Hyundai: ಹ್ಯುಂಡೈ i20 ಸ್ಪೋರ್ಟ್ಜ್ (O) ಟ್ರಿಮ್ ಬಿಡುಗಡೆ : ಬೆಲೆಯೆಷ್ಟು, ವಿಶೇಷತೆಗಳೇನು?

ಸೆಪ್ಟೆಂಬರ್ 2023 ರಲ್ಲಿ ಬಿಡುಗಡೆ ಮಾಡಲಾಗಿದ್ದ ಹ್ಯುಂಡೈ i20 ಫೇಸ್‌ಲಿಫ್ಟ್ ಮಾದರಿಯ ಸ್ಪೋರ್ಟ್ಜ್ (O) ಟ್ರಿಮ್ ಇದೀಗ ಬಿಡುಗಡೆಯಾಗಿದೆ. ಇದು ಸಾಮಾನ್ಯ Sportz ಟ್ರಿಮ್‌ಗಿಂತ 35,000 ರೂ. ಹೆಚ್ಚು ಬೆಲೆಯಿದ್ದು, ಮೊನೊಟೋನ್ ಪೇಂಟ್ ಆಯ್ಕೆಗಳಿಂದಾಗಿ ಸ್ಪೋರ್ಟ್ಜ್ (O) ಟ್ರಿಮ್‌ಗೆ ರೂ.8.73 ಲಕ್ಷ (ಎಕ್ಸ್ ಶೋ ರೂಂ)ಬೆಲೆಯನ್ನು ನಿಗದಿಪಡಿಸಲಾಗಿದೆ.

ಹಾಗೆಯೇ ಇದರಲ್ಲಿ ಡ್ಯುಯಲ್ - ಟೋನ್ ಪೇಂಟ್ ಆವೃತ್ತಿಗಳ ಬೆಲೆಯು ರೂ. 8.88 ಲಕ್ಷವಿದೆ. ಹೊಸ ರೂಪಾಂತರವು ಸ್ಪೋರ್ಟ್ಜ್ ವೇರಿಯೆಂಟ್‌ಗೆ ಹೆಚ್ಚು - ಕಡಿಮೆ ಒಂದೇ ಆಗಿದ್ದರೂ, ಹೆಚ್ಚಿನ ಫೀಚರ್‌ಗಳನ್ನು ಪಡೆದಿದೆ. i20 Sportz (O) ಯಾವೆಲ್ಲಾ ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆಯುತ್ತದೆ ಎಂಬುದನ್ನು ಈ ಕೆಳಗೆ ನೋಡೋಣ.

hyundai-i20-sportz-o-trim-launched-price-specs-details

i20 Sportz (O) ಫೀಚರ್‌ಗಳು: ಈ ಹಿಂದೆ ಕೇವಲ ಆಸ್ಟಾ ಮತ್ತು ಆಸ್ಟಾ (ಒ) ವೇರಿಯೆಂಟ್‌ಗಳಲ್ಲಿ ಮಾತ್ರ ಲಭ್ಯವಿದ್ದ ಸನ್‌ರೂಫ್ ಅನ್ನು ಈಗ i20 ಸ್ಪೋರ್ಟ್ಜ್ (O) ಟ್ರಿಮ್‌ನಲ್ಲಿ ಸಿಂಗಲ್ - ಪೇನ್ ಸನ್‌ರೂಫ್ ಆಗಿ ನೀಡಲಾಗಿದೆ. ಇತರ ಹೈಲೆಟ್‌ಗಳೆಂದರೆ ವೈರ್‌ಲೆಸ್ ಚಾರ್ಜರ್ ಮತ್ತು ಬಾಗಿಲುಗಳ ಮೇಲಿನ ಆರ್ಮ್‌ರೆಸ್ಟ್‌ಗಳಿಗೆ ಫಾಕ್ಸ್ ಲೆದರ್ ಫಿನಿಶ್ ನೀಡಲಾಗಿದೆ.

ಇವುಗಳ ಹೊರತಾಗಿ, ಹ್ಯುಂಡೈ i20 ಸ್ಪೋರ್ಟ್ಜ್ (O) ನಲ್ಲಿ ಹೈಟ್ - ಅಡ್ಜಸ್ಟಬಲ್ ಡ್ರೈವರ್ ಸೀಟ್, ಕ್ರೂಸ್ ಕಂಟ್ರೋಲ್ ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದಂತಹ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. ಪ್ರಮಾಣಿತ ಧ್ವನಿ ವ್ಯವಸ್ಥೆಯು ಮುಂಭಾಗದ ಟ್ವೀಟರ್‌ಗಳೊಂದಿಗೆ ಮುಂಭಾಗ ಮತ್ತು ಹಿಂಭಾಗದ ಸ್ಪೀಕರ್‌ಗಳನ್ನು ಒಳಗೊಂಡಿದೆ. ಬಾಸ್ ಸೌಂಡ್ ಸಿಸ್ಟಮ್ ಅನ್ನು ಹೆಚ್ಚಿನ ರೂಪಾಂತರಗಳಲ್ಲಿ ಮಾತ್ರ ನೀಡಲಾಗುತ್ತದೆ.

hyundai-i20-sportz-o-trim-launched-price-specs-details

ಸುರಕ್ಷತೆಯ ದೃಷ್ಟಿಯಿಂದ, ಹುಂಡೈ i20 ಸ್ಪೋರ್ಟ್ಜ್ (O) ಆರು ಏರ್‌ಬ್ಯಾಗ್‌ಗಳು, ABS, EBD, ಹಿಲ್-ಸ್ಟಾರ್ಟ್ ಅಸಿಸ್ಟ್, ESC ಮತ್ತು ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್ ಕಂಟ್ರೋಲ್ ಅನ್ನು ಪಡೆದಿದೆ. ಸದ್ಯ ಇದರ ವಿಭಾಗದಲ್ಲಿರುವ ಇತರ ಪ್ರತಿಸ್ಪರ್ಧಿಗಳಂತೆ ಬೆಲೆಗೆ ತಕ್ಕ ಮಾದರಿಯಂತೆ ಉತ್ತಮ ಸೇಫ್ಟಿ ಫೀಚರ್‌ಗಳನ್ನು ಒದಗಿಸಲಾಗಿದೆ ಎಂದು ಹೇಳಬಹುದು.

i20 Sportz (O) ಪ್ರತಿಸ್ಪರ್ಧಿಗಳು: ಹುಂಡೈ i20 ಫೇಸ್‌ಲಿಫ್ಟ್ ಟೊಯೊಟಾ ಗ್ಲಾಂಝಾ, ಮಾರುತಿ ಸುಜುಕಿ ಬಲೆನೊ ಮತ್ತು ಟಾಟಾ ಆಲ್ಟ್ರೊಜ್‌ನಂತಹ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ. i20 ಅನ್ನು ಈ ಹಿಂದೆ 120hp ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಲಾಗಿತ್ತು. ಆದಾಗ್ಯೂ, ಆ ಘಟಕವು ಈಗ ಹಾಟ್ i20 N ಲೈನ್‌ನೊಂದಿಗೆ ಮಾತ್ರ ಲಭ್ಯವಿದೆ.

hyundai-i20-sportz-o-trim-launched-price-specs-details

i20 Sportz (O) ಪವರ್‌ಟ್ರೇನ್: ಹ್ಯುಂಡೈ i20 Sportz (O) ಸ್ಟ್ಯಾಂಡರ್ಡ್ 1.2 - ಲೀಟರ್ ಕಪ್ಪಾ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗುತ್ತದೆ, ಆದರೆ ಇತರ ರೂಪಾಂತರಗಳಿಗಿಂತ ಭಿನ್ನವಾಗಿ, ಇದು 5 - ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಲಭ್ಯವಿದೆ. ಈ ಎಂಜಿನ್ ಮ್ಯಾನ್ಯುವಲ್‌ಗೆ ಜೋಡಿಸಿದಾಗ 83 hp ಪವರ್ ಮತ್ತು ಆಯ್ದ ಟ್ರಿಮ್‌ಗಳಲ್ಲಿ ನೀಡಲಾಗುವ CVT ಆಟೋಗೆ ಜೋಡಿಸಿದಾಗ 88 hp ಪವರ್ ಉತ್ಪಾದಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, February 5, 2024, 18:42 [IST]
English summary
Hyundai i20 sportz o trim launched price specs details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+