ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಉತ್ಪಾದನೆ ದೃಢಪಡಿಸಿದ ಹ್ಯುಂಡೈ: ಶೀಘ್ರದಲ್ಲೇ ಕ್ರೆಟಾ ಇವಿ?

ದೇಶದ ದೀರ್ಘಕಾಲೀನ ಭವಿಷ್ಯದ ಚಲನಶೀಲತೆ ಕಾರ್ಯತಂತ್ರಗಳ ಕುರಿತು ಇತ್ತೀಚೆಗೆ, ಹ್ಯುಂಡೈ ಮೋಟಾರ್ ಗ್ರೂಪ್ (ಎಚ್ಎಂಜಿ) ಕಾರ್ಯನಿರ್ವಾಹಕ ಅಧ್ಯಕ್ಷ ಯುಸುನ್ ಚುಂಗ್ ಭಾರತಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಭಾರತದಲ್ಲಿ ಎಚ್ಎಂಜಿ ಅಡಿಯಲ್ಲಿ ಹ್ಯುಂಡೈ ಮತ್ತು ಕಿಯಾ ಎರಡೂ ಬ್ರಾಂಡ್‌ಗಳಿಗೆ ಸಾಕಷ್ಟು ವಿಷಯಗಳನ್ನು ಚರ್ಚಿಸಲಾಯಿತು.

ಭಾರತೀಯ ಮಾರುಕಟ್ಟೆಗಾಗಿ ಇವಿ ಕಾರ್ಯತಂತ್ರವನ್ನು ವಿವರಿಸಿದ ಹ್ಯುಂಡೈ, ಮೊದಲ ಸ್ಥಳೀಯ ಇವಿ 2024 ರ ಅಂತ್ಯದ ವೇಳೆಗೆ ಉತ್ಪಾದನೆಗೆ ಹೋಗುತ್ತದೆ ಎಂದು ದೃಢಪಡಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ, ಭಾರತದಲ್ಲಿ ಹ್ಯುಂಡೈನ ಮೊದಲ ಸ್ಥಳೀಯ ಎಲೆಕ್ಟ್ರಿಕ್ ವಾಹನ (ಇವಿ) ಉತ್ಪಾದನೆಯಾಗಲಿದೆ. ಇದು 2025 ರ ಆರಂಭದಲ್ಲಿ ಸಂಭಾವ್ಯ ಮಾರುಕಟ್ಟೆ ಬಿಡುಗಡೆಯನ್ನು ಸೂಚಿಸುತ್ತಿದೆ. ನಮಗೆ ತಿಳಿದಿರುವಂತೆ ಭಾರತದಲ್ಲಿ ಹ್ಯುಂಡೈನ ಮೊದಲ ಸಾಮೂಹಿಕ-ಮಾರುಕಟ್ಟೆ ಇವಿ, ಕ್ರೆಟಾ ಇವಿ ಆಗಿರಲಿದೆ. ಇದಕ್ಕೆ ಸಾಕ್ಷಿಯೆಂಬಂತೆ ಕ್ರೆಟಾದ ಎಲೆಕ್ಟ್ರಿಕ್ ಆವೃತ್ತಿಯು ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಸಂದರ್ಭಗಳಲ್ಲಿ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ.

hyundai-confirms-production-of-electric-car-in-india

ಹ್ಯುಂಡೈ ಕ್ರೆಟಾ ಇವಿ ನಿರೀಕ್ಷಿತ ವಿಶೇಷತೆಗಳು: ವಿದೇಶದಲ್ಲಿ ಮಾರಾಟವಾಗುತ್ತಿರುವ ಇತ್ತೀಚಿನ ಎಂಟ್ರಿ ಲೆವೆಲ್ ಕೋನಾ ಎಲೆಕ್ಟ್ರಿಕ್ ಕಾರಿನ ಮೋಟಾರ್ ಅನ್ನು ಕ್ರೆಟಾ ಇವಿನಲ್ಲೂ ಬಳಸಲಾಗುತ್ತದೆ ಎಂದು ಈ ಹಿಂದೆ ಬಹಿರಂಗಪಡಿಸಲಾಗಿತ್ತು. ಇದರರ್ಥ ಇದು ಮುಂಭಾಗದ ಚಕ್ರಗಳನ್ನು ಚಾಲನೆ ಮಾಡುವ ಸಿಂಗಲ್ ಮೋಟರ್ ಸೆಟಪ್ ಹೊಂದಿರುತ್ತದೆ.

ಈ ಮೋಟಾರ್ 136 ಬಿಹೆಚ್‌ಪಿ ಪವರ್ ಮತ್ತು 255 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಉಳಿದಂತೆ ಕ್ರೆಟಾ ಇವಿ ತನ್ನ ಇಂಧನ ಚಾಲಿತ ಹ್ಯುಂಡೈ ಕ್ರೆಟಾದಂತೆ ಅದೇ ಪ್ಲಾಟ್ ಫಾರ್ಮ್ ಅನ್ನು ಆಧರಿಸಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಉಳಿದಂತೆ ಕ್ರೆಟಾ ಡಿಸೈನ್ ಬಹುತೇಕ ಒಂದೇ ಆಗಿರುತ್ತದೆ ಎಂದು ಮೂಲಗಳು ತಿಳಿಸಿವೆ.

Hyundai confirms production of electric car in India

ಇದರ ಬ್ಯಾಟರಿ ವಿಚಾರಕ್ಕೆ ಬಂದರೆ, ಕ್ರೆಟಾ ಇವಿ 45 ಕಿಲೋವ್ಯಾಟ್ ಲಿಥಿಯಂ - ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದುವ ಸಾಧ್ಯತೆಯಿದೆ. ಇದು ತನ್ನ ಪ್ರಾಥಮಿಕ ಪ್ರತಿಸ್ಪರ್ಧಿಗಳು ಬಳಸುವುದಕ್ಕಿಂತ ಸ್ವಲ್ಪ ಚಿಕ್ಕದಾಗಿದೆ. ಉದಾಹರಣೆಗೆ, ಎಂಜಿ ಝಡ್ಎಸ್ ಇವಿ 50.3 ಕಿಲೋವ್ಯಾಟ್ ಬ್ಯಾಟರಿಯನ್ನು ಪಡೆದಿದೆ. ಮಾರುತಿ ಸುಜುಕಿ ಇವಿಎಕ್ಸ್ (ಶೀಘ್ರದಲ್ಲಿ ಬಿಡುಗಡೆಯಾಗಲಿದೆ)ಎಂಟ್ರಿ ಲೆವೆಲ್ ರೂಪಾಂತರವು 48 ಕಿಲೋವ್ಯಾಟ್ ಮತ್ತು ಟಾಪ್ - ಸ್ಪೆಕ್ 60 ಕಿಲೋವ್ಯಾಟ್ ಯುನಿಟ್ ಎಂಬ ಎರಡು ಬ್ಯಾಟರಿ ಆಯ್ಕೆಗಳನ್ನು ನೀಡುವ ನಿರೀಕ್ಷೆಯಿದೆ. ಇವುಗಳಿಗೆ ಹೋಲಿಸಿಕೊಂರೆ ಕ್ರೆಟಾ ಇವಿ ಬ್ಯಾಟರಿ ಚಿಕ್ಕದೆಂದೇ ಹೇಳಬಹುದು.

ಸೋರಿಕಯಾಗಿದ್ದವು ಕ್ರೆಟಾ ಇವಿ ಚಿತ್ರಗಳು: ಇತ್ತೀಚಿನ ಸೋರಿಕೆಯಾದ ಚಿತ್ರಗಳ ಮೂಲಕ, ಕ್ರೆಟಾ ಇವಿಯ ಕ್ಯಾಬಿನ್ ಒಳಗಿನ ವಿನ್ಯಾಸವು ಇಂಧನ ಚಾಲಿತ ಕ್ರೆಟಾವನ್ನು ಹೋಲುತ್ತದೆ. ಎಲೆಕ್ಟ್ರಿಕ್ ಕ್ರೆಟಾ ಅನೇಕ ಕಂಟ್ರೋಲ್ ಬಟನ್‌ಗಳೊಂದಿಗೆ ಅದೇ 2-ಸ್ಪೋಕ್ ಸ್ಟೀರಿಂಗ್ ಅನ್ನು ಪಡೆಯಲಿದೆ. ಆದರೆ ಗಮನಿಸಲಾದ ಒಂದು ವಿಶಿಷ್ಟ ವೈಶಿಷ್ಟ್ಯವೆಂದರೆ ಸ್ಟೀರಿಂಗ್ ಕಾಲಮ್‌ನಲ್ಲಿ ಅಳವಡಿಸಲಾದ ಡ್ರೈವ್ ಸೆಲೆಕ್ಟರ್ ಇರುವುದು.

hyundai-confirms-production-of-electric-car-in-india

ಉಳಿದಂತೆ ಇದು ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್ ಮತ್ತು ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕನ್ಸೋಲ್, ಟ್ವಿನ್ ಸ್ಕ್ರೀನ್ ಸೆಟಪ್ ಅನ್ನು ಪಡೆಯುವ ನಿರೀಕ್ಷೆಯಿದೆ. ಉಳಿದಂತೆ ಹೆಚ್ಚಿನ ಡ್ಯಾಶ್ಬೋರ್ಡ್ ಕುರಿತ ಮಾಹಿತಿ ರಹಸ್ಯವಾಗಿದೆ. ಅದರ ಸರಿಯಾದ ಫೋಟೋಗಳು ಹೊರಬಂದ ನಂತರವೇ ವಿವರಗಳನ್ನು ದೃಢೀಕರಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, April 30, 2024, 8:30 [IST]
English summary
Hyundai confirms production of electric car in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+