Hyndai Creta: ಕ್ರೇಟಾ ಫೇಸ್‌ಲಿಫ್ಟ್ ಆಟ ಇಲ್ಲಿಗೇ ನಿಂತಿಲ್ಲ: ಈ ಬಿಗ್ ಅಪ್‌ಡೇಟ್, ಇಷ್ಟು ಬೇಗ!
ದೇಶದ ಸುಪ್ರಸಿದ್ದ ಕಾರು ತಯಾರಿಕಾ ಕಂಪನಿಯಾದ ಹ್ಯುಂಡೈ 2024 ರ ಹೊಸ ವರ್ಷವನ್ನು ಭರ್ಜರಿಯಾಗಿಯೇ ಆಚರಿಸಿತ್ತು. ಈ ವರ್ಷದ ಆರಂಭದರಲ್ಲಿಯೇ ಭಾರತದಲ್ಲಿ ಹ್ಯುಂಡೈ ಕಂಪನಿಯ ನೆಚ್ಚಿನ ಕಾರು ಮಾದರಿಯಾದ ಕ್ರೇಟಾದ ಫೇಸ್‌ಲಿಫ್ಟ್ ಅನ್ನು ಲಾಂಚ್ ಮಾಡುವುದರ ಮೂಲಕ 2024 ಕ್ಕೆ ಹ್ಯುಂಡೈ ಗ್ರ್ಯಾಂಡ್ ಎಂಟ್ರಿ ಕೊಟ್ಟಿತ್ತು.
ಕ್ರೇಟಾ ಫೇಸ್‌ಲಿಫ್ಟ್ ಅನ್ನು ಲಾಂಚ್ ಮಾಡಿದ ಮೇಲೆ ಹ್ಯುಂಡೈನ ಆಟ ಇಲ್ಲಿಗೇ ನಿಲ್ಲುತ್ತೇ ಎಂದುಕೊಂಡಿದ್ದ ಎದುರಾಳಿಗಳಿಗೆ ಈಗ ಮತ್ತೊಂದು ಶಾಕ್ ನೀಡಿದೆ ಹ್ಯುಂಡೈ. ಹೌದು, ತನ್ನ ಪ್ರಸಿದ್ದ ಕಾರು ಮಾದರಿಯಾದ ಕ್ರೇಟಾಗೆ ಈಗ ಮತ್ತೊಂದು ಬಿಗ್ ಅಪ್‌ಡೇಟ್ ಅನ್ನು ನೀಡುತ್ತಿರುವುದು ಸಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದೆ. ಈಗಾಗಲೇ ಈ ಕುರಿತಾದ ಚಿತ್ರಗಳು ಸೋರಿಕೆಯಾಗಿದ್ದು, ಎದುರಾಳಿಗಳಿಗೆ ಆತಂಕ ಹೆಚ್ಚಾಗಿದೆ.

ಮಾಹಿತಿಗಳ ಪ್ರಕಾರ ಹ್ಯುಂಡೈ ಕಂಪನಿಯು ತನ್ನ ಹೊಸ ಕ್ರೇಟಾ ಕಾರಿನ ಎನ್‌ಲೈನ್ (Hyundai Creta N Line) ಮಾದರಿಯನ್ನು ಮಾರುಕಟ್ಟೆಗೆ ತರುವತ್ತ ಯೋಜನೆ ರೂಪಿಸುತ್ತಿದೆ. ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ, ಎನ್‌ಲೈನ್ ಮಾದರಿಗೆ ಐ೨೦ ಮತ್ತು ವೆನ್ಯೂ ಅನ್ನು ಸೇರಿಸಿದ್ದು ಈಗ ಆ ಸಾಲಿಗೆ ಮೊನ್ನೆಯಷ್ಟೇ ಲಾಂಚ್ ಆಗಿರುವ ಕ್ರೇಟಾ ಫೇಸ್‌ಲಿಫ್ಟ್ ಅನ್ನು ಸಹ ಸೇರಿಸುತ್ತಿದ್ದ ತನ್ನ ಎನ್‌ಲೈನ್ ಲೈನ್‌ಅಪ್ ಅನ್ನು ವಿಸ್ತರಿಸುತ್ತಿದೆ.
ಹ್ಯುಂಡೈ ಹೊಸ ಕ್ರೇಟಾ ಎನ್‌ಲೈನ್ ಕಾರಿನ ಟಿವಿ ಕಮರ್ಷಿಯಲ್ ಶೂಟ್ ಮಾಡಲು ಹೊರ ತಂದ ಸಂಧರ್ಭದಲ್ಲಿ ಈ ಕಾರಿನ ಚಿತ್ರಗಳು ಸೋರಿಕೆಯಾಗಿದ್ದು, ಸಾಧಾರಣ ಕ್ರೇಟಾಗಿಂತ ಹೆಚ್ಚು ಸ್ಪೋರ್ಟಿ ಮತ್ತು ಸ್ಟೈಲಿಶ್ ಆಗಿ ಹೊರಬರಲಿದೆ ಎಂದು ತಿಳಿದು ಬಂದಿದೆ. ಸಾಧರಣವಾಗಿ ಹ್ಯುಂಡೈ ಎನ್‌ಲೈನ್ ವಾಹನಗಳು ಸಖತ್ ಲುಕ್, ಸ್ಪೋರ್ಟಿ ಡಿಸೈನ್ ಮತ್ತು ಭರ್ಜರಿ ಪರ್ಫಾಮೆನ್ಸ್‌ಗೆ ಹೆಸರುವಾಸಿಯಾಗಿದೆ.

ಇನ್ನು ಹೊಸ ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್ ಬಗ್ಗೆ ನೋಡುವುದಾದರೆ, 2024 ಕ್ರೆಟಾದ ಒಳಭಾಗವು ಸಮಗ್ರವಾದ ಮರುವಿನ್ಯಾಸಕ್ಕೆ ಒಳಗಾಗಿದೆ, ಡ್ಯುಯಲ್ ಇಂಟಿಗ್ರೇಟೆಡ್ 10.25-ಇಂಚಿನ ಡಿಸ್ಪ್ಲೇಗಳನ್ನು ಒಳಗೊಂಡಿದೆ, ಒಂದು ಇನ್ಫೋಟೈನ್ಮೆಂಟ್ ಸಿಸ್ಟಮ್‌ಗಾಗಿ ಮತ್ತು ಇನ್ನೊಂದು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ನೀಡಲಾಗಿದೆ. ಪ್ರಯಾಣಿಕರ ಬದಿಯ ಡ್ಯಾಶ್‌ಬೋರ್ಡ್‌ನ ಮೇಲಿನ ಈಗ ಪಿಯಾನೋ ಬ್ಲಾಕ್ ಪ್ಯಾನಲ್ ನೀಡಲಾಗಿದೆ.
ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‌ಯುವಿಯಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ಈ ಕಾರು ಇ, ಇಎಕ್ಸ್, ಎಸ್, ಎಸ್(ಒ), ಎಸ್ಎಕ್ಸ್ ಟೆಕ್, ಎಸ್ಎಕ್ಸ್(ಒ) ರೂಪಾಂತರಗಳು (Variants), ರೇಂಜರ್ ಖಾಕಿ, ಅಬಿಸ್ ಬ್ಲಾಕ್, ಅಟ್ಲಾಸ್ ವೈಟ್, ಟೈಟಾನ್ ಗ್ರೇ ಸೇರಿದಂತೆ 6-ಮೊನೊಟೋನ್, 1-ಡುಯಲ್ ಟೋನ್ ಬಣ್ಣಗಳ ಆಯ್ಕೆಯನ್ನು ಸಿಗುತ್ತದೆ. ಈ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್, ಹೆಚ್ಚಿನ ಸಂಖ್ಯೆಯಲ್ಲಿ ಯುವ ಗ್ರಾಹಕರನ್ನು ಸೆಳೆಯುವ ಸಲುವಾಗಿ ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಎಂಜಿನ್ ಮತ್ತು ಪರ್ಫಾಮೆನ್ಸ್ ಬಗ್ಗೆ ನೋಡುವುದಾದರೆ ಇದರಲ್ಲಿ 1.5-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 115 PS ಪವರ್ ಹಾಗೂ 144 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ವೀಡ್ ಮ್ಯಾನುವಲ್/ ಸಿವಿಟಿ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. ಮತ್ತೊಂದು 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 160 PS ಗರಿಷ್ಠ ಪವರ್, 253 Nm ಪೀಕ್ ಟಾರ್ಕ್ ಹೊರಹಾಕುತ್ತದೆ. 7-ಸ್ವೀಡ್ ಡಿಸಿಟಿ ಗೇರ್ ಬಾಕ್ಸ್ ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications