇದು ಶೇ 16ರಷ್ಟಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, November 21, 2024, 11:52 [IST]
English summary
Hyundai cng cars sales increase in october 2024 details
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+