Hyundai: ದಾಖಲೆಯ 51,000 ಬುಕ್ಕಿಂಗ್ ಪಡೆದ ಹೊಸ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್, 11 ಲಕ್ಷ ಬೆಲೆ, 21 ಕಿ.ಮೀ ಮೈಲೇಜ್!

ದೇಶೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (Hyundai Motor India Limited), ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿದೆ. ಹೋದ ತಿಂಗಳು ಕಂಪನಿಯು ಜನಪ್ರಿಯ ಮಾದರಿ ಕ್ರೆಟಾ ಫೇಸ್‌ಲಿಫ್ಟ್ (Creta Facelift) ಅನ್ನು ಬಿಡುಗಡೆಗೊಳಿಸಿತ್ತು. ಸದ್ಯ, ಈ ಕಾರಿನ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ.

ಹ್ಯುಂಡೈ ಕಂಪನಿಯು ಕ್ರೆಟಾ ಫೇಸ್‌ಲಿಫ್ಟ್ ಎಸ್‌ಯುವಿಗಾಗಿ ಆರ್ಡರ್ ಪಡೆಯುವುದನ್ನು ಶುರು ಮಾಡಿ, ಕೇವಲ 1 ತಿಂಗಳೊಳಗೆ 51,000 ಯುನಿಟ್‌ಗಳನ್ನು ಗ್ರಾಹಕರು ಕಾಯ್ದಿರಿಸಿದ್ದಾರೆ. ಈಗಾಗಲೇ ಈ ಕಾರಿನ ವಿತರಣೆಯು ಶುರುವಾಗಿದ್ದು, ಇತ್ತೀಚೆಗೆ ರಾಜಸ್ಥಾನದ ಚಿತ್ತೋರ್‌ಗಢದಲ್ಲಿರುವ ಹ್ಯುಂಡೈ ಡೀಲರ್‌ಶಿಪ್‌ನಿಂದ ನೂತನ ಕ್ರೆಟಾ ಫೇಸ್‌ಲಿಫ್ಟ್ ಎಸ್‌ಯುವಿ ಹೊರಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿತ್ತು.

Hyundai Creta facelift Car Received 51,000 Booking: 11 Lakh Starting Price, 21 Km Mileage

ಸದ್ಯ, ಭಾರತದ ಕಾರು ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‌ಯುವಿ, ರೂ.11 ಲಕ್ಷದಿಂದ ರೂ.20.15 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ದೊರೆಯುತ್ತದೆ. ಇ, ಇಎಕ್ಸ್, ಎಸ್, ಎಸ್(ಒ), ಎಸ್ಎಕ್ಸ್ ಟೆಕ್, ಎಸ್ಎಕ್ಸ್(ಒ) ರೂಪಾಂತರಗಳು, ರೇಂಜರ್ ಖಾಕಿ, ಅಬಿಸ್ ಬ್ಲಾಕ್, ಅಟ್ಲಾಸ್ ವೈಟ್, ಟೈಟಾನ್ ಗ್ರೇ ಸೇರಿದಂತೆ 6-ಮೊನೊಟೋನ್, 1-ಡುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ನೂತನ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‌ಯುವಿಯಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಯಬಹುದು. ಈ ಕಾರಿನ ಹೊರಭಾಗದ ವಿನ್ಯಾಸ ಅತ್ಯಾಧುನಿಕವಾಗಿದ್ದು, ನೋಡುಗರನ್ನು ಒಮ್ಮೆಲೇ ಸೆಳೆಯುತ್ತದೆ. ಮುಂಭಾಗ ಎಲ್ - ಆಕಾರದ ಎಲ್ಇಡಿ ಡಿಆರ್‌ಎಲ್‌, ನವೀನವಾದ ಎಲ್ಇಡಿ ಹೆಡ್‌ಲೈಟ್‌, ಹೊಸದಾದ ಪ್ಯಾರಾಮೆಟ್ರಿಕ್ ಫ್ರಂಟ್ ಗ್ರಿಲ್ ಅನ್ನು ಪಡೆದಿದೆ. ಹಿಂಭಾಗದ ವಿನ್ಯಾಸವು ಆಕರ್ಷಕವಾಗಿದ್ದು, ಪ್ರಮುಖವಾಗಿ 17-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್ಸ್ ಹೊಂದಿದೆ.

Hyundai Creta facelift Car Received 51,000 Booking: 11 Lakh Starting Price, 21 Km Mileage

ಈ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‌ಯುವಿ ಪವರ್‌ಟ್ರೇನ್ ಕುರಿತು ಹೇಳುವುದಾದರೆ, ಇದು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಇದರ 1.5-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 115 ಪಿಎಸ್ ಪವರ್ (ಶಕ್ತಿ), 144 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 160 ಪಿಎಸ್ ಪವರ್, 253 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ.

1.5-ಲೀಟರ್ ಡಿಸೇಲ್ ಎಂಜಿನ್ 116 ಪಿಎಸ್ ಪವರ್, 250 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 6-ಸ್ವೀಡ್ ಮ್ಯಾನುವಲ್/ 6-ಸ್ವೀಡ್ ಆಟೋಮೆಟಿಕ್/ ಸಿವಿಟಿ/ 7-ಸ್ವೀಡ್ ಡಿಸಿಟಿ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ. ಮೈಲೇಜ್ ವಿಚಾರವಾಗಿ ಮಾತನಾಡುವುದಾದರೆ, ಪೆಟ್ರೋಲ್ ರೂಪಾಂತರಗಳು (Variants) 17.4 ಕೆಎಂಪಿಎಲ್- 18.4 ಕೆಎಂಪಿಎಲ್, ಡೀಸೆಲ್ ರೂಪಾಂತರಗಳು 19.1 ಕೆಎಂಪಿಎಲ್-21.8 ಕೆಎಂಪಿಎಲ್ ಇಂಧನ ದಕ್ಷತೆಯನ್ನು ಹೊಂದಿವೆ.

Hyundai Creta facelift Car Received 51,000 Booking: 11 Lakh Starting Price, 21 Km Mileage

ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‌ಯುವಿ ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ವಿಶೇಷವಾಗಿ 10.25-ಇಂಚಿನ ಡುಯಲ್ ಡಿಸ್ಪ್ಲೇ (ಇನ್ಫೋಟೈನ್‌ಮೆಂಟ್ ಸಿಸ್ಟಮ್‌ & ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗಾಗಿ), ಕನೆಕ್ಟ್ದ್ ಕಾರ್ ಟೆಕ್, ಡುಯಲ್-ಝೋನ್ ಎಸಿ, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಈ ಕಾರು, 6 - ಏರ್‌ಬ್ಯಾಗ್‌, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), 360-ಡಿಗ್ರಿ ಕ್ಯಾಮೆರಾ, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್), 360-ಡಿಗ್ರಿ ಕ್ಯಾಮೆರಾದಂತಹ ಸುರಕ್ಷಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಕ್ರೆಟಾ ಫೇಸ್‌ಲಿಫ್ಟ್ ಎಸ್‌ಯುವಿಗೆ ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರಿಡರ್, ಸ್ಕೋಡಾ ಕುಶಾಕ್, ಸಿಟ್ರಸ್ ಸಿ3 ಏರ್‌ಕ್ರಾಸ್, ಹೋಂಡಾ ಎಲಿವೇಟ್ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, February 7, 2024, 12:00 [IST]
English summary
Hyundai creta facelift car received 51000 booking rs 11 lakh starting price 21 km mileage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+