ಬೈಕ್‌ನಂತೆ ಮೈಲೇಜ್.. ಹೊಸ ಎಕ್ಸ್‌ಟರ್ ಹೈ-ಸಿಎನ್‌ಜಿ ಡ್ಯುಯೊ ಕಾರಿನ ವಿಶೇಷತೆಗಳೇನು?, ಮಂಗಳವಾರವಷ್ಟೇ ಬಿಡುಗಡೆ
ಹ್ಯುಂಡೈ ಇಂಡಿಯಾ (Hyundai India) ಪ್ರಮುಖ ವಾಹನ ತಯಾರಕ ಸಂಸ್ಥೆಯಾಗಿ ಖ್ಯಾತಿಗಳಿಸಿದ್ದು, ದೇಶೀಯ ಕಾರು ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯ ಹೊಂದಿರುವುದರಿಂದ ಹಲವು ಕಾರುಗಳನ್ನು ಮಾರಾಟ ಮಾಡುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಕಂಪನಿಯ ಎಕ್ಸ್‌ಟರ್ (Exter) ಪ್ರಮುಖ ಮೈಕ್ರೋ ಎಸ್‌ಯುವಿಯಾಗಿದೆ. 2023ರ ಜುಲೈನಲ್ಲಿ ಈ ಕಾರನ್ನು ಬಿಡುಗಡೆಗೊಳಿಸಲಾಗಿತ್ತು. ಅಂದಿನಿಂದಲೇ ಭಾರೀ ಬೇಡಿಕೆ ಪಡೆದುಕೊಂಡಿದ್ದು, ಒಂದು ವರ್ಷದೊಳಗೆ 93,000 ಯುನಿಟ್ ಎಕ್ಸ್‌ಟರ್ ಎಸ್‌ಯುವಿಗಳನ್ನು ಮಾರಲಾಗಿದೆ.
ನೂತನ ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿ ಕೊಂಚ ಹೆಚ್ಚಿನ ಕಾಯುವಿಕೆ ಅವಧಿಯನ್ನು ಹೊಂದಿದೆ. ನೀವು ಇವತ್ತು ಬುಕ್ಕಿಂಗ್ ಮಾಡಿದರೂ ವಿತರಣೆಯಾಗಲು 10 ರಿಂದ 14 ವಾರ ಹಿಡಿಯುತ್ತದೆ. ಕಂಪನಿಯು ಮತ್ತಷ್ಟು ಖರೀದಿದಾರರನ್ನು ಆಕರ್ಷಿಸಲು ಮಂಗಳವಾರ ಈ ಕಾರಿನ ಹೈ-ಸಿಎನ್‌ಜಿ ಡ್ಯುಯೊ (Hy-CNG Duo) ಮಾದರಿಯನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿದೆ. ಇಲ್ಲಿ 'ಹೈ-ಸಿಎನ್‌ಜಿ' ಕಾರಿನ ಪ್ರಮುಖ ವಿಶೇಷತೆಗಳ ಬಗ್ಗೆ ತಿಳಿಸಿಕೊಟ್ಟಿದ್ದೇವೆ.

ಬೆಲೆ & ರೂಪಾಂತರಗಳು: ದೇಶೀಯ ಮಾರುಕಟ್ಟೆಯಲ್ಲಿ ಹೊಸ ಹ್ಯುಂಡೈ ಎಕ್ಸ್‌ಟರ್ ಹೈ-ಸಿಎನ್‌ಜಿ ಡ್ಯುಯೊ ಎಸ್‌ಯುವಿ ಸ್ಪರ್ಧಾತ್ಮಕ ದರದಲ್ಲಿ ಖರೀದಿಗೆ ದೊರೆಯುತ್ತದೆ. ರೂ.8.50 ರಿಂದ ರೂ.9.38 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. ಎಸ್, ಎಸ್‌ಎಕ್ಸ್ ಹಾಗೂ ನೈಟ್ ಎಸ್‌ಎಕ್ಸ್ ಎಂಬ 3 ಆಕರ್ಷಕ ರೂಪಾಂತರ (ವೇರಿಯೆಂಟ್)ಗಳೊಂದಿಗೂ ದೊರೆಯುತ್ತದೆ.
ಏನಿದೆ ಹೊಸದು: ಎಕ್ಸ್‌ಟರ್ ಸಿಎನ್‌ಜಿ ಹೈ-ಡ್ಯುಯೊ ಹೆಸರೇ ಹೇಳುವಂತೆ, ಈ ಕಾರು 'ಡುಯಲ್ ಸಿಎನ್‌ಜಿ ಟ್ಯಾಂಕ್'ನ್ನು ಒಳಗೊಂಡಿದ್ದು, 60 ಲೀಟರ್ ಇಂಧನ (ಫ್ಯುಯೆಲ್)ವನ್ನು ಸಾಗಿಸಬಲ್ಲದು. ಜೊತೆಗೆ ಇಂಟಿಗ್ರೇಟೆಡ್ ಎಲೆಕ್ಟ್ರಾನಿಕ್ ಕಂಟ್ರೋಲ್ ಯುನಿಟ್ (ಇಸಿಯು) ಹೊಂದಿದೆ. ಇದು ಪೆಟ್ರೋಲ್‌ನಿಂದ ಸಿಎನ್‌ಜಿ ಆಯ್ಕೆಗೆ ಬದಲಾಯಿಸುವುದನ್ನು ಸರಳಗೊಳಿಸುತ್ತದೆ.

ಕಾರ್ಯಕ್ಷಮತೆ: ಹೊಸ ಹ್ಯುಂಡೈ ಎಕ್ಸ್‌ಟರ್ ಹೈ-ಸಿಎನ್‌ಜಿ ಡ್ಯುಯೊ ಎಸ್‌ಯುವಿ 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 68 ಪಿಎಸ್ ಗರಿಷ್ಠ ಶಕ್ತಿ (ಪವರ್) ಮತ್ತು 95.2 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದ್ದು, 27.1 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ.
ವೈಶಿಷ್ಟ್ಯಗಳು: ಈ ಕಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 8-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸನ್‌ರೂಫ್ ಮತ್ತು ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್‌ನ್ನು ಹೊಂದಿದೆ. ಪ್ರಯಾಣಿಕರಿಗೆ ಗರಿಷ್ಠ ಒದಗಿಸಲು 6 ಏರ್‌ಬ್ಯಾಗ್, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ ಅನ್ನು ಪಡೆದಿದೆ.
ಪೆಟ್ರೋಲ್ ಚಾಲಿತ ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿ ರೂ.6.13 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿದೆ. 1.2-ಲೀಟರ್, 4-ಸಿಲಿಂಡರ್ ಎಂಜಿನ್ ಪೆಟ್ರೋಲ್ ಎಂಜಿನ್, 81.8 ಬಿಹೆಚ್‍ಪಿ ಗರಿಷ್ಠ ಶಕ್ತಿ (ಪವರ್) ಹಾಗೂ 113.8 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್/ ಆಟೋಮೇಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಸಿಗಲಿದ್ದು, 19.4 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications