Hyundai: ಭಾರತದಲ್ಲಿ ಹೊಸ ಅಲೆ ಎಬ್ಬಿಸಲು ಹ್ಯುಂಡೈ ಸಜ್ಜು: ಹೊಸ ಕಾರು ಯಾವುದು ಗೊತ್ತಾ?

ತನ್ನ ಇಂಧನ ಚಾಲಿತ ಕಾರುಗಳಲ್ಲಿ ಭಾರೀ ಜನಪ್ರಿಯತೆ ಪಡೆದಿರುವ ಕ್ರೆಟಾವನ್ನು ಈಗ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಪರಿಚಯಿಸಲು ಹ್ಯುಂಡೈ ಕಂಪನಿ ಸಜ್ಜಾಗುತ್ತಿದೆ. ಮೂಲಗಳ ಪ್ರಕಾರ 2025 ರಲ್ಲಿ ದೆಹಲಿಯಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋದಲ್ಲಿ ಹೊಸ ಎಲೆಕ್ಟ್ರಿಕ್ ಕ್ರೆಟಾವನ್ನು ಹ್ಯುಂಡೈ ಕಂಪನಿ ಪರಿಚಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮಧ್ಯಮ ವಿಭಾಗದಲ್ಲಿ ಸ್ಪರ್ಧಾತ್ಮಕ ಬೆಲೆಗೆ ಇದು ಬಿಡುಗಡೆಯಾಗಲಿದೆ. ಕ್ರೆಟಾ ಎಲೆಕ್ಟ್ರಿಕ್ ಕಾರನ್ನು ಭಾರತೀಯ ರಸ್ತೆಗಳಲ್ಲಿ ಹೆಚ್ಚಾಗಿ ಪರೀಕ್ಷಿಸಲಾಗುತ್ತಿದೆ, ಇದಕ್ಕೆ ಸಂಬಂಧಿಸಿದ ಹಲವು ವಿಡಿಯೋಗಳು ಹಾಗೂ ಚಿತ್ರಗಳು ಕೂಡ ವೈರಲ್ ಆಗಿವೆ.

ಮುಂದಿನ ವರ್ಷದ ಮೊದಲ ತಿಂಗಳಲ್ಲಿ ಎಲೆಕ್ಟ್ರಿಕ್ ಕ್ರೆಟಾವನ್ನು ದೇಶೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಗುವುದು ಎಂದು ಇತ್ತೀಚೆಗೆ ನಡೆದ ಹೂಡಿಕೆದಾರರ ಸಭೆಯೊಂದರಲ್ಲಿ ಹ್ಯುಂಡೈ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ತರುಣ್ ಗರ್ಗ್ ಸುಳಿವು ನೀಡಿದ್ದಾರೆ. ಮತ್ತೊಂದೆಡೆ ಭಾರತದಲ್ಲಿ ಕ್ರೆಟಾ ಇವಿ ಗೇಮ್ ಚೇಂಜರ್ ಆಗಲಿದೆ ಎಂದು ಸಿಇಒ ಉನ್ಸೂ ಕಿಮ್ ಕೂಡ ಭವಿಷ್ಯ ನುಡಿದಿದ್ದಾರೆ.

hyundai-creta-ev-launch-date-price-fetures-details

ಕ್ರೆಟಾ ಇವಿ ವಿಶೇಷತೆಗಳು: 10.25-ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇ ಮತ್ತು 10.25-ಇಂಚಿನ ಡಿಜಿಟಲ್ ಕನ್ಸೋಲ್ ಹೊಂದಿರಲಿದೆ. ವಿಶಿಷ್ಟ ಶೈಲಿಯ ಸ್ಟೀರಿಂಗ್ ವೀಲ್ ಮತ್ತು ಸ್ಟೀರಿಂಗ್ ಕಾಲಮ್-ಮೌಂಟೆಡ್ ಡ್ರೈವ್ ಮೋಡ್ ಸೆಲೆಕ್ಟರ್, 6-ಏರ್ ಬ್ಯಾಗ್‌ಗಳು, ಲೆವೆಲ್ 2 ADAS, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಪನೋರಮಿಕ್ ಸನ್ ರೂಫ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿರಲಿದೆ.

ಕ್ಲೋಸ್ಡ್-ಆಫ್ ಫ್ರಂಟ್ ಗ್ರಿಲ್ ಮತ್ತು ಹೊಸ 18-ಇಂಚಿನ ಏರೋ-ಇನ್ಸರ್ಟ್ ವೀಲ್‌ಗಳೊಂದಿಗೆ ಕೆಲವು ವಿನ್ಯಾಸ ನವೀಕರಣಗಳನ್ನು ಪಡೆಯಲಿದೆ. ಹೊಸ ಎಲ್ಇಡಿ ಹೆಡ್ ಲ್ಯಾಂಪ್‌ಗಳು ಮತ್ತು ಟೈಲ್ ಲ್ಯಾಂಪ್‌ಗಳು ಸ್ಟ್ಯಾಂಡರ್ಡ್ ಕ್ರೆಟಾದ ಸಿಗ್ನೇಚರ್ ಲುಕ್ ಅನ್ನು ಉಳಿಸಿಕೊಳ್ಳಲಿದೆ. ಉಳಿದಂತೆ ಸೂಕ್ಷ್ಮ ಟ್ವೀಕ್‌ಗಳು ಇವಿ ಆವೃತ್ತಿಗೆ ಹೊಸ ನೋಟವನ್ನು ನೀಡಲಿವೆ.

hyundai-creta-ev-launch-date-price-fetures-details

ಡ್ಯುಯಲ್ ಮೋಟರ್ ಆಯ್ಕೆ ನೀಡುವ ನಿರೀಕ್ಷೆಯಿದ್ದು, ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದ್ರೆ 450 ಕಿ.ಮೀ ರೇಂಜ್ ಓಡಲಿದೆ. ಹೊಸ ಕ್ರೆಟಾ ಇವಿ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.18 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಎಲೆಕ್ಟ್ರಿಕ್ ಮೋಟರ್ ಹ್ಯುಂಡೈನ ಎಂಟ್ರಿ ಲೆವೆಲ್ ಕೋನಾ ಎಲೆಕ್ಟ್ರಿಕ್ ಕಾರಿನಿಂದ ಪಡೆಯುವ ನಿರೀಕ್ಷೆಯಿದೆ.

ಭಾರತದಲ್ಲಿ ಬಹುತೇಕ ಎಲ್ಲಾ ಬ್ರಾಂಡ್‌ಗಳು ತಲಾ ಒಂದೊಂದು ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿವೆ. ಹ್ಯುಂಡೈ ಕೂಡ ಎಲೆಕ್ಟ್ರಿಕ್ ಆವೃತ್ತಿಗಳನ್ನು ಪರಿಚಯಿಸಿದೆಯಾದರೂ ಹೇಳಿಕೊಳ್ಳುವ ಮಟ್ಟಿಗೆ ಈವರೆಗೆ ಯಶಸ್ಸು ಕಂಡಿಲ್ಲ. ಟಾಟಾ, ಮಹೀಂದ್ರಾ, ಎಂಜಿ ಮೋಟಾರ್‌ನಂತೆ ಮಧ್ಯಮ ವರ್ಗದ ಎಲೆಕ್ಟ್ರಿಕ್ ಕಾರನ್ನು ಹ್ಯುಂಡೈ ಹೊಂದಿಲ್ಲ. ಈಗ ಕ್ರೆಟಾ ಇವಿಯನ್ನು ಪರಿಚಯಿಸಲು ಸಜ್ಜಾಗುತ್ತಿದೆ.

hyundai-creta-ev-launch-date-price-fetures-details

ಈಗಾಗಲೇ ಟಾಟಾ ಕರ್ವ್ ಇವಿಯಿಂದ ಹಿಡಿದು ಎಂಜಿ ವಿಂಡ್ಸರ್‌ವರಗೆ ಭಾರತೀಯ ಎಲೆಕ್ಟ್ರಿಕ್ ಕಾರು ವಿಭಾಗವು ಸಖತ್ ಪೈಪೋಟಿಯಿಂದ ಕೂಡಿದೆ. ಅಲ್ಲದೇ ಮಾರುತಿ ಸುಜುಕಿ ಕೂಡ ತನ್ನ ಹೊಸ ಎಲೆಕ್ಟ್ರಿಕ್ ಕಾರನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಮೂಲಕ ಈ ವಿಭಾಗವು ಇನ್ನಷ್ಟು ಪೈಪೋಟಿಯಿಂದ ಕೂಡಿರಲಿದೆ. ಇನ್ನು ಹೊಸ ಕ್ರೆಟಾ ಇವಿ ಬಿಡುಗಡೆ ಬಳಿಕ ಯಾವಮಟ್ಟಿಗೆ ಭಾರತದಲ್ಲಿ ಸದ್ದು ಮಾಡಲಿದೆ ಕಾದುನೋಡಬೇಕಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, December 4, 2024, 10:00 [IST]
English summary
Hyundai creta ev launch date price fetures details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+