ಹ್ಯುಂಡೈ ಕಾರಿಗೆ ಫುಲ್‌ ಡಿಮ್ಯಾಂಡ್: ಕೇವಲ 6 ಲಕ್ಷ ಬೆಲೆ, 27 ಕಿ.ಮೀ ಮೈಲೇಜ್, ಸನ್‌ರೂಫ್!

ಎಸ್‌ಯುವಿ ಡಿಸೈನ್ ಮತ್ತು ಸ್ಟೈಲಿಂಗ್‌ನೊಂದಿಗೆ ಉತ್ತಮ ವೈಶಿಷ್ಟ್ಯಗಳಿಂದ ತುಂಬಿದ ಹ್ಯಾಚ್‌ಬ್ಯಾಕ್ ಬಯಸುವವರಿಗೆ ಹ್ಯುಂಡೈ ಎಕ್ಸ್‌ಟರ್ ಉತ್ತಮ ಆಯ್ಕೆಯಾಗಿದೆ. ಇದು ವೈಶಿಷ್ಟ್ಯಗಳಿಂದ ತುಂಬಿದ್ದು, ಅದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಉತ್ತಮ ಸುರಕ್ಷತೆಯನ್ನು ನೀಡುತ್ತದೆ. ಆರಾಮವಾದ ಒಳಾಂಗಣ ಮತ್ತು ದೊಡ್ಡ ಬೂಟ್ ಸ್ಪೇಸ್ ಸೇರಿದಂತೆ, ಹಿಂಭಾಗದ ಸೀಟ್ ಜಾಗವು ಸ್ವಲ್ಪ ಸೀಮಿತವಾಗಿದೆ. ಒಟ್ಟಾರೆಯಾಗಿ, ನೀವು ಸಣ್ಣ ಕುಟುಂಬಕ್ಕೆ ಕಾರನ್ನು ಪರಿಗಣಿಸುತ್ತಿದ್ದರೆ, ಎಕ್ಸ್‌ಟರ್ ಉತ್ತಮ ಆಯ್ಕೆಯಾಗಿದೆ. ಈ ಕಾರಿನ ಕುರಿತ ಹೆಚ್ಚಿನ ವಿವರಗಳು ಇಲ್ಲಿವೆ.

ಹೊಸ ಹ್ಯುಂಡೈ ಎಕ್ಸ್‌ಟರ್ ಪೆಟ್ರೋಲ್ ಮ್ಯಾನುವಲ್ ಆಯ್ಕೆಯೊಂದಿಗೆ EX ಟ್ರಿಮ್ 6 ಲಕ್ಷ ರೂ.( ಎಕ್ಸ್ ಶೋರೂಂ)ಗಳಿಂದ ಆರಂಭವಾಗಿ SX (ಒ) ಕನೆಕ್ಟ್ ನೈಟ್ ಎಡಿಷನ್‌ಗೆ 10.43 ಲಕ್ಷ ರೂ.(ಎಕ್ಸ್ ಶೋರೂಂ) ಗಳವರೆಗೆ ಬೆಲೆಯನ್ನು ಹೊಂದಿದೆ. ಸಿಎನ್‌ಜಿ ವೇರಿಯೆಂಟ್‌ಗಳ ಬೆಲೆಗಳು 8.50 ಲಕ್ಷ ರೂ.(ಎಕ್ಸ್ ಶೋರೂಂ)ಗಳಿಂದ ಪ್ರಾರಂಭವಾಗುತ್ತವೆ. ಇದರಲ್ಲಿ ಟಾಪ್ SX ಸಿಎನ್‌ಜಿ ನೈಟ್ ವೇರಿಯೆಂಟ್ 9.38 ಲಕ್ಷ ರೂ.(ಎಕ್ಸ್ ಶೋರೂಂ) ಬೆಲೆಯಿದೆ.

hyundai-exter-mileage-price-features-safety-details

ಎಂಜಿನ್ ಮತ್ತು ಟ್ರಾನ್ಸ್‌ಮಿಷನ್: ಇದರ 1.2 - ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 5 - ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಅಥವಾ 5 - ಸ್ಪೀಡ್ ಎಎಂಟಿ ಆಯ್ಕೆಯೊಂದಿಗೆ ಬರುತ್ತದೆ. ಮತ್ತೊಂದು 1.2 - ಲೀಟರ್ ಪೆಟ್ರೋಲ್ - ಸಿಎನ್‌ಜಿ ಆಯ್ಕೆಯಲ್ಲಿ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಮಾತ್ರ ನೀಡಲಾಗಿದೆ.

ಮೈಲೇಜ್: ಹ್ಯುಂಡೈ ಎಕ್ಸ್‌ಟರ್ ಮೈಲೇಜ್ ನೀವು ಆಯ್ಕೆ ಮಾಡುವ ಎಂಜಿನ್ ಆಯ್ಕೆನ್ನು ಅವಲಂಬಿಸಿ ಬದಲಾಗುತ್ತದೆ. ಇದರ 1.2-ಲೀಟರ್ ಪೆಟ್ರೋಲ್ ಎಎಂಟಿ ಕಾರು ಲೀಟರ್‌ಗೆ 19.2 ಕಿ.ಮೀ ಮೈಲೇಜ್ ನೀಡುತ್ತದೆ. 1.2-ಲೀಟರ್ ಪೆಟ್ರೋಲ್ ಎಂಟಿ ಕಾರು 19.4 ಕಿ.ಮೀ ಮೈಲೇಜ್ ನೀಡಿದ್ರೇ, 1.2-ಲೀಟರ್ ಪೆಟ್ರೋಲ್ + ಸಿಎನ್‌ಜಿ ಕಾರು ಬರೋಬ್ಬರಿ 27.1 ಕಿ.ಮೀ/ಕೆ.ಜಿ ಮೈಲೇಜ್ ನೀಡುತ್ತದೆ.

hyundai-exter-mileage-price-features-safety-details

ವೇರಿಯೆಂಟ್‌ಗಳು: ಒಟ್ಟು ಒಂಬತ್ತು ವೇರಿಯೆಂಟ್‌ಗಳಲ್ಲಿ ಸಿಗಲಿದ್ದು, ಇದರಲ್ಲಿ ಸ್ಪ್ಲಿಟ್-ಸಿಲಿಂಡರ್ ಸಿಎನ್‌ಜಿ ಕಾರುಗಳು S, SX ಮತ್ತು SX ನೈಟ್ ವೇರಿಯೆಂಟ್‌ಗಳಲ್ಲಿ ಮಾತ್ರ ಲಭ್ಯವಿದೆ. ಉಳಿದಂತೆ SX, SX (0), S, S+, S (0), S (0)+, SX, SX(0) ಮತ್ತು SX (0) ಕನೆಕ್ಟ್‌ನಲ್ಲಿ ಬರುತ್ತವೆ. ನೈಟ್ ಎಡಿಷನ್ ವಿಷಯಕ್ಕೆ ಬಂದರೆ SX ಮತ್ತು SX (0) ಕನೆಕ್ಟ್ ರೂಪಾಂತರಗಳನ್ನು ಆಧರಿಸಿದೆ.

ಫೀಚರ್ಸ್: ನೀವು ಆಯ್ಕೆ ಮಾಡುವ ವೇರಿಯೆಂಟ್ ಅನುಗುಣವಾಗಿ ಕನೆಕ್ಟೆಡ್ ಕಾರ್ ಟೆಕ್, 8-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ವೈರ್ಲೆಸ್ ಫೋನ್ ಚಾರ್ಜಿಂಗ್ ಮತ್ತು ಆಟೋ ಎಸಿ, ಸೆಮಿ-ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್‌ನಂತಹ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಸನ್‌ರೂಫ್ ಮತ್ತು ಡ್ಯುಯಲ್ ಕ್ಯಾಮೆರಾಗಳೊಂದಿಗೆ ಡ್ಯಾಶ್ ಕ್ಯಾಮ್ ಅನ್ನು ಸಹ ಹೊಂದಿದೆ.

hyundai-exter-mileage-price-features-safety-details

ಸುರಕ್ಷತೆ: ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಎಬಿಎಸ್ ವಿತ್ ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ರೇನ್ ಸೆನ್ಸಿಂಗ್ ವೈಪರ್ ಮತ್ತು ಐಎಸ್ ಒಫಿಕ್ಸ್ ಚೈಲ್ಡ್ ಸೀಟ್ ಆಂಕೋರೇಜ್‌ಗಳನ್ನು ಹೊಂದಿದೆ. ಈ ಮೂಲಕ ತನ್ನ ವಿಭಾಗದಲ್ಲಿಯೇ ಉತ್ತಮ ಕಾರೆನಿಸಿಕೊಂಡಿದೆ.

ಹಣಕ್ಕೆ ತಕ್ಕ ವೇರಿಯೆಂಟ್: ನಾವು ಹ್ಯುಂಡೈ ಎಕ್ಸ್ಟರ್ SX (0) ಅನ್ನು ಶಿಫಾರಸು ಮಾಡುತ್ತೇವೆ. ಈ ವರಿಯೆಂಟ್ ಹೆಚ್ಚಿನ ವೈಶಿಷ್ಟ್ಯಗಳನ್ನು ಒದಗಿಸುವುದಲ್ಲದೆ, ಎಲ್ಇಡಿ ಲೈಟಿಂಗ್, ಅಲಾಯ್ ವೀಲ್‌ಗಳು ಮತ್ತು ಲೆದರೆಟ್ ಸೀಟ್ ಅಪ್ಹೋಲ್ಸ್ಟರಿಯನ್ನು ನೀಡುತ್ತದೆ. ವೈಶಿಷ್ಟ್ಯಗಳ ಪ್ರಕಾರ, ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ, ಪುಶ್ ಸ್ಟಾರ್ಟ್ / ಸ್ಟಾಪ್ ಬಟನ್, 8 ಇಂಚಿನ ಇನ್ಫೋಟೈನ್ ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಒಳಗೊಂಡಿದೆ.

More from DriveSpark

Article Published On: Sunday, October 13, 2024, 10:00 [IST]
English summary
Hyundai exter mileage price features safety details
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+