Hyundai CRETA N Line: ಕ್ರೆಟಾ ಎನ್‌-ಲೈನ್‌ನಲ್ಲಿ ಸ್ಪೋರ್ಟ್ಸ್ ಕಾರಿನಂತಹ ಇಂಟೀರಿಯರ್ ನೀಡಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಇಂದು CRETA N ಲೈನ್‌ನ ಆಕರ್ಷಕ ಇಂಟೀರಿಯರ್ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ವೈಶಿಷ್ಟ್ಯಗಳನ್ನು ಅನಾವರಣಗೊಳಿಸಿದೆ. ಪ್ರೀಮಿಯಂ ಅನುಭವ ನೀಡುವಂತೆ ಹುಂಡೈ CRETA N ಲೈನ್ ಇಂಟೀರಿಯರ್ ಅನ್ನು ವಿನ್ಯಾಸಗೊಳಿಸಿದ್ದು, ಗ್ರಾಹಕರಿಗೆ ಹೊಸ ಅನುಭವ ನೀಡಲಿದೆ ಎಂದು ಹ್ಯುಂಡೈ ಹೇಳಿದೆ.

ಇಂಟೀರಿಯರ್ ವಿಶೇಷತೆಗಳು: Hyundai CRETA N Line ನಲ್ಲಿ ಸಂಪೂರ್ಣ ಕಪ್ಪು ಬಣ್ಣದ ಸ್ಪೋರ್ಟಿ ಇಂಟೀರಿಯರ್, ಸ್ಪೋರ್ಟಿ ಮೆಟಲ್ ಆಕ್ಸಿಲರೇಟರ್ ಮತ್ತು ಬ್ರೇಕ್ ಪೆಡಲ್‌ಗಳು, ರೆಡ್ ಇಂಟೇಕ್‌ಗಳು ಮತ್ತು ಗೇರ್ ನಾಬ್‌ನಲ್ಲಿ ಸೂಕ್ಷ್ಮವಾದ "N" ಬ್ಯಾಡ್ಜಿಂಗ್, 3-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಪ್ರೀಮಿಯಂ ಲೆಥೆರೆಟ್ ಸೀಟ್‌ಗಳನ್ನು ನೀಡಲಾಗಿದೆ.

hyundai-creta-n-line-sporty-interior-unveiled

ಹ್ಯುಂಡೈ CRETA N ಲೈನ್ ತನ್ನ ಸ್ಪೋರ್ಟಿ ಉದ್ದೇಶವನ್ನು ತಿಳಿಸುವ ಬ್ಲಾಕ್ & ರೆಡ್ ಇಂಟೀರಿಯರ್ ಡಿಸೈನ್ CRETA N ಲೈನ್‌ನ ಅತ್ಯುತ್ತಮ ಸಾಮರ್ಥ್ಯಗಳನ್ನು ತಿಳಿಸುವ ವಾತಾವರಣವನ್ನು ಒಳಗೊಂಡಿದೆ. ಇವೆಲ್ಲವು ಡ್ರೈವರ್‌ಗೆ ಸ್ಪೋರ್ಟಿ ಚಾಲನಾ ಅನುಭವವನ್ನು ನೀಡುತ್ತವೆ. ಒಟ್ಟಾರೆ ಸ್ಟಾಂಡರ್ಡ್‌ ಹ್ಯುಂಡೈ ಕ್ರೆಟಾಗಿಂತ ಇದು ಹೆಚ್ಚು ಸ್ಪೋರ್ಟಿ ಇಂಟೀರಿಯರ್ ಅನ್ನು ಪಡೆದುಕೊಂಡಿದೆ.

ಆಧುನಿಕ ತಂತ್ರಜ್ಞಾನ: ಹ್ಯುಂಡೈ CRETA N ಲೈನ್‌ನಲ್ಲಿ ಇಂಟಿಗ್ರೇಟೆಡ್ ಕರ್ವಿಲಿನಿಯರ್ 10.25 ಇಂಚಿನ HD ಇನ್ಫೋಟೈನ್‌ಮೆಂಟ್ ಮತ್ತು 10.25 ಇಂಚಿನ ಡಿಜಿಟಲ್ ಕ್ಲಸ್ಟರ್ ಬಹು - ಭಾಷಾ UI ಡಿಸ್‌ಪ್ಲೇಯೊಂದಿಗೆ ಫ್ಯೂಚರಿಸ್ಟಿಕ್ ಇಂಟರ್‌ಫೇಸ್ ಅನ್ನು ಒಳಗೊಂಡಿದೆ. ಇದು ಮಾಲೀಕರಿಗೆ ಸಾಟಿಯಿಲ್ಲದ ಸ್ಪಷ್ಟತೆ ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

hyundai-creta-n-line-sporty-interior-unveiled

10.25 ಇಂಚಿನ ಡಿಜಿಟಲ್ ಕ್ಲಸ್ಟರ್ ವಿಭಿನ್ನ ಡ್ರೈವ್ ಮೋಡ್‌ಗಳಿಗೆ ಅನುಗುಣವಾಗಿ ಅನೇಕ ಥೀಮ್‌ಗಳನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತದೆ. ಹೆಚ್ಚುವರಿಯಾಗಿ, ಇದು ಅಗತ್ಯ ಹ್ಯುಂಡೈ ಸ್ಮಾರ್ಟ್‌ಸೆನ್ಸ್ ಲೆವೆಲ್ 2 ADAS ವಾರ್ನಿಂಗ್ ಮತ್ತು ಬ್ಲೈಂಡ್ ಸ್ಪಾಟ್ ವ್ಯೂ ಮಾನಿಟರ್ ಸೇರಿದಂತೆ ಡಿಸ್‌ಪ್ಲೇಗಳನ್ನು ನೀಡುತ್ತದೆ. ರಸ್ತೆಯಲ್ಲಿ ವರ್ಧಿತ ಸುರಕ್ಷತೆ ಮತ್ತು ಜಾಗೃತಿಯನ್ನು ಖಾತ್ರಿಗೊಳಿಸುತ್ತದೆ.

ಹ್ಯುಂಡೈ CRETA N ಲೈನ್ 70 ಬ್ಲೂಲಿಂಕ್ ಸಂಪರ್ಕಿತ ಕಾರ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ, ಸ್ಮಾರ್ಟ್ ಆಗಿ ಇಂಟಿಗ್ರೇಟೆಡ್ 148+ VR ವಾಯಿಸ್ ಕಮಾಂಡ್‌ಗಳು ಹ್ಯಾಂಡ್ಸ್-ಫ್ರೀ ಅನುಭವವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಇದಲ್ಲದೆ, ಡ್ಯುಯಲ್-ಜೋನ್ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಪನಾರಮಿಕ್ ಸನ್‌ರೂಫ್ ಮತ್ತು ಮುಂಭಾಗದಲ್ಲಿ ಏರ್‌ ಸೀಟ್‌ಗಳು, 8-ವೇ ಪವರ್ಡ್ ಡ್ರೈವರ್ ಸೀಟ್ ಮುಂತಾದ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

hyundai-creta-n-line-sporty-interior-unveiled

ಅಂತರ್ಗತ ಜಿಯೋ ಸಾವನ್ ಮತ್ತು ಬೋಸ್ ಪ್ರೀಮಿಯಂ ಸೌಂಡ್ ಸಿಸ್ಟಂನೊಂದಿಗೆ 10.25 ಇಂಚಿನ HD ಇನ್ಫೋಟೈನ್‌ಮೆಂಟ್ ಆಡಿಯೋದಲ್ಲಿ ಪ್ರಯಾಣಿಕರನ್ನು ರಂಜಿಸುತ್ತದೆ. ಈ ಮೂಲಕ ಹ್ಯುಂಡೈ CRETA N ಲೈನ್ ಹೊಸ ಯುಗದ ಗ್ರಾಹಕರ ಆಕಾಂಕ್ಷೆಗಳನ್ನು ಪೂರೈಸಿ ನಿರೀಕ್ಷೆಗಳನ್ನು ಮೀರಿದ ಸಮಗ್ರ ಮಾಲೀಕತ್ವದ ಅನುಭವವನ್ನು ನೀಡುತ್ತದೆ ಎಂದು ಕಂಪನಿ ಭರವಸೆ ನೀಡಿದೆ.

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ಸಿಒಒ ತರುಣ್ ಗಾರ್ಗ್ ಮಾತನಾಡಿ, "ಹುಂಡೈ ಕ್ರೆಟಾ ಎನ್ ಲೈನ್ ಕ್ರಾಂತಿಕಾರಿ ತಂತ್ರಜ್ಞಾನದೊಂದಿಗೆ ಅಥ್ಲೆಟಿಕ್ ಮತ್ತು ಡೈನಾಮಿಕ್ ಸೌಂದರ್ಯದ ಸಾರಾಂಶವಾಗಿದೆ. ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸುವಲ್ಲಿ ಮತ್ತು ಎಲ್ಲರಿಗೂ ಅತ್ಯಾಕರ್ಷಕ ಚಾಲನಾ ಅನುಭವಗಳನ್ನು ಲಭ್ಯವಾಗುವಂತೆ ಮಾಡುವಲ್ಲಿ ಹ್ಯುಂಡೈ ಆಟೋಮೊಬೈಲ್ ಉದ್ಯಮವನ್ನು ಕ್ರಾಂತಿಗೊಳಿಸುತ್ತಿದೆ ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, March 6, 2024, 13:26 [IST]
English summary
Hyundai creta n line sporty interior unveiled
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+