ಹೊಸ ಹ್ಯುಂಡೈ CNG ಹ್ಯಾಚ್‌ಬ್ಯಾಕ್ ಬಿಡುಗಡೆ... ಡಬಲ್ ಸಿಲಿಂಡರ್, ಹೆಚ್ಚಿನ ಮೈಲೇಜ್!
ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಇಂದು ತನ್ನ ಹೊಸ ಹ್ಯಾಚ್‌ಬ್ಯಾಕ್- Grand i10 NIOS ಅನ್ನು ಡ್ಯುಯಲ್ ಸಿಲಿಂಡರ್ CNG ಜೊತೆಗೆ ಬಿಡುಗಡೆ ಮಾಡಿದೆ. ರೂ. 7,75,300 (ಎಕ್ಸ್‌ಶೋರೂಂ) ಆರಂಭಿಕ ಬೆಲೆಗೆ ಪರಿಚಯಿಸಲಾಗಿದೆ. ಇದರ ಸ್ಪೋರ್ಟಿ ವಿನ್ಯಾಸ, ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಸ್ಮಾರ್ಟ್ ತಂತ್ರಜ್ಞಾನದೊಂದಿಗೆ, ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಸಿಎನ್‌ಜಿ ಕಾರು ಗ್ರಾಹಕರಿಗೆ ಆರಾಮದಾಯಕ ಚಾಲನಾ ಅನುಭವವನ್ನು ನೀಡಲಿದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಎರಡರಲ್ಲೂ ಚಾಲನೆಯಲ್ಲಿರುವ ಈ ಹೈ-ಸಿಎನ್‌ಜಿ ಡ್ಯುಯೊ ಕಾರು ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ.
ಗ್ರಾಂಡ್ i10 ನಿಯೋಸ್ ಹೈ-ಸಿಎನ್‌ಜಿ ಡ್ಯುವೋ 5 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ 1.2 L Bi-Fuel (CNG ಜೊತೆಗೆ ಪೆಟ್ರೋಲ್) ಎಂಜಿನ್ ಅನ್ನು ಒಳಗೊಂಡಿದೆ. ಗ್ರಾಹಕರಿಗೆ ಗರಿಷ್ಠ ಸುರಕ್ಷತೆಯನ್ನು ಒದಗಿಸಲು, ಕಂಪನಿಯು ಅಳವಡಿಸಲಾಗಿರುವ ಸಿಎನ್‌ಜಿ ಸಿಸ್ಟಮ್‌ನೊಂದಿಗೆ ಇಂಟಿಗ್ರೇಟೆಡ್ ಎಲೆಕ್ಟ್ರಾನಿಕ್ ಕಂಟ್ರೋಲ್ ಯುನಿಟ್ (ಇಸಿಯು) ಅನ್ನು ಹೊಂದಿದೆ.

ಗ್ರಾಹಕರ ಆಕರ್ಷಣೆಯನ್ನು ಹೆಚ್ಚಿಸಲು, Grand i10 NIOS ನಲ್ಲಿ ಸಿಗುವ ಅದೇ ವೈಶಿಷ್ಟ್ಯಗಳನ್ನು ಹೊಸ ಸಿಎನ್‌ಜಿ ಆವೃತ್ತಿ ಕೂಡ ಹೊಂದಿದೆ. ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, LED DRL ಮತ್ತು LED ಟೈಲ್ ಲ್ಯಾಂಪ್, ರೂಫ್ ರೈಲ್‌ಗಳು, ಶಾರ್ಕ್ ಫಿನ್ ಆಂಟೆನಾ, 20.25 cm ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫುಟ್‌ವೆಲ್ ಲೈಟಿಂಗ್, ಹಿಂಭಾಗದ AC ವೆಂಟ್‌ಗಳು, ಟಿಲ್ಟ್ ಸ್ಟೀರಿಂಗ್ ಸೇರಿದಂತೆ ಹೆಚ್ಚಿನ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಜೊತೆಗೆ, ಹ್ಯಾಚ್‌ಬ್ಯಾಕ್ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳಾದ 6 ಏರ್‌ಬ್ಯಾಗ್‌ಗಳು ಸ್ಟ್ಯಾಂಡರ್ಡ್, TPMS ಹೈಲೈನ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಡೇ & ನೈಟ್ IRVM, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC) ಸೇರಿದಂತೆ ಹೆಚ್ಚಿನವುಗಳನ್ನು ಹೊಂದಿದೆ. ಗ್ರಾಂಡ್ i10 NIOS Hy-CNG ಡ್ಯುವೋ ಜೊತೆಗೆ, ಗ್ರಾಂಡ್ i10 NIOS Hy-CNG (ಸಿಂಗಲ್ ಸಿಲಿಂಡರ್) ಸಹ ಗ್ರಾಹಕರಿಗೆ ಲಭ್ಯವಿರುತ್ತದೆ.
ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ನಿರ್ದೇಶಕ ತರುಣ್ ಗಾರ್ಗ್ ಮಾತನಾಡಿ, ಗ್ರಾಂಡ್ ಐ10 ನಿಯೋಸ್ ಹೈ-ಸಿಎನ್‌ಜಿ ಡ್ಯುವೋ ನಮ್ಮ ಗ್ರಾಹಕರ ವಿಕಸನಗೊಳ್ಳುತ್ತಿರುವ ಅಗತ್ಯತೆಗಳನ್ನು ಪೂರೈಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. CNG ವ್ಯವಸ್ಥೆ, ಉತ್ತಮ ಇಂಧನ ದಕ್ಷತೆ ಮತ್ತು ಸುರಕ್ಷತಾ ವೈಶಿಷ್ಟ್ಯಗಳು, ಆರಾಮದಾಯಕ ಚಾಲನಾ ಅನುಭವವನ್ನು ನೀಡಲು ಈ ಕಾರನ್ನು ವಿನ್ಯಾಸಗೊಳಿಸಲಾಗಿದೆ. ಗ್ರಾಹಕರು ಈ CNG ಡ್ಯುವೋವನ್ನು ಮೆಚ್ಚುತ್ತಾರೆ ಎಂಬ ವಿಶ್ವಾಸವಿದೆ.
ಗ್ರಾಂಡ್ i10 NIOS ಹ್ಯಾಚ್‌ಬ್ಯಾಕ್ ಅನ್ನು ಗ್ರಾಹಕರ ಸುರಕ್ಷತೆಯನ್ನು ಖಾತ್ರಿಪಡಿಸುವ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಆಧುನಿಕ ಆಕರ್ಷಣೆಯನ್ನು ಪ್ರದರ್ಶಿಸುವ ಹೊಸ ವಿನ್ಯಾಸವನ್ನು ಹೊಂದಿದ್ದರೇ, ಇತ್ತ ಗ್ರ್ಯಾಂಡ್ i10 NIOS CNG ಕಾರನ್ನು ಗ್ರಾಹಕರ ಜೀವನಶೈಲಿ, ತಂತ್ರಜ್ಞಾನ, ಸೌಕರ್ಯ, ಅನುಕೂಲಕ್ಕಾಗಿ ಮತ್ತು ಹಣವನ್ನು ಉಳಿಸುವ ಸಲುವಾಗಿ ನಿರ್ಮಿಸಲಾಗಿದೆ ಎಂದು ಹೇಳಿದರು.
ಗ್ರಾಂಡ್ ಐ10 ನಿಯೋಸ್ ಜನಪ್ರಿಯತೆ: 2019 ರಲ್ಲಿ ಬಿಡುಗಡೆಯಾಗಿದ್ದ ಹ್ಯುಂಡೈ ಗ್ರ್ಯಾಂಡ್ i10 NIOS ಹ್ಯಾಚ್‌ಬ್ಯಾಕ್, ಖರೀದಿದಾರರಲ್ಲಿ ಭಾರೀ ಜನಪ್ರಿಯತೆ ಪಡೆಯಿತು. ಇದುವರೆಗೆ 4 ಲಕ್ಷ ಯೂನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ಗೆ ಪ್ರಮುಖ ಕಾರು ಮಾದರಿಯಾಗಿ ಗುರ್ತಿಸಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications