Hyundai i20: ಹ್ಯುಂಡೈ ಐ20 ಕಾರಿಗೆ ಭರ್ಜರಿ ರಿಯಾಯಿತಿ.. 7 ಲಕ್ಷ ಬೆಲೆ, 6 ಏರ್‌ಬ್ಯಾಗ್‌, 20 ಕಿ.ಮೀ ಮೈಲೇಜ್!

ಹ್ಯುಂಡೈ ಇಂಡಿಯಾ (Hyundai India), ದೇಶೀಯ ಮಾರುಕಟ್ಟೆಯಲ್ಲಿ ಮಾರಾಟಗೊಳಿಸುವ ವಿವಿಧ ಕಾರುಗಳ ಮೇಲೆ ಈ ಫೆಬ್ರವರಿ ತಿಂಗಳು ಭರ್ಜರಿ ರಿಯಾಯತಿ ಪ್ರಯೋಜನವನ್ನು ಘೋಷಣೆ ಮಾಡಿದೆ. ಅದರಲ್ಲೂ ಜನಪ್ರಿಯ ಹ್ಯಾಚ್‌ಬ್ಯಾಕ್ ಐ20 (i20) ಸಹ ಒಳ್ಳೆಯ ಡಿಸ್ಕೌಂಟ್ ಆಫರ್ ಪಡೆದಿದೆ. ಹೆಚ್ಚಿನ ವಿವರ ಇಲ್ಲಿದೆ.

ಹ್ಯುಂಡೈ ಐ20 (Hyundai i20) ಕಾರು, ಒಟ್ಟು ರೂ.25,000 ರಿಯಾಯಿತಿ ಸೌಲಭ್ಯವನ್ನು ಪಡೆದಿದ್ದು, ರೂ.15,000 ನಗದು ರಿಯಾಯಿತಿ (Cash Discount), ರೂ.10,000 ವಿನಿಮಯ ಬೋನಸ್ (Exchange Bonus) ಅನ್ನು ಒಳಗೊಂಡಿದೆ. ದೇಶಾದ್ಯಂತ ವಿವಿಧ ಡೀಲರ್‌ಶಿಪ್‌ಗಳು 2023ರ ಮಾದರಿಗಳಿಗೂ ಉತ್ತಮ ಆಫರ್ (ಕೊಡುಗೆ) ನೀಡುತ್ತಿದ್ದು, ಡಿಸ್ಕೌಂಟ್ ಸಂಬಂಧ ಹೆಚ್ಚಿನ ಮಾಹಿತಿ ಪಡೆಯಲು ನಿಮ್ಮ ಹತ್ತಿರದ ಶೋರೂಂಗೆ ಭೇಟಿ ನೀಡಿರಿ.

Hyundai i20 get upto Rs.25,000 discount in February: 7 lakh price, 6 airbags, 20 km mileage

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಹ್ಯುಂಡೈ ಐ20 ಹ್ಯಾಚ್‌ಬ್ಯಾಕ್, ರೂ.7.04 ಲಕ್ಷದಿಂದ ರೂ.11.21 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎರಾ, ಮ್ಯಾಗ್ನಾ, ಸ್ಪೋರ್ಟ್ಜ್, ಸ್ಪೋರ್ಟ್ಜ್ (ಒ), ಅಸ್ತಾ ಸೇರಿದಂತೆ 6 ರೂಪಾಂತರ ಮತ್ತು ಅಮೆಜಾನ್ ಗ್ರೇ, ಫಿಯರಿ ರೆಡ್, ಅಟ್ಲಾಸ್ ವೈಟ್ ಒಳಗೊಂಡಂತೆ 2 ಡುಯಲ್ ಟೋನ್, 6 ಮೊನೊಟೋನ್ ಬಣ್ಣಗಳೊಂದಿಗೆ ಸಿಗುತ್ತದೆ.

ಹ್ಯುಂಡೈ ಐ20 ಹ್ಯಾಚ್‌ಬ್ಯಾಕ್, 1.2 - ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 83 ಪಿಎಸ್ ಗರಿಷ್ಠ ಪವರ್ (ಶಕ್ತಿ), 115 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. 5 - ಸ್ವೀಡ್ ಮ್ಯಾನುವಲ್/ ಸಿವಿಟಿ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ. ರೂಪಾಂತರಗಳಿಗೆ ಅನುಗುಣವಾಗಿ 16 ರಿಂದ 20 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.

Hyundai i20 get upto Rs.25,000 discount in February: 7 lakh price, 6 airbags, 20 km mileage

ಈ ಕಾರು ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದ್ದು, 5 ಮಂದಿ ಪ್ರಯಾಣಿಸಬಹುದು. 10.25 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಏರ್ ಪ್ಯೂರಿಫೈಯರ್, ಆಟೋ ಎಲ್ಇಡಿ ಹೆಡ್‌ಲೈಟ್ಸ್, ಸೆಮಿ - ಡಿಜಿಟಲ್ ಡ್ರೈವರ್‌ ಡಿಸ್ಪ್ಲೇ ಮತ್ತು ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಹ್ಯುಂಡೈ ಐ20 ಹ್ಯಾಚ್‌ಬ್ಯಾಕ್ ಸುರಕ್ಷತೆಗಾಗಿ 6 - ಏರ್‌ಬ್ಯಾಗ್‌, ಐಎಸ್ಒಎಫ್ಎಕ್ಸ್ ಚೈಲ್ಡ್ ಸೀಟ್ ಆಂಕಾರೇಜ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್ ಅಸಿಸ್ಟ್ ಕಂಟ್ರೋಲ್, VSM (ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್), 3 - ಪಾಯಿಂಟ್ ಸೀಟ್‌ಬೆಲ್ಸ್ಟ್ ಅನ್ನು ಒಳಗೊಂಡಿದೆ. ಈ ಕಾರಿಗೆ ಮಾರುತಿ ಸುಜುಕಿ ಬಲೆನೊ, ಟೊಯೊಟಾ ಗ್ಲಾನ್ಜಾ ಮತ್ತು ಟಾಟಾ ಆಲ್ಟ್ರೋಜ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ.

Hyundai i20 get upto Rs.25,000 discount in February: 7 lakh price, 6 airbags, 20 km mileage

ಇನ್ನು, ಕೈಗೆಟುಕುವ ಬೆಲೆಯ ಕಾರುಗಳನ್ನು ಹುಡುಕುವವರಿಗೆ ಹ್ಯುಂಡೈ ಐ20 ಉತ್ತಮ ಆಯ್ಕೆಯಾಗುತ್ತದೆ ಎಂದು ಹೇಳಿದರೆ, ತಪ್ಪಾಗುವುದಿಲ್ಲ. ಈ ಕಾರು ಬೆಲೆಗೆ ತಕ್ಕಂತೆ ಅತ್ಯಾಧುನಿಕ ವೈಶಿಷ್ಟ್ಯವನ್ನು ಹೊಂದಿರುವುದರಿಂದ ಇವತ್ತಿಗೂ ಹೆಚ್ಚಿನ ಮಂದಿ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಫೆಬ್ರವರಿ ತಿಂಗಳು ಹ್ಯುಂಡೈ ಐ20 ಕಾರಿಗೆ ಉತ್ತಮ ರಿಯಾಯಿತಿ ಇರುವುದರಿಂದ ಮಾರಾಟ ಪ್ರಮಾಣವು ದ್ವಿಗುಣಗೊಳ್ಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, February 9, 2024, 14:17 [IST]
English summary
Hyundai i20 get upto rs 25000 discount in february 7 lakh price 6 airbags 20 km mileage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+