ಡೀಲರ್‌ಗಳನ್ನು ತಲುಪಿದ ಕ್ರೇಟಾ ಫೇಸ್‌ಲಿಫ್ಟ್‌: ಎಲ್ಲರಿಗಿಂತ ಮುಂಚೆ ಡಿಸೈನ್‌ ಸೋರಿಕೆ, ಇಲ್ಲಿದೆ ಸಂಪೂರ್ಣ ಮಾಹಿತಿ

ಹ್ಯುಂಡೈನ ಬಹು ನಿರೀಕ್ಷಿತ ಕ್ರೇಟಾ ಪೇಸ್‌ಲಿಫ್ಟ್‌ ಕಾರನ್ನು ಜನವರಿ ೧೬ ರಂದು ಲಾಂಚ್‌ ಮಾಡಲು ಸಕಲ ಸಿದ್ದತೆಗಳನ್ನೂ ನಡೆಸುತ್ತಿದೆ. ಕಳೆದ ಹಲವು ತಿಂಗಳುಗಳಿಂದ ಈ ಕುರಿತಾದ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿತ್ತು ಮತ್ತು ಹಲವರು ಈ ಹೊಸ ಕಾರು ಹೇಗಿರಲಿದೆ ಎಂದು ತಮ್ಮ ಕುತೂಹಲವನ್ನು ಸಹ ಹಂಚಿಕೊಂಡಿದ್ದರು.

ಕಳೆದ ಕೆಲ ದಿನಗಳಿಂದ ಅಂತೂ ದಿನಾ ಸುದ್ದಿಯಲ್ಲಿರುವ ಕ್ರೇಟಾ ಫೇಸ್‌ಲಿಫ್ಟ್‌ನ ಒಂದಲ್ಲಾ ಒಂದು ಮಾಹಿತಿಗಳು ಹೊರ ಬರುತ್ತಲೇ ಇದೆ. ಇವತ್ತು ಮತ್ತೊಂದು ಮಾಹಿತಿ ಹೊರಬಿದ್ದಿದ್ದು, ಮಾಹಿತಿಗಳ ಪ್ರಕಾರ ಕ್ರೇಟಾ ಫೇಸ್‌ಲಿಫ್ಟ್‌ ಡೀಲರ್‌ಗಳ ಬಳಿ ತಲುಪಿದ್ದು, ಈ ಕಾರಿನ ಹಿಂಬಾಗ ಮತ್ತು ಮುಂಭಾಗದ ಚಿತ್ರಗಳು ಸೋರಿಕೆಯಾಗಿದೆ. ಈ ಕುರಿತಾಗಿ ಇಂದಿನ ಲೇಖನದಲ್ಲಿ ನೋಡಲಿದ್ದೇವೆ.

Hyundai Creta Facelift Reaches Dealers Yard And Photos Leaked

ಹರ್ಷ್‌ ವ್ಲಾಗ್ಸ್ ಎಂಬ ಯ್ಯೂಟ್ಯೂಬರ್‌ ಈ ಚಿತ್ರಗಳನ್ನು ಹರಿಬಿಟ್ಟಿದ್ದು, ಇದರ ಕ್ರೆಡಿಟ್‌ ಅವರಿಗೆ ಸೇರುತ್ತಿದೆ. ಕಳೆದ ಬಾರಿಯ ಕ್ರೇಟಾಗಿಂತಲೂ ಹೆಚ್ಚಿನ ಸ್ಪೋರ್ಟಿ ಮತ್ತು ಬೋಲ್ಡ್‌ ಲುಕ್‌ ಈ ಬಾರಿಯ ಫೇಸ್‌ಲಿಫ್ಟ್‌ ಕ್ರೇಟಾ ಹೊಂದಲಿದೆ ಎಂದು ತಿಳಿದು ಬಂದಿದೆ. ಇದು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸಲಿದೆ.

ಮೇಲೆ ತಿಳಿಸಿದಂತೆ ಈ ತಿಂಗಳ ಅಂದರೆ ಜನವರಿ ೧೬ ರಂದು ಲಾಂಚ್‌ ಆಗಲಿದ್ದು, ಆ ನಂತರವಷ್ಟೇ ಈ ಕಾರಿನ ಸಂಪೂರ್ಣ ಮಾಹಿತಿಯನ್ನು ಹೇಳಲು ಸಾಧ್ಯ. ಆದಾಗ್ಯೂ ಈಗ ದೊರಕಿರುವ ಹಲವು ಮೂಲಗಳ ಮಾಹಿತಿಗಳ ಪ್ರಕಾರ ಈ ಕಾರಿನಲ್ಲಿ ಇರಲಿರುವ ಫೀಚರ್‌ಗಳನ್ನು ನಾವು ನಿಮ್ಮ ಮುಂದೆ ಈ ಹಿಂದೆಯೂ ಲೇಖನ ರೂಪದಲ್ಲಿ ಇಟ್ಟಿದ್ದೇವೆ.

Hyundai Creta Facelift Reaches Dealers Yard And Photos Leaked

ಹೊಸ ಕ್ರೇಟಾ ಫೇಸ್‌ಲಿಫ್ಟ್‌ನ ಹಿಂಭಾಗ ಮತ್ತು ಮುಂಭಾಗದಲ್ಲಿ ಎಲ್ಲಾ ಲೈಟ್‌ಗಳು ಸಹ ಎಲ್‌ಇಡಿ ರೂಪದಲ್ಲಿ ಇರಲಿದೆ. ಇದರ ಜೊತೆಗೆ ಡಿಆರ್‌ಎಲ್‌ಗಳು ಹ್ಯುಂಡೈ ಎಕ್ಸ್ಟರ್‌ನಲ್ಲಿ ಕಂಡು ಬಂದಂತೆ ಹೆಚ್‌ ಶೇಪ್‌ನಲ್ಲಿ ಇರಲಿದೆ. ಜೊತೆಗೆ ಸ್ಕ್ವಾರ್ಡ್‌ ಆಫ್‌ ಹೆಡ್‌ಲ್ಯಾಂಪ್‌, ಹಿಂಭಾದಲ್ಲಿ ಕನೆಕ್ಟೆಡ್‌ ಟೇಲ್‌ ಲ್ಯಾಂಪ್‌ ಸಹ ಇದರ ಜೊತೆಗೆ ಬರಲಿದೆ.

ಇನ್ನು ಕ್ರೆಟಾ ಫೇಸ್‌ಲಿಫ್ಟ್‌ ಕಾರಿನ ಕುರಿತಾಗಿ ಹ್ಯುಂಡೈ ಈ ಹಿಂದೆ ಹೊರ ಬಿಟ್ಟಿದ್ದ ಚಿತ್ರಗಳ ಪ್ರಕಾರ ಕ್ರೇಟಾ ಫೇಸ್‌ಲಿಫ್ಟ್‌ನಲ್ಲಿ ಆರು ಏರ್‌ಬ್ಯಾಗ್‌ಗಳಿರಲಿದೆ. ಹ್ಯುಂಡೈ ಗ್ರಾಹಕರ ಸುರಕ್ಷತೆಗೆ ಹೆಚ್ಚಿ ಒತ್ತನ್ನು ಇಲ್ಲಿ ನೀಡಿದ್ದಾರೆ ಎಂಬುದು ಇದರಿಂದ ತಿಳಿದು ಬರುತ್ತಿದ್ದು, ಇದು ಹ್ಯುಂಡೈ ಕ್ರೇಟಾ ಕೊಳ್ಳಬೇಕು ಎಂದುಕೊಂಡಿದ್ದವರ ಮುಖದಲ್ಲಿ ನಗು ಮೂಡಲು ಪ್ರಮುಖ ಕಾರಣವಾಗಿದೆ. ಇನ್ನು ಆಯ್ದ ವೇರಿಯಂಟ್‌ಗಳಲ್ಲಿ ಹ್ಯುಂಡೈನ ಸ್ಮಾರ್ಟ್‌ ಸೆನ್ಸ್‌ ಲೆವೆಲ್‌ ೨ ಆಡಾಸ್‌ ಸಹ ಸಿಗಲಿದೆ.

ಕೇವಲ ಸುರಕ್ಷತೆಯಲ್ಲಿ ಮಾತ್ರವಲ್ಲದೇ, ಕಾರಿನ ಇತರ ಫೀಚರ್‌ಗಳ ಕಡೆಗೂ ಹ್ಯುಂಡೈ ಗಮನ ಹರಿಸಿದ್ದು ಈ ಕಾರಿನಲ್ಲಿ 10.25 ಇಂಚ್‌ನ ಡಿಜಿಟಲ್‌ ಡ್ರೈವರ್‌ ಡಿಸ್ಪ್ಲೇ ಇರಲಿದೆ. ಜೊತೆಗೆ ಡ್ಯುಯಲ್‌ ಝೋನ್ ಕ್ಲೈಮೇಟ್‌ ಕಂಟ್ರೋಲ್‌, ಪಾನರಾಮಿಕ್‌ ಸನ್‌ರೂಫ್‌, ಎಂಟು ಸ್ಪೀಕರ್‌ಗಳನ್ನು ಒಳಗೊಂಡ ಬಾಸ್‌ನ ಆಡಿಯೋ ಸಿಸ್ಟಂ, ಮುಂಭಾಗದಲ್ಲಿ ವೆಂಟಿಲೇಟೆಡ್‌ ಸೀಟ್‌ಗಳು, ಎಂಟು ರೀತಿಯಲ್ಲಿ ಹೊಂದಿಸಬಹುದಾದ ಡ್ರೈವರ್‌ ಸೀಟ್‌ ಅನ್ನು ಈ ಕಾರು ಹೊಂದಲಿದೆ.

ಈಗಾಗಲೇ ಹೊಸ ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್‌ನ ಬುಕಿಂಗ್‌ಗಳು ಆರಂಭವಾಗಿದ್ದು, ಈ ತಿಂಗಳ ಅಂತ್ಯದಲ್ಲಿ ಇದರ ವಿತರಣೆ ಆರಂಭವಾಗಲಿದೆ. ಮುಂಬರುವ ದಿನಗಳಲ್ಲಿ ಈ ಕಾರಿನ ಬೆಲೆಯನ್ನು ಕಂಪನಿಯು ಹೊರಬಿಡಲಿದ್ದು, ಈ ಕಾರು ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಕಿಯಾ ಸೆಲ್ಟೋಸ್‌, ಮಾರುತಿ ಗ್ರಾಂಡ್‌ ವಿಟಾರಾ, ಹೋಂಡಾ ಎಲಿವೇಟ್‌ ಮತ್ತು ಫೋಕ್ಸ್‌ವೋಗನ್‌ ಟೈಗುನ್‌ ಕಾರುಗಳಿಗೆ ಪೈಪೋಟಿ ನೀಡಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Image Source

Article Published On: Saturday, January 6, 2024, 15:02 [IST]
English summary
Hyundai creta facelift reaches dealer yard and photos leaked
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+