ರಗಡ್‌ ಲುಕ್‌ನಲ್ಲಿ ಕಂಡು ಬಂದ ಹ್ಯುಂಡೈ ಕ್ರೇಟಾ: ಇದು ಸಾಮಾನ್ಯ ಕಾರಲ್ಲ, ಪಕ್ಕಾ 'ಆಲ್ಫಾ'!

ಹ್ಯುಂಡೈ ಕ್ರೇಟಾ ಎಂದರೆ ಸಾಕು, ಈ ಕಾರಿನ ಅಭಿಮಾನಿಗಳು ದೇಶದ ಮೂಲೆ ಮೂಲೆಗಳಲ್ಲಿ ಇದ್ದಾರೆ. ಹ್ಯುಂಡೈ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಪ್ರಮುಖ ಕಾರುಗಳಲ್ಲಿ ಇದು ಅಗ್ರ ಸ್ಥಾನದಲ್ಲಿದೆ. ಈ ವರ್ಷದ ಆರಂಭದಲ್ಲಿಯೇ ಹ್ಯುಂಡೈ, ಫೇಸ್‌ಲಿಫ್ಟ್‌ ಮಾದರಿಯನ್ನು ಕ್ರೇಟಾ ಕಾರಿಗೆ ನೀಡಿ, ಎಲ್ಲರ ಗಮನ ಸೆಳೆದಿತ್ತು.

ಇದೀಗ ಹ್ಯುಂಡೈ ಕಂಪನಿಯು ಈ ಕಾರಿಗೆ ಹೊಸ ಅಪ್‌ಡೇಟ್ ಒಂದನ್ನು ತಂದಿದೆ. ಕ್ರೇಟಾ ಕಡೆಗೆ ಮತ್ತಷ್ಟು ಗ್ರಾಹಕರನ್ನು ಕರೆ ತರುವುದಕ್ಕಾಗಿ ಹ್ಯುಂಡೈ ಈ ಕಾರಿಗೆ ಹೊಸ ಎಡಿಷನ್‌ ಒಂದನ್ನು ಅನಾವರಣ ಗೊಳಿಸಿದೆ. 2024 ಬ್ಯಾಂಕಾಕ್‌ ಮೋಟಾರ್‌ ಶೋ ದಲ್ಲಿ ಹ್ಯುಂಡೈಯು, ಕ್ರೇಟಾ ಕಾರಿನ ಆಲ್ಫಾ ಎಡಿಷನ್‌ ಅನ್ನು ಪ್ರದರ್ಶನಕ್ಕೆ ಇಟ್ಟಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

Hyundai Creta Alpha Edition To Features You Need To Know

ಕ್ರೇಟಾ ಆಲ್ಫಾ ಎಡಿಷನ್‌ ಬಗ್ಗೆ ನೋಡುವುದಾದರೆ, ಇದು ಮ್ಯಾಟ್‌ ಬ್ಲಾಕ್‌ ಕಲರ್‌ನಲ್ಲಿ ಬರುತ್ತಿದೆ. ಕಾರುಗಳಿಗೆ ಸಾಧಾರಣವಾಗಿ ಮ್ಯಾಟ್‌ ಫಿನಿಶಂಗ್‌ ಬಣ್ಣಗಳು ಸಾಕಷ್ಟು ಆಕರ್ಷಕವಾಗಿ ಕಾಣುತ್ತದೆ. ಮ್ಯಾಟ್‌ ಬ್ಲಾಕ್‌ ಬಣ್ಣ ಕ್ರೇಟಾ ಕಾರಿನ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇಷ್ಟು ಮಾತ್ರವಲ್ಲದೇ ಈ ಎಡಿಷನ್‌ನಲ್ಲಿ ಟ್ಯೂಸಾನ್‌ ಪ್ರೇರಿತವಾದ ಗ್ರಿಲ್‌ ಸಹ ಸಿಗುತ್ತಿದೆ. ಡಾರ್ಕ್‌ ಕ್ರೋಮ್‌ ಫಿನಿಶಿಂಗ್‌ನಲ್ಲಿ ಸಿಗುವ ಈ ಗ್ರಿಲ್‌, ಮುಂಭಾಗದಿಂದ ಅಗ್ರೆಸಿವ್‌ ಲುಕ್‌ ಅನ್ನು ನೀಡುತ್ತದೆ. ಇದರ ಜೊತೆಗೆ ಆಲ್ಫಾ ಎಡಿಷನ್‌ನಲ್ಲಿ ಗ್ಲಾಸ್‌ ಬ್ಲಾಕ್‌ ಕಣ್ಣದ ಅಲಾಯ್‌ ವ್ಹೀಲ್‌ಗಳು, ಇದೇ ಬಣ್ಣದ ಸಿ ಪಿಲ್ಲರ್‌ಗಳು, ಶಾರ್ಕ್‌ ಫಿನ್‌ ಆ್ಯಂಟೆನಾ ಮತ್ತು ಆಕರ್ಷಕ ಸ್ಪಾಯ್‌ಲರ್‌ಗಳು ಸಹ ಸಿಗುತ್ತದೆ.

Hyundai Creta Alpha Edition To Features You Need To Know

ಸದ್ಯ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್, ರೂ.11 ಲಕ್ಷದಿಂದ ರೂ.20.15 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಅತ್ಯಾಧುನಿಕ ವಿನ್ಯಾಸವನ್ನು ಹೊಂದಿರುವ ಈ ಕಾರು, ಫಿಯರಿ ರೆಡ್, ರೇಂಜರ್ ಖಾಕಿ, ಅಬಿಸ್ ಬ್ಲ್ಯಾಕ್, ಅಟ್ಲಾಸ್ ವೈಟ್, ಟೈಟಾನ್ ಗ್ರೇ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಜೊತೆಗೆ 5 ಆಸನ ಆಯ್ಕೆ ವ್ಯವಸ್ಥೆಯನ್ನು ಕೂಡ ಪಡೆದಿದೆ.

ಈ ಕಾರು 2 ಪೆಟ್ರೋಲ್ ಹಾಗೂ 1 ಡೀಸೆಲ್ ಪವರ್ ಟ್ರೇನ್ ಆಯ್ಕೆಯಲ್ಲಿ ದೊರೆಯುತ್ತದೆ. ಇದರ 1.5-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 115 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 144 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 160 ಪಿಎಸ್ ಪವರ್, 253 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ.

Hyundai Creta Alpha Edition To Features You Need To Know

ಮತ್ತೊಂದು 1.5-ಲೀಟರ್ ಡೀಸೆಲ್ ಎಂಜಿನ್ 116 ಪಿಎಸ್ ಪವರ್ ಹಾಗೂ 250 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಸ್‌ಯುವಿಯು ರೂಪಾಂತರಗಳಿಗೆ ಅನುಗುಣವಾಗಿ 6-ಸ್ವೀಡ್ ಮ್ಯಾನುವಲ್, 6-ಸ್ವೀಡ್ ಆಟೋಮೆಟಿಕ್, ಸಿವಿಟಿ, 7-ಸ್ವೀಡ್ ಡಿಸಿಟಿ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಪೆಟ್ರೋಲ್ ರೂಪಾಂತರಗಳು 17.4 ರಿಂದ 18.4 ಕೆಎಂಪಿಎಲ್ ಹಾಗೂ ಡೀಸೆಲ್ ಮಾದರಿಗಳು 19.1 ರಿಂದ 21.8 ಮೈಲೇಜ್ ಕೊಡುತ್ತವೆ.

ನೂತನ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‌ಯುವಿ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. 10.25-ಇಂಚಿನ ಡುಯಲ್ ಡಿಸ್ಪ್ಲೇ (ಇನ್ಫೋಟೈನ್‌ಮೆಂಟ್ ಸಿಸ್ಟಮ್‌ & ಇನ್ಸ್ಟ್ರುಮೆಂಟ್ ಕ್ಲಸ್ಟರ್) ಡುಯಲ್ ಝೋನ್ ಎಸಿ, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್ ಅನ್ನು ಹೊಂದಿದೆ.

Article Published On: Tuesday, May 21, 2024, 16:17 [IST]
English summary
Hyundai creta alpha edition to features you need to know
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+