6 ಲಕ್ಷ ಬೆಲೆ, 27 ಕಿ.ಮೀ ಮೈಲೇಜ್ ನೀಡುವ ಕಾರಿಗೆ ಸಖತ್ ಡಿಮ್ಯಾಂಡ್... ವಿದೇಶಗಳಿಗು ರಫ್ತು!
ನೀವು ಸಣ್ಣ ಫ್ಯಾಮಿಲಿ ಕಾರಿನ ಖರೀದಿಗೆ ಪ್ಲಾನ್ ಮಾಡುತ್ತದ್ದರೇ, ಒಮ್ಮೆ ಹ್ಯುಂಡೈ ಕಂಪನಿ ನೀಡುವ ಈ ಬೆಸ್ಟ್ ಕಾರನ್ನು ಒಮ್ಮೆ ಪರಿಶೀಲಿಸಿ. ಹಲವು ಬ್ರಾಂಡ್‌ಗಳು ಇಂತಹ ಕಾರುಗಳನ್ನು ನೀಡುತ್ತವೆಯಾದರೂ, ಇತ್ತೀಚೆಗೆ ಬಿಡುಗಡೆಯಾಗಿ ಸಖತ್ ಸದ್ದು ಮಾಡುತ್ತಿರುವ ಹ್ಯುಂಡೈ ಎಕ್ಸ್‌ಟರ್ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಏಕೆಂದರೆ ಈ ಹ್ಯುಂಡೈ ಎಕ್ಸ್‌ಟರ್ (hyundai exter) ವಿದೇಶಗಳಲ್ಲೂ ಹೆಚ್ಚಿನ ಬೇಡಿಕೆ ಪಡೆದುಕೊಂಡಿದ್ದು, ದಕ್ಷಿಣ ಆಫ್ರಿಕಾದಲ್ಲೂ ಬಿಡುಗಡೆ ಮಾಡಲಾಗಿದೆ. ಬೆಸ್ಟ್ ಫೀಚರ್ಸ್, ಅತ್ಯುತ್ತಮ ಮೈಲೇಜ್, ಆಕರ್ಷಕ ಡಿಸೈನ್, ಐದು ಮಂದಿ ಪ್ರಯಾಣಕ್ಕೆ ಸೂಕ್ತವಾಗಿರುವ ಈ ಕಾರು, ಸಣ್ಣ ಕುಟುಂಬಕ್ಕೆ ಬೆಸ್ಟ್ ಆಯ್ಕೆಯಾಗಿದೆ.
ಬೆಲೆ: ಹ್ಯುಂಡೈ ಎಕ್ಸ್‌ಟರ್ ಆರಂಭಿಕ ಬೆಲೆಯು 6 ಲಕ್ಷ ರೂ.ಗಳಿಂದ ಆರಂಭವಾಗಿ ಟಾಪ್ ವೇರಿಯೆಂಟ್ ಬೆಲೆಯು 10.43 ಲಕ್ಷ ರೂ.ಗಳವರೆಗೆ (ಇವು ಎಕ್ಸ್ ಶೋರೂಂ ಬೆಲೆಗಳು) ಇದೆ. ಹ್ಯುಂಡೈ ಕಂಪನಿಯು ಎಕ್ಸ್‌ಟರ್ ಕಾರನ್ನು ಸಿಎನ್‌ಜಿ ಆಯ್ಕೆಯಲ್ಲೂ ನೀಡುತ್ತಿದ್ದು, ಇದರ ಬೆಲೆಯು 8.50 ಲಕ್ಷ ರೂ.ಗಳಿಂದ ಪ್ರಾರಂಭವಾಗಿ ಟಾಪ್ ವೇರಿಯೆಂಟ್ ಬೆಲೆಯು 9.38 ಲಕ್ಷ ರೂ. (ಎಕ್ಸ್ ಶೋರೂಂ ಬೆಲೆಗಳು)ಗಳವರೆಗೆ ಇದೆ.

ಎಂಜಿನ್: ಹ್ಯುಂಡೈ ಎಕ್ಸ್‌ಟರ್ ಎರಡು ಪವರ್ ಟ್ರೇನ್ ಆಯ್ಕೆಗಳನ್ನು ಹೊಂದಿದ್ದು, 1.2 - ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 5 - ಸ್ಪೀಡ್ ಮ್ಯಾನುವಲ್ ಅಥವಾ 5 - ಸ್ಪೀಡ್ ಎಎಂಟಿ ಆಯ್ಕೆಯೊಂದಿಗೆ ಬರುತ್ತದೆ. ಮತ್ತೊಂದು 1.2 - ಲೀಟರ್ ಪೆಟ್ರೋಲ್ - ಸಿಎನ್‌ಜಿ ಆಯ್ಕೆಯಾಗಿದ್ದು, ಇದು 5 - ಸ್ಪೀಡ್ ಮ್ಯಾನುವಲ್ ನೊಂದಿಗೆ ಮಾತ್ರ ಬರುತ್ತದೆ.
ಮೈಲೇಜ್: ಕಂಪನಿಯ ಪ್ರಕಾರ, 2024 ರ ಹೊಸ ಎಕ್ಸ್‌ಟರ್ ಮೈಲೇಜ್ ನೀವು ಆಯ್ಕೆ ಮಾಡುವ ಎಂಜಿನ್ ಮತ್ತು ಟ್ರಾನ್ಸ್ ಮಿಷನ್ ಅನ್ನು ಅವಲಂಬಿಸಿ ಬದಲಾಗುತ್ತದೆ. 1.2-ಲೀಟರ್ ಪೆಟ್ರೋಲ್-ಎಂಟಿ 19.4 ಕಿ.ಮೀ, 1.2-ಲೀಟರ್ ಪೆಟ್ರೋಲ್-ಎಎಂಟಿ 19.2 ಕಿ.ಮೀ ಮತ್ತು 1.2-ಲೀಟರ್ ಪೆಟ್ರೋಲ್ + ಸಿಎನ್‌ಜಿನಲ್ಲಿ - 27.1 ಕಿಮೀ / ಕೆ.ಜಿ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿದೆ.

ವೈಶಿಷ್ಟ್ಯಗಳು: ನೀವು ಆಯ್ಕೆ ಮಾಡುವ ರೂಪಾಂತರಕ್ಕೆ ಅನುಗುಣವಾಗಿ ವೈಶಿಷ್ಟ್ಯಗಳು ಬದಲಾಗುತ್ತವೆ. ಎಲ್ಇಡಿ ಡಿಆರ್ಎಲ್‌ಗಳು, 8-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ವೈರ್ಲೆಸ್ ಫೋನ್ ಚಾರ್ಜರ್ ಮತ್ತು ಆಟೋ ಎಸಿ, ಕನೆಕ್ಟೆಡ್ ಕಾರ್‌ಟೆಕ್, ಸೆಮಿ-ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್‌ನಂತಹ ಕೆಲವು ಪ್ರಮುಖ ವೈಶಿಷ್ಟ್ಯಗಳಿವೆ. ಇದು ಸನ್ ರೂಫ್ ಮತ್ತು ಡ್ಯುಯಲ್ ಕ್ಯಾಮೆರಾಗಳನ್ನು ಹೊಂದಿರುವ ಡ್ಯಾಶ್‌ಕ್ಯಾಮ್ ಅನ್ನು ಸಹ ಹೊಂದಿದೆ.
ಸುರಕ್ಷತೆ: ಹ್ಯುಂಡೈ ಎಕ್ಸ್‌ಟರ್ ಎಲ್ಲಾ ವೇರಿಯೆಂಟ್‌ಗಳಲ್ಲಿ ಆರು ಏರ್ ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಕ್ಯಾಮೆರಾ, ರೇನ್ ಸೆನ್ಸಿಂಗ್ ವೈಪರ್ ಮತ್ತು ಐಎಸ್ ಒಫಿಕ್ಸ್ ಚೈಲ್ಡ್ ಸೀಟ್ ಆಂಕೋರೇಜ್, ಎಬಿಎಸ್ ವಿತ್ ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ ಸಿ), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಹೊಂದಿದೆ.

ನಮ್ಮ ಅಭಿಪ್ರಾಯ: ಸಣ್ಣ ಕಾರಿನಲ್ಲಿ ಎಸ್‌ಯುವಿಯ ವಿನ್ಯಾಸ ಮತ್ತು ಆಕರ್ಷಕ ವೈಶಿಷ್ಟ್ಯಗಳನ್ನು ಬಯಸುವವರಿಗೆ ಎಕ್ಸ್‌ಟರ್ ಉತ್ತಮ ಆಯ್ಕೆಯಾಗಿದೆ. ಇದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಸುರಕ್ಷತೆಯ ವಿಷಯದಲ್ಲಿ ತುಸು ಉತ್ತಮವೆನಿಸಿದೆ. ಉತ್ತಮ ಕ್ಯಾಬಿನ್ ಅನುಭವ, ಪ್ರಾಯೋಗಿಕತೆ, ಆರಾಮ ಮತ್ತು ಅತ್ಯುತ್ತಮ ಬೂಟ್ ಸ್ಪೇಸ್ ಇದೆ. ಒಟ್ಟಾರೆ ಸಣ್ಣ ಕುಟುಂಬಕ್ಕೆ ಕಾರನ್ನು ಪರಿಗಣಿಸುತ್ತಿದ್ದರೆ, ಎಕ್ಸ್ಟರ್ ಉತ್ತಮ ಆಯ್ಕೆಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








