ಒಮ್ಮೆ ಒಳಹೋದರೆ ಹೊರಬರಲು ಮನಸು ಕೇಳದು: ಕ್ರೇಟಾ ಫೇಸ್‌ಲಿಫ್ಟ್ ಸೇಫ್ಟಿ, ಇಂಟೀರಿಯರ್‌ಗೆ ಫಿಧಾ
ಭಾರತದ ಪ್ರಮುಖ ಕಾರು ಮಾರಾಟ ಕಂಪನಿಗಳಲ್ಲಿ ಒಂದಾದ ಹ್ಯುಂಡೈ ಈಗಾಗಲೇ ಭಾರತದಲ್ಲಿ ತನ್ನ ಪ್ರಸಿದ್ದ ಕಾರು ಮಾದರಿಯಾದ ಕ್ರೇಟಾ ದ ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡುವ ತರಾತುರಿಯಲ್ಲಿದೆ. ಸದ್ಯ ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಎಲ್ಲರೂ ಕ್ರೇಟಾ ಫೇಸ್‌ಲಿಫ್ಟ್‌ಗೆ ಎದುರು ನೋಡುತ್ತಿದ್ದಾರೆ.
ಹಲವರ ಪ್ರಕಾರ ಮುಂಬರಲಿರುವ ಕ್ರೇಟಾ ಫೆಸ್‌ಲಿಫ್ಟ್‌ನಲ್ಲಿ ಹಲವಾರು ಫೀಚರ್‌ಗಳಿರಲಿವೆ ಎಂದು ಹೇಳುತ್ತಿದ್ದು ಇದಕ್ಕೆ ಇಂಬು ನೀಡುವಂತೆ ಇದೀಗ ಹಲವು ಚಿತ್ರಗಳು ಹೊರಬಿದ್ದಿದೆ. ಇಂದಿನ ಈ ಲೇಖನದಲ್ಲಿ ಮುಂಬರಲಿರುವ ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್‌ನಲ್ಲಿ ಯಾವೆಲ್ಲಾ ಫೀಚರ್‌ಗಳು ಇರಲಿದೆ ಎಂದು ಹೊರಬಿದ್ದಿರುವ ಮಾಹಿತಿಯ ಕುರಿತಾಗಿ ನೋಡೋಣ.

ಹ್ಯುಂಡೈ ಕಂಪನಿ ಇದೀಗ ಬಿಡುಗಡೆಗೊಳಿಸಿರುವ ಚಿತ್ರಗಳ ಪ್ರಕಾರ ಕ್ರೇಟಾ ಫೇಸ್‌ಲಿಫ್ಟ್‌ನಲ್ಲಿ ಆರು ಏರ್‌ಬ್ಯಾಗ್‌ಗಳಿರಲಿದೆ. ಹ್ಯುಂಡೈ ಗ್ರಾಹಕರ ಸುರಕ್ಷತೆಗೆ ಹೆಚ್ಚಿ ಒತ್ತನ್ನು ಇಲ್ಲಿ ನೀಡಿದ್ದಾರೆ ಎಂಬುದು ಇದರಿಂದ ತಿಳಿದು ಬರುತ್ತಿದ್ದು, ಇದು ಹ್ಯುಂಡೈ ಕ್ರೇಟಾ ಕೊಳ್ಳಬೇಕು ಎಂದುಕೊಂಡಿದ್ದವರ ಮುಖದಲ್ಲಿ ನಗು ಮೂಡಲು ಪ್ರಮುಖ ಕಾರಣವಾಗಿದೆ. ಇನ್ನು ಆಯ್ದ ವೇರಿಯಂಟ್‌ಗಳಲ್ಲಿ ಹ್ಯುಂಡೈನ ಸ್ಮಾರ್ಟ್ ಸೆನ್ಸ್ ಲೆವೆಲ್ ೨ ಆಡಾಸ್ ಸಹ ಸಿಗಲಿದೆ.
ಇದರ ಜೊತೆಗೆ ಈ ಕಾರಿನಲ್ಲಿ 360 ಡಿಗ್ರೀ ಕ್ಯಾಮೆರಾವನ್ನು ಸಹ ನೀಡಲಾಗಿದ್ದು ಇದು ಸುರಕ್ಷತೆಗೆ ಆನೆಬಲವನ್ನು ನೀಡಲಿದೆ ಎಂದು ಕಂಪನಿ ತಿಳಿಸಿದೆ. ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಟೈರ್‌ನ ಗಾಳಿಯ ಒತ್ತಡ ತಿಳಿಯುವ ಟಿಪಿಎಂಟಸ್, ಎಲ್ಲಾ ಚಕ್ರಗಳಿಗೂ ಡಿಸ್ಕ್ ಬ್ರೇಕ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಸಹ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಹ್ಯುಂಡೈ ಪ್ರಕಾರ ಹೊಸ ಕ್ರೇಟಾದ ಬಾಡಿಯನ್ನು ಮತ್ತಷ್ಟು ಬಲಿಷ್ಟಗೊಳಿಸಿದ್ದು ಹೆಚ್ಚಿನ ಒತ್ತಡದ ಅಪಘಾತ ಸಂಭವಿಸಿದರೆ ಅಂತಹ ಸಮಯದಲ್ಲಿ ಕಾರಿನಲ್ಲಿರುವ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ. ಇದರಿಂದ ಕಾರಿನಲ್ಲಿ ಯಾವುದೇ ಆತಂಕವಿಲ್ಲದೆ ಪ್ರಯಾಣಗಳನ್ನು ಮಾಡಲು ಇದು ಹೆಚ್ಚಿನ ಆತ್ಮ ವಿಶ್ವಾಸವನ್ನು ನೀಡುತ್ತದೆ ಎಂದು ತಿಳಿದು ಬಂದಿದೆ.
ಕೇವಲ ಸುರಕ್ಷತೆಯಲ್ಲಿ ಮಾತ್ರವಲ್ಲದೇ, ಕಾರಿನ ಇತರ ಫೀಚರ್‌ಗಳ ಕಡೆಗೂ ಹ್ಯುಂಡೈ ಗಮನ ಹರಿಸಿದ್ದು ಈ ಕಾರಿನಲ್ಲಿ 10.25 ಇಂಚ್‌ನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಇರಲಿದೆ. ಜೊತೆಗೆ ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಪಾನರಾಮಿಕ್ ಸನ್‌ರೂಫ್, ಎಂಟು ಸ್ಪೀಕರ್‌ಗಳನ್ನು ಒಳಗೊಂಡ ಬಾಸ್‌ನ ಆಡಿಯೋ ಸಿಸ್ಟಂ, ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟ್‌ಗಳು, ಎಂಟು ರೀತಿಯಲ್ಲಿ ಹೊಂದಿಸಬಹುದಾದ ಡ್ರೈವರ್ ಸೀಟ್ ಅನ್ನು ಈ ಕಾರು ಹೊಂದಲಿದೆ.
ಈಗಾಗಲೇ ಹೊಸ ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್‌ನ ಬುಕಿಂಗ್‌ಗಳು ಆರಂಭವಾಗಿದ್ದು, ಈ ತಿಂಗಳ ಅಂತ್ಯದಲ್ಲಿ ಇದರ ವಿತರಣೆ ಆರಂಭವಾಗಲಿದೆ. ಮುಂಬರುವ ದಿನಗಳಲ್ಲಿ ಈ ಕಾರಿನ ಬೆಲೆಯನ್ನು ಕಂಪನಿಯು ಹೊರಬಿಡಲಿದ್ದು, ಈ ಕಾರು ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಕಿಯಾ ಸೆಲ್ಟೋಸ್, ಮಾರುತಿ ಗ್ರಾಂಡ್ ವಿಟಾರಾ, ಹೋಂಡಾ ಎಲಿವೇಟ್ ಮತ್ತು ಫೋಕ್ಸ್‌ವೋಗನ್ ಟೈಗುನ್ ಕಾರುಗಳಿಗೆ ಪೈಪೋಟಿ ನೀಡಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications