27 Km ಮೈಲೇಜ್.. 6 ಲಕ್ಷದ ಹ್ಯುಂಡೈ ಎಕ್ಸ್‌ಟರ್‌ ಕಾರು ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?

ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor India) ಪ್ರಮುಖ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ ಎಕ್ಸ್‌ಟರ್‌ (Exter) ಜನಪ್ರಿಯ ಮೈಕ್ರೋ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಇದು ಆಕರ್ಷಕ ವೈಶಿಷ್ಟ್ಯವನ್ನು ಒಳಗೊಂಡಿದ್ದು, ಗರಿಷ್ಠ ಮೈಲೇಜ್ ಕೂಡ ನೀಡಬಲ್ಲದು. ನೀವು ಹೊಚ್ಚ ಹೊಸ ಕಾರನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ, ಈ 'ಎಕ್ಸ್‌ಟರ್‌' ಉತ್ತಮ ಆಯ್ಕೆಯಾಗಲಿದೆ. ನಾವಿಲ್ಲಿ ನೂತನ ಕಾರಿನ ಆನ್-ರೋಡ್ ಬೆಲೆ (On-Road Price) ಮೈಲೇಜ್ (Mileage) ಮತ್ತು ಇಎಂಐ (EMI) ಆಯ್ಕೆಯ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

ಬೆಂಗಳೂರಿನಲ್ಲಿ ಹೊಚ್ಚ ಹೊಸ ಹ್ಯುಂಡೈ ಎಕ್ಸ್‌ಟರ್‌ (Hyundai Exter) ಎಸ್‌ಯುವಿ ವಿವಿಧ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದರ ಇಎಕ್ಸ್ (ಪೆಟ್ರೋಲ್) ರೂಪಾಂತರ, ರೂ.7.51 ಲಕ್ಷ ಆನ್-ರೋಡ್ ದರವನ್ನು ಹೊಂದಿದೆ. ರೂ.2 ಲಕ್ಷ ಡೌನ್ ಪೇಮೆಂಟ್ ಪಾವತಿಸಿ, ಈ ಕಾರನ್ನು ಮನೆಗೆ ತಂದರೆ, ರೂ.5.51 ಲಕ್ಷ ಸಾಲವಿರುತ್ತದೆ. ಶೇಕಡ 8% ಬಡ್ಡಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ ರೂ.11,174 ಇಎಂಐ ಕಟ್ಟಬೇಕು.

Hyundai Exter Suv On-Road Price Mileage And Emi Details

ಎಕ್ಸ್‌ಟರ್‌ ಕಾರಿನ ಪೆಟ್ರೋಲ್ ಚಾಲಿತ ಇಎಕ್ಸ್ (ಒ) ರೂಪಾಂತರ, ರೂ.7.93 ಲಕ್ಷ ಆನ್-ರೋಡ್ ಬೆಲೆಯನ್ನು ಒಳಗೊಂಡಿದೆ. ಇದನ್ನು ರೂ.2 ಲಕ್ಷ ಡೌನ್ ಪೇಮೆಂಟ್ ಕಟ್ಟಿ ಖರೀದಿ ಮಾಡಿದರೆ, ರೂ.5.93 ಲಕ್ಷ ಸಾಲ ಬಾಕಿ ಇರುತ್ತದೆ. ಶೇಕಡ 8% ಬಡ್ಡಿ ಹಾಕಿ, 5 ವರ್ಷಗಳ ಅವಧಿಗೆ ಮಾಸಿಕ ರೂ.12,032 ಇಎಂಐ ಪಾವತಿ ಮಾಡಬೇಕು.

ಈ ಎಸ್‌ಯುವಿಯ ಎಸ್ (ಪೆಟ್ರೋಲ್) ರೂಪಾಂತರ, ರೂ.9.15 ಲಕ್ಷ ಆನ್-ರೋಡ್ ದರವನ್ನು ಹೊಂದಿದೆ. ರೂ.2 ಲಕ್ಷ ಡೌನ್ ಪೇಮೆಂಟ್ ಪಾವತಿಸಿ ನೂತನ ಕಾರನ್ನು ಕೊಂಡುಕೊಂಡರೆ, ರೂ.7.15 ಲಕ್ಷ ಸಾಲವಿರುತ್ತದೆ. ಅದಕ್ಕೆ 8% ಬಡ್ಡಿ ಸೇರಿಸಿ, 5 ವರ್ಷಕ್ಕೆ ತಿಂಗಳಿಗೆ ರೂ.14,498 ಕಟ್ಟಬೇಕು.

Hyundai Exter Suv On-Road Price Mileage And Emi Details

ನೂತನ ಹ್ಯುಂಡೈ ಎಕ್ಸ್‌ಟರ್‌ ಕಾರಿನ ಎಸ್ (ಒ) ಪ್ಲಸ್ ರೂಪಾಂತರ, ರೂ.9.47 ಲಕ್ಷ ಆನ್-ರೋಡ್ ಬೆಲೆಯನ್ನು ಪಡೆದಿದೆ. ರೂ.2 ಲಕ್ಷ ಡೌನ್ ಪೇಮೆಂಟ್ ಕಟ್ಟಿ ಈ ಕಾರನ್ನು ತೆಗೆದುಕೊಂಡರೆ, ರೂ.7.47 ಲಕ್ಷ ಸಾಲ ಬಾಕಿಯಿರುತ್ತದೆ. ಶೇಕಡ 8% ಬಡ್ಡಿ ಹಾಕಿ, 5 ವರ್ಷಗಳ ಅವಧಿಗೆ ಮಾಸಿಕ ರೂ.15,153 ಇಎಂಐ ಪಾವತಿ ಮಾಡಬೇಕು.

ಈ ಎಸ್‌ಯುವಿಯ ಎಸ್ಎಕ್ಸ್ ಸಿಎನ್‌ಜಿ ರೂಪಾಂತರ, ರೂ.9.23 ಲಕ್ಷ ಆನ್-ರೋಡ್ ದರವನ್ನು ಒಳಗೊಂಡಿದೆ. ರೂ.2 ಲಕ್ಷ ಡೌನ್ ಪೇಮೆಂಟ್ ಪಾವತಿಸಿ ಹೊಸ ಎಕ್ಸ್‌ಟರ್‌ ಕಾರನ್ನು ಮನೆಗೆ ತಂದರೆ, ರೂ.7.23 ಲಕ್ಷ ಸಾಲವಿರುತ್ತದೆ. ಶೇಕಡ 8% ಬಡ್ಡಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ ರೂ.14,666 ಇಎಂಐ ಕಟ್ಟಬೇಕು.

Hyundai Exter Suv On-Road Price Mileage And Emi Details

ಹೊಸ ಹ್ಯುಂಡೈ ಎಕ್ಸ್‌ಟರ್‌ ಎಸ್‌ಯುವಿ 1.2-ಲೀಟರ್ ಪೆಟ್ರೋಲ್ & ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನೊಂದಿಗೂ ಲಭ್ಯವಿದೆ. 19.2 ರಿಂದ 27.1 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. ಜೊತೆಗೆ 391 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಸಹ ಹೊಂದಿದೆ.

ಈ ಕಾರು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (8-ಇಂಚು), ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಟೋ ಎಸಿ ಹಾಗೂ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, November 9, 2024, 11:30 [IST]
English summary
Hyundai exter suv on road price mileage and emi details
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+