ಹ್ಯುಂಡೈ ಕ್ರೆಟಾ ಮತ್ತು ಹೋಂಡಾ ಎಲಿವೇಟ್‌ ಸಿವಿಟಿಗಳಲ್ಲಿ ಮೈಲೇಜ್‌ ಅಷ್ಟಕಷ್ಟೇ!: ಕಾರಣವೇನು ಗೊತ್ತಾ!

ಭಾರತೀಯ ಮಾರುಕಟ್ಟೆಯಲ್ಲಿ ಎಸ್‌ಯುವಿ ಸೆಗ್ಮೆಂಟ್‌ ಬೂಮ್‌ ಆಗುತ್ತಿರುವ ವೇಗ ನೋಡಿದರೆ ಇತರ ಸೆಗ್ಮೆಂಟ್‌ ಕಾರುಗಳಿಗಳ ಬೇಡಿಕೆ ಕಡಿಮೆ ಆಗಬಹುದು ಎಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಲೆಕ್ಕಾಚಾರ. ಯಾಕೆಂದರೆ ಇತ್ತೀಚೆಗೆ ಭಾರತೀಯ ಕಾರುಮಾರುಕಟ್ಟೆ ಬೆಳೆಯುತ್ತಿರುವ ರೀತಿ ನೋಡಿದರೆ ಎಂತಹವರಿಗೂ ಒಂದು ಕ್ಷಣ ದಿಗ್ಭ್ರಮೆಯಾಗುವುದಂತೂ ಖಂಡಿತ. ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಎಸ್‌ಯುವಿಯಲ್ಲಿ ಅತೀ ಹೆಚ್ಚು ಪ್ರಸಿದ್ದವಾಗಿರುವ ಕಾರು ಮಾದರಿಯೆಂದರೆ ಹ್ಯುಂಡೈ ಕ್ರೆಟಾ. ಬಿಡುಗಡೆಯಾಗಿ ಸಾಕಷ್ಟು ವರ್ಷವಾಗಿದ್ದರೂ ಕಾಲಕ್ಕೆ ತಕ್ಕದಾದ ಬದಲಾವಣೆಗಳನ್ನು ಮಾಡಿಕೊಂಡು ಗ್ರಾಹಕರನ್ನು ಸೇರುತ್ತಲೇ ಇದೆ, ಇದರ ಫೇಸ್‌ಲಿಫ್ಟ್‌ ಮಾದರಿ ಈ ವರ್ಷ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತ್ತು.

ಲಾಂಚ್‌ ಆದಾಗ ಇದ್ದ ತನ್ನ ಚರೀಷ್ಮಾವನ್ನು ಹಲವಾರು ಪಟ್ಟು ಅಧಿಕಗೊಳಿಸಿದ್ದ ಮಾತ್ರವಲ್ಲದೇ, ಅತೀ ಹೆಚ್ಚು ಮಾರಾಟವಾದ ಎಸ್‌ಯುವಿಗಳ ಲಿಸ್ಟ್‌ನಲ್ಲಿ ಟಾಪ್‌ ಸ್ಥಾನದಲ್ಲಿದೆ. ಹ್ಯುಂಡೈ ಕ್ರೆಟಾಗೆ ಸ್ಪರ್ಧೆಯನ್ನು ಒಡ್ಡಲು ಹೋಂಡಾ ಕಂಪನಿಯು ಎಲಿವೇಟ್‌ ಎಂಬ ಎಸ್‌ಯುವಿಯನ್ನು ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್‌ ಮಾಡಿತ್ತು. ಇಂದಿನ ಲೇಖನದಲ್ಲಿ ಈ ಕಾರಿನ ಮೈಲೇಜ್‌ ಕುರಿತಾಗಿ ನೋಡೋಣ.

Hyundai Creta Facelift VS Honda Elevate CVT Real World Mileage Revealed

ಈ ಎರಡೂ ಕಾರುಗಳ ಮೈಲೇಜ್‌ ಬಗ್ಗೆ ನೋಡುವುದಕ್ಕೂ ಮುಂಚೆ ಇದರ ಎಂಜಿನ್‌ಗಳ ಬಗ್ಗೆ ನೋಡಲೇ ಬೇಕು. ಹ್ಯುಂಡೈ ಕ್ರೆಟಾ (Hyundai Creta Facelift) 2 ಪೆಟ್ರೋಲ್ ಹಾಗೂ 1 ಡೀಸೆಲ್ ಪವರ್ ಟ್ರೇನ್ ಆಯ್ಕೆಯಲ್ಲಿ ದೊರೆಯುತ್ತದೆ. ಇದರ 1.5-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 115 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 144 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 160 ಪಿಎಸ್ ಪವರ್, 253 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ.

ನೂತನ ಹೋಂಡಾ ಎಲಿವೇಟ್ (Honda Elevate) ಎಸ್‌ಯುವಿ, 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ದೊರೆಯಲಿದ್ದು, ರೂಪಾಂತರಗಳಿಗೆ ಅನುಗುಣವಾಗಿ 6-ಸ್ವೀಡ್ ಮ್ಯಾನುವಲ್/ ಸಿವಿಟಿ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. 15.31 ರಿಂದ 16.92 ಕೆಎಂಪಿಎಲ್ ಮೈಲೇಜ್ ನೀಡುತ್ತದೆ. ಜೊತೆಗೆ FWD (ಫ್ರಂಟ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದೆ.

Hyundai Creta Facelift VS Honda Elevate CVT Real World Mileage Revealed

ಈ ಕಾರುಗಳ ಬೆಲೆಯನ್ನು ನೋಡುವುದಾದರೆ, ಸದ್ಯ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್, ರೂ.11 ಲಕ್ಷದಿಂದ ರೂ.20.15 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಅತ್ಯಾಧುನಿಕ ವಿನ್ಯಾಸವನ್ನು ಹೊಂದಿರುವ ಈ ಕಾರು, ಫಿಯರಿ ರೆಡ್, ರೇಂಜರ್ ಖಾಕಿ, ಅಬಿಸ್ ಬ್ಲ್ಯಾಕ್, ಅಟ್ಲಾಸ್ ವೈಟ್, ಟೈಟಾನ್ ಗ್ರೇ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಜೊತೆಗೆ 5 ಆಸನ ಆಯ್ಕೆ ವ್ಯವಸ್ಥೆಯನ್ನು ಕೂಡ ಪಡೆದಿದೆ.

ಭಾರತದಲ್ಲಿ ಹೋಂಡಾ ಕಂಪನಿಯ ಅಮೇಜ್ (Amaze) ಹಾಗೂ ಸಿಟಿ (City) ಸೆಡಾನ್ ರೀತಿಯಲ್ಲಿ ಎಲಿವೇಟ್ ಎಸ್‌ಯುವಿಯು ತನಗಾಗಿ ಪ್ರತ್ಯೇಕ ಸ್ಥಾನವನ್ನು ಸೃಷ್ಟಿಸಿಕೊಳ್ಳುತ್ತಿದ್ದು, ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ರೂ.11.58 ಲಕ್ಷದಿಂದ ರೂ.16.20 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಅತ್ಯಾಧುನಿಕ ವಿನ್ಯಾಸವನ್ನು ಕೂಡ ಒಳಗೊಂಡಿದೆ.

Hyundai Creta Facelift VS Honda Elevate CVT Real World Mileage Revealed

ARAI ಪ್ರಕಾರ ಈ ಕಾರಿನ ಮೈಲೇಜ್‌ ಅನ್ನು ನೋಡುವುದಾದರೆ ಹ್ಯುಂಡೈ ಕ್ರೆಟಾ ಸಿವಿಟಿ, 17.7kpl ಮತ್ತು ಎಲಿವೇಟ್ ಸಿವಿಟಿ‌ 16.92kpl ಮೈಲೇಜ್‌ ನೀಡುತ್ತದೆ. ಆದರೆ ರಿಯಲ್‌ ವರ್ಲ್ಡ್‌ ಟೆಸ್ಟ್‌ ಮಾಡಿದಾಗ ಹ್ಯುಂಡೈ ಕ್ರೆಟಾ, ಸಿಟಿಯಲ್ಲಿ 10.3kpl ಮತ್ತು ಹೈವೇಯಲ್ಲಿ 13.8kpl ಮೈಲೇಜ್‌ ಕೊಡುತ್ತದೆ. ಎಲಿವೇಟ್‌ ಕಾರು ಸಿಟಿಯಲ್ಲಿ 8.6kpl ಮತ್ತು ಹೆದ್ದಾರಿಯಲ್ಲಿ 13.1kpl ಮೈಲೇಜ್‌ ಸಿಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, May 30, 2024, 14:36 [IST]
English summary
Hyundai creta facelift vs honda elevate cvt real world mileage revealed
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+