ಕೇವಲ ರೂ.21 ಪಾವತಿಸಿದರೆ ಸಾಕು... ಇವಿ ಕಾರು ಮಾಲೀಕರಿಗೆ ಬಂಪರ್ ಆಫರ್ ಕೊಟ್ಟ ಹ್ಯುಂಡೈ!

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್, ಭಾರತದ ಪ್ರಮುಖ ಹೆದ್ದಾರಿಗಳು ಮತ್ತು ನಗರಗಳಲ್ಲಿ ತನ್ನ ಅಲ್ಟ್ರಾ-ಹೈ ಸ್ಪೀಡ್ ಪಬ್ಲಿಕ್ ಇವಿ ಚಾರ್ಜಿಂಗ್ ನೆಟ್‌ವರ್ಕ್‌ ಅನ್ನು ವಿಸ್ತರಿಸಿದೆ. ಕಂಪನಿಯು ಒಟ್ಟು ಹನ್ನೊಂದು ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ ಮೂರು ಚಾರ್ಜಿಂಗ್ ಪಾಯಿಂಟ್‌ಗಳನ್ನು ಹೊಂದಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಮೂರು ಚಾರ್ಜಿಂಗ್ ಪಾಯಿಂಟ್‌ಗಳ ಬಗ್ಗೆ ಹೇಳುವುದಾದ್ರೆ, DC 150 kW, DC 60 kW ಮತ್ತು DC 30 kW ಸಾಮರ್ಥ್ಯದ ತಲಾ ಒಂದು ಘಟಕವನ್ನು ಒಳಗೊಂಡಿದೆ. ಭಾರತ, ಇಂಟರ್‌ಸಿಟಿ ಮತ್ತು ಇಂಟ್ರಾ ಸಿಟಿ ಪ್ರಯಾಣ ಎರಡಕ್ಕೂ ರೇಂಜ್ ಆತಂಕವನ್ನು ಕಡಿಮೆ ಮಾಡಿ ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವಂತೆ ಮಾಡುವುದು ಹ್ಯುಂಡೈನ ಮುಖ್ಯ ಉದ್ದೇಶವಾಗಿದೆ.

hyundai-expands-its-ultra-fast-charging-stations-across-india

ಅಲ್ಟ್ರಾ-ಫಾಸ್ಟ್ ಚಾರ್ಜರ್‌ಗಳ ವಿಸ್ತೃತ ಸಾರ್ವಜನಿಕ ಚಾರ್ಜಿಂಗ್ ನೆಟ್‌ವರ್ಕ್ ಆರು ಪ್ರಮುಖ ನಗರಗಳಲ್ಲಿ ಅಂದರೆ ಮುಂಬೈ, ಪುಣೆ, ಅಹಮದಾಬಾದ್, ಹೈದರಾಬಾದ್, ಗುರುಗ್ರಾಮ್ ಮತ್ತು ಬೆಂಗಳೂರು ಸೇರಿದಂತೆ ಐದು ಪ್ರಮುಖ ಹೆದ್ದಾರಿಗಳಾದ ದೆಹಲಿ-ಚಂಡೀಗಢ, ದೆಹಲಿ-ಜೈಪುರ, ಹೈದರಾಬಾದ್-ವಿಜಯವಾಡ, ಮುಂಬೈ-ಸೂರತ್, ಮುಂಬೈ-ನಾಸಿಕ್ ಹೆದ್ದಾರಿಗಳಲ್ಲಿ ಲಭ್ಯವಿದೆ.

ಎಲ್ಲಾ ಹ್ಯುಂಡೈ ಮತ್ತು ಇತರ ಗ್ರಾಹಕರಿಗೆ ಇದು ಲಭ್ಯವಿರಲಿದೆ. ವಾಹನಗಳಿಗೆ ಚಾರ್ಜ್ ಆಗುತ್ತಿರುವಾಗ ಗ್ರಾಹಕರ ಎಲ್ಲಾ ಅಗತ್ಯಗಳಿಗೆ ಬೆಂಬಲ ನೀಡಲು ಕಾಫಿ ಶಾಪ್‌ಗಳು ಮತ್ತು ರೆಸ್ಟೋರೆಂಟ್‌ಗಳಂತಹ ಬಹು ಗ್ರಾಹಕ ಸೌಕರ್ಯಗಳನ್ನು ಹೊಂದಿರುತ್ತವೆ. ಈ ಅಲ್ಟ್ರಾ-ಫಾಸ್ಟ್ DC ಚಾರ್ಜರ್‌ಗಳೊಂದಿಗೆ ಗ್ರಾಹಕರು ತ್ವರಿತ ಚಾರ್ಜಿಂಗ್ ಅನುಭವದ ಪ್ರಯೋಜನವನ್ನು ಪಡೆಯಬಹುದು.

ವಿಶೇಷವಾಗಿ ಹ್ಯುಂಡೈ IONIQ 5 ಗ್ರಾಹಕರು ತಮ್ಮ ವಾಹನಗಳನ್ನು ಶೇ10 ರಿಂದ ಶೇ80 ವರೆಗೆ ಚಾರ್ಜ್ ಮಾಡಲು 21 ನಿಮಿಷ ಸಾಕೆಂದು ಹ್ಯುಂಡೈ ತಿಳಿಸಿದೆ. ಇನ್ನು 30 kW ಚಾರ್ಜರ್‌ನಲ್ಲಿ ಪ್ರತಿ ಯೂನಿಟ್‌ಗೆ ರೂ. 18, 60 kW ಚಾರ್ಜರ್‌ನಲ್ಲಿ ಪ್ರತಿ ಯೂನಿಟ್‌ಗೆ ರೂ. 21 ಮತ್ತು 150 kW ಚಾರ್ಜರ್‌ನಲ್ಲಿ ರೂ. 24 ಬೆಲೆಯಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಬುಕ್ ಮಾಡಬಹುದು.

ಚಾರ್ಜ್‌ ಪಾಯಿಂಟ್‌ಗಳನ್ನು ಬುಕ್ ಮಾಡಲು 'MyHyundai' ಅಪ್ಲಿಕೇಶನ್‌ ಬಳಸಬೇಕಾಗುತ್ತದೆ. ಅಪ್ಲಿಕೇಶನ್‌ ಮೂಲಕ ಚಾರ್ಜರ್ ಸ್ಟೇಷನ್‌ಗಳ ಅನ್ವೇಷಣೆ, ಚಾರ್ಜಿಂಗ್ ಸ್ಲಾಟ್‌ನ ಪ್ರೀ-ಬುಕಿಂಗ್, ಡಿಜಿಟಲ್ ಪಾವತಿ ಮತ್ತು ಚಾರ್ಜಿಂಗ್ ಸ್ಥಿತಿ ಮಾನಿಟರಿಂಗ್‌ ಮಾಡಬಹುದು. ಈ ಅಪ್ಲಿಕೇಶನ್ ಮುಕ್ತವಾಗಿದ್ದು ಎಲ್ಲಾ ಹುಂಡೈ ಮತ್ತು ಹ್ಯುಂಡೈ ಅಲ್ಲದ EV ಬಳಕೆದಾರರು ಬಳಸಬಹುದಾಗಿದೆ.

ಹ್ಯುಂಡೈ ತನ್ನ ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳನ್ನು 2024 ರಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಹೊಸ ಸ್ಥಳಗಳಿಗೆ ವಿಸ್ತರಿಸಲು ಯೋಜಿಸುತ್ತಿದೆ. ಈ ಸೈಟ್‌ಗಳು ಭಾರತದಾದ್ಯಂತ ನೆಲೆಗೊಳ್ಳುತ್ತವೆ. ತಮಿಳುನಾಡು ಸರ್ಕಾರದೊಂದಿಗಿನ ಒಪ್ಪಂದದ ಪ್ರಕಾರ 2027 ರ ವೇಳೆಗೆ 100 ಚಾರ್ಜಿಂಗ್ ಸ್ಟೇಷನ್‌ಗಳನ್ನು ಆ ರಾಜ್ಯದಲ್ಲಿ ಸ್ಥಾಪಿಸಲು ಯೋಜಿಸುತ್ತಿದೆ.

ಹೊಸ ಚಾರ್ಜಿಂಗ್ ಸ್ಟೇಷನ್‌ಗಳ ಕುರಿತು ಪ್ರತಿಕ್ರಿಯಿಸಿದ ಹ್ಯುಂಡೈ ಕಾರ್ಪೊರೇಟ್ ಪ್ಲಾನಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕ ಜೇ ವಾನ್ ರ್ಯು, ನಮ್ಮ ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳನ್ನು 11 ಸ್ಥಳಗಳಿಗೆ ವಿಸ್ತರಿಸುವ ಮೂಲಕ' ಸಾರ್ವಜನಿಕ ಸ್ಥಳಗಳಲ್ಲಿ 11 ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಿದ ದೇಶದ ಏಕೈಕ ಕಂಪನಿಯಾಗಿದೆ. ವಿದ್ಯುದ್ದೀಕರಣಕ್ಕಾಗಿ ಭಾರತ ಸರ್ಕಾರದ ಸಂಕಲ್ಪಕ್ಕೆ ಅನುಗುಣವಾಗಿ ಚಾರ್ಜಿಂಗ್ ಮೂಲಸೌಕರ್ಯವನ್ನು ಬಲಪಡಿಸುವುದನ್ನು ನಾವು ಮುಂದುವರಿಸುತ್ತೇವೆ ಎಂದರು.

"ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನಲ್ಲಿ, ನಾವು ಯಾವಾಗಲೂ ಹೊಸ ಮಾನದಂಡಗಳನ್ನು ರಚಿಸಲು ಮತ್ತು ಮುನ್ನಡೆಸಲು ಶ್ರಮಿಸಿದ್ದೇವೆ. ಹ್ಯುಂಡೈ ಯಾವಾಗಲೂ ತನ್ನ ಎಲ್ಲಾ ಗ್ರಾಹಕರ ಅಗತ್ಯಗಳನ್ನು ಪೂರೈಸುವ ಕಡೆಗೆ ಕೆಲಸ ಮಾಡುತ್ತಿದೆ. ಸಮಗ್ರ ಎಲೆಕ್ಟ್ರಿಕ್ ವಾಹನ ಪರಿಸರ ವ್ಯವಸ್ಥೆಯನ್ನು ರಚಿಸುವತ್ತ ಭಾರತ ಸರ್ಕಾರದ ಗಮನಕ್ಕೆ ಅನುಗುಣವಾಗಿ, ಹ್ಯುಂಡೈ ಗ್ರಾಹಕರ EV ಮಾಲೀಕತ್ವದ ಅನುಭವವನ್ನು ಹೆಚ್ಚಿಸಲು ಬದ್ಧವಾಗಿದೆ ಎಂದರು.

Article Published On: Thursday, February 15, 2024, 18:25 [IST]
English summary
Hyundai expands its ultra fast charging stations across india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+