ಹುಂಡೈ IONIQ 5 ನವೀಕರಣದ ಜೊತೆಗೆ ಹೊಸ N-ಲೈನ್ ಸ್ಪೋರ್ಟಿ ಆವೃತ್ತಿ ಘೋಷಣೆ

ಹುಂಡೈ ಮೋಟಾರ್ ಕಂಪನಿಯು ತನ್ನ ಎಲೆಕ್ಟ್ರಿಕ್ ವೆಹಿಕಲ್ (EV) ಶ್ರೇಣಿಗಾಗಿ ವರ್ಧಿತ IONIQ 5 ಮತ್ತು ಹೊಸ IONIQ 5 N-ಲೈನ್‌ನ ಮುಂಬರುವ ಬಿಡುಗಡೆಯನ್ನು ಇಂದು ಪ್ರಕಟಿಸಿದೆ. ಹೊಸ ಅಪ್‌ಡೇಟ್‌ಗಳೊಂದಿಗೆ ಎಂಟ್ರಿ ಕೊಡಲಿರುವ ವರ್ಧಿತ IONIQ 5 ವಿಶೇಷಣಗಳನ್ನು ಸುಧಾರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ನವೀಕರಿಸಿದ IONIQ 5 ಈಗ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದ್ದು, ಇದು 77.4 kWh ನಿಂದ 84.0 kWh ವರೆಗೆ ಬೆಳೆದಿದೆ. ಈ ಮೂಲಕ ಹೊಸ ಇವಿ ರೇಂಜ್‌ನಲ್ಲಿ ಭಾರೀ ಬದಲಾವಣೆಯಾಗಿದೆ. ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳನ್ನು ರೀಡಿಸೈನ್ ಮಾಡಲಾಗಿದೆ. ಹಾಗೆಯೇ ಏರೋಡೈನಮಿಕ್ ಪರ್ಫಾಮೆನ್ಸ್ ಸುಧಾರಿಸಲು, ಹಿಂದಿನ ಸ್ಪಾಯ್ಲರ್ ಅನ್ನು 50 mm ವರೆಗೆ ವಿಸ್ತರಿಸಲಾಗಿದೆ.

hyundai-ioniq-5-gets-a-enhanced-features-and-new-n-line-model

ಸೆಂಟರ್ ಕನ್ಸೋಲ್‌ನಲ್ಲಿ, ಯುನಿವರ್ಸಲ್ ಐಲ್ಯಾಂಡ್‌ನ ಮೇಲಿನ ಭಾಗವು ಈಗ ಭೌತಿಕ ಬಟನ್ (physical button) ಅನ್ನು ಹೊಂದಿದೆ. ಈ ಬಟನ್ ಮೊದಲ ಸಾಲಿನ ಹೀಟ್ ಅಂಡ್ ಕೋಲ್ಡ್ ಸೀಟ್‌ಗಳು, ಆಕರ್ಷಕ ಸ್ಟೀರಿಂಗ್ ವೀಲ್ ಮತ್ತು ಪಾರ್ಕಿಂಗ್ ಅಸಿಸ್ಟ್ ಫಂಕ್ಷನ್‌ಗಳಂತಹ ಆಗಾಗ್ಗೆ ಬಳಸುವ ಕಾರ್ಯಗಳನ್ನು ಕಂಟ್ರೋಲ್ ಮಾಡಬಲ್ಲದು. ಉಳಿದಂತೆ ಸ್ಮಾರ್ಟ್‌ಫೋನ್ ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಅನ್ನು ಕೆಳಗಿನಿಂದ ಮೇಲಿಕ್ಕೆ ಸ್ಥಳಾಂತರಿಸಲಾಗಿದೆ.

ಮೊಬೈಲ್ ಅನುಭವ ಮತ್ತು ಬಳಕೆದಾರರ ಅನುಕೂಲಕ್ಕಾಗಿ, ಕಂಪನಿಯು ಕನೆಕ್ಟೆಡ್ ಕಾರ್ ನ್ಯಾವಿಗೇಷನ್ ಕಾಕ್‌ಪಿಟ್ (ccNC) ಎಂಬ ಮುಂದಿನ-ಪೀಳಿಗೆಯ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಜಾರಿಗೆ ತಂದಿದೆ. ವಾಹನದ ಪ್ರಮುಖ ಎಲೆಕ್ಟ್ರಾನಿಕ್ ಕಂಟ್ರೋಲ್‌ಗಳು ನವೀಕೃತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ವಾಹನವು ವೈರ್‌ಲೆಸ್ ಓವರ್-ದಿ-ಏರ್ (OTA) ಸಾಫ್ಟ್‌ವೇರ್ ನವೀಕರಣಗಳನ್ನು ಸಹ ಹೊಂದಿದೆ.

hyundai-ioniq-5-gets-a-enhanced-features-and-new-n-line-model

ಹೊಸ ಸುರಕ್ಷತೆ ಮತ್ತು ಅನುಕೂಲ ವೈಶಿಷ್ಟ್ಯಗಳಾದ ಹ್ಯಾಂಡ್ಸ್-ಆನ್ ಡಿಟೆಕ್ಷನ್ (HOD) ಸ್ಟೀರಿಂಗ್ ವೀಲ್, ಲೇನ್ ಕೀಪಿಂಗ್ ಅಸಿಸ್ಟ್ 2, ರಿಮೋಟ್ ಸ್ಮಾರ್ಟ್ ಪಾರ್ಕಿಂಗ್ ಅಸಿಸ್ಟ್ 2 (RSPA 2), ಮತ್ತು ಫಾರ್ವರ್ಡ್/ಸೈಡ್/ರಿವರ್ಸ್ ಪಾರ್ಕಿಂಗ್ ಕೊಲಿಶನ್-ಅವಾಯಿಡೆನ್ಸ್ ಅಸಿಸ್ಟ್ (PCA-F/S/R) ಫೀಚರ್‌ಗಳನ್ನು ಒಳಗೊಂಡಿದೆ.

ಇಂಟೆಲಿಜೆಂಟ್ ಫ್ರಂಟ್-ಲೈಟಿಂಗ್ ಸಿಸ್ಟಮ್ (IFS), ಡಿಜಿಟಲ್ ಕೀ 2, ಬಿಲ್ಟ್-ಇನ್ ಕ್ಯಾಮ್ 2 ಮತ್ತು ಎರಡನೇ ಸಾಲಿನ ಸೀಟ್ ರಿಮೋಟ್ ಫೋಲ್ಡಿಂಗ್ ಸೇರಿದಂತೆ ಹಲವಾರು ಗ್ರಾಹಕ ಆದ್ಯತೆಯ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಹಿಂದಿನ ಮಾದರಿಗಳಿಗೆ ಹೋಲಿಸಿದರೆ ಸುರಕ್ಷತೆ ಮತ್ತು ಸವಾರಿ ಸೌಕರ್ಯವನ್ನು ಹೆಚ್ಚಿಸಲು ಇತರ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹ್ಯುಂಡೈ ತಿಳಿಸಿದೆ.

hyundai-ioniq-5-gets-a-enhanced-features-and-new-n-line-model

IONIQ 5 N ಲೈನ್ ವಿಶೇಷತೆಗಳು: IONIQ 5 N ಲೈನ್ ಒಂದು ಸ್ಪೋರ್ಟಿ ರೂಪಾಂತರವಾಗಿದ್ದು, ನವೀಕರಿಸಿದ ಬೇಸ್ ಮಾಡೆಲ್ ಮತ್ತು ಉನ್ನತ-ಕಾರ್ಯಕ್ಷಮತೆಯ IONIQ 5 N ನಡುವೆ ಇರಿಸಲಾಗುವುದು. N ಲೈನ್ ರೂಪಾಂತರವು ಸ್ಪೋರ್ಟಿ ಸ್ಟೈಲಿಂಗ್‌ಗಾಗಿ ಹೆಚ್ಚಿದ ಬೇಡಿಕೆಯನ್ನು ಪೂರೈಸುವ ನಿರೀಕ್ಷೆಯಿದೆ, ಇದು ಗ್ರಾಹಕರನ್ನು ಆಕರ್ಷಿಸಲಿದ್ದು, ಡೈನಾಮಿಕ್ ಡ್ರೈವಿಂಗ್ ಅನುಭವವನ್ನು ಹೆಚ್ಚಿಸಲಿದೆ.

ಕ್ಯಾಬಿನ್ ಒಂದು ಮೀಸಲಾದ N ಲೈನ್ ಸ್ಟೀರಿಂಗ್ ವೀಲ್ ಮತ್ತು ಡ್ಯಾಶ್‌ಬೋರ್ಡ್‌ನೊಂದಿಗೆ N ಲೈನ್ ವಿಶೇಷ ವಿನ್ಯಾಸವನ್ನು ಹೊಂದಿದೆ. N ಲೈನ್ ವಿಶೇಷ ಲೋಹದ ಪೆಡಲ್‌ಗಳು, ಕಪ್ಪು ಹೆಡ್‌ಲೈನರ್, N ಲೋಗೋದೊಂದಿಗೆ ಮೀಸಲಾದ ಸ್ಪೋರ್ಟಿ ಸೀಟುಗಳು, ರೆಡ್ ಕಾಂಟ್ರಾಸ್ಟ್ ಹೊಲಿಗೆ ಮತ್ತು ಎರಡು ಸೀಟ್ ಕವರಿಂಗ್ ಆಯ್ಕೆಗಳು, ತಲ್ಲೀನಗೊಳಿಸುವ ಕ್ರಿಯಾತ್ಮಕತೆಯನ್ನು ಸೃಷ್ಟಿಸುತ್ತವೆ ಎಂದು ಕಂಪನಿ ಹೇಳಿದೆ.

hyundai-ioniq-5-gets-a-enhanced-features-and-new-n-line-model

ವರ್ಧಿತ IONIQ 5 ಮತ್ತು ಹೊಸ IONIQ 5 N ಲೈನ್ ಕೊರಿಯನ್ ಗ್ರಾಹಕರಿಗೆ ಮಾರ್ಚ್ 2024 ರಿಂದ ಲಭ್ಯವಾಗುತ್ತದೆ. ಹ್ಯುಂಡೈ ಮೋಟಾರ್ ಅವುಗಳನ್ನು ವರ್ಷವಿಡೀ ಜಾಗತಿಕ ಮಾರುಕಟ್ಟೆಗಳಿಗೆ ಕ್ರಮೇಣ ಪರಿಚಯಿಸಲು ಯೋಜಿಸಿದೆ. ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ಹೊಸ ಕಾರು, ಹೊಸ ಬೈಕ್ ಕುರಿತ ನವೀಕೃತ ಸುದ್ದಿಗಳನ್ನು ತ್ವರಿತವಾಗಿ ಓದುಗರಿಗೆ ನೀಡುತ್ತದೆ.

ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, March 4, 2024, 16:50 [IST]
English summary
Hyundai ioniq 5 gets a enhanced features and new n line model
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+