Hyundai Creta: ಡೀಸೆಲ್ ಕಾರಿಗೆ ಭಾರೀ ಬೇಡಿಕೆ, ವಿತರಣೆಯಾಗಲು ತಿಂಗಳುಗಟ್ಟಲೇ ಬೇಕು.. 21 ಕಿ.ಮೀ ಮೈಲೇಜ್

ಹ್ಯುಂಡೈ ಇಂಡಿಯಾ (Hyundai India) ಜನಪ್ರಿಯ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಕೇವಲ 6 ವಾರಗಳ ಹಿಂದೆ ಬಿಡುಗಡೆಗೊಳಿಸಿದ್ದ ಕ್ರೆಟಾ ಫೇಸ್‌ಲಿಫ್ಟ್ (Creta Facelift) ಎಸ್‌ಯುವಿಗೆ ಭಾರೀ ಬೇಡಿಕೆ ಬಂದಿದ್ದು, 75,000ಕ್ಕೂ ಹೆಚ್ಚಿನ ಬುಕ್ಕಿಂಗ್ ಪಡೆದುಕೊಂಡಿದೆ. ಅದರಲ್ಲೂ ಡೀಸೆಲ್ ಮಾದರಿಗಳು ವಿತರಣೆಯಾಗಲು ತಿಂಗಳುಗಟ್ಟಲೇ ಸಮಯಾವಕಾಶಬೇಕು.

ನೀವು ಇವತ್ತು ನೂತನ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‌ಯುವಿಯ ಡೀಸೆಲ್ ಮಾದರಿಗಳನ್ನು ಬುಕ್ಕಿಂಗ್ ಮಾಡಿದರೂ ಕನಿಷ್ಠ 24 ವಾರಗಳೊಳಗೆ ವಿತರಣೆಯಾಗಲಿದೆ. ಆಟೋಮೆಟಿಕ್ ಗೇರ್ ಬಾಕ್ಸ್ ಹೊಂದಿರುವ ಕಾರುಗಳಿಗೆ ಹೋಲಿಕೆ ಮಾಡಿದರೆ ಮ್ಯಾನುವಲ್ ಆವೃತ್ತಿಗಳು ಬೇಗ ಗ್ರಾಹಕರ ಮನೆ ಸೇರುತ್ತವೆ. ಪೆಟ್ರೋಲ್ ಚಾಲಿತ ಕ್ರೆಟಾ ಕಡಿಮೆ ಕಾಯುವಿಕೆ ಅವಧಿ ಹೊಂದಿದ್ದು, 8 ವಾರಗಳಲ್ಲಿ ಡಿಲೆವರಿಯಾಗಲಿದೆ.

Hyundai Creta Facelift Car Diesel Variants Get Huge Demand 21 Km Mileage

ಈ ಹಿಂದೆ, ಹುಂಡೈ ಇಂಡಿಯಾದ ಸಿಒಒ ತರುಣ್ ಗಾರ್ಗ್ ಅವರು, ಕ್ರೆಟಾ ಫೇಸ್‌ಲಿಫ್ಟ್ ಕಾರು ಪಡೆಯುತ್ತಿರುವ ಆರ್ಡರ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. 'ಮಿಡ್ ಸ್ಪೆಕ್ (ಮಧ್ಯಮ ಶ್ರೇಣಿ) ಹಾಗೂ ಟಾಪ್ ಸ್ಪೆಕ್ (ಗರಿಷ್ಠ ಶ್ರೇಣಿ) ಮಾದರಿಗಳಿಗೆ ಹೆಚ್ಚಿನ ಖರೀದಿದಾರರು ಆಸಕ್ತಿಯನ್ನು ತೋರಿಸಿದ್ದಾರೆ. ಡೀಸೆಲ್ ಎಂಜಿನ್‌ ಚಾಲಿತ ಆವೃತ್ತಿಗಳು ಜನಪ್ರಿಯ ಆಯ್ಕೆಯಾಗಿದ್ದು, ಶೇಕಡ 43% ಬುಕ್ಕಿಂಗ್ ಪಡೆಯುತ್ತಿವೆ' ಎಂದು ಹೇಳಿದ್ದರು.

ಕ್ರೆಟಾ ಫೇಸ್‌ಲಿಫ್ಟ್ ಎಸ್‌ಯುವಿಗೆ ಹೆಚ್ಚಿನ ಬೇಡಿಕೆಯಿರುವುದರಿಂದ ಕಂಪನಿಯು 97,000 ಆರ್ಡರ್ ಗಳನ್ನು ಪೂರೈಸದೆಯೇ ಬಾಕಿ ಉಳಿಸಿಕೊಂಡಿದೆ. ಕಳೆದ ತಿಂಗಳು (ಫೆಬ್ರವರಿ - 2024) ಕಾರಿನ ಮಾರಾಟ ಪ್ರಮಾಣವು ವೃದ್ದಿಸಿದ್ದು, 15,276 ಯುನಿಟ್ ಕಾರುಗಳನ್ನು ಮಾರಲಾಗಿದೆ. ಈ ಮೂಲಕ ವರ್ಷದಿಂದ ವರ್ಷಕ್ಕೆ ಶೇಕಡ 12% ಬೆಳವಣಿಗೆ ಸಾಧಿಸಿದೆ. ಇನ್ನಷ್ಟು ಗ್ರಾಹಕರನ್ನು ಸೆಳೆಯಲು ಮಾರ್ಚ್ 11ರಂದು 'ಕ್ರೆಟಾ ಎನ್ ಲೈನ್' ಆವೃತ್ತಿಯನ್ನು ಹ್ಯುಂಡೈ ಕಂಪನಿ ಬಿಡುಗಡೆ ಮಾಡಲಿದೆ.

Hyundai Creta Facelift Car Diesel Variants Get Huge Demand 21 Km Mileage

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ (Hyundai Creta Facelift), ರೂ.11 ಲಕ್ಷದಿಂದ ರೂ.20.15 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಇ, ಇಎಕ್ಸ್, ಎಸ್, ಎಸ್(ಒ) ಸೇರಿದಂತೆ 7 ರೂಪಾಂತರ ಹಾಗೂ 6 ಮೊನೊಟೋನ್, 1 ಡುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ. ವಿನ್ಯಾಸದ ದೃಷ್ಟಿಯಿಂದಲೂ ಈ ಕಾರು ಅತ್ಯುತ್ತಮವಾಗಿದ್ದು, 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು.

ಈ ಕ್ರೆಟಾ ಕಾರು 1.5-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 6-ಸ್ವೀಡ್ ಮ್ಯಾನುವಲ್, 6-ಸ್ವೀಡ್ ಆಟೋಮೆಟಿಕ್, ಸಿವಿಟಿ, 7-ಸ್ವೀಡ್ ಡಿಸಿಟಿ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ. ಪೆಟ್ರೋಲ್ ರೂಪಾಂತರಗಳು 17.4 - 18.4 ಕೆಎಂಪಿಎಲ್, ಡೀಸೆಲ್ ರೂಪಾಂತರಗಳು 19.1 - 21.8 ಕೆಎಂಪಿಎಲ್ ಮೈಲೇಜ್ ನೀಡುತ್ತವೆ.

Hyundai Creta Facelift Car Diesel Variants Get Huge Demand 21 Km Mileage

ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದ್ದು, ಪ್ರಮುಖವಾಗಿ 10.25-ಇಂಚಿನ ಡುಯಲ್ ಡಿಸ್ಪ್ಲೇ, ಡುಯಲ್-ಝೋನ್ ಎಸಿ, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಅನ್ನು ಪಡೆದಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, March 5, 2024, 12:23 [IST]
English summary
Hyundai creta facelift car diesel variants get huge demand 21 km mileage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+