Hyundai Creta: ಹ್ಯುಂಡೈ ಕ್ರೆಟಾ ಮಾಲೀಕರೇ... ನಿಮ್ಮ ಕಾರು ಹೊಸ ದಾಖಲೆ ನಿರ್ಮಿಸಿದೆ ನೋಡಿ!

ಹ್ಯುಂಡೈ ಭಾರತದಲ್ಲಿ 10 ಲಕ್ಷ ಕ್ರೆಟಾ (CRETA) ಕಾರುಗಳನ್ನು ಮಾರಾಟ ಮಾಡುವ ಮೂಲಕ ಹೊಸ ಮೈಲಿಗಲ್ಲನ್ನು ಸಾಧಿಸಿದೆ. 2015 ರಲ್ಲಿ ಬಿಡುಗಡೆಯಾದ ಈ SUV ತನ್ನ ಆಕರ್ಷಕ ವಿನ್ಯಾಸ, ಅದ್ಭುತ ಪರ್ಫಾಮೆನ್ಸ್, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ತನ್ನ ಸೆಗ್ಮೆಂಟ್‌ನಲ್ಲಿ ಅತ್ಯುತ್ತಮ ಸೌಕರ್ಯ, ಅನುಕೂಲಕರ ವೈಶಿಷ್ಟ್ಯಗಳಿಂದ ಗ್ರಾಹಕರಿಂದ ಮೆಚ್ಚುಗೆ ಪಡೆದಿದೆ.

2015 ರಲ್ಲಿ ಬಿಡುಗಡೆಯಾದ ಹ್ಯುಂಡೈ ಕ್ರೆಟಾ ಮಾದರಿಯು ಗ್ರಾಹಕರು ಮತ್ತು ವಿಮರ್ಶಕರ ನಡುವೆ ತ್ವರಿತವಾಗಿ ಹಿಟ್ ಆಗಿತ್ತು. ಕಳೆದ 8 ವರ್ಷಗಳಲ್ಲಿ Hyundai CRETA ಭಾರತದಲ್ಲಿ ಹೆಚ್ಚು ಮಾರಾಟವಾಗುವ ಮಧ್ಯಮ ಗಾತ್ರದ SUV ಆಗಿಯು ಜನಪ್ರಿಯತೆ ಪಡೆದಿದೆ. ಕಂಪನಿಯ ಪ್ರಕಾರ ಪ್ರತಿ 5 ನಿಮಿಷಕ್ಕೆ 1 CRETA ಮಾರಾಟವಾಗಿದೆ. ಹೆಚ್ಚು ಪ್ರಶಸ್ತಿ ಪಡೆದ SUV ಆಗಿಯೂ ಕ್ರೆಟಾ ಮಾದರಿ ಕಂಪನಿಯ ಯಶಸ್ವಿ ಮಾದರಿ ಎನಿಸಿಕೊಂಡಿದೆ.

hyundai-creta-achieves-1-million-sales-milestone-in-india

ದೇಶೀಯ ಮಾರುಕಟ್ಟೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳು ಮತ್ತು ರಫ್ತು ಮಾರುಕಟ್ಟೆಯಲ್ಲಿ 2.80 ಲಕ್ಷ ಯುನಿಟ್‌ಗಳ ಸಂಚಿತ ಮಾರಾಟವನ್ನು ದಾಖಲಿಸಿದೆ. ಇದು 'ಮೇಕ್ ಇನ್ ಇಂಡಿಯಾ' ಕಡೆಗೆ ಹ್ಯುಂಡೈ ಮೋಟಾರ್ ಇಂಡಿಯಾದ ಬದ್ಧತೆಯನ್ನು ಬಲಪಡಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಹ್ಯುಂಡೈ ಪ್ರಸ್ತುತ ಭಾರತದಾದ್ಯಂತ 1,366 ಮಾರಾಟ ಕೇಂದ್ರಗಳು ಮತ್ತು 1,549 ಸೇವಾ ಕೇಂದ್ರಗಳನ್ನು ಹೊಂದಿದೆ.

ಸ್ಟ್ರಾಂಗ್ ಮಾಡೆಲ್ ಲೈನ್-ಅಪ್ ವಿಭಾಗಗಳಾದ್ಯಂತ 13 ಕಾರು ಮಾದರಿಗಳನ್ನು ಹ್ಯುಂಡೈ ಒಳಗೊಂಡಿದೆ. ಗ್ರಾಂಡ್ i10 NIOS, i20, i20 N ಲೈನ್, ಔರಾ, ಎಕ್ಸ್‌ಟರ್, ವೆನ್ಯೂ, ವೆನ್ಯೂ-ಎನ್ ಲೈನ್, ವೆರ್ನಾ, ಕ್ರೆಟಾ, ಅಲ್ಕಜಾರ್, ಟಕ್ಸನ್, ಕೋನಾ ಎಲೆಕ್ಟ್ರಿಕ್ ಮತ್ತು ಆಲ್-ಎಲೆಕ್ಟ್ರಿಕ್ SUV ಐಯಾನಿಕ್ 5 ಮಾದರಿಗಳೊಂದಿಗೆ ಭಾರತದಲ್ಲಿ ಉತ್ತಮ ವಾಹನಗಳನ್ನು ನೀಡುತ್ತಿದೆ.

hyundai-creta-achieves-1-million-sales-milestone-in-india

ಚೆನ್ನೈ ಬಳಿಯ ಹ್ಯುಂಡೈನ ಸಂಪೂರ್ಣ ಸಂಯೋಜಿತ ಉತ್ಪಾದನಾ ಘಟಕವು ಸುಧಾರಿತ ಉತ್ಪಾದನೆ, ಗುಣಮಟ್ಟ ಮತ್ತು ಪರೀಕ್ಷಾ ಸಾಮರ್ಥ್ಯಗಳನ್ನು ಹೊಂದಿದೆ. ಇದು ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ಜಾಗತಿಕ ರಫ್ತು ಕೇಂದ್ರದ ನಿರ್ಣಾಯಕ ಭಾಗವಾಗಿದೆ. ಜೊತೆಗೆ ಆಫ್ರಿಕಾ, ಮಧ್ಯಪ್ರಾಚ್ಯ, ಲ್ಯಾಟಿನ್ ಅಮೇರಿಕಾ, ಆಸ್ಟ್ರೇಲಿಯಾ ಮತ್ತು ಏಷ್ಯಾ ಪೆಸಿಫಿಕ್‌ನಾದ್ಯಂತ 88 ದೇಶಗಳಿಗೆ ಇಲ್ಲಿಂದ ರಫ್ತು ಮಾಡುತ್ತದೆ.

ಕ್ರೆಟಾ ಮೈಲಿಗಲ್ಲಿನ ಕುರಿತು ಪ್ರತಿಕ್ರಿಯಿಸಿದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ತರುಣ್ ಗಾರ್ಗ್, "ಹ್ಯುಂಡೈ ಕ್ರೆಟಾ ಭಾರತೀಯ ಗ್ರಾಹಕರ ಹೃದಯವನ್ನು ವಶಪಡಿಸಿಕೊಂಡಿರುವ ಮತ್ತು ಭಾರತವನ್ನು 'ಲೈವ್ ದಿ ಎಸ್‌ಯುವಿ ಲೈಫ್' ಮಾಡುವ ಬ್ರ್ಯಾಂಡ್ ಆಗಿದೆ. ಭಾರತೀಯ ರಸ್ತೆಗಳಲ್ಲಿ 1 ಮಿಲಿಯನ್ ಕ್ರೆಟಾಗಳೊಂದಿಗೆ, 'CRETA' ಬ್ರ್ಯಾಂಡ್ ನಿರ್ವಿವಾದ SUV ಎಂಬ ತನ್ನ ಪರಂಪರೆಯನ್ನು ಪುನರುಚ್ಚರಿಸಿದೆ ಎಂದರು.

hyundai-creta-achieves-1-million-sales-milestone-in-india

ಇತ್ತೀಚೆಗೆ ಬಿಡುಗಡೆಯಾದ ಹೊಸ ಹ್ಯುಂಡೈ CRETA ಸಹ ಅಗಾಧ ಗ್ರಾಹಕರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಪ್ರಕಟಣೆಯ ನಂತರ 60,000 ಬುಕಿಂಗ್‌ಗಳನ್ನು ದಾಟಿದೆ. CRETA ಗಾಗಿ ನಮ್ಮ ಗ್ರಾಹಕರು ತೋರಿಸಿದ ಪ್ರೀತಿ ಮತ್ತು ನಂಬಿಕೆಗೆ ನಾವು ಅತ್ಯಂತ ಕೃತಜ್ಞರಾಗಿರುತ್ತೇವೆ. ಕ್ರಾಂತಿಕಾರಿ ತಂತ್ರಜ್ಞಾನಗಳ ಪರಿಚಯದಲ್ಲಿ ಮುಂಚೂಣಿಯಲ್ಲಿರುವವರಾಗಿ, ನಾವು ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುವುದನ್ನು ಮುಂದುವರಿಸುತ್ತೇವೆ ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Article Published On: Monday, February 19, 2024, 17:42 [IST]
English summary
Hyundai creta achieves 1 million sales milestone in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+