Hyundai: ದಸರಾ, ದೀಪಾವಳಿಯಲ್ಲಿ ಈ ಕಾರಿಗೆ ಫುಲ್ ಡಿಮ್ಯಾಂಡ್: 17,497 ವಾಹನಗಳ ಮಾರಾಟ!
ಭಾರತದಲ್ಲಿ ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಬಹುತೇಕ ಎಲ್ಲಾ ಕಾರು ಕಂಪನಿಗಳು ಉತ್ತಮ ಮಾರಾಟ ಲಾಭವನ್ನು ಗಳಿಸಿವೆ. ಏಕೆಂದರೆ ದೇಶಾದ್ಯಂತ ಸಾಲು ಹಬ್ಬಗಳಿದ್ದರಿಂದ ಕಾರು ತಯಾರಕರು ಕೂಡ ಭರ್ಜರಿ ರಿಯಾಯಿತಿಗಳನ್ನು ನೀಡುವ ಮೂಲಕ ಗ್ರಾಹಕರ ಕನಸಿನ ಕಾರುಗಳ ಖರೀದಿಗೆ ಸಹಕರಿಸಿದ್ದರು. ಒಟ್ಟಾರೆ ದಸರಾ, ದೀಪಾವಳಿ ಹಬ್ಬಗಳು ಕಾರು ಕಂಪನಿಗಳಿಗೆ ಉತ್ತಮ ಲಾಭ ತಂದುಕೊಟ್ಟಿವೆ. ಎಂದಿನಂತೆ ಈ ಅಕ್ಟೋರ್‌ನಲ್ಲಿಯೂ ಅತೀ ಹೆಚ್ಚು ಮಾರಾಟವಾದ ಕಾರುಗಳಾಗಿ ಮಾರುತಿ ಎರ್ಟಿಗಾ, ಸ್ವಿಫ್ಟ್ ಹಾಗೂ ಹ್ಯುಂಡೈ ಕ್ರೆಟಾ ಕಾರುಗಳು ಟಾಪ್-3 ಸ್ಥಾನಗಳನ್ನು ಪಡೆದುಕೊಂಡಿವೆ. ಮೂರನೇ ಸ್ಥಾನದಲ್ಲಿರುವ ಕ್ರೆಟಾ ಮಾರಾಟ ವಿವರಗಳನ್ನು ನೋಡೋಣ.
ಮೊದಲೆರಡು ಸ್ಥಾನಗಳಲ್ಲಿರುವ ಎರ್ಟಿಗಾ ಹಾಗೂ ಸ್ವಿಫ್ಟ್ ಕಾರುಗಳ ಮಾರಾಟ ವಿವರಗಳಿಗಾಗಿ ಡ್ರೈವ್‌ಸ್ಪಾರ್ಕ್ ವೆಬ್‌ಸೈಟ್‌ಗೆ ಭೇಟಿ ನೀಡಿ. ಮೂರನೇ ಸ್ಥಾನದಲ್ಲಿರುವ ಹ್ಯುಂಡೈ ಕ್ರೆಟಾ, ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. 2023 ರ ಅಕ್ಟೋಬರ್‌ನಲ್ಲಿ ಮಾರಾಟವಾಗಿದ್ದ 13,077 ಕಾರುಗಳಿಗೆ ಹೋಲಿಸಿದರೆ 2024 ರ ಅಕ್ಟೋಬರ್‌ನಲ್ಲಿ 17,497 ಕಾರುಗಳು ಮಾರಾಟವಾಗುವ ಮೂಲಕ ಶೇ34 ರಷ್ಟು ಬೆಳವಣಿಗೆ ಸಾಧಿಸಿದೆ.

ಹ್ಯುಂಡೈ ಕ್ರೆಟಾ ವಿಶೇಷತೆಗಳು: ಎರಡನೇ ತಲೆಮಾರಿನ ಹ್ಯುಂಡೈ ಕ್ರೆಟಾ ಬೆಲೆಯು ರೂ. 11 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್-ಶೋರೂಂ). ಹುಂಡೈ ಕ್ರೆಟಾವು E, EX, S, S(O), SX, SX Tech, ಮತ್ತು SX(O) ಎಂಬ ಏಳು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಪ್ರತಿಯೊಂದು ರೂಪಾಂತರವು ವಿಭಿನ್ನ ವೈಶಿಷ್ಟ್ಯಗಳನ್ನು ಹೊಂದಿದೆ. ರೂಪಾಂತರಗಳ ಅನುಗುಣವಾಗಿ ಫೀಚರ್ಸ್ ಬಗ್ಗೆ ಮಾಹಿತಿ ಇಲ್ಲಿದೆ.
ಅಂದರೆ SUV ಏಳು ವಿಭಿನ್ನ ಟ್ರಿಮ್‌ಗಳಲ್ಲಿ ಬರಲಿದ್ದು, ಇದರ ಮೂಲ E ವೇರಿಯೆಂಟ್‌ಗೆ 10.99 ಲಕ್ಷ ಮತ್ತು SX(O) ಟಾಪ್-ಎಂಡ್ ಮಾದರಿಗೆ ರೂ. 20.30 ಲಕ್ಷ (ಎಲ್ಲಾ ಬೆಲೆಗಳು, ಎಕ್ಸ್ ಶೋರೂಂ) ಬೆಲೆಯಿದೆ. ಡ್ಯುಯಲ್ ಇಂಟಿಗ್ರೇಟೆಡ್ 10.25-ಇಂಚಿನ ಡಿಸ್ಪ್ಲೇಯಿದ್ದು, ಇದರಲ್ಲಿ ಒಂದು ಇನ್ಫೋಟೈನ್ಮೆಂಟ್ ಸಿಸ್ಟಮ್ ಹಾಗೂ ಇನ್ನೊಂದು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ನೀಡಲಾಗಿದೆ.

ಇವಿಷ್ಟೇ ಅಲ್ಲದೇ ಹೊಸ ಕ್ರೆಟಾ ಫೇಸ್‌ಲಿಫ್ಟ್ ಕಾರಿನಲ್ಲಿ ಪರಿಷ್ಕೃತ ಕ್ಲೈಮೆಟ್ ಕಂಟ್ರೋಲ್ ಪ್ಯಾನಲ್, ಪನಾರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು 8-ಸ್ಪೀಕರ್ ಬಾಸ್ ಸೌಂಡ್ ಸಿಸ್ಟಮ್ ಅನ್ನು ನೀಡಲಾಗಿದೆ. ಜೊತೆಗೆ 360-ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳೊಂದಿಗೆ (ADAS) ಡ್ಯುಯಲ್-ಜೋನ್ AC ಯೊಂದಿಗೆ ಒದಗಿಸಲಾಗಿದೆ.
1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿರುವ ಕ್ರೆಟಾ ಕಾರು, 1.5 ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹಾಗೂ ಹೊಸ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 6-ಸ್ಪೀಡ್ ಎಂಟಿ, 6-ಸ್ಪೀಡ್ ಎಟಿ, 6-ಸ್ಪೀಡ್ MT, CVT ಹಾಗೂ 7-ಸ್ಪೀಡ್ DCT ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ.

ಸುರಕ್ಷತೆಯ ವಿಷಯದಲ್ಲಿ ಆರು ಏರ್‌ಬ್ಯಾಗ್‌ಗಳು, ಹಿಂದಿನ ಸೀಟ್ 2 - ಸ್ಟೆಪ್ ರಿಕ್ಲೈನ್ ಫಂಕ್ಷನ್ ಮತ್ತು ದುಬಾರಿ ಪ್ಯಾಕೇಜ್ ಜೊತೆಗೆ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ISOFIX ಚೈಲ್ಡ್ ಸೀಟ್ ಆಂಕರೇಜ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿಯನ್ನು ಒಳಗೊಂಡಿದೆ. ಇಷ್ಟು ಫೀಚರ್ಸ್ ಒಳಗೊಂಡಿರುವ ಹೊಸ ಹುಂಡೈ CRETA ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








