Hyundai: ಹ್ಯುಂಡೈ ಐಯಾನಿಕ್ 5 ಎಸ್‌ಯುವಿಗೆ ಹೊಸ ಅಪ್‌ಡೇಟ್‌ಗಳ ಘೋಷಣೆ
ಹ್ಯುಂಡೈ ತನ್ನ ಪ್ರಮುಖ ಕಾರು ಮಾದರಿಯಾದ ಹ್ಯುಂಡೈ IONIQ 5ನ ಇಂಟೀರಿಯರ್ ಮತ್ತು ಎಕ್ಸ್‌ಟೀರಿಯರ್‌ಗೆ ಹೊಸ ಬಣ್ಣದ ಆಯ್ಕೆಗಳನ್ನು ಪ್ರಕಟಿಸಿದೆ. ಈ ಎಲೆಕ್ಟ್ರಿಕ್ SUV ಈಗ ಟೈಟಾನ್ ಗ್ರೇ ಸೇರಿದಂತೆ ನಾಲ್ಕು ಎಕ್ಸ್‌ಟಿರಿಯರ್ ಬಣ್ಣಗಳಲ್ಲಿ ಮತ್ತು ಅಬ್ಸಿಡಿಯನ್ ಬ್ಲಾಕ್ ಸೇರಿದಂತೆ ಎರಡು ಇಂಟೀರಿಯರ್ ಬಣ್ಣಗಳಲ್ಲಿ ಸಿಗಲಿದೆ.
ಈ ಕುರಿತು ಪ್ರತಿಕ್ರಿಯಿಸಿದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ಸಿಒಒ ತರುಣ್ ಗಾರ್ಗ್, "ಹ್ಯುಂಡೈ ಮೋಟಾರ್ ಭಾರತೀಯ ಗ್ರಾಹಕರಿಗೆ ಭವಿಷ್ಯದ ತಂತ್ರಜ್ಞಾನ ಮತ್ತು ಸ್ಮಾರ್ಟ್ ಮೊಬಿಲಿಟಿ ಪರಿಹಾರಗಳನ್ನು ಒದಗಿಸುವ ಪ್ರವರ್ತಕರಾಗಿರುವುದಕ್ಕೆ ಹೆಮ್ಮೆಪಡುತ್ತೇವೆ. ನಮ್ಮ ಹ್ಯುಂಡೈ IONIQ 5 ರ ಪರಿಚಯದೊಂದಿಗೆ, ಹ್ಯುಂಡೈ ಹೊಸ ಮಾನದಂಡಗಳನ್ನು ಸೃಷ್ಟಿಸಿದೆ. ಅಲ್ಲದೇ ಈ ಹ್ಯುಂಡೈ IONIQ 5 ಹಲವಾರು ಪುರಸ್ಕಾರಗಳು ಮತ್ತು ಮನ್ನಣೆಗಳೊಂದಿಗೆ ಆಟೋಮೊಬೈಲ್ ಉದ್ಯಮ ವಿಮರ್ಶಕರಿಂದ ಮೆಚ್ಚುಗೆ ಪಡೆದಿದೆ. ಸಮರ್ಥನೀಯ, ಫ್ಯೂಚರಿಸ್ಟಿಕ್ ಮತ್ತು ಉನ್ನತ ಕಾರ್ಯಕ್ಷಮತೆಯ ಈ SUV ಈಗಾಗಲೇ 1,400 ಕ್ಕೂ ಹೆಚ್ಚು ಮನೆಗಳನ್ನು ತಲುಪಿದೆ ಎಂದರು.

ಇದೀಗ ಹೊಸ ವರ್ಧಿತ ಬಣ್ಣದ ಕೊಡುಗೆಗಳೊಂದಿಗೆ, ಹ್ಯುಂಡೈ IONIQ 5 ಎಲ್ಲಾ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸುವುದನ್ನು ಮುಂದುವರೆಸಲಿದೆ. ಉತ್ತಮ ನಾಳೆಗಾಗಿ ಕೊಡುಗೆ ನೀಡುವ ಜೊತೆಗೆ ಭಾರತದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ಸಿಒಒ ತರುಣ್ ಗಾರ್ಗ್ ಹೇಳಿದರು.
ಸ್ಮಾರ್ಟ್ ಮೊಬಿಲಿಟಿ ಪರಿಹಾರಗಳ ಪೂರೈಕೆದಾರರಾಗಿ, ಹ್ಯುಂಡೈ ಎಲ್ಲಾ ಗ್ರಾಹಕರ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ. ಭಾರತಕ್ಕೆ ನಮ್ಮ ಬದ್ಧತೆಗೆ ಅನುಗುಣವಾಗಿ, ಹ್ಯುಂಡೈ IONIQ 5 ನಲ್ಲಿ ನೀಡಲಾದ ಬಣ್ಣದ ಆಯ್ಕೆಗಳನ್ನು ವಿಸ್ತರಿಸಿದೆ. ಸದಾ ಗ್ರಾಹಕರ ಹೊಸ ಆದ್ಯತೆಗಳಿಗೆ ಅನುಗುಣವಾಗಿ ಹ್ಯುಂಡೈ ಹೊಸತನವನ್ನು ಪರಿಚಯಿಸುತ್ತಲೇ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಹ್ಯುಂಡೈ IONIQ 5 ಅನ್ನು ಈಗ ನಾಲ್ಕು ಬಾಹ್ಯ ಬಣ್ಣಗಳಾದ ಟೈಟಾನ್ ಗ್ರೇ, ಗ್ರಾವಿಟಿ ಗೋಲ್ಡ್ ಮ್ಯಾಟ್, ಆಪ್ಟಿಕ್ ವೈಟ್ ಮತ್ತು ಮಿಡ್‌ನೈಟ್ ಬ್ಲ್ಯಾಕ್ ಪರ್ಲ್ ಜೊತೆಗೆ ಅಬ್ಸಿಡಿಯನ್ ಬ್ಲ್ಯಾಕ್ ಮತ್ತು ಡಾರ್ಕ್ ಪೆಬಲ್ ಗ್ರೇ ಇಂಟೀರಿಯರ್ ಎಂಬ ಎರಡು ಇಂಟೀರಿಯರ್ ಪ್ಯಾಕ್ ಆಯ್ಕೆಗಳನ್ನು ಹೊಂದಿದ್ದು, ಈ ಬಣ್ಣಗಳು ಹೆಚ್ಚು ಪ್ರೀಮಿಯಂ ಆಗಿ ಕಾಣುವಂತೆ ಮಾಡುತ್ತವೆ ಎಂದು ಕಂಪನಿ ಹೇಳಿದೆ. ಗ್ರಾಹಕರು ಹ್ಯುಂಡೈನ ಡೈರೆಕ್ಟ್ ಟು ಕಸ್ಟಮರ್ (D2C) ಪೋರ್ಟಲ್ ಮೂಲಕ ರೂ. 1,00,000/- ಆರಂಭಿಕ ಬುಕಿಂಗ್ ಮೊತ್ತದೊಂದಿಗೆ IONIQ-5 ಅನ್ನು ಬುಕ್ ಮಾಡಬಹುದು.
ಹ್ಯುಂಡೈ IONIQ 5 ವಿಶೇಷತೆಗಳು: ಹ್ಯುಂಡೈ Ioniq 5 ಎಲೆಕ್ಟ್ರಿಕ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.46,05,000 ಇದೆ. ಹ್ಯುಂಡೈ ಕೋನಾ ಎಲೆಕ್ಟ್ರಿಕ್ ನಂತರ ಭಾರತದಲ್ಲಿ ಹ್ಯುಂಡೈ ಕಂಪನಿಯ Ioniq 5 ಎರಡನೇ ಎಲೆಕ್ಟ್ರಿಕ್ ಮಾದರಿಯಾಗಿದೆ. ಈ ಹ್ಯುಂಡೈ Ioniq 5 ಎಲೆಕ್ಟ್ರಿಕ್ ಎಸ್‍ಯುವಿ ಹ್ಯುಂಡೈ ಮೋಟಾರ್ ಗ್ರೂಪ್‌ನ ಎಲೆಕ್ಟ್ರಿಕ್-ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (E-GMP) ಅನ್ನು ಆಧರಿಸಿದೆ. ಇದು ಕಿಯಾ EV6 ಎಲೆಕ್ಟ್ರಿಕ್ ಕಾರಿಗೂ ಸಹ ಆಧಾರವಾಗಿದೆ.

ಈ ಹ್ಯುಂಡೈ ಐಯಾನಿಕ್ 5 ಎಲೆಕ್ಟ್ರಿಕ್ ಕಾರಿನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಎಮರ್ಜನ್ಸಿ ಬ್ರೇಕಿಂಗ್ ಅನ್ನು ಹೊಂದಿದೆ. ಇದರೊಂದಿಗೆ ಲೇನ್ ಕೀಪ್ ಮತ್ತು ಡಿಪಾರ್ಚರ್ ಏಡ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಮ್‌ನಂತಹ ಫೀಚರ್ಸ್ ಗಳೊಂದಿಗೆ ADAS (ಅಡ್ವಾನ್ಸ್ಡ್ ಡ್ರೈವರ ಅಸಿಸ್ಟ್ ಸಿಸ್ಟಂ) ನೊಂದಿಗೆ ಬರುತ್ತದೆ. ಈ ಹೊಸ ಹ್ಯುಂಡೈ ಐಯಾನಿಕ್ 5 ಎಲೆಕ್ಟ್ರಿಕ್ ಕಾರಿನಲ್ಲಿ 72.6kWh ಬ್ಯಾಟರಿ ಪ್ಯಾಕ್ ಅನ್ನು ನೀಡಲಾಗಿದೆ.
ಇದು ಸಿಂಗಲ್ ಚಾರ್ಜ್‌ನಲ್ಲಿ ARAI- ಪ್ರಕಾರ, 631 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ಮೋಟರ್ 217 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹ್ಯುಂಡೈ ಐಯಾನಿಕ್ 5 ಎಲೆಕ್ಟ್ರಿಕ್ ಕ್ರಾಸ್ಒವರ್ RWD (ರೇರ್-ವ್ಹೀಲ್ ಡ್ರೈವ್) ಸಿಸ್ಟಂ ಅನ್ನು ಹೊಂದಿದೆ.

ಚಾರ್ಜಿಂಗ್ ವಿಷಯದಲ್ಲಿ, ಈ ಹ್ಯುಂಡೈ Ioniq 5 ಎಲೆಕ್ಟ್ರಿಕ್ ಕ್ರಾಸ್ಒವರ್ 350kW DC ಫಾಸ್ಟ್ ಚಾರ್ಜರ್ ಬಳಸಿ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಹ್ಯುಂಡೈ Ioniq ಎಲೆಕ್ಟ್ರಿಕ್ ಕಾರು ಕೇವಲ 18 ನಿಮಿಷಗಳಲ್ಲಿ ಶೇ 80 ರಷ್ಟು ಚಾರ್ಜ್ ಆಗುತ್ತದೆ. ಇದರಿಂದ ಗ್ರಾಹಕರಿಗೆ ತಮ್ಮ ಕಾರನ್ನು ವೇಗವಾಗಿ ಚಾರ್ಜ್ ಮಾಡಿ ಪ್ರಯಾಣ ಮಾಡಬಹುದು.


Click it and Unblock the Notifications