ಪ್ರೀಮಿಯಂ ಹ್ಯಾಚ್‌ಬ್ಯಾಕ್ i20 ಖರೀದಿಸಬೇಕೆ?: ಡೌನ್‌ಪೇಮೆಂಟ್, ಇಎಂಐ ಮಾಹಿತಿ ನಿಮಗಾಗಿ!
ದಕ್ಷಿಣ ಕೊರಿಯಾದ ಪ್ರಖ್ಯಾತ ಕಾರು ನಿರ್ಮಾಣ ಕಂಪನಿಯಾದ ಹ್ಯುಂಡೈ, ಭಾರತೀಯ ಮಾಂರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಪ್ರಮುಖ ಕಾರುಗಳಲ್ಲಿ i20 ಸಹ ಒಂದು. ಈಗಾಗಲೇ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್ಮೆಂಟ್‌ನಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಈ ಕಾರಿನ ಡೌನ್‌ಪೇಮೆಂಟ್ ಮತ್ತು ಇಎಂಐ ಕುರಿತಾದ ಮಾಹಿತಿಗಳನ್ನು ನೋಡೋಣ.
ಮೊದಲಿಗೆ ಬೆಂಗಳೂರಿನಲ್ಲಿ i20 ಆರಂಭಿಕ ವೇರಿಯಂಟ್ ಆನ್ ರೋಡ್ ಬೆಲೆ ಆರಂಭವಾಗುವುದು, 8,52,541 ರೂಪಾಯಿಗಳು. ಇದರಲ್ಲಿ ಎಕ್ಸ್ ಶೋರೂಮ್ ಬೆಲೆ ಸುಮಾರು 7,04,400 ಲಕ್ಷಗಳು. ಇದರ ಜೊತೆಗೆ ಇನ್ಸುರೆನ್ಸ್ ಮತ್ತು ಆರ್‌ಟಿಒ ಟ್ಯಾಕ್ಸ್‌ಗಳು ಸೇರಿ ಸುಮಾರು 8,52,541 ಲಕ್ಷ ರೂಗಳಿಗೆ ನಿಮಗೆ ಸಿಗುತ್ತದೆ.

ಇನ್ನಿದರ (Hyundai i20) ಡೌನ್ ಪೇಮೆಂಟ್ ಬಗ್ಗೆ ನೋಡುವುದಾದರೆ ನೀವು ಈ ವಾಹನಕ್ಕೆ 2 ಲಕ್ಷ ರೂ ಡೌನ್ ಪೇಮೆಂಟ್ ಮಾಡಿದರೆ ಸುಮಾರು ೯.೮ % ಬಡ್ಡಿದರದಲ್ಲಿ ೭ ವರ್ಷಗಳ ಕಾಲಾವಧಿಯ ಲೋನ್ ಮಾಡಬಹುದು. ಹೀಗೆ ಮಾಡಿದಾಗ ನೀವು ಪ್ರತೀ ತಿಂಗಳು ಇಎಂಐ ರೂಪದಲ್ಲಿ ಸುಮಾರು 10,766 ರೂಪಾಯಿಗಳಷ್ಟು ಹಣವನ್ನು ಪಾವತಿಸಬೇಕಾಗುತ್ತದೆ.
ಇನ್ನು i20 ಬಗ್ಗೆ ನೋಡುವುದಾದರೆ, ಹ್ಯುಂಡೈ ಐ20 (Hyundai i20) ಕಾರಿನ ಸಿವಿಟಿ ಮಾದರಿಗಳಿಗಾಗಿ ನೀವು ಇವತ್ತು ಬುಕ್ಕಿಂಗ್ ಮಾಡಿದರೂ ಕೇವಲ 10 ವಾರಗಳಲ್ಲಿ ವಿತರಣೆಯಾಗುತ್ತವೆ. ಉಳಿದೆಲ್ಲ ಆವೃತ್ತಿಗಳು 6 ವಾರಗಳಲ್ಲಿ ಗ್ರಾಹಕರ ಮನೆ ಸೇರುತ್ತವೆ. ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಈ ಕಾರು ರೂ.7.04 ಲಕ್ಷದಿಂದ ರೂ.11.21 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ.

ನೂತನ ಹ್ಯುಂಡೈ ಐ20 ಎರಾ, ಮ್ಯಾಗ್ನಾ, ಸ್ಪೋರ್ಟ್ಜ್, ಸ್ಪೋರ್ಟ್ಜ್ (ಒ) ಸೇರಿದಂತೆ ಹಲವು ರೂಪಾಂತರಗಳ ಆಯ್ಕೆಯಲ್ಲಿಯೂ ಲಭ್ಯವಿದೆ. ಈ ಕಾರಿನ ಹೊರ ಭಾಗದ ವಿನ್ಯಾಸ ನೋಡುಗರನ್ನು ಸೆಳೆಯಲಿದ್ದು, ಅಮೆಜಾನ್ ಗ್ರೇ, ಫಿಯರಿ ರೆಡ್, ಅಟ್ಲಾಸ್ ವೈಟ್, ಟೈಫೂನ್ ಸಿಲ್ವರ್ ಒಳಗೊಂಡಂತೆ 2 - ಡುಯಲ್ ಟೋನ್ ಹಾಗೂ 6 - ಮೊನೊ ಟೋನ್ ಬಣ್ಣಗಳೊಂದಿಗೂ ಸಿಗುತ್ತದೆ. ಈ ಕಾರಿನಲ್ಲಿ 5 ಮಂದಿ ಪ್ರಯಾಣಿಸಬಹುದು.
ಈ ಕಾರು ಕೇವಲ 1.2 - ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ದೊರೆಯಲಿದ್ದು, 83 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 115 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5 - ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಗೇರ್ ಬಾಕ್ಸ್ ನೋಂದಿಗೆ ಖರೀದಿಗೆ ಲಭ್ಯವಿದ್ದು, ರೂಪಾಂತರಗಳಿಗೆ ಅನುಗುಣವಾಗಿ 16 - 20 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.

ಹ್ಯುಂಡೈ ಐ20 (Hyundai i20) ಗ್ರಾಹಕರನ್ನು ಆಕರ್ಷಿಸುವ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ 10.25 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಏರ್ ಪ್ಯೂರಿಫೈಯರ್, ಆಟೋ ಎಲ್ಇಡಿ ಹೆಡ್‌ಲೈಟ್ಸ್ ಸೆಮಿ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ ಮತ್ತು ಸನ್‌ರೂಫ್ ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications