ಜನ ಸರದಿ ಸಾಲಿನಲ್ಲಿ ನಿಂತು ಹ್ಯುಂಡೈ ಕಾರುಗಳ ಖರೀದಿ: ಮಾರಾಟದಲ್ಲಿ ಏರಿಕೆ
ಜನಪ್ರಿಯ ವಾಹನ ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) 2024ರ ಜೂನ್ ತಿಂಗಳ ಮಾರಾಟ ವರದಿಯನ್ನು ಪ್ರಕಟಿಸಿದೆ. ಕಳೆದ ತಿಂಗಳಿನಲ್ಲಿ ಹ್ಯುಂಡೈ ಕಂಪನಿಯು ಒಟ್ಟು 64,803 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 50,103 ಯುನಿಟ್‌ಗಳನ್ನು ಮಾರಾಟ ಮಾಡಿದರೆ, 14,700 ಯುನಿಟ್‌ಗಳನ್ನು ರಫ್ತು ಮಾಡಿದೆ. ಹ್ಯುಂಡೈ ಕಂಪನಿಯು ಕಾರು ಮಾರಾಟದಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯನ್ನು ಕಾಯ್ದುಕೊಂಡಿದ್ದಾರೆ. CY2024ರ ಮೊದಲಾರ್ಧದಲ್ಲಿ, ಹ್ಯುಂಡೈ ಕಂಪನಿಯು ಒಟ್ಟು 385,772 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದು ವರ್ಷದಿಂದ ವರ್ಷಕ್ಕೆ 5.68 ಶೇಕಡಾ ಬೆಳವಣಿಗೆಯನ್ನು ಸಾಧಿಸಿದೆ.
ಹ್ಯುಂಡೈ (Hyundai) ಕಂಪನಿಯು ಕಾರು ಮಾರಾಟದಲ್ಲಿ ಎಸ್‍ಯುವಿ ವಿಭಾಗದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ದೇಶಿಯ ಮಾರುಕಟ್ಟೆಯಲ್ಲಿ ಎಸ್‍ಯುವಿಗಳ ಮಾರಾಟದಲ್ಲಿ ಶೇ.66 ರಷ್ಟು ಪಾಲನ್ನು ಹೊಂದಿದೆ. ಇನ್ನು ಹ್ಯುಂಡೈ ಕಂಪನಿಯು ಪೋರ್ಟ್‌ಫೋಲಿಯೊದಲ್ಲಿ ತಮ್ಮ ಪ್ರಮುಖ ಪಾತ್ರವನ್ನು ಪ್ರದರ್ಶಿಸುತ್ತವೆ. ಇನ್ನು ಹ್ಯುಂಡೈ ಕಂಪನಿಯು ಜೂನ್ ತಿಂಗಳಿನಲ್ಲಿ 50,103 ಯುನಿಟ್‌ಗಳನ್ನು ಮಾರಾಟ ಮಾಡಿದೆ. 2023ರ ಜೂನ್ ತಿಂಗಳಿನಲ್ಲಿ 50,001 ಯುನಿಟ್‌ಗಳನ್ನು ಮಾರಾಟ ಮಾಡಿದ್ದರು. ಇದು 0.20 ಶೇಕಡಾ ಬೆಳವಣಿಗೆಯನ್ನು ಸಾಧಿಸಿದೆ.

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ಸಿಒಒ ತರುಣ್ ಗಾರ್ಗ್ ಅವರು ಮಾತನಾಡಿ, CY2024ರ H1 ಅನ್ನು 5.68% ವರ್ಷದಿಂದ ವರ್ಷಕ್ಕೆ ಒಟ್ಟಾರೆ ಮಾರಾಟದ ಬೆಳವಣಿಗೆಯನ್ನು ಸಾಧಿಸಿದೆ. ಎಸ್‍ಯುವಿಗಳು ನಮ್ಮ ದೇಶೀಯ ಮಾರಾಟದಲ್ಲಿ 66% ನಷ್ಟು ಪಾಲನ್ನು ಬಲವಾಗಿ ಕೊಡುಗೆ ನೀಡಿವೆ. ಹೊಸ ಹ್ಯುಂಡೈ ಕ್ರೆಟಾ ದೇಶೀಯ H1 ಮಾರಾಟಕ್ಕೆ ಪ್ರಮುಖ ಚಾಲಕವಾಗಿದ್ದು, 91,348 ಯುನಿಟ್‌ಗಳು ಮಾರಾಟವಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ 11% ರಷ್ಟು ಬೆಳವಣಿಗೆಯಾಗಿದೆ ಎಂದರು.
ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾಗಿ ಗುರುತಿಸಿಕೊಂಡಿದ್ದು, ದೇಶೀಯ ಕಂಪನಿಗಳಾದ ಟಾಟಾ ಹಾಗೂ ಮಹೀಂದ್ರಾಗೆ ಪ್ರಬಲ ಸ್ಪರ್ಧೆಯೊಡ್ಡುತ್ತಿದೆ. ಹ್ಯುಂಡೈ ಮಾರಾಟಗೊಳಿಸುವ ಕಾರುಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಹೊಂದಿರುವುದರಿಂದ ಗ್ರಾಹಕರು ಕೂಡ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಪ್ರತಿವರ್ಷ ಮಧ್ಯಮ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಕೈಗೆಟುಕುವ ಬೆಲೆಯಲ್ಲಿ ಒಂದಲ್ಲ ಒಂದು ಕಾರುಗಳನ್ನು ಬಿಡುಗಡೆಗೊಳಿಸುತ್ತಲೇ ಇರುತ್ತದೆ.

ಸದ್ಯ ಹ್ಯುಂಡೈ ತನ್ನ ಕಾರುಗಳಲ್ಲಿ ಹೊಸ 'ಸಿಎನ್‌ಜಿ' ತಂತ್ರಜ್ಞಾನವನ್ನು ಪರಿಚಯಿಸುವ ಸಂಬಂಧ 2 'ಟ್ರೇಡ್‌ಮಾರ್ಕ್'ಗಳನ್ನು ನೋಂದಣಿ ಮಾಡಿದೆ. ಭಾರತದಲ್ಲಿ ಸಿಎನ್‌ಜಿ ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಮನಗಂಡಿರುವ ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor India) ಸಿಎನ್‌ಜಿ ಲೈನ್ಅಪ್‌ನ್ನು ವಿಸ್ತರಿಸಲು ಬಯಸಿದೆ. ಅದಕ್ಕಾಗಿ ಹೈ-ಸಿಎನ್‌ಜಿ (Hy-CNG) ಮತ್ತು ಹೈ-ಸಿಎನ್‌ಜಿ ಡ್ಯುಯೊ (Hy-CNG Duo) ಎಂಬ ತಂತ್ರಜ್ಞಾನ (Technology)ವನ್ನು ಅಭಿವೃದ್ಧಿಪಡಿಸುತ್ತಿದೆ.
ಟ್ರೇಡ್‌ಮಾರ್ಕ್ ರಿಜಿಸ್ಟ್ರಿಯಲ್ಲಿಯೂ ವಿವರವನ್ನು ಸಲ್ಲಿಸುವ ಮೂಲಕ ನೋಂದಾಯಿಸಿದೆ. ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಹ್ಯುಂಡೈ, ಗ್ರಾಂಡ್ ಐ10 ನಿಯೋಸ್ (Grand i10 Nios) ಹ್ಯಾಚ್‌ಬ್ಯಾಕ್, ಔರಾ (Aura) ಕಾಂಪ್ಯಾಕ್ಟ್ ಸೆಡಾನ್ ಹಾಗೂ ಎಕ್ಸ್‌ಟರ್ (Exter) ಎಸ್‌ಯುವಿಗಳನ್ನು ಸಿಂಗಲ್ ಸಿಲಿಂಡರ್ ಸಿಎನ್‌ಜಿ ಟ್ಯಾಂಕ್ ಆಯ್ಕೆಯಲ್ಲಿ ಮಾರಾಟ ಮಾಡುತ್ತಿದೆ. ಶೀಘ್ರದಲ್ಲೇ ಈ ಕಾರುಗಳನ್ನು ಡುಯಲ್-ಸಿಲಿಂಡರ್ ಸಿಎನ್‌ಜಿ ಟ್ಯಾಂಕ್‌ನೊಂದಿಗೆ 'ಹೈ-ಸಿಎನ್‌ಜಿ ಡ್ಯುಯೊ' ಬ್ಯಾಡ್ಜ್ ಅಡಿಯಲ್ಲಿ ಪರಿಚಯಿಸಬಹುದು.

ಆದರೆ ಸಿಂಗಲ್-ಸಿಲಿಂಡರ್ ಮಾದರಿ (ಮಾಡೆಲ್)ಗಳನ್ನು 'ಹೈ-ಸಿಎನ್‌ಜಿ' ಎಂದು ಕರೆಯಬಹುದು ಎನ್ನಲಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್‌ಗೆ ಹೋಲಿಕೆ ಮಾಡಿದರೆ ಸಿಎನ್‌ಜಿ ಇಂಧನ (ಫ್ಯುಯೆಲ್) ಬೆಲೆ ತುಂಬಾ ಕಡಿಮೆಯಿದೆ. ನಿರ್ವಹಣಾ ವೆಚ್ಚವು ಅಗ್ಗವಾಗಿರುವುದರಿಂದ ವಾಣಿಜ್ಯ ವಾಹನ ಮಾಲೀಕರು, ಸಿಎನ್‌ಜಿ ಚಾಲಿತ ಕಾರುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಈಗ ಆ ಪ್ರವೃತ್ತಿ ಬದಲಾಗಿದ್ದು, ಹೆಚ್ಚಿನ ಖಾಸಗಿ ವಾಹನ ಮಾಲೀಕರು ಸಹ ಸಿಎನ್‌ಜಿ ಕಾರುಗಳನ್ನು ಕೊಂಡುಕೊಳ್ಳುತ್ತಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications