ಎಸ್‍ಯುವಿಗಳ ರಾಜನಾಗಿ ಉಳಿದುಕೊಂಡ ಹ್ಯುಂಡೈ ಕ್ರೆಟಾ: ಇದಕ್ಕೆ ಯಾಕಿಷ್ಟು ಬೇಡಿಕೆ ಗೊತ್ತಾ?
ಹ್ಯುಂಡೈ ಕ್ರೆಟಾ (Hyundai Creta) ಹ್ಯುಂಡೈ ಕಂಪನಿಯ ಭರ್ಜರಿ ಬೇಡಿಕೆ ಹೊಂದಿರುವ ಮಾಡೆಲ್ ಆಗಿದೆ. ಈ ವರ್ಷದ ಆರಂಭದಲ್ಲಿ ಹ್ಯುಂಡೈ ಫೇಸ್‌ಲಿಫ್ಟೆಡ್ ಕ್ರೆಟಾ ಎಸ್‌ಯುವಿಯನ್ನು ಬಿಡುಗಡೆ ಮಾಡಿತು. ಬಳಿಕ ಕೆಲವೇ ಅವಧಿ ಬಳಿಕ ಹ್ಯುಂಡೈ ಕಂಪನಿಯು ಕ್ರೆಟಾ ಎಸ್‍ಯುವಿಯ ಸ್ಪೋರ್ಟಿಯರ್ ಮಾದರಿಯಾದ ಕ್ರೆಟಾ ಎನ್ ಲೈನ್ ಮಾದರಿಯನ್ನು ಬಿಡುಗಡೆಗೊಳಿಸಿತು. ಹುಂಡೈ ಕ್ರೆಟಾ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ.ಹಲವಾರು ವರ್ಷಗಳಿಂದ ಮಾರಾಟವಾಗಿದ್ದರೂ, ಇದು ಭಾರತೀಯ ಖರೀದಿದಾರರನ್ನು ಆಕರ್ಷಿಸುತ್ತಲೇ ಇದೆ. ಹ್ಯುಂಡೈ ನಿರಂತರವಾಗಿ ಮಾರುಕಟ್ಟೆ ಅಗತ್ಯಗಳಿಗೆ ಅನುಗುಣವಾಗಿ ಕ್ರೆಟಾವನ್ನು ನವೀಕರಿಸುತ್ತಿದೆ.
ಫೀಚರ್ಸ್: ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯ ಹೊರತಾಗಿ, ಅನ್ನು ಪರಿಷ್ಕೃತ ಕ್ಲೈಮೆಟ್ ಕಂಟ್ರೋಲ್ ಪ್ಯಾನಲ್, 360-ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಡ್ರೈವರ್ ಅಸಿಸ್ಟ್ ಸಿಸ್ಟಂಗಳೊಂದಿಗೆ (ADAS) ಡ್ಯುಯಲ್-ಜೋನ್ AC ಯೊಂದಿಗೆ ಒದಗಿಸಲಾಗಿದೆ. ಪನಾರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು 8-ಸ್ಪೀಕರ್ ಬಾಸ್ ಸೌಂಡ್ ಸಿಸ್ಟಮ್ ಅನ್ನು ನೀಡಲಾಗಿದೆ.

ಎಂಜಿನ್: ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಜೊತೆಗೆ 1.5 ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಸಹ ಹೊಂದಿದೆ. ಇದರಲ್ಲಿ 6-speed MT, CVT ಹಾಗೂ 7-speed DCT ಮತ್ತು 6-speed MT, 6-speed AT ಆಯ್ಕೆಯನ್ನು ನೀಡಲಾಗಿದೆ.
ಇದರಲ್ಲಿ ಮೊದಲಿಗೆ 1.5-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 115 ಪಿಎಸ್ ಪವರ್ ಮತ್ತು 144 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.5-ಲೀಟರ್ ಪವರ್ ಫುಲ್ ಟರ್ಬೊ ಪೆಟ್ರೋಲ್ ಎಂಜಿನ್ 160 ಪಿಎಸ್ ಪವರ್ ಹಾಗೂ 253 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮೈಲೇಜ್: ಹ್ಯುಂಡೈ ಕ್ರೆಟಾ ಎಸ್‍ಯುವಿಯು ಎಂಜಿನ್ ಆಯ್ಕೆಗಳು ಪವರ್ ಮತ್ತು ಮೈಲೇಜ್ ನಡುವೆ ಸಮತೋಲನವನ್ನು ನೀಡುತ್ತವೆ, ಇದು ದೈನಂದಿನ ಪ್ರಯಾಣ ಮತ್ತು ದೀರ್ಘ ಪ್ರಯಾಣ ಎರಡಕ್ಕೂ ಸೂಕ್ತವಾಗಿದೆ. ಈ ಜನಪ್ರಿಯ ಕ್ರೆಟಾ ಎಸ್‍ಯುವಿಯು 17.4 ಕಿ.ಮೀ ನಿಂದ 21.8 ಕಿ.ಮೀ ಮೈಲೇಜ್ ನೀಡುತ್ತದೆ. ಇದು ಅತ್ಯುತ್ತಮ ಮೈಲೇಜ್ ಸಂಖ್ಯೆ ಆಗಿದೆ.
ಸುರಕ್ಷತೆ ಫೀಚರ್ಸ್: ಸುರಕ್ಷತೆಯ ವಿಷಯದಲ್ಲಿ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ISOFIX ಚೈಲ್ಡ್ ಸೀಟ್ ಆಂಕರೇಜ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿಯನ್ನು ಒಳಗೊಂಡಿದೆ. ಹಿಂದಿನ ಸೀಟ್ 2 - ಸ್ಟೆಪ್ ರಿಕ್ಲೈನ್ ಫಂಕ್ಷನ್ ಮತ್ತು ದುಬಾರಿ ಪ್ಯಾಕೇಜ್ ಜೊತೆಗೆ, ಹೊಸ ಹುಂಡೈ CRETA ಒಳಭಾಗವು ಸೌಕರ್ಯ ಮತ್ತು ಅನುಕೂಲಕ್ಕಾಗಿ ಕ್ಯಾಬಿನ್‌ನಲ್ಲಿ ಸಾಕಷ್ಟು ಸ್ಥಳಾವಕಾಶವನ್ನು ನೀಡಲಾಗಿದೆ.

ವಾರಂಟಿ ಮತ್ತು ಸರ್ವಿಸ್ ನೆಟ್‌ವರ್ಕ್: ಹ್ಯುಂಡೈ ಕ್ರೆಟಾವು 5-ವರ್ಷ/ಅನಿಯಮಿತ ಕಿಲೋಮೀಟರ್ ವಾರಂಟಿಯೊಂದಿಗೆ ಬರುತ್ತದೆ, ಗುಣಮಟ್ಟ ಮತ್ತು ಗ್ರಾಹಕರ ತೃಪ್ತಿಗೆ ಹ್ಯುಂಡೈನ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಹ್ಯುಂಡೈ ಭಾರತದಾದ್ಯಂತ ವ್ಯಾಪಕವಾದ ಸರ್ವಿಸ್ ನೆಟ್‌ವರ್ಕ್ ಗಳನ್ನು ಹೊಂದಿದೆ, ಗ್ರಾಹಕರಿಗೆ ನಿರ್ವಹಣೆ ಮತ್ತು ದುರಸ್ತಿ ಸರ್ವಿಸ್ ಗಳನ್ನು ಸುಲಭವಾಗಿ ಒದಗಿಸುತ್ತದೆ.
ರೋಡ್ ಸೈಸ್ ಅಸಿಸ್ಟ್: ಹ್ಯುಂಡೈ ಕ್ರೆಟಾ ಎಸ್‍ಯುವಿಗೆ ದೃಢವಾದ ರೋಡ್ ಸೈಸ್ ಅಸಿಸ್ಟ್ ಸೇವಿಯನ್ನು ಒದಿಗಿಸುತ್ತದೆ. ಈ ಸೇವೆಯು 24/7 ಅವಧಿಯು ಲಭ್ಯವಿದೆ. ವಾಹನದ ಸ್ಥಗಿತಗಳು, ಫ್ಲಾಟ್ ಟೈರ್‌ಗಳು ಅಥವಾ ಇತರ ಸಮಸ್ಯೆಗಳ ಸಂದರ್ಭದಲ್ಲಿ ಮಾಲೀಕರು ತಕ್ಷಣದ ಸಹಾಯವನ್ನು ಪಡೆಯಬಹುದು. ಇದು ಹೆಚ್ಚು ಉಪಯುಕ್ತವಾದ ಸೇವೆ ಆಗಿದೆ.

ಸರ್ವಿಸ್ ಪ್ಯಾಕೇಜುಗಳು: ನಿಯಮಿತ ನಿರ್ವಹಣೆ ಮತ್ತು ಎಂಜಿನ್ ಆಯಿಲ್ ಬದಲಾವಣೆಗಳು, ಫಿಲ್ಟರ್ ಬದಲಿಗಳು ಮತ್ತು ತಪಾಸಣೆಗಳನ್ನು ಒಳಗೊಂಡಂತೆ ಹ್ಯುಂಡೈ ಕ್ರೆಟಾಗೆ ವಿವಿಧ ಸರ್ವಿಸ್ ಪ್ಯಾಕೇಜ್‌ಗಳನ್ನು ನೀಡುತ್ತದೆ. ಈ ಪ್ಯಾಕೇಜುಗಳಿಂದ ನಿಮ್ಮ ಹ್ಯುಂಡೈ ಕ್ರೆಟಾ ಎಸ್‍ಯುವಿಯನ್ನು ಅತ್ಯುತ್ತಮ ಸ್ಥಿತಿಯಲ್ಲಿ ನಿರ್ವಹಿಸಲು ಸಹಾಯ ಮಾಡುತ್ತದೆ ಎಂಬುವುದರಲ್ಲಿ ಎರಡೂ ಮಾತಿಲ್ಲ.


Click it and Unblock the Notifications