ಹ್ಯುಂಡೈ ಕ್ರೇಟಾ ಎನ್‌ಲೈನ್‌ನ ಒಳಭಾಗದ ಚಿತ್ರಗಳು ಬಿಡುಗಡೆ: ಇದಕ್ಕಿಂತ ಸ್ಪೋರ್ಟಿ ಫೀಲ್ ಸಿಗಲು ಸಾಧ್ಯವಿಲ್ಲ!
2024ರ ಹೊಸ ವರ್ಷವನ್ನು ಹ್ಯುಂಡೈ ಕಂಪನಿಯು ಕ್ರೇಟಾ ಫೇಸ್‌ಲಿಫ್ಟ್ ಅನ್ನು ಲಾಂಚ್ ಮಾಡುವ ಮೂಲಕ ಭರ್ಜರಿಯಾಗಿಯೇ ಆರಂಭಿಸಿತ್ತು. ಇದಾದ ಕೆಲವೇ ತಿಂಗಳಲ್ಲಿ ಇದೀಗ ಹ್ಯುಂಡೈ ಕಂಪನಿಯು ಹೊಸ ಕ್ರೇಟಾ ಎನ್‌ಲೈನ್ ಅನ್ನು ಲಾಂಚ್ ಮಾಡುವ ಯೋಜನೆಯಲ್ಲಿದೆ. ಈಗಾಗಲೇ ಈ ಕುರಿತಾಗಿ ಹಲವಾರು ಯೋಜನೆಗಳು ಹಾದಿಯಲ್ಲಿದೆ.
ಇದೀಗ ಹೊಸ ಹೊಸ ಕ್ರೇಟಾ ಎನ್‌ಲೈನ್ ಸುದ್ದಿಯೊಂದು ಹೊರ ಬಿದ್ದಿದೆ. ಕ್ರೇಟಾ ಎನ್‌ಲೈನ್ ನ ಒಳಭಾಗದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸ್ಪೋರ್ಟಿ ಕಾರು ಪ್ರೀಯರ ಮುಖದಲ್ಲಿ ಮಂದಹಾಸ ಮೂಡಲು ಕಾರಣವಾಗಿದೆ. ಇದಕ್ಕೆ ಕಾರಣ ಏನೆಂದು ನೊಡುವುದಾದರೆ, ಕ್ರೇಟಾ ಎನ್‌ಲೈನ್ ಒಳಭಾಗ ಸಾಧಾರಣ ಕ್ರೇಟಾ ಕಾರಿನ ಒಳಭಾಗಕ್ಕಿಂತ ವಿಭಿನ್ನವಾಗಿರುವುದು.

ಚಿತ್ರಗಳಲ್ಲಿ ಕಾಣುವಂತೆ ಕ್ರೇಟಾ ಎನ್‌ಲೈನ್ ಕಾರಿನ ಒಳಭಾಗದಲ್ಲಿ ಕೆಂಪು ಕಲರ್‌ನ ಇನ್‌ಸರ್ಟ್‌ಗಳನ್ನು ಅಲ್ಲಲ್ಲಿ ಕಾಣಬಹುದಾಗಿದೆ. ಇದು ಈ ಕಾರಿನ ಒಳಭಾಗದ ಫೀಲ್ ಅನ್ನು ವಿಭಿನ್ನವಾಗಿಸುತ್ತದೆ. ಆಟೋಮೋಟಿವ್ ಕ್ಷೇತ್ರದಲ್ಲಿ ಕೆಂಪು ಬಣ್ಣಕ್ಕೆ ತನ್ನದೇ ಆದ ಸ್ಥಾನವಿದೆ. ತೀರಾ ಪರ್ಫಾಮೆನ್ಸ್ ಕೊಡುವ ವಾಹನಗಳು ಸ್ಪೋರ್ಟಿ ಆಗಿದೆ ಎಂಬುದನ್ನು ಬಿಂಬಿಸುವುದಕ್ಕಾಗಿ ಕೆಂಪು ಬಣ್ಣದ ಡಿಸೈನ್ ಎಲಿಮೆಂಟ್‌ಗಳನ್ನು ಕಾರುಗಳಲ್ಲಿ ಬಳಸುತ್ತಾರೆ.
ಎನ್‌ಲೈನ್ ಎನ್ನುವುದು ಹ್ಯುಂಡೈನ ಪರ್ಫಾಮೆನ್ಸ್ ವೇರಿಯಂಟ್ ಆಗಿರುವುದರಿಂದ ಈ ಕಾರುಗಳಲ್ಲಿ ಕೆಂಪು ಬಣ್ಣದ ಇನ್ಸರ್ಟ್‌ಗಳನ್ನು ಅಲ್ಲಲ್ಲಿ ಕಾಣಬಹುದಾಗಿದೆ. ಇನ್ನು ಕ್ರೇಟಾ ಎನ್‌ಲೈನ್ ಇಂಟೀರಿಯರ್ ವಿಚಾರಕ್ಕೆ ಬರುವುದಾದರೆ, ಈ ಕಾರಿನ ಸಿಟ್‌ಗಳಲ್ಲಿ ಕೆಂಪು ಬರ್ಣಣದ ಹೊಲಿಗೆಗಳನ್ನು ನಾವು ಕಾಣಬಹುದಾಗಿದೆ. ಇದೇ ರೀತಿ ಗಿಯರ್ ನಾಬ್, ಡ್ಯಾಶ್ ಬೋರ್ಡ್‌ಗಳು ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ ಬಾರ್ಡರ್‌ಗಳಲ್ಲಿ ಈ ರೆಡ್ ಇನ್‌ಸರ್ಟ್‌ಗಳನ್ನು ಕಾಣಬಹುದಾಗಿದೆ.

ಹ್ಯುಂಡೈ ಕ್ರೆಟಾ ಎನ್ ಲೈನ್ (Hyundai Creta N Line) ಬಿಡುಗಡೆ ದಿನಾಂಕದಿಂದ ಐದರಿಂದ ಎಂಟು ತಿಂಗಳವರೆಗೆ ಕಾಯುವ ಅವಧಿಯನ್ನು ಹೊಂದಿರುತ್ತದೆ. 2024ರ ಮೇ ತಿಂಗಳಿನಲ್ಲಿ ಈ ಎಸ್‍ಯುವಿಯ ವಿತರಣೆಯು ಪ್ರಾರಂಭವಾಗಬಹುದು ಈಗ ಮುಂಬರುವ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿಯು N8 ಮತ್ತು N10 ಎಂಬ ಎರಡು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿರುತ್ತದೆ.
ಈ ಹೊಸ ಕ್ರೆಟಾ ಎನ್ ಲೈನ್ ಎಸ್‍ಯುವಿಯಲ್ಲಿ 1.5-ಲೀಟರ್, 4-ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್158 bhp ಮತ್ತು 253 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 7-ಸ್ಪೀಡ್ DCT ಯುನಿಟ್ ನಡುವೆ ಆಯ್ಕೆ ಮಾಡಬಹುದು.

ಈ ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿ ಬಹು ಬಣ್ಣದ ಆಯ್ಕೆಗಳನ್ನು ಸಹ ನೀಡುತ್ತದೆ. ಹೊಸ ಎಸ್‍ಯುವಿಯು ಮೊನೊಟೋನ್ (ಅಬಿಸ್ ಬ್ಲ್ಯಾಕ್ ಪರ್ಲ್, ಅಟ್ಲಾಸ್ ವೈಟ್ ಮತ್ತು ಟೈಟಾನ್ ಗ್ರೇ ಮ್ಯಾಟ್) ಮತ್ತು 3 ಡ್ಯುಯಲ್-ಟೋನ್ ಶೇಡ್‌ಗಳಲ್ಲಿ (ಅಟ್ಲಾಸ್ ವೈಟ್, ಶ್ಯಾಡೋ ಗ್ರೇ ಮತ್ತು ಥಂಡರ್ ಬ್ಲೂ) ನೀಡಲಾಗುವುದು. ಡ್ಯುಯಲ್-ಟೋನ್ ಮಾದರಿಗಳು ಬ್ಲ್ಯಾಕ್ ರೂಫ್ ನೊಂದಿಗೆ ಬರುತ್ತದೆ.
ಇದರಲ್ಲಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಆಟೋ ಹೋಲ್ಡ್ ಫಂಕ್ಷನ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಹಿಲ್ ಅಸಿಸ್ಟ್ ಕಂಟ್ರೋಲ್ ಮತ್ತು EBD ಜೊತೆಗೆ ABS ನಂತಹ ವೈಶಿಷ್ಟ್ಯಗಳು ಶ್ರೇಣಿಯಾದ್ಯಂತ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಇದರೊಂದಿಗೆ ಈ ಎಸ್‍ಯುವಿಯಲ್ಲಿ 360-ಡಿಗ್ರಿ ಸರೌಂಡ್ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ಮಾನಿಟರ್ ಮತ್ತು ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಹೊಂದಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications