Hyundai Creta EV: ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೆ ಬರಲಿದೆ... ನಿರೀಕ್ಷಿತ ಬೆಲೆ, ವೈಶಿಷ್ಟ್ಯಗಳಿವು!

ಹ್ಯುಂಡೈ' ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಮುನ್ನುಗ್ಗಲು ತನ್ನ ಬ್ರಹ್ಮಾಸ್ತ್ರವಾದ ಕ್ರೆಟಾವನ್ನು ಇಳಿಸಲು ಸಜ್ಜಾಗುತ್ತಿದೆ. ಇತ್ತೀಚೆಗೆ ಕ್ರೆಟಾ ಎಲೆಕ್ಟ್ರಿಕ್ ಕಾರಿನ ರೋಡ್‌ ಟೆಸ್ಟ್‌ ನಡೆಸುತ್ತಿದ್ದಾಗ ಕ್ಯಾಮರಾಗೆ ಕಾಣಿಸಿಕೊಂಡಿತ್ತು. ದಕ್ಷಿಣ ಕೊರಿಯಾದಲ್ಲಿ ಈ ಕಾರಿನ ಪರೀಕ್ಷೆಗಳು ಜೋರಾಗಿ ನಡೆಯುತ್ತಿದ್ದು, ಕಂಪನಿ ಅಂದುಕೊಂಡಂತೆ ಪರೀಕ್ಷೆಗಳನ್ನು ಯಶಸ್ವಿಯಾಗಿಸಿದರೆ ಮಾರ್ಚ್ 2025 ರ ವೇಳೆಗೆ ಬಿಡುಗಡೆಯಾಗಲಿದೆ.

ಮೂಲಗಳ ಪ್ರಕಾರ ಹೊಸ Hyundai Creta Electric Car ತನ್ನ ಪೆಟ್ರೋಲ್ ಚಾಲಿತ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಮಾದರಿಯಂತೆ ಇರಲಿದೆ. ಇಂಟೀರಿಯರ್ ಕೂಡ ಬಹುತೇಕ ಒಂದೇ ರೀತಿ ಇರಲಿದ್ದು, ಕೆಲವು ಫೀಚರ್‌ಗಳನ್ನು ಮಾತ್ರ ಹ್ಯುಂಡೈ ಐಯಾನಿಕ್-5 ನಿಂದ ಎರವಲು ಪಡೆಯಲಿದೆ. ಈ ಕಾರಿನ ಬಿಡುಗಡೆ ವೇಳೆಗೆ ಟಾಟಾ, ಮಹೀಂದ್ರಾ, ಮಾರುತಿ ಮತ್ತು ಎಂಜಿ ಮೋಟಾರ್‌ ಇವಿ ಕಾರುಗಳ ವಿರುದ್ಧ ಸ್ಪರ್ಧಿಸಬೇಕಾಗುತ್ತದೆ.

hyundai-creta-electric-car-coming-soon-expected-price-features

ಈ ಎಲ್ಲಾ ಬ್ರಾಂಡ್‌ಗಳ ಪ್ರಮುಖ ಮಾದರಿಗಳಾದ ಟಾಟಾ ಕರ್ವ್ ಇವಿ, ಮಹೀಂದ್ರಾ ಎಕ್ಸ್‌ಯುವಿ 400, ಎಂಜಿ ಝಡ್‌ಎಸ್‌ ಇವಿ, ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರಿನ ನಡುವೆ ಪೈಪೋಟಿ ಇರಲಿದೆ. ಸದ್ಯ ಹ್ಯುಂಡೈ ತನ್ನ ಎಲೆಕ್ಟ್ರಿಕ್ ಕಾರಿನ ಬಗ್ಗೆ ಯಾವುದೇ ಮಾಹಿತಿಯನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. ಆದರೆ ಕ್ರೆಟಾವನ್ನು ಆಧರಿಸಿರುವ ಕಾರಣ ಉದ್ದಳತೆಗಳಲ್ಲಿ ಇಂಧನ ಚಾಲಿತ ಕ್ರೆಟಾದಂತೆಯೇ ಇರಲಿದೆ ಎಂದು ನೀರೀಕ್ಷಿಸಲಾಗಿದೆ.

ಎಲೆಕ್ಟ್ರಿಕ್ ಆವೃತ್ತಿಯಾಗಿರುವುದರಿಂದ ಕ್ರೆಟಾ ಇವಿಯಲ್ಲಿ ಕಡಿಮೆ ಬೂಟ್‌ ಸ್ಪೇಸ್ ಇರಲಿದೆ. ಅಂದರೆ ಈಗಿರುವ ಕ್ರೆಟಾದಲ್ಲಿ 433 ಲೀಟರ್ ಬೂಟ್‌ ಇದ್ದು, ಕ್ರೆಟಾ ಇವಿಯಲ್ಲಿ ಇದಕ್ಕಿಂತ ಕಡಿಮೆ ಬೂಟ್‌ ಇರಬಹುದು ಎಂದು ಅಂದಾಜಿಸಲಾಗಿದೆ. ಹಾಗೆಯೇ ಕಾರಿನ ಅಡಿಯಲ್ಲಿ ಬ್ಯಾಟರಿ ಬರುವ ಕಾರಣ ವೀಲ್ ಬೇಸ್‌ ಹೆಚ್ಚಾಗಿ ಇರಲಿದೆ. ಒಳಭಾಗದಲ್ಲಿ ಸಾಕಷ್ಟು ಸ್ಥಳಾವಕಾಶ ಇರುವ ಸಾಧ್ಯತೆ ಇದೆ.

hyundai-creta-electric-car-coming-soon-expected-price-features

ಬ್ಯಾಟರಿ ಹಾಗೂ ರೇಂಜ್: ಮಹೀಂದ್ರಾ ಹೊರತುಪಡಿಸಿ, ಹ್ಯುಂಡೈ ತನ್ನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಅತ್ಯಂತ ಚಿಕ್ಕ ಬ್ಯಾಟರಿ ಪ್ಯಾಕ್ ಅನ್ನು ಹೊಂದುವ ಸಾಧ್ಯತೆಯಿದೆ. ಆದರೂ ARAI-ರೇಟೆಡ್ ರೇಂಜ್ ತನ್ನ ಪ್ರತಿಸ್ಪರ್ಧಿಗಳಿಗೆ ಸಮಾನವಾಗಿರುತ್ತದೆ. LG Chem ಮೂಲದ 45 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ ಹೊಂದಿರಲಿದ್ದು, ಒಮ್ಮೆ ಚಾರ್ಜ್‌ ಮಾಡಿದರೆ ಸುಮಾರು 250 ಕಿ.ಮೀ ರೇಂಜ್ ನೀಡಲಿದೆ ಎಂದು ಹೇಳಲಾಗುತ್ತಿದೆ.

ಕ್ರೆಟಾ ಇವಿ ತನ್ನ ವೈಶಿಷ್ಟ್ಯಗಳ ಪಟ್ಟಿಯನ್ನು ಸ್ಟ್ಯಾಂಡರ್ಡ್ ಮಿಡ್‌ಸೈಜ್ ಎಸ್‌ಯುವಿಯೊಂದಿಗೆ ಹಂಚಿಕೊಳ್ಳುವ ಸಾಧ್ಯತೆಯಿದೆ, ಆದ್ದರಿಂದ ರೇಂಜ್-ಟಾಪಿಂಗ್ ರೂಪದಲ್ಲಿ, ಇದು ಎಲ್ಲಾ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಇದು ಹೀಗಿದ್ದರೆ 2026ರ ವೇಳೆಗೆ, ಅರ್ಬನ್ ಎಸ್‌ಯುವಿ ಪರಿಕಲ್ಪನೆಯನ್ನು ಆಧರಿಸಿದ ಟೊಯೊಟಾ ಇವಿಎಕ್ಸ್ ಕಾರು ಬಿಡುಗಡೆಯಾಗಿ ಕ್ರೆಟಾ ಇವಿಗೆ ಪ್ರತಿಸ್ಪರ್ಧಿಯಾಗಲಿದೆ.

hyundai-creta-electric-car-coming-soon-expected-price-features

ನಿರೀಕ್ಷಿತ ಬೆಲೆ: ಕ್ರೆಟಾ ಇವಿ ಮತ್ತು ಟಾಟಾ ಕರ್ವ್ ಇವಿ ಬಹುತೇಕ ಒಂದೇ ಬೆಲೆಗಳಲ್ಲಿ ಬಿಡುಗಡೆಯಾಗಲಿವೆ. ಅಂದಾಜು ಬೆಲೆಯು 20 ಲಕ್ಷ ರೂ. ಒಳಗೆ ಇರುವ ನಿರೀಕ್ಷೆಯಿದೆ. ಸದ್ಯ Xuv400 ಕೈಗೆಟುಕುವ ಮಧ್ಯಮ ಗಾತ್ರದ ಇವಿಯಾಗಿದೆ. ಇದರ ಬೆಲೆಯು ರೂ. 15.49 - 17.49 ಲಕ್ಷ ರೂ. ನಡುವೆ ಇದೆ. ಎಂಜಿ ಝಡ್ಎಸ್ ಇವಿ 18.98 - 24.98 ಲಕ್ಷ ರೂ.ಗಳವರೆಗೆ ಬೆಲೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, March 22, 2024, 13:34 [IST]
English summary
Hyundai creta electric car coming soon expected price features
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+