27 ಕಿ.ಮೀ ಮೈಲೇಜ್ ನೀಡುವ 6 ಲಕ್ಷದ ಕಾರಿಗೆ ಸಖತ್ ಡಿಮ್ಯಾಂಡ್... ವಿಶೇಷತೆಗಳೇನು?
ಸಣ್ಣ ಕಾರಿನಲ್ಲಿ ಎಸ್‌ಯುವಿಯ ವಿನ್ಯಾಸ ಮತ್ತು ಆಕರ್ಷಕ ವೈಶಿಷ್ಟ್ಯಗಳನ್ನು ಬಯಸುವವರು ಒಮ್ಮೆ ಹ್ಯುಂಡೈ ಕಂಪನಿ ನೀಡುವ ಈ ಬೆಸ್ಟ್ ಕಾರನ್ನು ಒಮ್ಮೆ ಪರಿಶೀಲಿಸಿ. ಇದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಸುರಕ್ಷತೆಯ ವಿಷಯದಲ್ಲಿ ತುಸು ಉತ್ತಮವೆನಿಸಿದೆ. ಹಲವು ಬ್ರಾಂಡ್‌ಗಳು ಇಂತಹ ಕಾರುಗಳನ್ನು ನೀಡುತ್ತವೆಯಾದರೂ, ಹ್ಯುಂಡೈನ ಹೊಸ ಎಕ್ಸ್‌ಟರ್ (hyundai exter) ಬಗ್ಗೆ ಒಮ್ಮೆ ತಿಳಿದುಕೊಳ್ಳಿ. ಬೆಸ್ಟ್ ಇಂಟೀರಿಯರ್, ಆರಾಮ ಮತ್ತು ಉತ್ತಮ ಬೂಟ್ ಸ್ಪೇಸ್ ಇದೆ. ಒಟ್ಟಾರೆ ಸಣ್ಣ ಕುಟುಂಬಕ್ಕೆ ಕಾರನ್ನು ಪರಿಗಣಿಸುತ್ತಿದ್ದರೆ ಎಕ್ಸ್ಟರ್ ಉತ್ತಮ ಆಯ್ಕೆಯಾಗಿದ್ದು, ಈ ಕಾರಿನ ವಿಶೇಷತೆಗಳನ್ನು ಇಲ್ಲಿ ನೋಡೋಣ.
ಹ್ಯುಂಡೈ ಎಕ್ಸ್‌ಟರ್ ಎರಡು ಸಾಮಾನ್ಯ ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್ ಟ್ರೇನ್ ಆಯ್ಕೆಗಳನ್ನು ಹೊಂದಿದೆ. 1.2 - ಲೀಟರ್ ಪೆಟ್ರೋಲ್ - ಸಿಎನ್‌ಜಿ ಆಯ್ಕೆಯಾಗಿದ್ದು, ಇದು 5 - ಸ್ಪೀಡ್ ಮ್ಯಾನುವಲ್ ನೊಂದಿಗೆ ಮಾತ್ರ ಬರುತ್ತದೆ. ಇನ್ನೊಂದು 1.2 - ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಆಗಿದ್ದು, ಇದು 5 - ಸ್ಪೀಡ್ ಮ್ಯಾನುವಲ್ ಅಥವಾ 5 - ಸ್ಪೀಡ್ ಎಎಂಟಿ ಆಯ್ಕೆಯೊಂದಿಗೆ ಬರುತ್ತದೆ.

ಮೈಲೇಜ್ ವಿಷಯಕ್ಕೆ ಬಂದರೆ, ಕಂಪನಿಯ ಪ್ರಕಾರ ನೀವು ಆಯ್ಕೆ ಮಾಡುವ ಆವೃತ್ತಿಯನ್ನು ಅವಲಂಬಿಸಿ ಮೈಲೇಜ್ ಅಂಕಿ ಅಂಶಗಳು ಬದಲಾಗುತ್ತದೆ. 1.2-ಲೀಟರ್ ಪೆಟ್ರೋಲ್ + ಸಿಎನ್‌ಜಿನಲ್ಲಿ - 27.1 ಕಿ.ಮೀ / ಕೆ.ಜಿ, 1.2-ಲೀಟರ್ ಪೆಟ್ರೋಲ್-ಎಎಂಟಿ 19.2 ಕಿ.ಮೀ, 1.2-ಲೀಟರ್ ಪೆಟ್ರೋಲ್-ಎಂಟಿ 19.4 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿದೆ.
ಬೆಲೆಯ ವಿಷಯಕ್ಕೆ ಬಂದರೆ, ಹ್ಯುಂಡೈ ಕಂಪನಿಯು ಎಕ್ಸ್‌ಟರ್ ಸಿಎನ್‌ಜಿ ಕಾರಿನ ಬೆಲೆಯು 8.50 ಲಕ್ಷ ರೂ.ಗಳಿಂದ ಪ್ರಾರಂಭವಾಗಿ ಟಾಪ್ ವೇರಿಯೆಂಟ್ ಬೆಲೆಯು 9.38 ಲಕ್ಷ ರೂ. (ಎಕ್ಸ್ ಶೋರೂಂ ಬೆಲೆಗಳು)ಗಳವರೆಗೆ ಇದೆ. ಉಳಿದಂತೆ ಹ್ಯುಂಡೈ ಎಕ್ಸ್‌ಟರ್ ಸಾಮಾನ್ಯ ಕಾರಿನ ಆರಂಭಿಕ ಬೆಲೆಯು 6 ಲಕ್ಷ ರೂ.ಗಳಿಂದ ಆರಂಭವಾಗಿ ಟಾಪ್ ವೇರಿಯೆಂಟ್ ಬೆಲೆಯು 10.43 ಲಕ್ಷ ರೂ.ಗಳವರೆಗೆ (ಎಕ್ಸ್ ಶೋರೂಂ ಬೆಲೆಗಳು) ಇದೆ.

ಫೀಚರ್ಸ್ ವಿಷಯಕ್ಕೆ ಬಂದರೆ ಇತ್ತೀಚೆಗೆ ಪ್ರೀಮಿಯಂ ಕಾರುಗಳಲ್ಲಿ ನೀಡುವ ಎಲ್ಇಡಿ ಡಿಆರ್ಎಲ್‌ಗಳು, ಕನೆಕ್ಟೆಡ್ ಕಾರ್‌ಟೆಕ್, ಸೆಮಿ - ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 8 - ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ವೈರ್ಲೆಸ್ ಫೋನ್ ಚಾರ್ಜರ್ ಮತ್ತು ಆಟೋ ಎಸಿ, ಕ್ರೂಸ್ ಕಂಟ್ರೋಲ್‌ನಂತಹ ಕೆಲವು ಪ್ರಮುಖ ವೈಶಿಷ್ಟ್ಯಗಳಿವೆ.
ಇದು ಸನ್ ರೂಫ್ ಮತ್ತು ಡ್ಯುಯಲ್ ಕ್ಯಾಮೆರಾಗಳನ್ನು ಹೊಂದಿರುವ ಡ್ಯಾಶ್‌ಕ್ಯಾಮ್ ಅನ್ನು ಸಹ ಹೊಂದಿದೆ. ನೀವು ಆಯ್ಕೆ ಮಾಡುವ ರೂಪಾಂತರಕ್ಕೆ ಅನುಗುಣವಾಗಿ ವೈಶಿಷ್ಟ್ಯಗಳು ಬದಲಾಗುತ್ತವೆ. ಸುರಕ್ಷತೆ ವಿಷಯಕ್ಕೆ ಬಂದರೆ, ಹ್ಯುಂಡೈ ಎಕ್ಸ್‌ಟರ್ ಎಲ್ಲಾ ವೇರಿಯೆಂಟ್‌ಗಳಲ್ಲಿ ಆರು ಏರ್ ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಕ್ಯಾಮೆರಾವನ್ನು ನೀಡಲಾಗಿದೆ.

ಇವಿಷ್ಟೇ ಅಲ್ಲದೇ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ ಸಿ), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್), ರೇನ್ ಸೆನ್ಸಿಂಗ್ ವೈಪರ್ ಮತ್ತು ಐಎಸ್ ಒಫಿಕ್ಸ್ ಚೈಲ್ಡ್ ಸೀಟ್ ಆಂಕೋರೇಜ್, ಎಬಿಎಸ್ ವಿತ್ ಇಬಿಡಿ ಹೊಂದಿದೆ. ಈ ಅಗ್ಗದ ಬೆಲೆಯ ಬೆಸ್ಟ್ ಕಾರಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








